Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮದುವೆ ಫಂಕ್ಷನ್‌ಗಳಲ್ಲಿ ಬೆವರಿನಿಂದ ಮೇಕಪ್ ಹಾಳಾಗದಿರಲು ಈ ಟ್ರಿಕ್ಸ್ ಬಳಸಿ
ಈಗ ಮದುವೆ ಸೀಸನ್. ಮದುವೆಗೆ ಹೋಗುವಾಗ ಯಾರೇ ಆಗಲಿ ಸ್ವಲ್ಪ ವಿಶೇಷ ಕಾಳಜಿವಹಿಸಿ ಡ್ರೆಸ್ಸಿಂಗ್ ಮಾಡುತ್ತಾರೆ. ಏಕೆಂದರೆ ಮದುವೆಗೆ ಬಂದಿರುವ ಇತರರು ಚೆನ್ನಾಗಿ ಡ್ರೆಸ್ಸಿಂಗ್ ಮಾಡಿಕೊಂಡು ಬಂದಿರುವಾಗ ನಾವು ಮಾತ್ರ ಸಿಂಪಲ್ ಆಗಿ ಹೋಗುವುದಕ್ಕೆ ಸಾಧ್ಯವೇ? ಅದರಲ್ಲೂ ನೆಂಟರಿಷ್ಟರ ಮದುವೆ, ಒಡ ಹುಟ್ಟಿದವರ ಮದುವೆ, ಸ್ನೇಹಿತರ ಮದುವೆ ಎಂದರೆ ಮೇಕಪ್ ಕಡೆ ತುಸು ಅಧಿಕವೇ ಗಮನ ಕೊಡುತ್ತೇವೆ ಅಲ್ವಾ?
ಅಷ್ಟೆಲ್ಲಾ ಮುತುವರ್ಜಿವಹಿಸಿ ಮದುವೆಗೆ ರೆಡಿಯಾಗಿ ಮದುವೆ ಹಾಲ್ ತಲುಪುವಷ್ಟರಲ್ಲಿ ಥೂ ... ಮೇಕಪ್ ಎಲ್ಲಾ ಹಾಳಾಯ್ತು, ಮೇಕಪ್ ಹಾಕದೆ ಹಾಗೇ ಬಂದಿದ್ದರೆ ಬೆಟರ್ ಇತ್ತೇನೋ ಎಂದು ಅನಿಸುತ್ತದೆ ಅದಕ್ಕೆ ಕಾರಣ ಬಿಸಿಲು. ಸೆಕೆಗೆ ಬೆವರಿ ವಾಟರ್ ಫ್ರೂಫ್ ಮೇಕಪ್ ಹಚ್ಚಿದರೂ ನಮ್ಮ ಮೇಕಪ್ಪೇ ನಮ್ಮನ್ನು ವಿಚಿತ್ರವಾಗಿ ಕಾಣುವಂತೆ ಮಾಡುತ್ತದೆ ಅಲ್ವಾ? ಇನ್ಯಾವುದಾದರೂ ಮದುವೆ ಫಂಕ್ಷನ್‌ಗೆ ರೆಡಿಯಾಗುವಾಗ ಈ ಟ್ರಿಕ್ಸ್ ಟ್ರೈ ಮಾಡಿ ಬೇಸಿಗೆಯ ಮದುವೆಯಲ್ಲಿ ಮೇಕಪ್ ಹಾಳಾಗದೆ ಮಿಂಚಬಹುದು:

ಮೇಕಪ್ ಮುನ್ನ ಮುಖವನ್ನು ತಣ್ನೀರಿನಲ್ಲಿ ತೊಳೆಯಿರಿ
ನೀವು ಮುಖವನ್ನು ತೊಳೆದಿದ್ದರೂ ಕೂಡ ಮೇಕಪ್ ಹಚ್ಚುವ ಮುನ್ನ ತಣ್ಣೀರಿನಿಂದ ಮುಖ ತೊಳೆಯಿರಿ. ಫ್ರಿಡ್ಜ್‌ನಲ್ಲಿಟ್ಟ ನೀರನ್ನು ಮುಖಕ್ಕೆ ಹಾಕಿಕೊಳ್ಳಿ. ಟವಲ್‌ನಿಂದ ಒತ್ತಿ ನೀರಿನಂಶ ತೆಗೆಯಿರಿ, ಗಟ್ಟಿಯಾಗಿ ಮುಖವನ್ನು ಉಜ್ಜಬೇಡಿ. ನಂತರ ಒಂದು ಚಿಕ್ಕ ಪೀಸ್ ಐಸ್ ಅನ್ನು ತೆಗೆದು ಮುಖದ ಮೇಲೆ ಮೆಲ್ಲನೆ ಮಸಾಜ್ ಮಾಡಿ ಹಾಗೇ ಒಣಗಲು ಬಿಡಿ.
