Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಒಂದು ಹಸಿರು ಬ್ಲೌಸ್‌ಗೆ ಇಷ್ಟು ಬಣ್ಣದ ಸೀರೆಯನ್ನು ಮ್ಯಾಚ್ ಮಾಡಬಹುದು, ಡ್ರೆಸ್ಸಿಂಗ್ ಸೆನ್ಸ್ ಸೂಪರ್ ಆಗಿರುತ್ತೆ
ನಮ್ಮ ಭಾರತೀಯ ಹೆಣಿಗೆ ಯಾವ ಉಡುಗೆ ತುಂಬಾನೇ ಆಕರ್ಷಕ ಎಂದು ಕೇಳಿದರೆ ಅದಕ್ಕೆ ಉತ್ತರ ಸೀರೆ. ಹೌದು ಹೆಣ್ಮಕ್ಕಳನ್ನು ಸೀರೆಯಲ್ಲಿ ನೋಡುವುದೇ ಆನಂದ. ಸೀರೆ ಮಾಡರ್ನ್ ಲುಕ್‌ಗೂ ಸೈ, ಸಾಂಪ್ರದಾಯಕ ಲುಕ್‌ಗೂ ಸೈ, ಆ ಕಾರಣದಿಂದಲೇ ಮಾರ್ಡನ್ ಹುಡುಗಿಯರಿಂದ ಹಿಡಿದು ಎಲ್ಲಾ ಹೆಣ್ಮಕ್ಕಳ ಬಳಿ ಸೀರೆ ಕಲೆಕ್ಷನ್ ಇದ್ದೇ ಇರುತ್ತದೆ.
ಈ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಲು ಇಷ್ಟ, ಆದರೆ ಒಂದು ಸೀರೆ ಖರೀದಿಸಿ ಬ್ಲೌಸ್ ಸ್ಟಿಚ್ ಮಾಡಿಸಲು ಟೈಲರ್ ಬಳಿ ಹೋದಾಗ ಸೀರೆಗಿಂತ ಬ್ಲೌಸ್ ದುಬಾರಿಯಾಯ್ತಲ್ಲ ಎಂದನಿಸುವುದು, ಹೌದು ಒಳ್ಳೆಯ ಡಿಸೈನ್ ಬ್ಲೌಸ್ ಸ್ಟಾರ್ಟ್ ಆಗುವುದೇ 5 ಸಾವಿರದಿಂದ.

ಟೈಲರ್ ಸಿಂಪಲ್ ಬ್ಲೌಸ್‌ಗೆ ಕೂಡ 2-3 ಸಾವಿರ ಹೊಲಿಗೆ ಚಾರ್ಜ್ ಕೇಳುತ್ತಾರೆ, ಅಲ್ಲದೆ ಒಂದು ಬ್ಲೌಸ್ ಹೊಲಿಸಿದರೆ ಆ ಸೀರೆಗಷ್ಟೇ ಬಳಸುತ್ತೇವೆ, ಆ ಸೀರೆಯನ್ನು ನಾವು ಯೂನಿಫಾರಂ ರೀತಿ ಬಳಸಿದ್ದರೆ ಪರ್ವಾಗಿಲ್ಲ, ಆದರೆ ಫಂಕ್ಷನ್‌ಗೆ ಖರೀದಿಸುವ ಸೀರೆಯನ್ನು ಮತ್ತೊಂದು ಫಂಕ್ಷನ್ ಬಳಸಲ್ಲ, ಅಯ್ಯೋ ಅದೇ ಸೀರೆ ಧರಿಸಿ ಬಂದಿದ್ದಾರೆ ಎಂದು ಹೇಳಬಹುದು ಎಂಬ ಅಂಜಿಕೆಯಿಂದ ಆ ಸೀರೆ ಧರಿಸುವುದಿಲ್ಲ.
