Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಸೀತೆ ಧರಿಸಿರುವ ಈ ಸೀರೆ-ಬ್ಲೌಸ್ ನೋಡಿ ಜನರು ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವುದು ಏಕೆ?
ಅತಿ ಹೆಚ್ಚು ಟ್ರೋಲ್ ಆಗಿರುವ ಸೀರೆ-ಬ್ಲೌಸ್ ಕಾಂಬಿನೇಷನ್ ಎಂದರೆ ಬಹುಶಃ ಇದೇ ಇರಬೇಕು. ಸೀರಿಯಲ್‌ನ ಜನ ಮನರಂಜನೆಗೆ ನೋಡುತ್ತಾರೆ ನಿಜ, ಆದರೆ ಅದರಲ್ಲಿ ಬರುವ ಪ್ರತಿಯೊಂದು ಪಾತ್ರವನ್ನು ಸೀರಿಯಸ್ ತೆಗೆದುಕೊಳ್ಳುತ್ತಾರೆ.
ಖಾಸಗಿ ವಾಹಿನಿಯಲ್ಲಿ ಬರುವ ಟಾಪ್ ರೇಟಿಂಗ್ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ. ಮಧ್ಯಮವರ್ಗದ ಹೆಣ್ಮಗಳಾಗಿ ಕಾಣಿಸಿಕೊಳ್ಳುವ ಅವರು ಸಿಂಪಲ್ ಚೂಡಿದಾರ್, ದುಪ್ಪಟ್ಟ ಬಳಸುತ್ತಿದ್ದಾರೆ, ಆದರೆ ತನ್ನ ಮದುವೆ ಮಾತುಕತೆ ವೇಳೆ ಗ್ರ್ಯಾಂಡ್ ಲುಕ್‌ಗಾಗಿ ಉಟ್ಟ ಸೀರೆ ತುಂಬಾನೇ ಟ್ರೋಲ್ ಆಗಿದೆ.

ಆ ಸೀರೆ ಒಂದಿಷ್ಟೂ ಮ್ಯಾಚ್ ಆಗುತ್ತಿಲ್ಲ ಬ್ಲೌಸ್
ವೈಷ್ಣವಿಗೌಡಕ್ಕೆ ಗ್ರ್ಯಾಂಡ್ ಡ್ರೆಸ್ ಬೇಕಾಗಿಲ್ಲ, ಸಿಂಪಲ್ ಡ್ರೆಸ್‌ನಲ್ಲಿ ತುಂಬಾನೇ ಅಂದವಾಗಿ ಕಾಣಿಸುತ್ತಾರೆ, ಅವರು ಬಿಗ್‌ಬಾಸ್‌ನಲ್ಲಿ ಧರಿಸುತ್ತಿದ್ದ ಸ್ಟೈಲಿಷ್ ಡ್ರೆಸ್‌ಗಳು ತುಂಬಾನೇ ಗಮನ ಸೆಳೆಯುತ್ತಿತ್ತು. ಅಲ್ಲದೆ ಅವರು ಟ್ರಿಪ್ ಹೋಗುವಾಗ, ತಮ್ಮ ಯೂಟ್ಯೂಬ್ ಚಾನಲ್‌ಗಾಗಿ ಮಾಡುವ ವೀಡಿಯೋಗಳಲ್ಲಿ ಡ್ರೆಸ್ಸಿಂಗ್ ತುಂಬಾನೇ ಚೆನ್ನಾಗಿರುತ್ತದೆ. ಆದರೆ ಸೀರಿಯಲ್‌ನಲ್ಲಿ ಇಷ್ಟೊಂದು ವಿಚಿತ್ರ ಕಾಂಬಿನೇಷನ್‌ನ, ಆ ಬ್ಲೌಸ್ ಡಿಸೈನ್ ಅಂತೂ ಒಂದಿಷ್ಟೂ ಚೆನ್ನಾಗಿಲ್ಲ ಆ ರೀತಿಯ ಡ್ರೆಸ್ ಧರಿಸುವ ಮೂಲಕ ಟ್ರೋಲ್ ಒಳಗಾಗಿದ್ದಾರೆ...
ಜಾತ್ರೆ ತರ ಇದೆ ಅಂತಿದ್ದಾರೆ
ಕೆಲವರು ಈ ಸೀರೆಗೆ ಬ್ಲೌಸ್ ಒಂದಿಷ್ಟೂ ಮ್ಯಾಚ್ ಆಗುತ್ತಿಲ್ಲ ಎಂದರೆ, ಇನ್ನು ಕೆಲವರು ಜಾತ್ರೆ ಸೀರೆ, ಎಲ್ಲಿ ಇಟ್ಟಿದ್ದೆ ತಾಯಿ ಈ ಸೀರೆ- ಬ್ಲೌಸ್‌ನ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಸೀರಿಯಲ್‌ನಲ್ಲಿ ಅವರನ್ನು ಈ ಸೀರೆಯಲ್ಲಿ ನೊಡುವಾಗ ಒಂದಿಷ್ಟೂ ಇಷ್ಟ ಆಗಲ್ಲ, ತುಂಬಾ ವರ್ಕ್ ಇರುವ ಸೀರೆಗೆ ಮಿಣಿ ಮಿಣಿ ಬ್ಲೌಸ್, ಫ್ಯಾಷನ್ ಸೆನ್ಸ್ ಇರುವ ವೈಷ್ಣವಿ ಗೌಡ ಸೀತೆ ಪಾತ್ರದಲ್ಲಿ ಏಕೆ ಹೀಗೆ ಕಾಣಿಸಿದೆರೋ ಅವರಿಗಷ್ಟೇ ಗೊತ್ತು. ಬಹುಶಃ ಗ್ರ್ಯಾಂಡ್ ಆಗಿ ಕಾಣಲು ಹೋಗಿ ಈ ರೀತಿ ಆಯ್ತೇ?
