Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಈ ಆಹಾರಗಳನ್ನು ತಿಂದರೆ ಮುಖದ ಮೇಲಿನ ನೆರಿಗೆ ತಡೆಗಟ್ಟಬಹುದು
ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಗಳು ಸರಿಯಾಗಿಲ್ಲ. ಎಲ್ಲೆಂದರಲ್ಲಿ ಕೈಗೆ ಸಿಕ್ಕಿದನ್ನೆಲ್ಲಾ ತಿನ್ನುತ್ತೇವೆ. ಹೀಗಾಗಿ ಎಲ್ಲಾ ರೀತಿ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡೋದಕ್ಕೆ ಶುರುವಾಗುತ್ತದೆ. ಇದರ ಜೊತೆಗೆ ನಮ್ಮ ಮುಖದ ಕಾಂತಿಯು ಕಳೆಗುಂದುತ್ತದೆ. ಮುಖ ಲಕ್ಷಣಗಳು ಹೆಚ್ಚು ವಯಸ್ಸಾದಂತೆ ಗೋಚರವಾಗುತ್ತದೆ.
ಅದ್ರಲ್ಲೂ ಮೂವತೈದು ನಲ್ವತ್ತು ವರ್ಷ ದಾಟಿದ ಮೇಲೆ ಮುಖದ ಮೇಲೆ ನೆರಿಗೆಗಳು ಬರೋದಕ್ಕೆ ಶುರುವಾಗುತ್ತದೆ. ಇದರ ನಂತರ ವಯಸ್ಸಾದ ಲಕ್ಷಣಗಳು ಗೋಚರವಾಗುತ್ತದೆ. ಆದ್ರೆ ಕೆಲವೊಂದು ಆಹಾರಗಳನ್ನು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ವಯಸ್ಸಾದಂತೆ ಕಾಣುವ ಅಪಾಯವನ್ನು ತಪ್ಪಿಸಬಹುದು. ಅಷ್ಟಕ್ಕು ಯಾವೆಲ್ಲಾ ಆಹಾರಗಳು ತಮ್ಮ ಮುಖದ ಕಾಂತಿ ಹೆಚ್ಚಿಸಲು ಸಹಾಯವಾಗುತ್ತದೆ ಅನ್ನೋದನ್ನ ತಿಳಿಯೋಣ.

ಮುಖದ ಮೇಲಿನ ಕಾಂತಿ ಹೆಚ್ಚಿಸಲು ಈ ಐದು ಆಹಾರಗಳನ್ನು ಸೇವಿಸಿ
ಗೆಣಸು
ಗೆಣಸು ಅಂದ್ರೆ ತುಂಬಾ ಜನರಿಗೆ ಇಷ್ಟ. ತುಂಬಾನೇ ಸಿಹಿಯಾಗಿರುವ ತರಕಾರಿ ಇದು. ಇದನ್ನು ಪದಾರ್ಥ ಮಾಡೋದಕ್ಕೂ ಬಳಸಬಹುದು. ಅಥವಾ ಹಾಗೆಯೂ ತಿನ್ನ ಬಹುದು. ಇನ್ನೂ ಇದನ್ನು ಬೇಯಿಸಿ ತಿಂದರೆ ಮತ್ತಷ್ಟು ರುಚಿ. ಇದು ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ಚರ್ಮದ ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಬೀಟಾ ಕ್ಯಾರೋಟಿನ್ ಇದೆ. ಇದು ವಿಟಮಿನ್ ಸಿ ಆಗಿ ಪರಿವರ್ತನೆಗೊಳ್ಳುತ್ತದೆ. ಹಾಗೂ ಇದು ಚರ್ಮವನ್ನು ಮೃದು ಮತ್ತು ಯಂಗ್ ಆಗಿ ಕಾಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ವಿಟಮಿನ್ ಸಿ ಮತ್ತು ಇ ಅಂಶ ಕೂಡ ಇದರಲ್ಲಿದೆ.
