Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಇಂಥ ವಿಷಯಗಳೇ ಪುರುಷನತ್ತ ಮಹಿಳೆಯನ್ನು ಆಕರ್ಷಿಸುವುದು
ಪುರುಷ ಆಕರ್ಷಕನಾಗಿದ್ದಾನೆ ಎಂದೆನಿಸಲು ಕೇವಲ ಆತ ಸ್ಪುರದ್ರೂಪಿ, ಉತ್ತಮ ಎತ್ತರ ಹೊಂದಿದ್ದರೇ ಸಾಕೆ..? ಎಂಬ ಪ್ರಶ್ನೆ ಉದ್ಭವಿಸಿದ್ದರೆ ಇದಕ್ಕೆ ಹೌದು ಎಂದು ಉತ್ತರ ನೀಡಲು ಸಾಧ್ಯವಿಲ್ಲ.
ಒಬ್ಬ ಮಹಿಳೆಗೆ ಪುರುಷ ಆಕರ್ಷಿತನಾಗಬೇಕು ಎಂದರೆ ಈ ಅಂಶವು ಬೇಕು ಎಂದು ಹೇಳಬಹುದೆಯೇ ಹೊರತು ಕೇವಲ ಇದೊಂದೇ ಅಂಶ ಸಾಕು ಎಂದು ಹೇಳಲಾಗದು. ಅಲ್ಲದೇ ಎಲ್ಲಾ ಮಹಿಳೆಯರು ಕೇವಲ ಪುರುಷನ ಅಂದ ಚಂದಕ್ಕೆ ಮಾತ್ರ ಮಾರು ಹೋಗುವುದಿಲ್ಲ. ಅವರು ನಾನಾ ರೀತಿಯಲ್ಲಿ ನಿಮ್ಮನ್ನು ಓರೆಗಲ್ಲಿಗೆ ಹಚ್ಚಿ ನೋಡುತ್ತಾರೆ. ಅವರ ಎಲ್ಲಾ ಪರೀಕ್ಷೆಗಳಲ್ಲಿ ನೀವು ಉತ್ತೀರ್ಣರಾದರೆ ಮಾತ್ರ ನಿಮ್ಮನ್ನು ಆಕರ್ಷಕ ಎಂದು ಹೇಳಬಹುದು.

ಸಾಮಾನ್ಯವಾಗಿ ಮಹಿಳೆಗೆ ಪುರುಷರಲ್ಲಿ ಏನಿಷ್ಟ ಎಂದು ಕೇಳಿದರೆ ಆತನ ಅಂದ, ಮುಖದ ತುಂಬಾ ಗಡ್ಡ, ಉತ್ತಮ ಎತ್ತರ, ಜಿಮ್ಗೆ ಹೋಗಿ ದೇಹರ್ದಾಡ್ಯ ಮಾಡಿಕೊಳ್ಳುವುದು ಹೀಗೆ ನಾನಾ ಕಾರಣ ಕೊಡಬಹುದು. ಆದರೆ ಇಷ್ಟೇ ಸಾಕಾಗುವುದಿಲ್ಲ ಎಂಬ ಕಹಿ ಸತ್ಯವನ್ನು ಪುರುಷರು ಅರ್ಥಮಾಡಿಕೊಳ್ಳಲೇಬೇಕು. ಹಾಗಾದರೆ ಸಮಾಜದಲ್ಲಿ ಆಕರ್ಷಿತರಾಗಿ ಕಾಣಲು ಪುರುಷರು ಯಾವೆಲ್ಲ ಅಂಶಗಳನ್ನು ಹೊಂದಿರಬೇಕು ಎಂಬುದನ್ನು ತಿಳಿದುಕೊಳ್ಳೋಣ :
ಉತ್ತಮ ಸಂವಹನ ಕೌಶಲ್ಯ : ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿದೆ. ಆದರೆ ಇದೇ ಮಾತು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಬಲ್ಲದು ಎಂಬುದು ನಿಮಗೆ ತಿಳಿದಿದೆಯೇ..? ಪುರುಷ ಮಹಿಳೆಯರಿಗೆ ಎಷ್ಟು ಗೌರವ ನೀಡಿ ಮಾತನಾಡುತ್ತಾನೆ..? ಮಾತನಾಡುವಾಗ ಯಾವ ರೀತಿಯ ಪದಪ್ರಯೋಗ ಮಾಡುತ್ತಾನೆ ಎಂಬಿತ್ಯಾದಿ ಅಂಶಗಳನ್ನು ಗಮನಿಸುವವರು ಇದ್ದಾರೆ.
