Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಈ ರೀತಿಯ ಸುಂದರ ತ್ವಚೆಗೆ ಕೊರಿಯನ್ ಮನೆಮದ್ದು ಏನು ಗೊತ್ತಾ? ಈ ಫೇಸ್ ಪ್ಯಾಕ್ ಬಳಸಿ ನೋಡಿ..!
ಈಗ ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದ್ರಲ್ಲೂ ನಾವು ಯಾರನ್ನೇ ಭೇಟಿ ಆದರೂ ಮೊದಲಿಗೆ ಗಮನಿಸಿಸುವುದು ಅವರ ಮುಖವನ್ನು. ಮುಖ ಚೆನ್ನಾಗಿದ್ದರೆ ಅದೊಂದು ದೊಡ್ಡ ಆಕರ್ಷಣೆ. ಇಲ್ಲಿಂದ ಮುಂದೆ ಮಾತು ತನ್ನಿಂದ ತಾನೇ ಮುಂದುವರೆಯುತ್ತದೆ. ಇಷ್ಟೇ ಅಲ್ಲ ನಾವು ಬೆರೆಯವರ ಜೊತೆಗೂ ಇದರ ಮಾತನ್ನಾಡುತ್ತೇವೆ.
ನಮ್ಮ ತ್ವಚೆಯನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎನ್ನುವುದರ ಮೇಲೂ ಮುಖದ ಆಕರ್ಷಣೆ ಬದಲಾಗುತ್ತದೆ. ಮುಖದ ಮೇಲೆ ಒಂದು ಕಲೆ ಇಲ್ಲದಂತೆ ಕಾಣಬೇಕು ಎಂಬ ಆಸೆಯಂತೂ ಇದ್ದೇ ಇರುತ್ತೆ. ಇದಕ್ಕಾಗಿ ನಾವು ಅದೆಷ್ಟೋ ನಟ ನಟಿಯರ ಅಥವಾ ಫೇಮಸ್ ಆಗಿರುವ ಜನರ ಫಾಲೋ ಮಾಡುತ್ತೇವೆ. ಅವರು ಮುಖಕ್ಕೆ ಏನು ಹಚ್ಚಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಮುಂದಾಗುತ್ತೇವೆ.

ಇನ್ನು ನೀವು ಕೊರಿಯನ್ ಯುವತಿಯರನ್ನು ನೋಡಿರಬಹುದು. ಅವರು ನೊಡಲು ಎಲ್ಲರು ಒಂದೇ ರೀತಿ ಕಾಣುತ್ತಾರೆ, ಜೊತೆಗೆ ಗ್ಲಾಸಿ ಫಿನಿಷ್‌ನಂತೆ ಅವರ ಮುಖ ಹೊಳೆಯುತ್ತಿರುತ್ತದೆ. ಬಿಳಿಯಾದ ಅವರ ಮುಖದ ಚರ್ಮವು ಒಂದೇ ಒಂದು ಕಲೆಯಿಂದ ಕೂಡಿರುವುದಿಲ್ಲ. ಅವರಿಗೆ ಮೇಕ್ ಅಪ್‌ನ ಅಗತ್ಯವೂ ಇರುವುದಿಲ್ಲ, ಅವರು ಹಾಲಿನಂತೆ ಬಿಳಿಯಾದ ಚರ್ಮ ಹೊಂದಿರುತ್ತಾರೆ.
ಹಾಗಾದ್ರೆ ಅವರು ಮುಖದ ಸೌಂದರ್ಯಕ್ಕೆ ಏನು ಬಳಸುತ್ತಾರೆ. ಯಾವ ಕ್ರೀಮ್ ಹಚ್ಚುತ್ತಾರೆ? ಇಷ್ಟು ಸುಂದರ ತ್ವಚೆಗಾಗಿ ಕೊರಿಯನ್ ಮನೆಮದ್ದು ಏನು ಎಂಬುದನ್ನು ನಾವಿಂದು ತಿಳದುಕೊಳ್ಳೋಣ. ಅವರ ಮುಖವು ಒಂದೇ ಒಂದು ಕಪ್ಪು ಕಲೆ ಇಲ್ಲದ ಮೊಡವೆಗಳು ಇಲ್ಲದಂತೆ ಇರಲಿವೆ. ನೋಡಲು ಗಾಜಿನಂತೆ ಹೊಳೆಯುತ್ತಿರುತ್ತದೆ. ಒಂದೆ ಒಂದು ಕುಳಿಗಳು, ಮೊಡವೆ ಕಲೆ ಸಹ ಇರುವುದಿಲ್ಲ. ಹಾಗಾದ್ರೆ ಅವರ ಆರೈಕೆ ಹೇಗಿರಲಿದೆ ಎಂಬುದನ್ನು ನೋಡಿ.