ವಾಟರ್ ಫ್ರೂಫ್ ಮೇಕಪ್ ಬಳಸಿ
ನೀವು ಬಳಸುವ ಮಸ್ಕರಾ ವಾಟರ್‌ಫ್ರೂಫ್ ಆಗಿರಲಿ. ವಾಟರ್ ಫ್ರೂಫ್ ಮಸ್ಕರಾ ಬೇಸಿಗೆಗೆ ಮಾತ್ರವಲ್ಲ, ಚಳಿಗಾಲದಲ್ಲೂ ಸೂಕ್ತ, ಆದ್ದರಿಂದ ವಾಟರ್ ಫ್ರೂಫ್ ಮಸ್ಕರಾ ಬಳಸಿ. ಮೇಕಪ್ ಹಚ್ಚುವ ಮುನ್ನ ಪ್ರೀಮಿಯರ್ ಬಳಸಿ. ನಂತರ ಫೌಂಡೇಷನ್ ಬಳಸಿ. ಬೇಸಿಗೆಗೆ ಕ್ರೀಮ್ ಫೌಂಡೇಷನ್ ಬದಲಿಗೆ ಪೌಡರ್ ಫೌಂಡೆಷನ್ ಬೆಸ್ಟ್ ಅಥವಾ ಲಿಕ್ವಿಡ್ ಆದ್ರೂ ಆಗುತ್ತೆ. ಕ್ರೀಮ್ ಆದರೆ ಪ್ಯಾಚ್-ಪ್ಯಾಚ್ ಆಗಿ ಕಾಣಬಹುದು.
ಚಿಕ್ಕ ಬಾಟಲಿನಲ್ಲಿ ವಾಟರ್ ಅಥವಾ ರೋಸ್ ವಾಟರ್ ಸ್ಪ್ರೀ ನಿಮ್ಮ ಪರ್ಸ್‌ನಲ್ಲಿರಲಿ
ಮೇಕಪ್ ಎಲ್ಲಾ ಆದ ಮೇಲೆ ಮುಖಕ್ಕೆ ಸ್ಪ್ರೇ ಬಳಸಿ, ಇದನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಿ, ಎರಡು ಗಂಟೆಗೊಮ್ಮೆ ಈ ಸ್ಪ್ರೇ ಬಳಸುವುದರಿಂದ ತುಂಬಾ ಫ್ರೆಷ್ ಆಗಿ ಕಾಣುವಿರಿ, ಸೆಕೆಯಾಗುವುದು ಕೂಡ ಕಡಿಮೆಯಾಗುತ್ತದೆ.
ಮಿನಿರಲ್ ಮೇಕಪ್ ಬಳಸಿ
ಬೇಸಿಗೆಯಲ್ಲಿ ಮಿನಿರಲ್ ಮೇಕಪ್ ಬಳಸುವುದು ತುಂಬಾನೇ ಸೂಕ್ತ. ಏರ್ ಬ್ರೆಷ್ ಮೆಥಡ್ ಬಳಸುವುದರಿಂದ ಮೇಕಪ್ ತುಂಬಾ ಹೊತ್ತು ಇರುವಂತೆ ನೋಡಿಕೊಳ್ಳಬಹುದು.
ಮುಖವನ್ನು ಮುಟ್ಟ ಬೇಡಿ
ಮೇಕಪ್ ಮಾಡಿದ ಬಳಿಕ ಮುಖವನ್ನು ಆಗಾಗ ಮುಟ್ಟುವುದು, ಸೆಕೆ ಅಂತ ಕರ್ಚೀಫ್‌ನಿಂದ ಮುಖವನ್ನು ಒರೆಸುವುದು ಮಾಡಬೇಡಿ, ಇದರಿಂದ ಮೇಕಪ್ ಹಾಳಾಗಿ ಮುಖದ ಅಂದ ಹಾಳಾಗುವುದು. ಆದ್ದರಿಂದ ಮುಖವನ್ನು ಮುಟ್ಟಲೇಬೇಡಿ.
ಸಾಕಷ್ಟು ನೀರು ಕುಡಿಯಿರಿ
ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಿ, ಆಗಾಗ ನೀರು ಕುಡಿಯಿರಿ, ಇದರಿಂದ ಸೆಕೆ ಕಡಿಮೆಯಾಗುವುದು ಮಾತ್ರವಲ್ಲ ತ್ವಚೆಯಲ್ಲಿ ನೀರಿನಂಶ ಕಡಿಮೆಯಾಗುವುದಿಲ್ಲ, ಆದ್ದರಿಂದ ನಿಮ್ಮ ತ್ವಚೆ ಆಕರ್ಷಕವಾಗಿ ಕಾಣುವುದು.
ಈ ಸಿಂಪಲ್ ಟ್ರಿಕ್ಸ್ ಬಳಸಿ ನೋಡಿ ಬೇಸಿಗೆಯಲ್ಲಿ ಮದುವೆ ಪಾರ್ಟಿಯಲ್ಲಿ ನಿಮ್ಮ ಲುಕ್ ಹಾಳಾಗುತ್ತದೆ ಎಂಬ ಚಿಂತೆಯೇ ಇರಲ್ಲ.



Click it and Unblock the Notifications