ಸ್ಪಿನಚ್ (ಸೊಪ್ಪು)
ಸ್ಪಿನಚ್ ಹಸಿರು ಬಣ್ಣದಲ್ಲಿದ್ದು, ಎಲೆಯ ರೂಪದಲ್ಲಿ ಇರುತ್ತದೆ. ಇದರಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಸ್ಪಿನಚ್‌ನಲ್ಲಿ ವಿಟಮಿನ್ ಎ, ಸಿ, ಇ ಮತ್ತು ಕೆ ಕೂಡ ಇದ್ದು, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಲುಟೀನ್‌ನ ಉತ್ತಮ ಮೂಲವಾಗಿದೆ. ಇದು ಚರ್ಮವನ್ನು ವರ್ಧಿಸುತ್ತದೆ. ಮತ್ತು ಕಾಲಜನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿದರೆ ಮನೆಯವರೆಲ್ಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಬ್ರೊಕೋಲಿ
ನೋಡೋದಕ್ಕೆ ಹಚ್ಚ ಹಸಿರು ಬಣ್ಣದಲ್ಲಿ ಹೂ ಕೋಸಿನಂತೆ ಕಾಣಿಸೋ ಈ ಉಪಯೋಗಕಾರಿ ತರಕಾರಿಯ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲ. ಬ್ರೊಕೊಲಿಯಲ್ಲಿ ವಿಟಮಿನ್ ಸಿ ಅಂಶವಿದೆ. ಇದು ಉರಿಯೂತದ ಗುಣಲಕ್ಷಣಗಳು ಹಾಗೂ ವಯಸ್ಸಾದಂತೆ ಕಾಣುವುದನ್ನು ಕಡಿಮೆ ಮಾಡುತ್ತದೆ. ಬ್ರೊಕೋಲಿಯಲ್ಲಿ ಫೈಬರ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಅನ್ನು ಹೊಂದಿರುತ್ತದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ, ಇದರಲ್ಲಿರುವ ವಿಟಮಿನ್ ಸಿ ಕಾಲಜನ್ ಉತ್ಪಾದನೆಗೆ ಸಹಕಾರಿಯಾಗಿದೆ. ಇದು ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಪಪ್ಪಾಯಿ
ಪಪ್ಪಾಯಿ ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ. ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಪಪ್ಪಾಯಿ ಎಂದರೆ ತುಂಬಾನೇ ಇಷ್ಟ. ಆರೋಗ್ಯದ ದೃಷ್ಟಿಯಿಂದಲೂ ಪಪ್ಪಾಯಿ ಹಣ್ಣು ತುಂಬಾನೇ ಒಳ್ಳೆಯದು. ಪಪ್ಪಾಯಿಯಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಅಲ್ಲದೆ, ಸುಕ್ಕುಗಳು ಬರದಂತೆ ತಡೆಯುತ್ತದೆ. ಇದರೊಂದಿಗೆ, ಇದು ಚರ್ಮಕ್ಕೆ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಹಾಗಂತ ಅತೀ ಹೆಚ್ಚು ಪಪ್ಪಾಯಿ ಹಣ್ಣು ತಿನ್ನುವುದು ಕೂಡ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿ ಸೇವಿಸಿ.
ಬ್ಲೂಬೆರಿ ಹಣ್ಣುಗಳು
ಬ್ಯೂಬೆರಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಅಂಶ ಇದೆ. ಇದು ವಯಸ್ಸಾದ ಗುಣಲಕ್ಷಣಗಳು ಬಾರದಂತೆ ತಡೆಯುತ್ತದೆ. ಮತ್ತು ಇದು ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಕೊಂಚ ದುಬಾರಿಯಾಗಿದ್ದು, ಆರೋಗ್ಯದ ದೃಷ್ಟಿಯಿಂದ ಉತ್ತಮ.
ಈ ಮೇಲಿನ ಎಲ್ಲಾ ಹಣ್ಣು ಹಾಗೂ ತರಕಾರಿಗಳು ಆರೋಗ್ಯದ ದೃಷ್ಟಿಯಿಂದ ಕೂಡ ಉತ್ತಮ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇರಿಸೋದನ್ನು ಮರೀಬೇಡಿ.



Click it and Unblock the Notifications



