Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬೆವರಿದಾಗ ಮೇಕಪ್ ಹಾಳಾಗದಿರಲು ವಾಟರ್ ಫ್ರೂಫ್ ಮೇಕಪ್ ಮಾಡುವುದು ಹೇಗೆ?
ಮೇಕಪ್ ಹೆಣ್ಣಿನ ಅಂದ ಹೆಚ್ಚಿಸುವುದು ಮಾತ್ರವಲ್ಲ, ಅವಳ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ. ಅದೇ ಮೇಕಪ್ ಹಾಳಾದರೆ ಅವಳಿಗೆ ಮುಖ ಇತರರಿಗೆ ತೋರಿಸಲು ಮುಜುಗರ ಉಂಟಾಗುವುದು, ಅಲ್ಲದೆ ಕಣ್ಣಿಗೆ ಹಚ್ಚಿದ ಕಾಡಿಗೆ ಹರಡಿದ್ದರೆ ಅಥವಾ ಮುಖಕ್ಕೆ ಹಚ್ಚಿದ ಕ್ರೀಮ್ ಬೆವರಿನಲ್ಲಿ ಕೊಳೆ-ಕೊಳೆಯಾಗಿ ಕಂಡರೆ ನೋಡುವವರೂ ಕೂಡ ನಗುವಂತಾಗುವುದು, ಈ ಕಾರಣಕ್ಕೆ ಬೇಸಿಗೆಯಲ್ಲಿ ಮೇಕಪ್ ಮಾಡಲು ಹೆಣ್ಮಕ್ಕಳಿಗೆ ತುಂಬಾನೇ ಕಿರಿಕಿರಿ ಅನಿಸುವುದು.
ಬೇಸಿಗೆಯಲ್ಲಿ ವಾಟರ್ ಫ್ರೂಫ್ ಮೇಕಪ್ ಮಾಡಿದರೆ ನೋಡಿದರೆ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಬೆವರಿನಲ್ಲಿ ಮೇಕಪ್ ಸ್ಪ್ರೆಡ್ ಕೂಡ ಆಗುವುದಿಲ್ಲ. ಮೇಕಪ್ ಸ್ಪ್ರೆಡ್ ಆಗುವುದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

1. ಪ್ರೈಮರ್ ಬಳಸಿ
ನಿಮ್ಮ ಮುಖಕ್ಕೆ ಒಳ್ಳೆಯ ಪ್ರೈಮರ್ ಹಚ್ಚಿ. ಸಿಲಿಕೋನ್ ಬೇಸ್ಡ್ ಪ್ರೈಮರ್ ಬಳಸಿದರೆ ಒಳ್ಳೆಯದು. ಇದು ಮೇಕಪ್ ತುಂಬಾ ಹೊತ್ತು ಉಳಿಯುವಂತೆ ಕೂಡ ಮಾಡುವುದು.
ವಾಟರ್‌ಫ್ರೂಫ್ ಪ್ರಾಡೆಕ್ಟ್ ಬಳಸಿ
ಬೇಸಿಗೆಯಲ್ಲಿ ನಿಮ್ಮ ಮೇಕಪ್ ಪ್ರಾಡೆಕ್ಟ್‌ಗಳಲ್ಲಿಯೂ ಬದಲಾವಣೆ ತರಬೇಕಾಗುತ್ತದೆ. ಬೇಸಿಗೆಯಲ್ಲಿ ನೀವು ವಾಟರ್ ಫ್ರೂಫ್ ಮೇಕಪ್ ಸಾಧನಗಳನ್ನು ಬಳಸಿ. ಇದು ಮುಖಕ್ಕೆ ನೀರು ಬಿದ್ದಾಗ, ಮುಖ ಬೆವರಿದಾಗ ಮೇಕಪ್ ಹರಡಿ ಸೌಂದರ್ಯ ಹಾಳಾಗುವುದನ್ನು ತಡೆಗಟ್ಟುತ್ತದೆ. ಈ ವಾಟರ್ ಫ್ರೂಫ್ ಕ್ರೀಮ್‌ಗಳಲ್ಲಿರುವ ಮಾಯಿಶ್ಚರೈಸರ್ ಮುಖಕ್ಕೆ ಫ್ರೆಷ್ ಫೀಲ್ ಕೊಡುತ್ತದೆ.
