Latest Updates
-
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು!
ಉರ್ಫಿ ಜಾವೇದ್ ಮುಖಕ್ಕೆ ಏನಾಗಿದೆ? ಆಕೆಯನ್ನು ಕಾಡುತ್ತಿರುವ ಸಮಸ್ಯೆ ಸೌಂದರ್ಯ ವೃದ್ಧಿ ಚಿಕಿತ್ಸೆಯಿಂದ ಬಂದಿದ್ದೇ?
ಉರ್ಫಿ ಜಾವೇದ್ ತನ್ನ ವಿಚಿತ್ರ ವೇಷ ಭೂಷಣಗಳಿಂದಲೇ ಸೆಲೆಬ್ರಿಟಿ ಪಟ್ಟದಲ್ಲಿರುವ ವ್ಯಕ್ತಿ. ಸದಾ ಜನರ ಗಮನ ಸೆಳೆಯಬೇಕೆಂದು ಚಿತ್ರ ವಿಚಿತ್ರವಾದ ಡ್ರೆಸ್ಸಿಂಗ್ ಮಾಡುತ್ತಾರೆ. ಇದೇ ಕಾರಣಕ್ಕೆ ಸಾಕಷ್ಟು ಟೀಕೆಗಳು ಇವರ ನೇರ ಬರುತ್ತದೆ, ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಉರ್ಫಿ ಜಾವೇದ್ ತನ್ನ ಅವತಾರಗಳನ್ನು ಮುಂದುವರೆಸಿದ್ದಾರೆ... ನಾವು ಇಲ್ಲಿ ಅವರ ಡ್ರೆಸ್ಸಿಂಗ್ ಬಗ್ಗೆ ಹೇಳುತ್ತಿಲ್ಲ, ಬದಲಿಗೆ ಅವರೇ ಶೇರ್ ಮಾಡಿರುವ ಅವರ ಅಲರ್ಜಿ ಸಮಸ್ಯೆ ಬಗ್ಗೆ ಹೇಳಿದ್ದೇವೆ...

ಏನಾಯ್ತು ಉರ್ಪೀ ಜಾವೇದ್ ಮುಖಕ್ಕೆ?
ಅವರ ಮುಖ ಊದಿಕೊಂಡಿದೆ, ಕಣ್ಣುಗಳಲ್ಲಿ ಊತ ಕಂಡು ಬಂದಿದೆ. ಇದನ್ನು ಅವರೇ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಾಕಲಾಗಿದೆ. ಆಕೆಗೆ ಈ ರೀತಿ ಆಗಾಗ ಕಾಡುತ್ತಿದೆ ಎಂದು ಅವರೇ ಹೇಳಿಕೊಂಡಿದ್ದಾರೆ, ಆದರೆ ಅದನ್ನು ನೋಡಿದವರು ಉರ್ಫಿ ಮುಖ ಮತ್ತೆ ಮೊದಲಿನಂತೆ ಆಗುವುದೇ? ಎಂಬ ಸಂಶಯ ವ್ಯಕ್ತಿ ಪಡಿಸುತ್ತಿದ್ದಾರೆ.
Will I Ever Get Ok?
ಇದನ್ನು ಸ್ವತಃ ಉರ್ಫಿ ಜಾವೇದ್ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಮುಖದ ಬಗ್ಗೆ ಹಲವು ಕಮೆಂಟ್ ಮಾಡುತ್ತಿದ್ದಾರೆ, ನನಗೆ ತುಂಬಾನೇ ಅಲರ್ಜಿ ಸಮಸ್ಯೆಯಿದೆ, ಪ್ರತಿದಿನ ನಾನು ಏಳುವಾಗ ನನ್ನ ಮುಖ ಈ ರೀತಿ ಇರುತ್ತದೆ, ತುಂಬಾನೇ ಹಿಂಸೆಯಾಗುತ್ತೆ, ಇದು Fillers ಅಲ್ಲ ಗಯ್ಸ್, ನಿಜವಾಗಲೂ ಅಲರ್ಜಿ, ಇನ್ನು ಮುಂದೆ ನನ್ನ ಮುಖ ಊದಿಕೊಂಡಂತೆ ಕಂಡಾಗ ನನಗೆ ಈ ಕೆಟ್ಟ ಅಲರ್ಜಿ ಉಂಟಾಗಿದೆ ಎಂದು ತಿಳಿದುಕೊಳ್ಳಿ, ನಾನು ಫಿಲ್ಲರ್ ಹಾಗೂ ಬೋಟೆಕ್ಸ್ ಬಿಟ್ಟರೆ ಬೇರೇನೂ ಮಾಡಿಸಿಲ್ಲ, ಅದನ್ನು 18 ವರ್ಷ ಇರುವಾಗಲೇ ಮಾಡಿಸಿಕೊಳ್ಳುತ್ತಿದ್ದೇನೆ, ನನ್ನ ಮುಖ ಊದಿಕೊಂಡಂತೆ ಕಂಡಾಗ ಫಿಲ್ಲರ್ಸ್ ಅಥವಾ ಬೋಟೆಕ್ಸ್ ಮಾಡಿಸಿಕೊಂಡಿರುವುದರಿಂದ ಈ ರೀತಿ ಆಗುತ್ತಿಲ್ಲ, ಆದ್ದರಿಂದ ಈ ಬಗ್ಗೆ ಸಲಹೆ ನೀಡಲು ಬರಬೇಡಿ, ಅನುಕಂಪ ಇರಲಿ ಎಂದು ಬರೆದಿದ್ದಾರೆ.
