Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಬದಲಾಗಿದೆ ಐಬ್ರೋ ಟ್ರೆಂಡ್: ಈ ಐ ಬ್ರೋ ಲುಕ್ ಎಲ್ಲರಿಗೂ ಸೂಟ್ ಆಗುತ್ತೆ
ಬಟ್ಟೆಗಳ ಟ್ರೆಂಡ್ ಬದಲಾಗುವಂತೆ, ಬ್ಯೂಟಿ, ಫ್ಯಾಷನ್ ಟ್ರೆಂಡ್ ಕೂಡ ಬದಲಾಗುತ್ತಿರುತ್ತದೆ. ಇದೀಗ ಐ ಬ್ರೋ ಟ್ರೆಂಡ್ ಬದಲಾಗಿದೆ, ಸ್ವಲ್ಪ ವರ್ಷಗಳ ಹಿಂದೆ ತೆಳುವಾದ ಹುಬ್ಬಿನ ಸ್ಟೈಲ್ ಟ್ರೆಂಡ್‌ನಲ್ಲಿತ್ತು, ಆದರೆ ಈಗ ಟ್ರೆಂಡ್ ಬದಲಾಗಿದೆ, ದಪ್ಪ ಹುಬ್ಬು ಗಮನ ಸೆಳೆಯುತ್ತಿದೆ. ದಪ್ಪ ಹುಬ್ಬು ಇಲ್ಲದವರು ಮೈಕ್ರೋ ಬ್ಲೇಡಿಂಗ್ ಮೂಲಕ ಫಿಲ್ಲಿಂಗ್ ಮಾಡುತ್ತಿದ್ದಾರೆ.

ಕಾಲೇಜು ಕನ್ಯೆಯರಿಂದ ಹಿಡಿದು ಮಧ್ಯವಯಸ್ಸಿನ ಮಹಿಳೆಯರೂ ಇಷ್ಟಪಡುತ್ತಿದ್ದಾರೆ ದಪ್ಪವಾದ ಐಬ್ರೋ
ಮೊದಲೆಲ್ಲಾ ಐ ಬ್ರೋ ಮಂದವಾಗಿದ್ದರೆ ಇನ್ನು ಸ್ವಲ್ಪ ಐ ಬ್ರೋ ಮಾಡಿ ಶೇಪ್ ಮಾಡಿ ಎಂದು ಸಲಹೆ ನೀಡುತ್ತಿದ್ದರು, ಅದರೆ ಈಗ ಐ ಬ್ರೋ ಮಾಡದೆ ರೀತಿಯಲ್ಲಿ ಇರಬೇಕು, ಅದರೆ ಶೇಪ್ ಆಗಿ ಇರಬೇಕು ಎಂಬ ಟ್ರೆಂಡ್ ಶುರುವಾಗಿದೆ.
ಮುಖದ ಅಂದವೂ ಹೆಚ್ಚಿಸುತ್ತಿದೆ ಈ ಐಬ್ರೋ ಶೇಪ್
ಐಬ್ರೋ ಮಂದವಾಗಿದ್ದರೆ ಸಕತ್ ಟ್ರೆಂಡಿಯಾಗಿ ಕಾಣುವುದು ಮಾತ್ರವಲ್ಲ ನಮ್ಮ ಲುಕ್ ಕೂಡ ಹೆಚ್ಚಿಸುತ್ತಿದೆ. ಸೀರೆಯಾಗಲಿ, ಮಾಡರ್ನ್ ಡ್ರೆಸ್ ಆಗಲಿ ಈ ಐ ಬ್ರೋ ತುಂಬಾನೇ ಗಮನ ಸೆಳೆಯುವುದು, ಅಲ್ಲದೆ ಯಂಗ್ ಅಂಡ್ ಸ್ಟೈಲಿಷ್ ಲುಕ್ ಕೂಡ ನೀಡುತ್ತಿದೆ.
ಮಂದವಾದ ಐ ಬ್ರೋಗೆ 3 ವಿಧಾನ
ಶೇಡ್ ಬಳಸುವುದು: ಐಬ್ರೋ ಪೆನ್ಸಿಲ್ ಬಳಸಿ ಐಬ್ರೋ ಮಂದವಾಗಿ ಕಾಣುವಂತೆ ಮಾಡಬಹುದು, ಅದರೆ ಇದು ದೂರದಿಂದ ನೋಡಿದಾಗ ಚೆನ್ನಾಗಿ ಕಾಣಿಸುತ್ತದೆ, ಸಮೀಪದಿಂದ ನೋಡಿದಾಗ ಪೆನ್ಸಿಲ್ ಶೇಡ್ ಎದ್ದು ಕಾಣಿಸುವುದು, ಇದರಿಂದ ತುಂಬಾನೇ ಮೇಕಪ್ ಮಾಡಿದಂತೆ ಕಾಣುವುದು. ಐಬ್ರೋ ಶೇಡ್ ಸರಿಯಾಗಿ ಇರಬೇಕು, ತುಂಬಾ ಮಂದವಾಗಿ ಕಾಣಬೇಕೆಂದು ಕಪ್ಪಾಗಿ ಹಾಕಬೇಡಿ. ಚೆನ್ನಾಗಿ ಕಾಣಿಸಲ್ಲ, ಹಾಗಾಗಿ ಗ್ರೇ ಕಲರ್ ಶೇಡ್ ಮಿಶ್ರಿತ ಕಪ್ಪು ಬಣ್ಣ ಚೆನ್ನಾಗಿ ಕಾಣುವುದು.
