Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಿಗ್‌ಬಾಸ್ 11 ಶುರು: ಮೊದಲ ಎಪಿಸೋಡ್‌ನಲ್ಲಿಯೇ ಸುದೀಪ್ ಲುಕ್‌ಗೆ ಫಿದಾ ಆದ ವೀಕ್ಷಕರು
ಎಲ್ಲರು ಬಯಸಿದಂತೆ ಬಿಗ್‌ಬಾಸ್ ಸೀಸನ್ 11 ನಿರೂಪಣೆಯ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ವಹಿಸಿಕೊಂಡಿದ್ದಾರೆ. ಸುದೀಪ್ ಅವರು ತಮ್ಮ ಅದ್ಭುತ ನಿರೂಪಣೆಯಿಂದ ಎಷ್ಟು ಗಮನ ಸೆಳೆಯುತ್ತರೋ ಔಟ್‌ಫಿಟ್‌ನಲ್ಲಿ ಅಷ್ಟೇ ಸ್ಟೈಲಿಷ್, ಅವರ ಸ್ಟೈಲ್‌ಗೆ ಅವರೇ ಸಾಟಿ, ಅದರಲ್ಲಿಯೂ ಸೀಸನ್ 11ರಲ್ಲಿ ಕಿಚ್ಚ ಒಂದು ಸ್ಟೆಪ್ ಹೆಚ್ಚೇ ಸ್ಟೈಲಿಷ್ ಆಗಿದ್ದಾರೆ ಎಂದರೆ ನೀವೂ ಒಪ್ಪುತ್ತೀರಿ ಅಲ್ವಾ?

ಸೀಸನ್ 11ರ ಬಿಗ್‌ಬಾಸ್ ಕನ್ನಡ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಸುದೀಪ್‌ರ ಲುಕ್ ಮಾತ್ರ ವಾವ್! ಎಲ್ಲರೂ ವರ್ಷದಿಂದ ವರ್ಷಕ್ಕೆ ವಯಸ್ಸಾಗುತ್ತಾರೆ, ಆದರೆ ಕಿಚ್ಚನಿಗೆ ವಯಸ್ಸು ರಿವರ್ಸ್ ಆಗಿ ಚಲಿಸುತ್ತಿದೆಯೇ ಎಂದನಿಸುವಷ್ಟು ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.
ಸ್ವರ್ಗ-ನರಕದ ಬಿಗ್‌ಬಾಸ್‌ಗೆ ರಾಜನಂತೆ ಕಂಗೊಳಿಸಿದ ಕಿಚ್ಚ
ಆನೆಯ ದಂತ ಬಣ್ಣ(ಐವರಿ ಕಲರ್)ದ ಡ್ರೆಸ್ಸಿಂಗ್ ತುಂಬಾನೇ ಸ್ಟೈಲಿಷ್ ಆಗಿ ವಿನ್ಯಾಸಗೊಳಿಸಲಾಗಿದೆ. ಡಬಲ್ ಕೋಟ್‌ನಲ್ಲಿ ಕಿಚ್ಚ ಮಿಂಚಿದರು. ಒಂದು ಓವರ್ ಕೋಟ್ ಅದರ ಮೇಲೆ ಮತ್ತೊಂದು ಓವರ್ ಕೋಟ್, ಆ ಕೋಟ್‌ಗೆ ಗ್ರ್ಯಾಂಡ್ ಗೋಲ್ಡನ್ ವರ್ಕ್, ಕಿರೀಟ ಕಾನ್ಸೆಪ್ಟ್ ಬೆಲ್ಟ್, ಲೂಸ್ ಪ್ಯಾಂಟ್ ಲುಕ್‌ನಲ್ಲಿ ಸುದೀಪ್ ನಡೆದು ಬರ್ತಾ ಇದ್ದರೆ ಬಿಗ್‌ಬಾಸ್ ವೀಕ್ಷಕರು ಫುಲ್ ಫಿದಾ..
ಸಿಂಗಲ್ ಕೋಟ್‌ನಲ್ಲಿ ಇನ್ನೂ ಮಸ್ತ್ ಲುಕ್
ಸುದೀಪ್ ಅವರು ಕಾರ್ಯಕ್ರಮ ಮುಂದುವರೆಯುತ್ತಿದ್ದಂತೆ ಆಫ್ ಬ್ಲೇಝರ್ ಕೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ, ಆ ಲುಕ್ ಇನ್ನೂ ಸೂಪರ್, ಆದರೆ ಕ್ರೌನ್ ಡಿಸೈನ್( ಕಿರೀಟ ಡಿಸೈನ್) ನೋಡುತ್ತಿದ್ದರೆ ತುಂಬಾ ಜನ ಡಿಸೈನರ್‌ಗಳ ಬಳಿ ಹೋಗಿ ಈ ರೀತಿಯ ಸ್ಟೈಲಿಷ್ ಮಾಡಿಕೊಡಬಹುದೇ ಎಂದು ಕೇಳುವುದಂತೂ ಗ್ಯಾರಂಟಿ.
