Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
20ರ ಹರೆಯದಂತೆ ಕಾಣುವ ಈ 74ರ ಮಾಡೆಲ್..! ಆಕೆ ಸೌಂದರ್ಯದ ಗುಟ್ಟೇನು ಗೊತ್ತಾ?
ವರ್ಷಗಳು ಉರುಳಿದಂತೆ ಎಲ್ಲರಿಗೂ ವಯಸ್ಸಾಗುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ. ಆದ್ರೆ ಕೆಲವರು ವಯಸ್ಸಾಗದಂತೆ ಕಾಣಿಸಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್‌ಗಳು ಸೇರಿ ಹಲವು ರೀತಿ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಅದರಲ್ಲೂ ಸಿನಿಮಾ ನಟಿ, ನಟರು, ಮಾಡೆಲ್‌ಗಳು ಸೇರಿ ಹಲವರು ಈ ರೀತಿ ಮಾಡುತ್ತಾರೆ.
ಆದ್ರೆ ಇಲ್ಲೊಬ್ಬಾಕೆಯ ವಯಸ್ಸು 70 ದಾಟಿದರು 20ರ ಹರೆಯದ ಯುವಿಯಂತೆ ಕಾಣುತ್ತಾಳೆ. ಆಕೆ ತನ್ನ ಸೌಂದರ್ಯದಿಂದ ಈ ಸುದ್ದಿಯಾಗಿದ್ದಾಳೆ. ವೆರಾ ವಾಂಗ್ ಎಂಬ ಮಾಡಲ್ ಈಗ ತನ್ನ ವಯಸ್ಸಿನ ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಡಿಸೈನರ್ ವೆರಾ ವಾಂಗ್ ಫ್ಯಾಷನ್‌ಗಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ.

74 ವರ್ಷ ವಯಸ್ಸಿನ ಆಕೆ ಗ್ವೆನ್ ಸ್ಟೆಫಾನಿ, ಹೈಲಿ ಬೈಬರ್, ಅರಿಯಾನಾ ಗ್ರಾಂಡೆ, ಸನ್ ಯೆ-ಜಿನ್ ಮತ್ತು ಇತರರಿಗೆ ವಧುವಿನ ಡ್ರೆಸ್ ಡಿಸೈನ್ ಮಾಡಿ ಎಲ್ಲರ ಗಮನ ಸೆಳೆದಿದ್ದಳು. ವೋಗ್ ಮ್ಯಾಗಜೀನ್ ಮತ್ತು ರಾಲ್ಫ್ ಲಾರೆನ್‌ನಲ್ಲಿ ಉನ್ನತ ಸ್ಥಾನಗಳನ್ನು ತೊರೆದ ನಂತರ 1990 ರಲ್ಲಿ ತನ್ನ ಮಾಡೆಲಿಂಗ್ ಕ್ಷೇತ್ರದ ಕೆಲಸ ಪ್ರಾರಂಭಿಸಿದರು. 74 ನೇ ವಯಸ್ಸಿನಲ್ಲಿ ಇಬ್ಬರು ಮಕ್ಕಳಿದ್ದರೂ ಆಕೆ ಚಿರ ಯುವತಿಯಂತೆ ಕಾಣುವುದು ಎಲ್ಲರಲ್ಲು ಅಚ್ಚರಿ ಮೂಡಿಸಿದೆ.
ಆಕೆಯ ಫೋಟೋ ನೋಡಿದವರು ಎಲ್ಲರು 30 ವರ್ಷದ ಒಳಗಿನ ವಯಸ್ಸು ಎಂದೇ ಭಾವಿಸುತ್ತಾರೆ. ಅದರಲ್ಲೂ ಇತ್ತೀಚಿಗೆ ಆಕೆ ಸ್ವಿಮ್ ಸೂಟ್‌ನಲ್ಲಿ ಹಂಚಿಕೊಂಡ ಫೋಟೋಗಳ ಕಂಡು ಜನರು ಶಾಕ್ ಆಗಿದ್ದಾರೆ. ಯಾರು ಸಹ ಆಕೆ 74 ವಯಸ್ಸಿನ ಇಬ್ಬರು ಮಕ್ಕಳ ತಾಯಿ ಎಂದು ಹೇಳುವುದು ಕಷ್ಟವಾಗಿದೆ. ಒಂದು ವೇಳೆ ಆಕೆಗೆ ರಿವರ್ಸ್ ಏಜಿಂಗ್ ಆಗುತ್ತಿದ್ಯಾ ಎಂದು ಹಲವರು ಅನುಮಾನ ಸಹ ವ್ಯಕ್ತಪಡಿಸಿದ್ದಾರೆ.