ನಿಮ್ಮ ಉಡುಗೆಯ ಶೈಲಿ : ಮಹಿಳೆಯರು ಮೊದಲೇ ಉಡುಪು ಪ್ರಿಯರು. ಹೀಗಾಗಿ ಅವರು ತಮ್ಮ ಹುಡುಗ ಕೂಡ ಚೆನ್ನಾಗಿ ಡ್ರೆಸ್ ಹಾಕಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇ ರೀತಿ ನೀವು ಉತ್ತಮ ಉಡುಗೆ ಶೈಲಿಯನ್ನು ಹೊಂದಿದ್ದರೆ ಖಂಡಿತ ನೀವು ಈ ಪರೀಕ್ಷೆಯಲ್ಲಿ ಪಾಸ್ ಆದಂತೆ.
ನಿಮ್ಮ ನಡವಳಿಕೆ : ಸಮಾಜದಲ್ಲಿ ಯಾರೊಂದಿಗಾದರೂ ಮಾತನಾಡುವಾಗ ಎದುರಿರುವ ವ್ಯಕ್ತಿಗೆ ನೀಡು ಗೌರವ, ನಿಮ್ಮ ಸೌಮ್ಯ ನಡವಳಿಕೆ, ನಿಮ್ಮ ನಡೆ - ನುಡಿ ಇದನ್ನೂ ಗಮನಿಸುವವರು ಇದ್ದಾರೆ. ನಿಮ್ಮ ದೃಷ್ಟಿಕೋನ ಯಾವ ರೀತಿಯಿದೆ. ಒಂದು ವಿಷಯವನ್ನು ನೀವು ಯಾವ ರೀತಿ ಅವಲೋಕನ ಮಾಡುತ್ತೀರಿ ಎಂಬುದನ್ನು ಮಹಿಳೆಯರು ಗಮನಿಸುತ್ತಾರೆ.
ಮಕ್ಕಳೊಂದಿಗೆ ನಿಮ್ಮ ನಡವಳಿಕೆ : ಇದು ನಿಮಗೆ ಆಶ್ಚರ್ಯ ಎನಿಸಬಹುದು. ಆದರೆ ಮಕ್ಕಳೊಂದಿಗೆ ನಿಮ್ಮ ನಡವಳಿಕೆ ಹೇಗಿದೆ ಎಂಬುದು ಕೂಡ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ನೀವು ಪುಟಾಣಿ ಮಕ್ಕಳೊಂದಿಗೆ ಹೇಗೆ ಬೆರೆಯುತ್ತೀರಿ...? ಮಕ್ಕಳೆಡೆಗೆ ನಿಮ್ಮ ಪ್ರೀತಿ ಹೇಗೆ ಇರುತ್ತದೆ..? ,ಮಕ್ಕಳನ್ನು ಕಂಡಾಕ್ಷಣ ನಿಮಗೆ ಕಿರಿಕಿರಿ ಭಾವನೆ ಕಾಡುತ್ತದೆಯೇ ಎಂಬಿತ್ಯಾದಿ ಅಂಶಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
ಅತಿಯಾದ ಸೋಶಿಯಲ್ ಮೀಡಿಯಾ ಬಳಕೆ : ಇದು ನಿಮಗೆ ಆಶ್ಚರ್ಯ ಎನಿಸಬಹುದು. ಆದರೆ ಮಹಿಳೆಯರಿಗೆ ಅತಿಯಾಗಿ ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಪುರುಷರು ಹೆಚ್ಚು ಆಕರ್ಷಿತರಾಗಿ ಕಾಣುವುದಿಲ್ಲವಂತೆ. ಕಂಡಕಂಡವರಿಗೆ ಕಮೆಂಟ್ ಮಾಡುತ್ತಾ, ಇಡೀ ದಿನ ಸೋಶಿಯಲ್ ಮೀಡಿಯಾದಲ್ಲಿ ನೂರೆಂಟು ಫೋಟೋಗಳನ್ನು ಹಾಕುತ್ತಿರುವ ಪುರುಷರ ಗುಣ ಮಹಿಳೆಯರು ಇಷ್ಟ ಪಡದ ಗುಣಗಳಲ್ಲಿ ಎಂದು ಸಮೀಕ್ಷೆ ತಿಳಿಸಿದೆ.
