Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ದುಬಾರಿ ಮೇಕ್ ಅಪ್ ಕಿಟ್ ಬೇಡ..ಮುಖ ಹೊಳೆಯುವಂತೆ ಮಾಡುವ ಟ್ರಿಕ್ಸ್ ಇದು..!
ಮುಖ ಸುಂದರವಾಗಿ ಹೊಳೆಯುವಂತೆ ಕಾಣಿಸಬೇಕು. ಎಲ್ಲರಿಗಿಂತ ಅತ್ಯುತ್ತಮ ರೀತಿಯಲ್ಲಿ ಮೇಕ್‌ಅಪ್ ಮಾಡಿಕೊಂಡು ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು ಎಂಬುದು ಎಲ್ಲರ ಆಸೆಯಾಗಿರುತ್ತೆ. ಆದ್ರೆ ಈಗ ಮೇಕ್ ಅಪ್ ಅಂದ್ರೆ ಕೆಲವರಿಗೆ ದೊಡ್ಡ ಸವಾಲಿನ ಕೆಲಸ. ಹಾಗೆ ಕೆಲವರಿಗೆ ದುಬಾರಿ ಎನ್ನುವ ಮನಸ್ಥಿತಿ ಇದೆ.
ಆದ್ರೆ ಮನೆಯಲ್ಲಿಯೇ ನಾವು ಮುಖವನ್ನು ಯಾವುದೇ ಮೇಕ್ ಅಪ್ ಬಳಸದೆ ಸುಂದರವಾಗಿ ಕಾಣಿಸಿಕೊಳ್ಳುವಂತೆ ಮಾಡಬಹುದು. ಆದ್ರೆ ಯಾರು ಕೂಡ ಈ ರೀತಿ ಮನೆಮದ್ದಿನಂತಹ ಪ್ರಕ್ರಿಯೆಯನ್ನು ಶಿಫಾರಸು ಮಾಡುವುದಿಲ್ಲ. ಆದ್ರೆ ದುಬಾರಿ ರಾಸಾಯನಿಕ ಮೇಕ್ ಅಪ್ ಇಲ್ಲದೆಯೇ ಸುಲಭವಾಗಿ ಮನೆಯಲ್ಲಿ ಹೇಗೆ ಮುಖವನ್ನು ಸುಂದರವಾಗಿಸಬಹುದು ಎಂಬುದನ್ನು ನಾವು ತಿಳಿಯೋಣ.

ಈ ರೀತಿಯ ಹಲವು ಟ್ರಿಕ್ಸ್‌ಗಳನ್ನು ನಾವಿಂದು ಬ್ಯೂಟಿಷಿಯನ್ ಆಗಿರುವ ಶೋಭಾ, ಎನ್. ಡಿ ಅವರಿಂದ ತಿಳಿದುಕೊಳ್ಳೋಣ. ಬ್ಯೂಟಿಷಿಯನ್ ಪ್ರಕಾರ ಮನೆಯಲ್ಲೇ ಮುಖವನ್ನು ಸುಂದರವಾಗಿಸುವುದು ಹೇಗೆ? ಅದರಲ್ಲೂ ಮೇಕ್‌ಅಪ್ ಬಳಸದೆ ಮುಖ ಸುಂದರವಾಗಿ ಕಾಣಲು ಇಲ್ಲಿದೆ ಕೆಲವೊಂದು ಟ್ರಿಕ್ಸ್‌ಗಳು
ನ್ಯಾಚುರಲ್ ಆಗಿ ಬ್ಯೂಟಿಫುಲ್ ಆಗಿ ಕಾಣಿಸಬೇಕು ಅನ್ನೋದು ಎಲ್ಲರ ಬಯಕೆ ಆಗಿರುತ್ತೆ ಆದ್ರೆ ಇದಕ್ಕೆ ದುಬಾರಿ ಕ್ರೀಮ್‌ಗಳು, ಫೇಸ್ ಪ್ಯಾಕ್‌ಗಳನ್ನೇ ಬಳಸಬೇಕು ಅನ್ನೋದು ಸುಳ್ಳು. ಕೆಲವೊಂದು ಸಣ್ಣ ಪುಟ್ಟ ಮನೆಯಲ್ಲಿ ಸಿಗುವ ವಸ್ತುಗಳಿಂದ ಮಾಡಿದ ವಸ್ತುಗಳು ಕೂಡ ಸಹಾಯ ಮಾಡುತ್ತೆ ಎಂದು ಅವರು ಹೇಳಿದ್ದಾರೆ.