ಯಾವ ಮೇಕಪ್ ಹೇಗೆ ಬಳಸಬೇಕೆಂಬುವುದು ಕೂಡ ಮುಖ್ಯವಾಗುತ್ತದೆ
ಲೈಟ್ ಫೌಂಡೇಷನ್ ಅನ್ನು ಬೇಸ್ ಆಗಿ ಬಳಸಬೇಕು. ನಂತರ ಫೌಂಡೇಷನ್ ಪೌಡರ್ ಹಚ್ಚಬೇಕು, ಈ ರೀತಿ ಮಾಡುವುದರಿಂದ ಮುಖ ಫ್ರೆಷ್ ಆಗಿ ಕಾಣಿಸುತ್ತದೆ.
ತುಟಿಗೆ ಸ್ಟೈನ್ ಫ್ರೂಫ್ ಲಿಪ್ ಕಲರ್ ಬಳಸಿ
ತುಟಿಯಲ್ಲಿ ಸ್ಪ್ರೆಡ್ ಆಗುವ ಲಿಪ್‌ಸ್ಟಿಕ್ ಬಳಸಬೇಡಿ, ಸ್ಮಡ್ಜ್ ಫ್ರೂಫ್ ಲಿಪ್‌ಸ್ಟಿಕ್ ಸಿಗುತ್ತೆ ಅದನ್ನು ಬಳಸಿ, ಇದರಿಂದ ಲಿಪ್‌ಸ್ಟಿಕ್ ಹರಡಲ್ಲ ಅಲ್ಲದೆ ಹಾಕಿದ ಸ್ವಲ್ಪ ಹೊತ್ತಿನಲ್ಲಿ ಲಿಪ್‌ಸ್ಟಿಕ್ ಮಾಯವಾಗಲ್ಲ.
ಕಣ್ಣಿನ ಮೇಕಪ್ ಕಡೆಗೆ ಗಮನಹರಿಸಿ
ನೀವು ಕಣ್ಣಿಗೆ ವಾಟರ್‌ಫ್ರೂಫ್ ಐ ಮೇಕಪ್ ಬಳಸಿ. ವಾಟರ್‌ಫ್ರೂಫ್ ಮಸ್ಕರಾ, ವಾಟರ್ ಫ್ರೂಫ್ ಐ ಲೈನರ್ ಬಳಸಿ, ಇವುಗಳು ಕಣ್ಣಿನ ಅಂದ ಹೆಚ್ಚಿಸುವುದು, ಅಲ್ಲದೆ ಕಾಡಿಗೆ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ನಿಮ್ಮ ಪರ್ಸ್‌ನಲ್ಲಿ ಬ್ಲೋಟಿಂಗ್ ಪೇಪರ್ಸ್ ಇರಲಿ
ಈ ಪೇಪರ್ ಮುಖದಲ್ಲಿರುವ ಜಿಡ್ಡಿನಂಶ, ಬೆವರು ಇವುಗಳನ್ನು ತೆಗೆಯಲು ಸಹಕಾರಿ. ಮುಖದ ಮೇಕಪ್ ಕೂಡ ಹಾಳು ಮಾಡುವುದಿಲ್ಲ, ಮುಖ ಫ್ರೆಷ್ ಆಗಿ ಕಾಣುವುದು.
ಸೆಟ್ಟಿಂಗ್ ಸ್ಪ್ರೇ ಬಳಸಿ
ನೀವು ಮೇಕಪ್ ಸಂಪೂರ್ಣವಾದ ಮೇಲೆ ಸೆಟ್ಟಿಂಗ್ ಸ್ಪ್ರೇ ಬಳಸಿ, ಇದು ಮೇಕಪ್ ತುಂಬಾ ಹೊತ್ತು ಹಾಗೇ ಇರುವಂತೆಮಾಡುತ್ತದೆ, ಮುಖದಲ್ಲಿ ಆಯಾಸ ಕಾಣಲ್ಲ, ಫ್ರೆಷ್ ಆಗಿ ಕಾಣುವಿರಿ.



Click it and Unblock the Notifications
