Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹೇರ್ ಟ್ರೀಟ್ಮೆಂಟ್ ಮಾಡಿಸಿದ್ದೀರಾ? ಹಾಗಾದರೆ ಈ ರೀತಿ ಆರೈಕೆ ಮಾಡಲೇಬೇಕು
ಹೇರ್ ಟ್ರೀಟ್ಮೆಂಟ್ ಮಾಡಿಸುತ್ತಿರುತ್ತೀರಾ? ಅಂದರೆ ಕೆರಾಟಿನ್, ಡೀಪ್ ಕಂಡೀಷಿನಿಂಗ್, ಸ್ಮೂಥ್ನಿಂಗ್ ಹೀಗೆ ಹೇರ್ ಟ್ರೀಟ್ಮೆಂಟ್ ತೆಗೆದುಕೊಂಡ ಮೇಲೆ ಇಷ್ಟು ಮಾಡಿದರೆ ಸಾಕು ನಾವೇನೂ ಹೆಚ್ಚು ಮಾಡಬೇಕಾಗಿಲ್ಲ ಎಂದೇ ಯೋಚಿಸುತ್ತಾರೆ. ಆದರೆ ಹೇರ್ ಟ್ನೀಟ್ಮೆಂಟ್ ಬಳಿಕ ಕೂಡ ನಿಮ್ಮ ಕೂದಲಿಗೆ ಆರೈಕೆ ಮಾಡಬೇಕಾಗುತ್ತದೆ. ಹೇರ್ ಟ್ಮೀಟ್ಮೆಂಟ್ ಬಳಿಕ ಏನು ಮಾಡಬಾರದು, ಹೇಗೆ ಆರೈಕೆ ಮಾಡಬೇಕು ಎಂದು ತಿಳಿಯೋಣ ಬನ್ನಿ:
ಹೇರ್ ಟ್ರೀಟ್ಮೆಂಟ್ ಬಳಿಕ ನೀವು ಬಳಸುವ ಶ್ಯಾಂಪೂ ಮುಖ್ಯವಾಗುತ್ತೆ
ಹೇರ್ ಟ್ರೀಟ್ಮೆಂಟ್ ಬಳಿಕ ನೀವು ತುಂಬಾ ಕಡಿಮೆ ರಾಸಾಯನಿಕವಿರುವ ಶ್ಯಾಂಪೂ ಬಳಸಿದರೆ ಒಳ್ಳೆಯದು. ಇಲ್ಲ ನೀವು ನೈಸರ್ಗಿಕವಾದ ವಿಧಾನ ಅನುಸರಿಸುತ್ತೀರಿ ಎಂದರೆ ಇನ್ನೂ ಒಳ್ಳೆಯದು. ಆದರೆ ಅಧಿಕ ರಾಸಾಯನಿಕವಿರುವ ಶ್ಯಾಂಪೂ ಬಳಸಿದರೆ ನಿಮ್ಮ ಕೂದಲು ಹಾಳಾಗುವುದು, ಕೂದಲು ಉದುರುವ ಸಮಸ್ಯೆ ಶುರುವಾಗುವುದು. ನಿಮ್ಮ ಶ್ಯಾಂಪೂ ಹಾಗೂ ಕಂಡೀಷನರ್‌ನಲ್ಲಿ ಸಲ್ಪೇಟ್ ಇಲ್ಲ ಎಂಬುವುದು ಖಚಿತಪಡಿಸಿ.

