Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
20 ವರ್ಷದ ಯುವತಿಯಂತೆ ಕಾಣಿಸುವ 38ರ ಮಹಿಳೆ! ಸೌಂದರ್ಯದ ರಹಸ್ಯ ಈ ಆಹಾರವಂತೆ!
ಎಲ್ಲರೂ ಬಹಳ ಎಂಗ್ ಆಗಿ, ಸುಂದರವಾಗಿ ಕಾಣಿಸಬೇಕು ಎಂಬ ಬಯಕೆ, ಆಸೆ ಇದ್ದೇ ಇರಲಿದೆ. ಹೀಗಾಗಿ ವಯಸ್ಸಾಗುತ್ತಾ ಹೋದಂತೆ ಹಲವರಿಗೆ ಹೊಸ ರೀತಿ ಆತಂಕ ಕಾಡುವುದು ಸಹಜ. ಅದರಲ್ಲೂ ಯುವತಿಯರಲ್ಲಿ ಈ ರೀತಿ ಸೌಂದರ್ಯ ಕುರಿತಾಗಿ ಹೆಚ್ಚು ಗಮನವಿಡುವು ಸಾಮಾನ್ಯ. ಹಾಗೆ ಹಲವರು ಮುಖದಲ್ಲಿ ಕಾಂತಿ ಯಾವಾಗಲು ಇರಬೇಕು ಹಾಗೆ ಸುಕ್ಕುಗಳೂ ಕಾಣದಂತೆ ಮಾಡಲು ದುಬಾರಿ ಕ್ರೀಮ್‌ಗಳು, ಚಿಕಿತ್ಸೆಗಳು, ಪಾರ್ಲರ್ ತೆರಳುವುದು ನೋಡಿರುತ್ತೇವೆ.
ಹಾಗೆ ಯಾವಾಗಲು ಚಿಕ್ಕ ವಯಸ್ಸಿನವರಂತೆ ಕಾಣಲು ಹಲವು ರೀತಿಯ ಪ್ರಯತ್ನದಲ್ಲಿ ತೊಡಗುವುದು ನೋಡಬಹುದು. ಹಾಗೆ ಇಲ್ಲೊಬ್ಬ ಯುವತಿ ತನ್ನ 38ರ ವಯಸ್ಸಿನಲ್ಲೂ 20 ವರ್ಷದಂತೆ ಕಾಣಿಸುತ್ತಾಳೆ. ಮುಖದಲ್ಲಿ ಒಂದೂ ಕಲೆ ಇಲ್ಲದೆ ಒಂದು ಕಡೆಯು ಸುಕ್ಕುಗಳಿಲ್ಲದ ಚಿರ ಯುವತಿಯಂತೆ ಆಕೆ ಕಾಣಿಸುತ್ತಾಳೆ. ನೈಸರ್ಗಿಕಾಗಿ ಆಕೆ ಸೌಂದರ್ಯ ಹೆಚ್ಚಿಸುವ ಕುರಿತು ಹೇಳಿಕೊಂಡಿದ್ದಾಳೆ.

ಚೀನಾದ 38 ವರ್ಷದ ಮಹಿಳೆ ಸುಜಿ ತ್ಸೆ, ಆಕೆಯ ಹೊಳೆಯುವಂತಹ ಹಾಗೆ ಕಲೆಗಳೇ ಇಲ್ಲದ ಮುಖ ಹೊಂದಿರುವ ಕಾರಣಕ್ಕೆ ಸುದ್ದಿಯಾಗಿದ್ದಾಳೆ, ಹಾಗೆ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಸೌಂದರ್ಯಕ್ಕೆ ನೈಸರ್ಗಿಕ ವಿಧಾನವೇ ಕಾರಣವಂತೆ. ಹಾಗೆ ಆಕೆಯ ಆಹಾರ ಕ್ರಮವೂ ಇದಕ್ಕೆ ಕಾರಣವಂತೆ. ಸುಜಿ ತ್ಸೆಯ ಈ ಸೌಂದರ್ಯಕ್ಕೆ ಕಾರಣ ಸಾಂಪ್ರದಾಯಿಕ ಚೀನಿ ಆಹಾರವಂತೆ.
ಆಕೆ 38ನೇ ವಯಸ್ಸಿನಲ್ಲೂ ಚಿಕ್ಕ ಹುಡುಗಿಯಂತೆ ಕಾಣಿಸಲು ಹಣ್ಣಗಳು ಹಲವು ರೀತಿಯ ಕಾಳುಗಳ ಸೇವನೆಯನ್ನು ಶಿಫಾರಸ್ಸು ಮಾಡುತ್ತಾಳೆ. ಇದು ಚರ್ಮದ ಕಾಂತಿ ಉತ್ತೇಜಿಸಲಿದೆಯಂತೆ. ಸುಜಿ ತ್ಸೆ ತನ್ನ ದೈನಂದಿನ ಆಹಾರದಲ್ಲಿ ಹಲವು ವಸ್ತುಗಳನ್ನು ಕಡ್ಡಾಯವಾಗಿ ಸೇವಿಸುವ ಅಭ್ಯಾಸ ಬೆಳೆಸಿಕೊಂಡಿದ್ದಳಂತೆ ಹೀಗಾಗಿ ಆಕೆಯ ಸೌಂದರ್ಯ ಮಾಸುವ ಬದಲಾಗಿ ಮತ್ತಷ್ಟು ಹೆಚ್ಚಾಯಿತಂತೆ.
