Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
10 ರೂಪಾಯಿ ಖರ್ಚಿಲ್ಲದೆ ಮುಖದ ಕಾಂತಿ ಹೆಚ್ಚಿಸೋದು ಹೇಗೆ? ಈ ಫೇಸ್ ಮಾಸ್ಕ್ ಬಳಸಿ.!
ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕು. ಕಲೆಗಳು ನಿವಾರಣೆಯಾಗಬೇಕು. ಅನ್ನೋದು ಎಲ್ಲಾ ಮಹಿಳೆಯರ ಆಸೆಯಾಗಿರುತ್ತೆ. ಅದರಲ್ಲೂ ಯುವ ಜನತೆ ತಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಹಲವು ರೀತಿಯ ಪ್ರಯತ್ನದಲ್ಲಿ ತೊಡಗುವುದು ನೋಡಬಹುದು. ಇದಕ್ಕಾಗಿ ಹತ್ತಾರು ಬಗೆಯ ಅದರಲ್ಲೂ ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಬೆಲೆಯ ವಸ್ತುಗಳನ್ನು ಮುಖಕ್ಕೆ ಹಚ್ಚಲು ಬಳಸುತ್ತಾರೆ.
ಇನ್ನು ಮಹಿಳೆಯರು ಪಾರ್ಲರ್‌ಗೆ ತೆರಳುವ ಮೂಲಕ ಈ ರೀತಿಯಾಗಿ ಮುಖ ಹೊಳಪು ಬರುವಂತೆ ಫೇಷಿಯಲ್ ಮಾಡಿಸುವುದು ನೋಡಬಹುದು. ಪಾರ್ಲರ್‌ನಲ್ಲೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಅದು ಕೂಡ ನಿಗದಿತ ಸಮಯದಲ್ಲಿ ಮತ್ತೆ ಮತ್ತೆ ಫೇಷಿಯಲ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಪಾರ್ಲರ್‌ಗೆ ಹೋಗುವ ಮಂದಿ ಯಾವಾಗಲು ಅದಕ್ಕೆ ಹೊಂದಿಕೊಳ್ಳುತ್ತಾರೆ.

ಇನ್ನು ಪಾರ್ಲರ್ ಸೌಂದರ್ಯವನ್ನು ಮನೆಯಲ್ಲೇ ಪಡೆದರೆ ಹೇಗೆ? ಹೌದು ಪಾರ್ಲರ್‌ಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲಾಗಿ ಮನೆಯಲ್ಲೇ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮುಖದ ಕಾಂತಿ ಹೊಳೆಯುವಂತೆ ಮಾಡಬಹುದು. ಅಂದಹಾಗೆ ಮನೆಯಲ್ಲಿ ಯಾವ ರೀತಿಯಾಗಿ ಫೇಷಿಯಲ್ ಮಾಡಿಕೊಳ್ಳಬಹುದು. ಅದಕ್ಕೆ ಯಾವ ವಸ್ತುಗಳ ಬಳಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮುಖವು ಬಾಡಿರುವಂತೆ ಅಥವಾ ಹೊಳಪು ಕಳೆದುಕೊಂಡಂತೆ ಕಾಣಲು ಹಲವು ಕಾರಣಗಳಿವೆ. ಅದರಲ್ಲೂ ನೈಸರ್ಗಿಕವಾಗಿ ನಿಮ್ಮ ಮುಖದ ಟೋನ್ ಬದಲಾಗಿದ್ದರೆ ಈ ರೀತಿಯಾಗಿ ನೀವು ಮನೆಯಲ್ಲೇ ಫೇಷಿಯಲ್ ಮಾಡಿಕೊಳ್ಳುವುದು ಉತ್ತಮ.
ಜೇನು ತುಪ್ಪ ಹಾಗೂ ಅರಶಿಣ
ಮೊದಲು ಒಂದು ಬೌಲ್‌ನಲ್ಲಿ 1 ಚಮಚ ಜೇಣು ತುಪ್ಪ ತೆಗೆದುಕೊಳ್ಳಿ, ನಂತರ ಅರ್ಧ ಚಮಚ ಅರಶಿಣ ಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದು ಶುದ್ದ ಬಟ್ಟೆಯಲ್ಲಿ ಒರೆಸಿಕೊಳ್ಳಿ. ನಂತರ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿಕೊಂಡು 15 ನಿಮಿಷ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಇದೇ ರೀತಿಯ ಪೇಸ್ಟ್ ಅನ್ನು ವಾರದಲ್ಲಿ 2ರಿಂದ 3 ಬಾರಿ ಮಾಡಿದರೆ ಮುಖದ ಕಾಂತಿ ಹೊಳೆಯುತ್ತದೆ.
ಆವಕಾಡೊ ಮತ್ತು ಮೊಸರು ಮಾಸ್ಕ್
ಆವಕಾಡೋ ಮಾಸ್ಕ್ ಮಾಡಲು ಆವಕಾಡೋವನ್ನು ಸಣ್ಣದಾಗಿ ಹೆಚ್ಚಿಕೊಂಡು ಅದಕ್ಕೆ 1 ಚಮಚ ಮೊಸರು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆದು ಶುದ್ದ ಬಟ್ಟೆಯಲ್ಲಿ ಒರೆಸಿಕೊಳ್ಳಿ. ಈ ರೀತಿ ವಾರದಲ್ಲಿ 2 ಬಾರಿ ಮಾಡಿ ನೋಡಿ.
ಬಾಳೆಹಣ್ಣು ಮತ್ತು ಜೇನುತುಪ್ಪದ ಮಾಸ್ಕ್
ಅರ್ಧ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ಮ್ಯಾಶ್ ಮಾಡಿಕೊಳ್ಳಿ. ನಂತರ 1 ಚಮಚ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಂಡು 15 ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ. ಈ ರೀತಿ ವಾರದಲ್ಲಿ 3 ಬಾರಿ ಮಾಡಿ ನೊಡಿ.
ಅಲೋವೆರಾ ಮತ್ತು ನಿಂಬೆ ಮಾಸ್ಕ್
ಈ ಮಾಸ್ಕ್ ಮಾಡಲು ಮೊದಲು 2 ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ. ನಂತರ ಅದಕ್ಕೆ 1 ಚಮಚ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಖಕ್ಕೆ 10 ನಿಮಿಷ ಬಿಟ್ಟು ತೊಳೆದುಕೊಳ್ಳಿ. ವಾರದಲ್ಲಿ 2 ಬಾರಿ ಈ ರೀತಿ ಮಾಡಿ ನೋಡಿ. ನಿಮ್ಮ ಮುಖದ ಕಾಂತಿ ಹೆಚ್ಚಾಗುವುದು ಪಕ್ಕ. ಈ ರೀತಿಯ ಫೇಸ್ಟ್ ಮಾಸ್ಕ್ ಮಾಡಿದರೆ ಮುಖ ಕಾಂತಿಯುವತವಾಗಿ ಹೊಳೆಯಲಿದೆ.



Click it and Unblock the Notifications