ಹೆಣ್ಮಕ್ಕಳಿಗಾದರೆ ಸ್ಟೈಲ್ ಮಾಡುವುದಕ್ಕೆ ನಾನಾ ಆಯ್ಕೆಗಳಿವೆ, ಪುರುಷರಿಗಿಲ್ಲ ಅಷ್ಟು ಆಯ್ಕೆ ಇಲ್ಲ ಎಂದು ಹೇಳುವವರು ಕಿಚ್ಚ ಸ್ಟೈಲ್ ನೋಡಬೇಕು
ಇಷ್ಟು ವರ್ಷಗಳಲ್ಲಿ ಪ್ರತಿ ಎಪಿಸೋಡ್‌ನಲಲ್ಲಿ ಒಂದೊಂದು ಸ್ಟೈಲ್ ಮಾಡಿಕೊಂಡು ಬಂದಿದ್ದಾರೆ. ಈ ಕಾರಣಕ್ಕೆ ವೀಕೆಂಡ್ ಬಂತೆಂದರೆ ಸುದೀಪ್‌ರ ಮಾತಿನ ಜೊತೆಗೆ ಅವರ ಡ್ರೆಸ್ಸಿಂಗ್, ಹೇರ್ ಸ್ಟೈಲ್ ಆ ಮ್ಯಾನರಿಸಂ ವೀಕ್ಷಕರ ಮನ ಗೆಲ್ಲುತ್ತದೆ. ಈ ವಿಷಯಕ್ಕೆ ಸುದೀಪ್‌ರ ಡ್ರೆಸ್ ಡಿಸೈನರ್‌ಗಳಿಗೆ ಹ್ಯಾಟ್ಸಪ್ ಹೇಳಲೇಬೇಕು.
ಅವರ ಹೈಟ್, ಪರ್ಸಾನಾಲಿಟಿಗೆ ಆ ಡ್ರೆಸ್‌ಗಳು ತುಂಬಾನೇ ಸೂಟ್ ಅಗಿರುತ್ತದೆ
ಸುದೀಪ್‌ರಿಗೆ ಯಾವ ಡ್ರೆಸ್ ಸೂಟ್ ಆಗಲ್ಲ ಅಂತಲ್ಲ, ಯಾವುದೇ ಡಿಸೈನರ್ ಡ್ರೆಸ್ ಆಗಿರಲಿ ಅವರು ಧರಿಸಿದಾಗ ತುಂಬಾನೇ ವಿಭಿನ್ನವಾಗಿ ಕಾಣುವುದು. ಆ ಡ್ರೆಸ್ಸಿಂಗ್ ನೋಡುತ್ತಿದ್ದರೆ ನಮಲ್ಲಿಯೂ ಆ ಕಲೆಕ್ಷನ್ ಇರಬೇಕು ಎಂದು ಫ್ಯಾಷನ್ ಇಷ್ಟಪಡುವ ಪುರುಷ ಬಯಸಿಯೇ ಬಯಸುತ್ತಾನೆ.
ಅವರ ಡ್ರೆಸ್ಸಿಂಗ್ ಎಲ್ಲಾರಿಗೂ ಸೂಟ್ ಆಗುವಂತೆ ಇರುತ್ತೆ ಅದು ಇನ್ನೂ ವಿಶೇಷ
ಅವರ ಯಾವುದೇ ಡ್ರೆಸ್ಸಿಂಗ್ ಮಾಡಲಿ ಅದನ್ನು ನೋಡಿ ಕಾಪಿ ಮಾಡಿದರೆ ಖಂಡಿತ ಪುರುಷರಿಗೆ ತುಂಬಾನೇ ಸ್ಟೈಲಿಷ್ ಲುಕ್ ನೀಡುತ್ತೆ ಎನ್ನುವುದರಲ್ಲಿ ನೋ ಡೌಟು.
ಇಂಥ ಸ್ಟೈಲಿಷ್ ಧರಿಸಿನಲ್ಲಿ ನೋಡಬೇಕೆಂದರೆ ಬಿಗ್‌ಬಾಸ್‌ನಲ್ಲಿ ಮಾತ್ರ ಸಾಧ್ಯ
ಸುದೀಪ್ ಅವರು ಇತರ ಕಾರ್ಯಕ್ರಮಗಳಲ್ಲಿ ಕೋಟ್ ಈ ಬಗೆಯ ಡ್ರೆಸ್ಸಿಂಗ್ ಮಾಡುತ್ತಾರೆ, ಅದರೆ ಬಿಗ್‌ಬಾಸ್‌ನಲ್ಲಿ ಧರಿಸಿದಂತೆ ಧರಿಸಲ್ಲ, ಹಾಗಾಗಿ ಸಕತ್ ಫ್ಯಾಷನಿಸ್ಟಾ ಸುದೀಪ್‌ರನ್ನು ಕಾಣ ಸಿಗುವುದು ಬಿಗ್‌ಬಾಸ್‌ನಲ್ಲಿ ಮಾತ್ರ.



Click it and Unblock the Notifications