ಇನ್ನು ಆ ಸೀರೆ ಮರು ಬಳಕೆ ಮಾಡಲು ಕೆಲವು ವರ್ಷಗಳೇ ಆಗಬಹುದು, ಇದು ಎಲ್ಲರ ಮನೆಯಲ್ಲಿ ನಡೆಯುವ ವಿಷಯ ಅಲ್ವಾ, ಆದರೆ ನಿಮಗೆ ಗೊತ್ತಾ ಕೆಲವೊಂದು ಬಣ್ಣದ ಬ್ಲೌಸ್ ಅನ್ನು ನೀವು ಮರು ಬಳಕೆ ಮಾಡಬಹುದು, ನೀವು ಒಂದೇ ಲುಕ್‌ನಲ್ಲಿ ಕಾಣಿಸುವುದೂ ಇಲ್ಲ, ಸೂಪರ್ ಆಗಿದೆ ಅಲ್ವಾ ಐಡಿಯಾ?
ಇಲ್ಲಿ ನಾವು ಹಸಿರು ಬಣ್ಣದ ಬ್ಲೌಸ್ ಬಗ್ಗೆ ಹೇಳಿದ್ದೇವೆ, ನಿಮ್ಮ ಬಳಿ ಒಂದು ಹಸಿರು ಬಣ್ಣದ ಬ್ಲೌಸ್ ಇದ್ದರೆ ಸಾಕು ಕೆಲವೊಂದು ಬಣ್ಣದ ಬ್ಲೌಸ್‌ಗಳಿಗೆ ಸೂಪರ್ ಮ್ಯಾಚ್ ಆಗುವುದು, ಬನ್ನಿ ಹಸಿರು ಬ್ಲೌಸ್‌ಗೆ ಯಾವ ಬಣ್ಣದ ಸೀರೆಗಳು ಮ್ಯಾಚ್ ಆಗುತ್ತದೆ ಎಂದು ನೋಡೋಣ ಬನ್ನಿ:
ಹಸಿರು ಬ್ಲೌಸ್‌ಗೆ ನೀಲಿ ಸೀರೆಯ ಮ್ಯಾಚಿಂಗ್
ಹೌದು ಈ ಎರಡೂ ಕಾಂಬಿನೇಷನ್ ಸೂಪರ್ ಆಗಿರುತ್ತದೆ ಆದರೆ ಹೆಚ್ಚಿನವರು ಟ್ರೈ ಮಾಡುವುದಿಲ್ಲ, ಆದರೆ ಹೌದು ನಿಮ್ಮ ಬಳಿ ಹಸಿರು ಬ್ಲೌಸ್ ಇದ್ದರೆ ನೀಲಿ ಸೀರೆಗೆ ಬ್ಲೌಸ್ ಸ್ಟಿಚ್ ಮಾಡಿಸದಿದ್ದರೂ ನಡೆಯುತ್ತೆ, ಅದೇ ಗ್ರೀನ್ ಬ್ಲೌಸ್‌ಗೆ ಮ್ಯಾಚ್ ಆಗುವುದು.
ಹಸಿರು ಬ್ಲೌಸ್‌ಗೆ ಪಿಂಕ್ ಸೀರೆ
ಹೌದು ಹಸಿರು ಸೀರೆಗೆ ಪಿಂಕ್ ಸೀರೆ ತುಂಬಾನೇ ಮ್ಯಾಚ್ ಆಗುವುದು, ಹೌದು ಈ ಕಾಂಬಿನೇಷನ್ ಟ್ರೈ ಮಾಡಿ ಪಕ್ಆ ಸೂಟ್ ಆಗುತ್ತೆ.
ಹಸಿರು ಬ್ಲೌಸ್ , ಲಯಟ್ ಪಿಂಕ್ ಸೀರೆ
ಹೌದು ಹಸಿರು ಬಣ್ಣದ ಬ್ಲೌಸ್‌ಗೆ ಗೋಲ್ಡನ್ ಕಲರ್ ಸೀರೆ ಅಥವಾ ಪಿಂಕ್ ಗೋಲ್ಡನ್ ಮಿಶ್ರಿತ ಸೀರೆ ತುಂಬಾನೇ ಮ್ಯಾಚ್ ಆಗುವುದು.