2 ತಿಂಗಳು ಐ ಬ್ರೋ ಮಾಡಿದೆ ಮಂದ ಐ ಬ್ರೋ ಶೇಪ್ ನೀಡುವುದು
ಒಂದೆರಡು ತಿಂಗಳು ಐ ಬ್ರೋ ಶೇಪ್ ಮಾಡದಿದ್ದರೆ ಹುಬ್ಬು ಬೆಳೆಯುತ್ತದೆ, ನಂತರ ದಪ್ಪವಾಗಿ ಶೇಪ್ ಮಾಡಿದರೆ ಸಾಕು. ತುಂಬಾ ದಪ್ಪವಾಗಿ ಶೇಪ್ ಮಾಡಿದರೆ ಆಕರ್ಷಕವಾಗಿ ಕಾಣುವುದು, ಇನ್ನು ತೆಳು ಐ ಬ್ರೋ ಇದ್ದರೆ ಶೇಪ್ ಮಂದವಾಗಿ ಮಾಡಿಸಿ ನಂತರ ಐ ಬ್ರೋ ಶೇಡ್ ಕೊಟ್ಟರೂ ಚೆನ್ನಾಗಿ ಕಾಣುವುದು.
ಮೈಕ್ರೋ ಬ್ಲೇಡಿಂಗ್
ಹಣವಿರುವವರು ಇದನ್ನು ಮಾಡಿಸುತ್ತಾರೆ, ಮೈಕ್ರೊ ಬ್ಲೇಡಿಂಗ್ ಮಾಡಿಸಿದಾಗ ನೈಸರ್ಗಿಕ ಲುಕ್ ಸಿಗುವುದು, ನೋಡಲು ತುಂಬಾ ಆಕರ್ಷಕವಾಗಿ ಕಾಣುವುದು ಅಲ್ಲದೆ ಐ ಬ್ರೋ ಶೇಪ್ ಮಾಡಿಸಬೇಕಾದ ಅಗ್ಯತವೂ ಇರಲ್ಲ, ಮುಖದ ಅಂದ ಕೂಡ ಹೆಚ್ಚಾಗುವುದು. ಮೈಕ್ರೋಫಿಲ್ಲಿಂಗ್ ಅನ್ನು ಅದೊಂದು ರೀತಿಯ ಟ್ಯಾಟೂ ಎಂದು ಹೇಳಬಹುದು. ಇದನ್ನು ಬ್ಯೂಟಿ ಕ್ಲಿನಿಕ್‌ನಲ್ಲಿ ಮಾಡಲಾಗುವುದು.
ಈ ಮೈಕ್ರೋಬ್ಲೇಡಿಂಗ್ ಮಾಡಿಸಿದಾಗ ಎಷ್ಟು ದಿನ ಇರುತ್ತದೆ?
ಮೈಕ್ರೋಬ್ಲೇಡಿಂಗ್ ಒಂದರಿಂದ-ಮೂರು ವರ್ಷದವರೆಗೆ ಇರಬಹುದು. ಅದು ಫೇಡ್ ರೀತಿ ಆಗಿ ಹೋಗುವುದು. 10-12 ತಿಂಗಳವರೆಗೆ ಮೈಕ್ರೋಬ್ಲೇಡಿಂಗ್ ಐಬ್ರೋ ಫ್ರೆಷ್ ಆಗಿಕಾಣುವುದು.
ಹೀಗೆ ಐಬ್ರೋ ಶೇಪ್‌ಗೆ ನಿಮಗೆ ಇಷ್ಟವಾದ ವಿಧಾನ ನಿಮ್ಮ ಬಜೆಟ್‌ಗೆ ಅನುಸಾರ ಮಾಡಬಹುದು.
ಮಂದವಾದ ಐಬ್ರೋ ಮಾಡಿಸಿದಾಗ ಐಬ್ರೋ ದಪ್ಪವಾಗಿ ಪ್ರಾರಂಭವಾಗಿ ನಂತರ ಶೇಪ್ ಆಗಿ ಬರುವುದು, ನಮ್ಮ ಮುಖ ನೋಡಿದ ತಕ್ಷಣ ನಮ್ಮ ಐಬ್ರೋ ಹೈಲೈಟ್ಸ್ ಆಗುವುದು, ಮಂದವಾದ ಐಬ್ರೋ ಲುಕ್‌ಗೆ ಅಲಂಕಾರ ಅಂತೂ ತುಂಬಾ ಚೆನ್ನಾಗಿ ಕಾಣುತ್ತದೆ. ಈ ಐಬ್ರೋ ಲುಕ್ ನಿಮ್ಮ ಅಂದವನ್ನು ಇಮ್ಮಡಿಗೊಳಿಸುತ್ತೆ.



Click it and Unblock the Notifications