ರೈಸ್ ವಾಟರ್ ಟೋನರ್
ನಾವು ಅಕ್ಕಿ ತೊಳೆದ ನೀರಿನ ಉಪಯೋಗ ನೋಡಿದ್ದೇವೆ. ಆದ್ರೆ ಇಲ್ಲಿ ಸ್ವಲ್ಪ ಬದಲಾವಣೆ ಇದೆ. ಸರಳವಾದ ಅಕ್ಕಿ ನೀರಿನ ಟೋನರ್ ಅನ್ನು ನಾವು ತಯಾರಿಸೋಣ. ನಾವು 1/2 ಕಪ್ ಅಕ್ಕಿ ಮತ್ತು 2 ಕಪ್ ನೀರು ತೆಗೆದುಕೊಳ್ಳಬೇಕು. ಕೊಳೆಯನ್ನು ತೊಡೆದುಹಾಕಲು ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ, ನಂತರ ಅದನ್ನು ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ
ನಂತರ ಅದರಿಂದ ನೀರನ್ನು ಬೇರ್ಪಡಿಸಿ ಆ ನೀರನ್ನು ಮತ್ತೊಂದು ಪಾತ್ರೆಗೆ ಹಾಕಿ ಇಡಿ. ಇದಾದ ನಂತರ ಆ ನೀರನ್ನು ಫ್ರಿಡ್ಜ್‌ನಲ್ಲಿ ಇರಿಸಿ. ಬಳಿಕ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ. ಇದಾದ ಮೇಲೆ ಫ್ರಿಡ್ಜ್‌ನಲ್ಲಿಟ್ಟ ಅಕ್ಕಿ ನೀರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ಈ ನೀರಿನಲ್ಲಿ ವಿಟಮಿನ್‌ಗಳು ಮತ್ತು ಮಿನರಲ್‌ಗಳಿರುವ ಕಾರಣ ಮುಖದ ಕಾಂತಿ ಹೆಚ್ಚಾಗಿತ್ತದೆ. ಈ ನೀರು ದಪ್ಪವಾಗಿದ್ದಷ್ಟು ಮುಖಕ್ಕೆ ಉತ್ತಮ. ಚರ್ಮಕ್ಕೆ ಅಗತ್ಯವಾಗಿ ಬೇಕಾದ ಮಿನರಲ್ಸ್ ಇದರಿಂದ ಸಿಗುತ್ತದೆ.
ಜೇನು ತುಪ್ಪ ಮತ್ತು ಗ್ರೀನ್ ಟೀ ಫೇಸ್ ಮಾಸ್ಕ್
ಸ್ವಲ್ಪ ಜೇನುತುಪ್ಪ ಮತ್ತು ಗ್ರೀನ್ ಟೀ ತೆಗೆದುಕೊಂಡು 1 ಚಮಚ ಜೇನುತುಪ್ಪವನ್ನು 1 ಚಮಚ ತಣ್ಣಗಿರುವ ಗ್ರೀನ್ ಟೀ ಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ, ಸುಮಾರು 15ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ರೀತಿಯ ಫೇಸ್ ಮಾಸ್ಕ್ ವಾರದಲ್ಲಿ ಮೂರು ಬಾರಿಯಾದರು ಮಾಡಿ ನೋಡಿ. ಇದರಿಂದ ಫಲಿತಾಂಶ ಖಂಡಿತ ಸಿಗಲಿದೆ.
ಅಲೋ ವೆರಾ ಮತ್ತು ಸೌತೆಕಾಯಿ ಮಾಸ್ಕ್
ಶೀಟ್ ಮಾಸ್ಕ್‌ಗಳು ಕೊರಿಯನ್ ತ್ವಚೆಯ ಪ್ರಧಾನ ಅಂಶವಾಗಿದೆ. ಈಗ ಆಲೋವೆರಾ ಹಾಗೂ ಸೌತೆಕಾಯಿ ಮಾಸ್ಕ್ ತಯಾರಿಸುವುದು ಹೇಗೆ ನೋಡಿ. 2 ಸ್ಪೂನ್ ಸೌತೆಕಾಯಿ ರಸ ತೆಗೆದುಕೊಂಡು 2 ಸ್ಪೂನ್ ಆಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿಕೊಂಡು ಸುಮಾರು 30 ನಿಮಿಷ ಒಣಗಲು ಬಿಡಿ. ವಾರದಲ್ಲಿ 2 ಬಾರಿ ಈ ರೀತಿ ಮಾಡಿದರೆ ಸಾಕು. ಚರ್ಮವನ್ನು ಹೈಡ್ರೇಟ್ ಮಾಡಲು ಇದು ನೆರವಾಗಲಿದೆ.



Click it and Unblock the Notifications