ಹಸಿರು ಬಣ್ಣದ ಬ್ಲೌಸ್ ಹಾಗೂ ರೋಸ್ ಕಲರ್ ಸೀರೆ
ಹೌದು ರೋಸ್ ಬಣ್ಣದ ಸೀರೆಗೆ ಇದು ತುಂಬಾನೇ ಮ್ಯಾಚ್ ಆಗುವುದು. ನಿಮ್ಮಲ್ಲಿ ಗುಲಾಬಿ ಬಣ್ಣದ ಸೀರೆಗೆ ಯಾವುದು ಮ್ಯಾಚಿಂಗ್ ಅಂತ ತಲೆಕೆಡಿಸಿಕೊಳ್ಳಬೇಡಿ, ಗ್ರೀನ್ ಬ್ಲೌಸ್ ಆರಾಮವಾಗಿ ಮ್ಯಾಚ್ ಮಾಡಿ.
ಗೋಲ್ಡನ್ ಕಲರ್ ಸೀರೆಗೆ ಗ್ರೀನ್ ಬ್ಲೌಸ್
ಹೌದು ಹಸಿರು ಬಣ್ಣದ ಬ್ಲೌಸ್‌ಗೆ ಗೋಲ್ಡನ್ ಕಲರ್ ಸೀರೆ ಕೂಡ ತುಂಬಾನೇ ಒಳ್ಳೆಯ ಮ್ಯಾಚ್ ಆಗಿದೆ, ಗೋಲ್ಡನ್‌ಗೆ ಗೋಲ್ಡನ್ ಹಾಕಿದರೆ ಅಷ್ಟೊಂದು ಆಕರ್ಷಕವಲ್ಲ, ಅದರ ಬದಲಿಗೆ ಗ್ರೀನ್ ಕಾಂಬಿನೇಷನ್ ಟ್ರೈ ಮಾಡಿ.
ಹಸಿರು ಬಣ್ಣದ ಬ್ಲೌಸ್‌ಗೆ ಆರೇಂಜ್ ಬಣ್ಣದ ಸೀರೆ
ಆರೇಂಜ್ ಬಣ್ಣದ ಸೀರೆಗೆ ಈ ಗ್ರೀನ್ ಮ್ಯಾಚ್ ಆಗುತ್ತೆ ಎಂಬುವುದು ಬಹುತೇಕರಿಗೆ ಗೊತ್ತಿರುವುದಿಲ್ಲ, ಎಷ್ಟೋ ಮಹಿಳೆಯರು ಆರೇಂಜ್‌ಗೆ ಆರೇಂಜ್ ಮಾತ್ರ ಮ್ಯಾಚಿಂಗ್ ಅಂದುಕೊಳ್ಳುತ್ತಾರೆ, ಆದರೆ ಆರೇಂಜ್‌ಗೆ ಗ್ರೀನ್ ಬಣ್ಣದ ಬ್ಲೌಸ್ ತುಂಬಾನೇ ಒಳ್ಳೆಯ ಮ್ಯಾಚ್ ಆಗುತ್ತೆ.
ಹಸಿರು ಬಣ್ಣದ ಬ್ಲೌಸ್‌ಗೆ ಹಳದಿ ಬಣ್ಣದ ಸೀರೆ
ನೀವು ಹಳದಿ ಬಣ್ಣದ ಸೀರೆಗೆ ಹಸಿರು ಬಣ್ಣದ ಬ್ಲೌಸ್ ಸೂಪರ್ ಕಾಂಬಿನೇಷನ್, ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ತುಂಬಾನೇ ವರ್ಕೌಟ್ ಆಗುತ್ತೆ.
ಬಿಳಿ ಬಣ್ಣದ ಸೀರೆ ಸೂಪರ್ ಕಾಂಬಿನೇಷನ್
ಹೌದು ಬಿಳಿ ಹಾಗೂ ಹಸಿರು ಕಾಂಬಿನೇಷನ್ ತುಂಬಾನೇ ಸೂಪರ್ ಆಗಿರುತ್ತದೆ.



Click it and Unblock the Notifications