(I've been getting so many remarks with my face that I've gone overboard with my fillers ! I have major major allergies , my face is swollen most of the time. I wake up like this every second day , and my face is always swollen . I'm always in extreme discomfort . 😅
Fillers nahi hai guys , allergies hai .
Immunotherapy chalu hai but if you next see me with swollen face . Just know I'm going through one of those bad allergy days , I've not gotten anything done except of course my usual fillers and Botox which I've been getting since I was 18 .
If you see my face swollen don't advise me not to get more fillers just sympathise and move on)
ಏಕೆ ಹೀಗಾಗುತ್ತಿದೆ ಎಂದು ಅವರಿಗೇ ಗೊತ್ತಾಗುತ್ತಿಲ್ಲ?
ಇತ್ತೀಚೆಗೆ ಉರ್ಫಿ ಯಾವುದಾದರೂ ಕಾರ್ಯಕ್ರಮದಲ್ಲಿ ಕಾಣಿಸಿದಾಗ ಅವರ ಮುಖ ಊದಿಕೊಂಡಂತೆ ಕಾಣುತ್ತಿತ್ತು, ಅದನ್ನು ನೋಡಿದವರು ಅತಿಯಾದ ಮೇಕಪ್, ಕೆಲವೊಂದು ಬ್ಯೂಟಿ ಚಿಕಿತ್ಸೆಯಿಂದಾಗಿ ಈ ರೀತಿ ಆಗಿರಬಹುದು ಎಂದು ಕಮೆಂಟ್ ಮಾಡುತ್ತಿದ್ದರು, ಇದನ್ನು ಕೇಳಿದ ಮೇಲೆ ನನ್ನ ಸಮಸ್ಯೆ ಮೇಕಪ್ ಅಥವಾ ಇನ್ನು ಏನೋ ಸೌಂದರ್ಯ ವೃದ್ಧಿಗೆ ಮಾಡಿದ್ದೇನೆ ಎಂಬುವುದು ಅಲ್ಲ, ಬದಲಿಗೆ ತ್ವಚೆ ಅಲರ್ಜಿ ಎಂದು ಖಚಿತ ಪಡಿಸಿದ್ದಾರೆ.
ಅವರ ಬದುಕಿಗೆ ಹೊಡೆತ ಬೀಳುವುದೇ?
ಉರ್ಫಿ ಜಾವೇದ್ ಎಂಬ ವ್ಯಕ್ತಿ ಈಗ ಗಳಿಕೆ ಮಾಡುತ್ತಿರುವುದು, ಹೆಸರು ಚಾಲ್ತಿಯಲ್ಲಿ ಇರುವುದು ಅವರ ಮೈ ಮಾಟ ಹಾಗೂ ಡ್ರೆಸ್ಸಿಂಗ್‌ನಿಂದ. ಈಗ ಮುಖ ಈ ರೀತಿಯಾದರೆ ಅವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ದೂಡುವುದೇ ಎಂಬ ಆತಂಕ ಅವರ ಅಭಿಮಾನಿಗಳಿಗಿದೆ. ಏಕೆಂದರೆ ಉರ್ಫಿ ತಮ್ಮ ಬದುಕಿನಲ್ಲಿಎಷ್ಟೊಂದು ಕಷ್ಟಪಟ್ಟಿದ್ದಾರೆ ಎಂಬುವುದನ್ನು ಅವರು ಹಲವಾರು ಬಾರಿ ಹೇಳಿಕೊಂಡಿದ್ದಾರೆ, ಬಾಲಿವುಡ್‌ನಲ್ಲಿ ನಟಿಯಾಗಿ ಗಮನ ಸೆಳೆದಿಲ್ಲ, ಬರೀ ವಿಚಿತ್ರ ವೇಷಗಳಿಂದಲೇ ಗಮನ ಸೆಳೆಯುತ್ತಿರುವವರು. ಇವರ ಮುಖದ ಅಂದ ಹಾಳಾದರೆ ಅದು ಅವರ ಬದುಕಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.



Click it and Unblock the Notifications











