Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈಗ ಬಂದಿದೆ ಮಸಾಬ ಬ್ಲೌಟ್ ಟ್ರೆಂಡ್, ಈ ಬ್ಲೌಸ್ ಏಕಿಷ್ಟು ಗಮನ ಸೆಳೆಯುತ್ತಿದೆ?
ಸೀರೆಯನ್ನು ನೀವು ತುಂಬಾನೇ ಸಾಂಪ್ರದಾಯವಾಗಿ ಬಳಸಬಹುದು, ಅಷ್ಟೇ ಮಾಡರ್ನ್ ಆಗಿಯೂ ಬಳಸಬಹುದು, ಸೀರೆ ಒಂದೇ ಅದಕ್ಕೆ ನೀವು ಸ್ಟಿಚ್ ಮಾಡಿಸುವ ಬ್ಲೌಸ್ ಡಿಸೈನ್ ಹಾಗೂ ಅದರ ಲುಕ್ ಇದೆಯಲ್ಲಾ ಅದು ನಿಮ್ಮ ಲುಕ್ ಅನ್ನೇ ಬದಲಾಯಿಸುತ್ತದೆ, ಆ ಕಾರಣದಿಂದಲೇ ಹೆಣ್ಮಕ್ಕಳು ಬ್ಲೌಸ್ ಡಿಸೈನ್‌ಗೆ ತುಂಬಾನೇ ಪ್ರಾಮುಖ್ಯತೆ ಕೊಡ್ತಾರೆ, ಡಿಸೈನರ್‌ಗಳು ಕೂಡ ಹೊಸ ಡಿಸೈನ್ ಪರಿಚಯಿಸುತ್ತಲೇ ಇರ್ತಾರೆ. ಈಗ ಚಾಲ್ತಿಯಲ್ಲಿರುವ ಬ್ಲೌಸ್ ಟ್ರೆಂಡ್ ಯಾವುದಪ್ಪಾ ಎಂದು ನೋಡುವುದಾದರೆ ಮಸಾಬ ಬ್ಲೌಸ್ ಡಿಸೈನ್.

ಮಸಾಬ ಬ್ಲೌಸ್ ಡಿಸೈನ್ ಸ್ಪೆಷಾಲಿಟಿ
ಈಗ ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಈ ಒಂದು ಪ್ಯಾಟ್ರನ್ ಬ್ಲೌಸ್‌ನಲ್ಲಿ ಮಿಂಚುತ್ತಿರುತ್ತಾರೆ. ಸೀರೆ ಫ್ಯಾಬ್ರಿಕ್ ಆಗಿರಲಿ, ಕಾಟನ್ ಆಗಿರಲಿ, ರೇಷ್ಮೆಯೇ ಆಗಿರಲಿ, ಎಲ್ಲಾ ಬಗೆಯ ಸೀರೆಗೆ ಈ ಬ್ಲೌಸ್ ಡಿಸೈನ್ ಸೂಟ್ ಆಗುತ್ತೆ ಎಂಬುವುದೇ ಇದರ ಮತ್ತೊಂದು ವಿಶೇಷತೆ. ನೀವು ಇತ್ತೀಚೆಗೆ ಬಿಗ್‌ಬಾಸ್‌ನಲ್ಲಿ ಭವ್ಯಾ ಕೂಡ ಇದೇ ರೀತಿಯ ಬ್ಲೌಸ್ ಡಿಸೈನ್‌ನಲ್ಲಿ ಮಿಂಚಿದ್ದರು. ನೀವು ಈ ಡಿಸೈನ್ ಬ್ಲೌಸ್ ಸ್ಟಿಚ್ ಮಾಡಿ ಗ್ರ್ಯಾಂಡ್ ಸೀರೆಗೆ ಹಾಕಬಹುದು, ಇಲ್ಲಾ ಸಿಂಪಲ್ ಸೀರೆಗೆ ಬಳಸಬಹುದು, ಈ ಲುಕ್ ಸಕತ್ ಸ್ಟೈಲಿಷ್ ಲುಕ್ ನೀಡುತ್ತದೆ ಅಲ್ಲದೆ ನಿಮಗೆ ಟ್ರೆಂಡಿ ಲುಕ್ ನೀಡುತ್ತದೆ.