ಆಕೆಯ ದೈನಂದಿನ ಆಹಾರದ ಆರಂಭದಲ್ಲಿಯೇ ಚೀಸಿ ಸೂಪ್ ಕಡ್ಡಾಯವಾಗಿತ್ತಂತೆ. ಬಾಲ್ಯದಿಂದಲೂ ಆಕೆ ಚೈನೀಸ್ ಸೂಪ್ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಳಂತೆ. ಕಾಲಜನ್ ಭರಿತ ಸೂಪ್ ಇದಾಗಿದ್ದು, ಚರ್ಮದ ಕಾಂತಿಗೆ ಬಹಳ ಉತ್ತಮವಾಗಿತ್ತು. ಹಾಗೆ ಆಕೆಯ ತಾಯಿ ಮೀನಿನಿಂದ ಮಾಡಿದ ಹಲವು ರೀತಿಯ ಖಾದ್ಯ ನೀಡುತ್ತಿದ್ದರಂತೆ.
ಹಾಗೆ ಕಿಮ್ಚಿ, ಇದು ಚೀನಾ ಹಾಗೂ ಕೊರಿಯಾದಲ್ಲಿ ಬಹಳ ಫೇಮಸ್ ಖಾದ್ಯ ಆಗಿದೆ. ಬೇಯಿಸಿದ ತರಕಾರಿಗಳಾದ ಎಲೆಕೋಸು, ಬೆಳ್ಳುಳ್ಳಿ, ಶುಂಠಿ, ಮೀನಿನ ಸಾಸ್, ಉಪ್ಪು ಹೀಗೆ ಕೆಲವು ವಸ್ತುಗಳ ಬಳಸಿ ಮಾಡಲಾಗುತ್ತದೆ. ಇದು ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮವಂತೆ, ಇದನ್ನು ಆಕೆ ತಪ್ಪದೆ ಸೇವಿಸುತ್ತಿದ್ದಳಂತೆ. ಇದರಲ್ಲಿನ ಪ್ರೋಬಯೋಟಿಕ್‌ಗಳು ದೇಹಕ್ಕೆ ಅಗತ್ಯ ವಿಟಮಿನ್‌ಗಳ ಪೂರೈಸುತ್ತವೆ. ಹೀಗಾಗಿ ಆಕೆಯ ದೇಹವು ಸಮತೋಲನದಿಂದ ಕೂಡಿತ್ತು.
ಇನ್ನೊಂದು ಕಡೆ ಕಾಳುಗಳಿಂದ ಮಾಡಿರುವ ಆಹಾರ ಸೇವನೆ ಆಕೆಯ ನಿತ್ಯದ ಡಯೆಟ್‌ನಲ್ಲಿ ಮುಖ್ಯವಾದ ಅಂಶವಾಗಿತ್ತಂತೆ. ಬಾದಾಮಿ ಮತ್ತು ವಾಲ್ನಟ್ಸ್. ಈ ಕಾಳು ವಿಟಮಿನ್ ಇ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ, ಇದು ಚರ್ಮವನ್ನು ಒಣಗದಂತೆ ಹಾಗೆ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವ ನೈಸರ್ಗಿಕ ಸನ್ಸ್‌ಕ್ರೀನ್ ಆಗಿದೆ. ಹೀಗಾಗಿ ಆಕೆಯ ಚರ್ಮ ಎಲ್ಲೂ ಕಳೆಗುಂದದೆ ಹಾಗೆಯೇ ತನ್ನ ಹೊಸತನ ಉಳಿಸಿಕೊಂಡಿತ್ತು.
ಹಾಗೆ ಸುಜಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದಳಂತೆ. ಸ್ಟ್ರಾಬೆರಿ, ಬೆರಿಗಳನ್ನು ಹೆಚ್ಚಾಗಿ ಸೇವಿಸುವುದು ಆಕೆಯ ನಿತ್ಯ ದಿನಚರಿಯ ಭಾಗವಾಗಿತ್ತಂತೆ, ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣುಗಳು ರ್ಮವನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ ಮತ್ತು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಇನ್ನುಳಿದಂತೆ ಸುಜಿ ಪಾಲಕ್‌ನಂತಹ ಹಸಿರು ತರಕಾರಿ ಯಾವಾಗಲು ಸೇವಿಸುತ್ತಿದ್ದಳಂತೆ. ಇದರಲ್ಲಿನ ವಿಟಮಿನ್ ಸಿ, ಕಬ್ಬಿಣಾಂಶವು ದೇಹಕ್ಕೆ ಬೇಕಾದ ಅಗತ್ಯ ಅಂಶವಾಗಿತ್ತು.



Click it and Unblock the Notifications