ಮುಖಕ್ಕೆ ಸೋಪು ಬಳಸಬೇಡಿ
ಮನೆಯಲ್ಲಿದ್ದಾಗ ಮುಖಕ್ಕೆ ಸೋಪು ಹಚ್ಚಿ ತೊಳೆಯುವುದನ್ನು ಮಾಡುತ್ತೇವೆ. ಈ ರೀತಿಯ ಕೆಲಸ ಮಾಡಬಾರದು. ಏಕೆಂದರೆ ಸೋಪಿನಲ್ಲಿ ಅತ್ಯಧಿಕ ಮಟ್ಟದ ಪಿಹೆಚ್ ಹಾಗೂ ರಾಸಾಯನಿಕ ಇರಲಿದೆ. ದೇಹದ ಉಳಿದ ಭಾಗಕ್ಕಿಂತ ಮುಖದ ಮೇಲಿನ ಚರ್ಮವು ಮೃದುವಾಗಿರುತ್ತದೆ. ಈ ಸೋಪುಗಳಲ್ಲಿನ ರಾಸಯಾನಿಕರು ನಿಧಾನವಾಗಿ ಹಾನಿ ಮಾಡಲು ಆರಂಭಿಸುತ್ತದೆ. ವರ್ಷಗಳ ಬಳಿಕ ನಿಮ್ಮ ಮುಖ ರಾಸಾಯನಿಕದ ಕಾರಣಕ್ಕೆ ಹೊಳಪು ಕಳೆದುಕೊಳ್ಳಬಹುದು. ಹೀಗಾಗಿ ಸೋಪು ಬಳಸುವ ಬದಲು ಫೇಸ್‌ವಾಷ್ ಅಥವಾ ಸೀರಮ್‌ಗಳ ಬಳಸುವುದು ಸೂಕ್ತ.
ಪದೇ ಪದೇ ಕ್ರೀಮ್ ಬದಲಾಯಿಸಬೇಡಿ
ನೀವು ಮುಖಕ್ಕೆ ಯಾವುದಾದರು ಕ್ರೀಮ್ ಹಚ್ಚುತ್ತಿದ್ದರೆ ಅದು ನಿಮ್ಮ ಮುಖಕ್ಕೆ ಸರಿಹೊಂದುತ್ತದೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಿ. ತಜ್ಞರ ಬಳಿ ನೀವು ಪರೀಕ್ಷಿಸಿಕೊಂಡು ನಿಮ್ಮ ಚರ್ಮಕ್ಕೆ ಸರಿಹೊಂದುವ ಕ್ರೀಮ್ ಬಳಸಿ. ಹಾಗೆ ಪದೇ ಪದೇ ಹೊಸ ಹೊಸ ಕ್ರೀಮ್‌ಗಳನ್ನು ಪ್ರಯೋಗ ಮಾಡಿ ಬಿಡುವುದು ತಪ್ಪು. ಯಾವಾಗಲು ಒಂದೇ ಕ್ರೀಮ್ ಬಳಸುವುದು ಸೂಕ್ತ.
ಮಲಗುವಾಗ ಕೊಬ್ಬರಿ ಎಣ್ಣೆ ಬಳಸಿ
ಪ್ರತಿ ದಿನ ನೀವು ಮಲಗುವ ಮುನ್ನ ಶುದ್ಧ ನೀರಿನಿಂದ ಮುಖ ತೊಳೆದು ಕೊಬ್ಬರಿ ಎಣ್ಣೆ ಹಚ್ಚಿ ಮಲಗುವುದು ಉತ್ತಮ ಅಭ್ಯಾಸವಾಗಲಿದೆ. ಇದರಿಂದ ನಿಮ್ಮ ಮುಖದಲ್ಲಿರುವ ಕಲ್ಮಶಗಳ ತೆಗೆಯಲು ಸಹಾಯಕವಾಗಲಿದೆ. ಹಾಗೆ ಹೊಳಪು ಉಳಿಯುವಂತೆ ಮಾಡಲಿದೆ.
ಸಕ್ಕರೆ ಟೊಮೆಟೋ ರಸದ ಪ್ಯಾಕ್
ಮನೆಯಲ್ಲಿ ಕಡಿಮೆ ಸಮಯದಲ್ಲಿ ಮಾಡುವಂತಹ ಹಾಗೆ ಹೆಚ್ಚು ಖರ್ಚಿಲ್ಲದೆ ಮಾಡುವ ಉತ್ತಮ ಪ್ಯಾಕ್ ಇದು. ಒಂದು ಬೌಲ್‌ನಲ್ಲಿ ಟೊಮೆಟೊ ರಸ ಹಾಕಿಕೊಂಡು ಸ್ವಲ್ಪ ಸಕ್ಕರೆ ಹಾಕಿ ಕರಗಿಸಿಕೊಂಡು ಇದು ದಪ್ಪವಾಗಿರುವಂತೆ ಮಾಡಿ ಅದನ್ನು ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಮಸಾಜ್ ಮಾಡಬೇಕು. ಮಲಗುವ ಮುನ್ನ ತೊಳೆಯಬಹುದು ಇಲ್ಲವೆ ಬೆಳಗ್ಗೆ ಎದ್ದ ಬಳಿಕವೂ ಮುಖವನ್ನು ತೊಳೆಯಬಹುದು ಇದರಿಂದ ನಿಮ್ಮ ಮುಖದಲ್ಲಿ ಹೊಳಪು ಹಾಗೆ ಉಳಿಯಲಿದೆ.



Click it and Unblock the Notifications