ನಿಮ್ಮ ಗಡ್ಡವೇ ನಿಮಗೆ ವರದಾನ : ಹೌದು..! ಪುರುಷರಲ್ಲಿ ಮಹಿಳೆಯರು ಸಾಮಾನ್ಯವಾಗಿ ಇಷ್ಟಪಡುವ ಅಂಶವೆಂದರೆ ಅದು ಗಡ್ಡವಂತೆ. ನೂರರಲ್ಲಿ 90 ಮಂದಿ ಯುವತಿಯರು ಗಡ್ಡ ಹೊಂದಿರುವ ಯುವಕನಿಗೆ ಮಾರು ಹೋಗುತ್ತಾರಂತೆ. ಹೀಗಾಗಿ ಗಡ್ಡ ಎನ್ನುವುದು ಪುರುಷರಿಗೆ ಒಂದು ವರದಾನ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾಂತ ಏನೇನೋ ಹೊಸ ಸ್ಟೈಲ್ಗಳಿಗೆ ಮಾರು ಹೋಗಿ ಯಾವುದ್ಯಾವುದೋ ರೀತಿ ನಿಮ್ಮ ಗಡ್ಡ ಬೆಳೆಸುವ ಸಾಹಸಕ್ಕೆ ಕೈ ಹಾಕದಿರಿ.
ಮನುಷ್ಯ ಯಾರೇ ಇರಲಿ ಆತ ಪರಿಪೂರ್ಣ ಎನಿಸಬೇಕು ಎಂದರೆ ಕೇವಲ ಆತನ ನೋಟದಿಂದ ಮಾತ್ರ ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಗುಣ ಹಾಗೂ ನಡತೆ ಸರಿಯಾಗಿ ಇದ್ದರೆ ಆತ ಸ್ಪೂರದ್ರಪಿ ಅಲ್ಲದೇ ಇದ್ದರೂ ಹೆಚ್ಚು ಇಷ್ಟವಾಗುತ್ತಾರೆ. ಹೀಗಾಗಿ ಯಾರಿಗೆ ಆದರೂ ನಾವು ಇಷ್ಟವಾಗಬೇಕು ಎಂದರೆ ಮೊದಲು ನಮ್ಮ ನಡವಳಿಕೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡು ಬರಬೇಕು. ಮಕ್ಕಳು, ಹಿರಿಯರು ಹಾಗೂ ಮಹಿಳೆಯರನ್ನು ಗೌರವಿಸುವ ಗುಣ ಹೊಂದಿರುವ ಯಾವುದೇ ಪುರುಷ ಯುವತಿಯರಿಗೆ ಸುಲಭವಾಗಿ ಇಷ್ಟವಾಗುತ್ತಾರೆ. ಎಲ್ಲಾ ಮಹಿಳೆಯರು ಅಂದ ಹಾಗೂ ಹಣದ ಹಿಂದೆ ಹೋಗುವುದಿಲ್ಲ. ಬಹುತೇಕರು ನಿಮ್ಮ ಇನ್ನಿತರ ವರ್ತನೆಗಳನ್ನು ಗಮನಿಸುತ್ತಾರೆ ಎಂಬುದು ನಿಮ್ಮ ತಲೆಯಲ್ಲಿರಲಿ.



Click it and Unblock the Notifications