ಹೊಸ ಟ್ರೆಂಡ್‌ಗೆ ಟ್ರೈ ಮಾಡಿ ಫೇಲ್ ಆದರೆ?
ಈಗೀನ ಎಲ್ಲಾ ಬ್ಲೌಸ್ ಡಿಸೈನ್‌ಗಿಂತ ಭಿನ್ನವಾಗಿದೆ ಈ ಬ್ಲೌಸ್, ಸಾಮಾನ್ಯವಾಗಿ ನಟ-ನಟಿಯರ ಫ್ಯಾಷನ್ ಟ್ರೆಂಡ್ ಆಗುತ್ತದೆ, ಆದರೆ ಈ ಫ್ಯಾಷನ್ ಫ್ಲಾಪ್ ಆಗಿದೆ.
ಈ ಸೀರೆ ಲುಕ್ ನೋಡಿ ಎಷ್ಟು ಎಲಿಗಂಟ್ ಆಗಿದೆ
ಸೀರೆಗೆ ರಿಚ್ ಲುಕ್ ಬರಲು ಅದಕ್ಕೆ ತುಂಬಾನೇ ವರ್ಕ್ ಬರಬೇಕು ಎಂದೇನು ಇಲ್ಲ, ಸೀರೆಗೆ ಮ್ಯಾಚಿಂಗ್ ಬ್ಲೌಸ್, ಕಾಂಟ್ರಾಸ್ಟ್ ಆದರೆ ಯೂನಿಕ್ ಆಗಿ ಕಾಣುವಂತೆ ಇರಬೇಕು.
ಮತ್ತೆ ಟ್ರೆಂಡ್‌ನಲ್ಲಿ ಕಾಲರ್ ನೆಕ್
ಈಗ ಮತ್ತೆ ಕಾಲರ್ ನೆಕ್ ಬ್ಲೌಸ್ ಡಿಸೈನ್ ಟ್ರೆಂಡ್‌ನಲ್ಲಿದೆ ಆದರೆ ಅದು ಸೀರೆಗೆ ಸೂಟ್ ಆಗುವಂತೆ ಇರಬೇಕು, ಇಲ್ಲದಿದ್ದರೆ ನೋಡುಗರ ಕಣ್ಣಿಗೆ ಜಾತ್ರೆ ಕಂಡಂಗೆ ಕಾಣುತ್ತೇವೆ. ಇಷ್ಟೆಲ್ಲಾ ಕಮೆಂಟ್ ಬಂದಿರುವುದರಿಂದ ಅವರು ಮುಂದೆ ಡ್ರೆಸ್ಸಿಂಗ್ ಕಡೆಗೆ ಗಮನಹರಿಸಬಹುದು. ಅವರು ಮುದ್ದಾಗಿದ್ದಾರೆ, ಯಾವ ಡ್ರೆಸ್ ಕೂಡ ಚೆನ್ನಾಗಿ ಕಾಣುತ್ತೆ, ಆದರೆ ಈ ರೀತಿಯ ಡ್ರೆಸ್ಸಿಂಗ್ ಯಾರಿಗೂ ಸೂಟ್ ಆಗಲ್ಲ ಅಲ್ವಾ.....
ಒಂದು ವೇಳೆ ತಂಡದವರೇ ಈ ರೀತಿಯ ಸೀರೆ ಕೊಟ್ಟಿದ್ದರೆ ಈ ಈ ಬಗೆಯ ಕಾಂಬಿನೇಷನ್ ಡ್ರೈ ಮಾಡುವ ಧೈರ್ಯ ಮಾಡಬಾರದು, ಅವರ ಫ್ಯಾಷನ್ ಅನ್ನು ಜನರು, ಮಹಿಳೆಯರು ಗಮನಿಸುತ್ತಾರೆ, ಅವರಂತೆ ಡ್ರೆಸ್ ಮಾಡಿಕೊಳ್ಳುತ್ತಾರೆ, ಆದರೆ ಈ ರೀತಿಯ ಕಲರ್ ಕಾಂಬಿನೇಷನ್ ಅಜ್ಜಿ ಕೂಡ ಟ್ರೈ ಮಾಡುವುದಿಲ್ಲ, ಆ ಗೋಲ್ಡನ್ ಕಲರ್ ಬ್ಲೌಸ್, ಅದಕ್ಕೆ ಕಡು ನೀಲಿ ಬಣ್ಣದ ಸೀರೆ, ಅದಕ್ಕೆ ಒಂದಿಷ್ಟೂ ವರ್ಕ್ ಹಾಗಾಗಿ ಜಾತ್ರೆ ಅನ್ನುತ್ತಿದ್ದಾರೆ.



Click it and Unblock the Notifications