ಸ್ಲೀವ್‌ಲೆಸ್, ಆಫ್ ಅಥವಾ ಫುಲ್ ತೊಳಿನ ಮಿಕ್ಸ್ ಈ ಬ್ಲೌಸ್ ಡಿಸೈನ್
ಇದಕ್ಕೆ ಸ್ಲೀವ್‌ಲೆಸ್ ಲುಕ್ ಕೂಡ ಇದೆ, ಆದರೆ ತೋಳುಗಳು ಕೂಡ ಇದೇ, ಹೀಗಾಗಿ ಸ್ಲೀವ್‌ಲೆಸ್ ಹಾಕುವುದೇ ಇಲ್ಲ ಎನ್ನುವವರು ಕೂಡ ಈ ಬ್ಲೌಸ್ ಡಿಸೈನ್ ಟ್ರೈ ಮಾಡಬಹುದು.
ಮಾಡರ್ನ್ ಲುಕ್‌ಗೂ ಸೈ, ಸಾಂಪ್ರದಾಯಕ ಲುಕ್‌ಗೂ ಸೈ
ಈ ಬ್ಲೌಸ್‌ನ ವಿಶೇಷತೆಯೆಂದರೆ ನೀವು ತುಂಬಾ ಮಾಡರ್ನ್ ಲುಕ್‌ನಲ್ಲಿಯೂ ಈ ಬ್ಲೌಸ್‌ನಲ್ಲಿ ಮಿಂಚಬಹುದು, ಸಾಂಪ್ರದಾಯಕ ಲುಕ್‌ನಲ್ಲಿಯೂ ಮಿಂಚಬಹುದು, ನೀವು ಧರಿಸುವ ಸೀರೆ, ಹೇರ್ ಸ್ಟೈಲ್, ಅಲಂಕಾರದ ಪ್ರಕಾರ ನಿಮ್ಮ ಲುಕ್ ಬದಲಾಗುವುದು.
ಮಸಾಬ ಬ್ಲೌಸ್‌ನ ಬ್ಯಾಕ್ ಡಿಸೈನ್ ನಿಮಗೆ ಇಷ್ಟವಾಗುವಂತೆ ಸ್ಟಿಚ್ ಮಾಡಿಸಬಹುದು, ಅಲ್ಲದೆ ಇದು ಬ್ಯಾಕ್ ಬಟನ್ ಬ್ಲೌಸ್ ಆಗಿದೆ
ಈ ಮಸಾಬ ಬ್ಲೌಸ್ ಬ್ಯಾಕ್ ಬಟನ್‌ನ ಬ್ಲೌಸ್‌ಆಗಿದೆ, ಇನ್ನು ಹಿಂದೆಕ್ಕೆ ಕಟ್ಟುವ ಥ್ರೆಡ್ ಅನ್ನು ಪ್ಲೇನ್ ಆಗಿ ಇಡಬಹುದು ಅಥವಾ ಮತ್ತಷ್ಟು ಮತ್ತಷ್ಟು ವಿನ್ಯಾಸಗೊಳಿಸಬಹುದು, ಆ ದಾರ ಸ್ವಲ್ಪ ವಿನ್ಯಾಸಗೊಳಿಸಿದರೆ ಮತ್ತಷ್ಟು ಟ್ರೆಂಡಿ ಆಗಿ ಕಾಣುತ್ತೆ.
ಸೆರಗು ಸಿಂಗಲ್ ಪಿನ್ ಚೆನ್ನಾಗಿರುತ್ತದೆ
ನೀವು ಈ ರೀತಿಯ ಸೀರೆ ಧರಿಸಿ ಸೆರಗು ನೆರಿಗೆ ಮಾಡಿದರೆ ಅಷ್ಟು ಆಕರ್ಷಕ ಅನಿಸುವುದಿಲ್ಲ, ಇದನ್ನು ಸಿಂಗಲ್ ಪಿನ್ ಮಾಡಿ ಉಡುಬೇಕು, ಆಕರ್ಷಕವಾಗಿರುತ್ತದೆ.
ವಿಥ್ ಕಪ್, ವಿಥೌಟ್ ಕಪ್ ಕೂಡ ಸ್ಟಿಚ್ ಮಾಡಿಸಬಹುದು
ಇದನ್ನು ನೀವು ವಿಥ್ ಕಪ್ ಕೂಡ ಸ್ಟಿಚ್ ಮಾಡಿಸಬಹುದು, ವಿಥೌಟ್ ಕಪ್ ಕೂಡ ಡಿಸೈನ್ ಮಾಡಿಸಬಹುದು. ಬ್ಯಾಕ್ ತುಂಬಾ ಡೀಪ್ ಇದ್ದರೆ ವಿಥ್ ಕಪ್ ಚೆನ್ನಾಗಿರುತ್ತದೆ.
ಇನ್ಯಾವ ಟ್ರೆಂಡಿ ಡಿಸೈನ್ ನಿಮ್ಮ ಗಮನ ಸೆಳೆದಿದೆ ಕಮೆಂಟಿಸಿ.....



Click it and Unblock the Notifications