ಈ ಫೋಟೋಗಳ ಕಂಡು ದಂಗಾದ ಮಂದಿ ಕಮೆಂಟ್ ಬಾಕ್ಸ್‌ನಲ್ಲಿ ಆಕೆಯ ಸೌಂದರ್ಯದ ಗುಟ್ಟಿನ ಕುರಿತು ಪ್ರಶ್ನೆಗಳ ಕೇಳಿದ್ದಾರೆ. "ಈ ರೀತಿ ಕಾಣಲು ಹೇಗೆ ಸಾಧ್ಯ?" ಎಂದು ಬರೆದಿದ್ದಾರೆ. ಜೊತೆಗೆ ನೀವು ಹೀಗೆ ಕಾಣಲು ಯಾವ ವಸ್ತು ಬಳಸುತ್ತೀರಿ. ನಿಮ್ಮ ಡಯೆಟ್ ಪ್ಲಾನ್ ಏನು ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ.
2020 ರಲ್ಲಿ, ವಾಂಗ್ ತನ್ನ ಬ್ರಾಲೆಟ್ ಮತ್ತು ಶಾರ್ಟ್ಸ್‌ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ವೈರಲ್ ಆಗಿದ್ದಳು. ಜೊತೆಗೆ ಆಕೆ 74 ವರ್ಷವಾಗಿದ್ದರೂ ಇನ್ನೂ ಆಕೆಯ ಕೂದಲು ಕಪ್ಪಾಗಿದೆ. ಅದರೆ ನೈಸರ್ಗಿಕ ಕಪ್ಪು ಬಣ್ಣದಿಂದ ಕೂಡಿದೆ ಎಂದು ಆಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಳು.
2023 ರ ಸಂದರ್ಶನದಲ್ಲಿ, ವಾಂಗ್ ತನ್ನ "ಶಾಶ್ವತ ಯೌವನ" ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಳು. "ನಾನು ಹೇಳಿದಾಗ ಯಾರೂ ನನ್ನನ್ನು ನಂಬುವುದಿಲ್ಲ, ಆದರೆ ಕೆಲಸವು ನಿಮ್ಮನ್ನು ಯುವಕರನ್ನಾಗಿ ಮಾಡುತ್ತದೆ. ಇದು ನಿಮ್ಮ ಮನಸ್ಸನ್ನು ಯೌವನಗೊಳಿಸುತ್ತದೆ, ಮತ್ತು ನಿಮ್ಮ ಚೈತನ್ಯವನ್ನು ಮತ್ತು ನಿಮ್ಮ ಪ್ರಸ್ತುತತೆಯನ್ನು ಹೆಚ್ಚಿಸುತ್ತದೆ, ಇದು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಳು.
ಸೌಂದರ್ಯಕ್ಕಾಗಿ ನಿದ್ರೆ, ಸನ್‌ಸ್ಕ್ರೀನ್ ಹಾಗೂ ವೋಡ್ಕಾ
ಆಕೆಯ ಸೌಂದರ್ಯದ ಗುಟ್ಟಿನ ಬಗ್ಗೆ ಕೇಳಿದಾಗ ಚೆನ್ನಾಗಿ ನಿದ್ರೆ ಮಾಡಬೇಕು ಎಂದಿದ್ದಳು. "ನಾನು ಹೇಳಲೇಬೇಕು, ನಿದ್ರೆ, ಸನ್‌ಬ್ಲಾಕ್ ಇಲ್ಲದೆ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯುವುದು ಮತ್ತು, ನಾನು ಮಾಡಲು ಇಷ್ಟಪಡುವ ವಿಷಯವೆಂದರೆ ವೋಡ್ಕಾ ಕಾಕ್ಟೈಲ್ ಅನ್ನು ಕುಡಿಯುವುದು. ಆದರೆ ನಿದ್ರೆ ನನ್ನ ಮೂಲ ಸೌಂದರ್ಯದ ಗುಟ್ಟಾಗಿದೆ ಎಂದು ಆಕೆ ಹೇಳಿಕೊಂಡಿದ್ದಳು. ದೇಹಕ್ಕೆ ನಿತ್ಯ 8 ಗಂಟೆ ನಿದ್ರೆ ಅವಶ್ಯಕ ಎಂದಿದ್ದಳು.



Click it and Unblock the Notifications