ತುಂಬಾ ಹೀಟಿಂಗ್ ಪ್ರಾಡೆಕ್ಟ್ ಬಳಸಬೇಡಿ
ಹೇರ್ ಸ್ಟ್ರೈಟ್ನಿಂಗ್ ಹಾಗೂ ಸ್ಮೂಥ್ನಿಂಗ್ ಮಾಡಿಸಿದಾಗ ಕೂದಲಿಗೆ ಸಾಕಷ್ಟು ಬಿಸಿ ತಗುಲಿರುತ್ತದೆ. ಮತ್ತೆ ನೀವು ಹೇರ್ ಸ್ಟೈಲ್ ಮಾಡಲು ಕರ್ಲರ್ ಅಥವಾ ಕೂದಲು ಒಣಗಿಸಲು ಡ್ರೈಯರ್ ಬಳಸಬೇಡಿ, ಹೀಗೆ ಮಾಡುವುದರಿಂದ ಕೂದಲಿಗೆ ಹಾನಿಯಾಗುತ್ತದೆ. ಸ್ನಾನ ಮಾಡಿದ ಮೇಲೆ ಕೂದಲು ನೈಸರ್ಗಿಕವಾಗಿ ಒಣಗಲಿ, ಇಲ್ಲದಿದ್ದರೆ ನಿಮ್ಮ ಕೂದಲು ಮತ್ತಷ್ಟು ಡ್ರೈಯಾಗಿ ಅದರ ಮೃದುತ್ವ ಕಳೆದುಕೊಂಡು ಒರಟಾಗುವುದು. ಅಲ್ಲದೆ ಕೂದಲು ಉದುರಲಾರಂಭಿಸುತ್ತದೆ.
ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಬೇಡಿ
ನೀವು ಬಿಸಿ ನೀರು ತಲೆಗೆ ಹಾಕಿದಾಗ ಕೂದಲಿನ ಬುಡಕ್ಕೆ ಹಾನಿಯಾಗುವುದು. ನಿಮಗೆ ತಣ್ಣೀರ ಸ್ನಾನ ಮಾಡಲು ಸಾಧ್ಯವೇ ಇಲ್ಲ, ತಣ್ಣೀರ ಸ್ಥಾನ ಮಾಡಿದಾಗ ತಲೆನೋವು, ಮೂಗು ಕಟ್ಟುವುದು ಈ ಬಗೆಯ ಸಮಸ್ಯೆ ಕಂಡು ಬರುತ್ತದೆ ಎಂದಾದರೆ ಉಗುರು ಬೆಚ್ಚಗಿನ ನೀರು ಬಳಸಿ.
ತಲೆಕೂದಲನ್ನು ಸರಿಯಾಗಿ ಆರೈಕೆ ಮಾಡಿ
* ನೀವು ತಲೆಕೂದಲನ್ನು ಎರಡು ಬಾರಿ ಬಾಚಿ.
* ಕೂದಲ ತುದಿ ಕವಲೊಡೆದಿದ್ದರೆ ತುದಿ ಕತ್ತರಿಸಿ.
* ಕೂದಲು ಗಂಟಾಗಲು ಬಿಡಬೇಡಿ.
* ತುಂಬಾ ಕ್ಲಿಪ್ಸ್ ಹಾಕಬೇಡಿ.
* ಒದ್ದೆ ಕೂದಲನ್ನು ಬಾಚಬೇಡಿ
* ಕೂದಲಿಗೆ ಸೆರಮ್ ಬಳಸಿ.
* ಸ್ಯಾಟಿನ್ ದಿಂಬು ಇಟ್ಟು ಮಲಗಿ.
* ತಲೆಸ್ನಾನದ ಬಳಿಕ ಕೂದಲನ್ನು ತುಂಬಾ ಒರೆಸಬೇಡಿ. ಮೈಕ್ರೋಫೈಬರ್ ಟ್ರವಲ್ ಬಳಸಿ, ಕೂದಲಿನ ನೀರು ಬೇಗನೆ ಹೀರಿಕೊಳ್ಳುವುದರಿಂದ ಕೂದಲು ಬೇಗನೆ ಒಣಗುತ್ತದೆ.
* ವಾರಕೊಮ್ಮೆ ಕೂದಲಿಗೆ ಎಣ್ಣೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.
ಈ ರೀತಿ ಆರೈಕೆ ಮಾಡಿದರೆ ನೀವು ಮಾಡಿಸಿರುವ ಹೇರ್‌ಟ್ರೀಟ್ಮೆಂಟ್ ನಿಮ್ಮ ಕೂದಲಿನ ಅಂದ ಹೆಚ್ಚಿಸುತ್ತೆ, ಅದೇ ಆರೈಕೆ ಮಾಡದೇ ಹೋದರೆ ಇರುವ ಕೂದಲಿನ ಸೌಂದರ್ಯವೂ ಹಾಳಾಗುವುದು ಜಾಗ್ರತೆ.



Click it and Unblock the Notifications
