Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಫಂಕ್ಷನ್‌ಗೆ ತುರುಬಿನ ಹೇರ್ ಸ್ಟೈಲ್ ಹೀಗೆ ಮಾಡಿದರೆ ನಿಮ್ಮ ಅಂದ ಹೆಚ್ಚುವುದು ನೋಡಿ
ಎಲ್ಲಾ ವಯಸ್ಸಿನವರಿಗೆ ತುಂಬಾನೇ ಕಂಫರ್ಟ್ ಹೇರ್‌ಸ್ಟೈಲ್‌ಯೆಂದರೆ ತುರುಬು ಕಟ್ಟುವುದು. ಈ ಫ್ರೀ ಹೇರ್‌ಗಿಂತ ಹೀಗೆ ತುರುಬು ಕಟ್ಟಿದರೆ ತುಂಬಾನೇ ಫ್ರೀ ಅನಿಸುವುದು. ಅದರಲ್ಲಿಯೂ ಮಲ್ಲಿಗೆ, ಗುಲಾಬಿ ಅಥವಾ ಕೆಲ ಹೆರ್ ಆಕ್ಸಸರೀಸ್‌ನಿಂದ ಅಲಂಕರಿಸಿದರೆ ತುಂಬಾನೇ ಆಕರ್ಷಕವಾಗಿ ಕಾಣುತ್ತೆ,
ನಾವು ಮದುವೆ, ಮತ್ತಿತರ ಕಾರ್ಯಕ್ರಮಕ್ಕೆ ರೆಡಿಯಾಗುವಾ ಗ್ರ್ಯಾಂಡ್ ಆಗಿ ಸೀರೆಯುಟ್ಟು ಸ್ಟೈಲಿಷ್ ಆಗಿ ತುರುಬು ಕಟ್ಟಿ ಅಲಂಕರಿಸಿದರೆ ಇದೆಯಲ್ಲಾ ನಮ್ಮ ಸೌಂದರ್ಯ ಹೆಚ್ಚುವುದರಲ್ಲಿ ನೋ ಡೌಟ್.

ಇನ್ನು ಸೆಕೆಗೆ ಅಂತೂ ಬೆಸ್ಟ್ ಹೇರ್ ಸ್ಟೈಲ್, ಮಳೆಗಾಲಕ್ಕೂ ಸೂಕ್ತ, ಅಲ್ಲದೆ ಗೌನ್ ಆಗಿರಲಿ, ಡ್ರೆಸ್ ಅಗಿರಲಿ ಅಥವಾ ಸೀರೆಯೇ ಅಗಿರಲಿ ಎಲ್ಲಾ ಬಗೆಯ ಸಾಂಪ್ರದಾಯಕ ಲುಕ್‌ನ ಡ್ರೆಸ್ಸಿಂಗ್‌ಗೆ ತರುಬಿನ ಹೇರ್‌ಸ್ಟೈಲ್ ತುಂಬಾನೇ ಅಕರ್ಷಕ.
ನಾವಿಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆದ ಕೆಲ ಹೇರ್‌ಸ್ಟೈಲ್ ಬಗ್ಗೆ ಹೇಳಿದ್ದೇವೆ
ಸ್ಟೈಲಿಷ್ ತುರುಬು
ಈ ಹೇರ್ ಸ್ಟೈಲ್ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಲೂಸ್ ಜಡೆ ಹಾಕುವಾಗ ಅಕರ್ಷಕವಾದ ಮಣಿ ಅಥವಾ ಈ ರೀತಿ ಯಾವುದಾದರೂ ಆಕಸ್ಸರೀಸ್ ತೆಗೆದು ಜಡೆ ಹಾಕಿ ನಂತರ ಈ ರೀತಿ ತುರುಬು ಕಟ್ಟಬೇಕು, ತುಂಬಾನೇ ಆಕರ್ಷಕವಾಗಿ ಕಾಣುವುದು.
ದೊಡ್ಡ ಹೂ ಅಥವಾ ಹೂವಿನ ಬ್ಯಾಂಡ್ ಹಾಕುವುದು
ಈ ಹೇರ್ ಸ್ಟೈಲ್ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಇದನ್ನು ನೀವು ಬೇಕಾದರೆ ಜೀನ್ಸ್ ಟೀ ಶರ್ಟ್‌ಗೆ ಮಾಡಿದರೂ ಸಕತ್ ಟ್ರೆಂಡಿ ಆಗಿರುತ್ತದೆ.
ಸಕತ್ ಕೂಲ್ ಹೇರ್ ಬನ್
ಇದು ನೋಡಿ ಸಿಂಪಲ್ ಆಗಿ ಕಟ್ಟಿ ಸುತ್ತ ಹೂವಿನ ಬ್ಯಾಂಡ್ ಅಥವಾ ಹೂವು ಸುತ್ತಿದರೆ ಸಾಕು, ದೊಡ್ಡ ಸೇವಂತಿಗೆ ಹೂ ಇಟ್ಟರೆ ತುಂಬಾನೇ ಆಕರ್ಷಕವಾಗಿ ಕಾಣುವುದು.
ಇನ್ನು ಈ ಹೇರ್‌ಸ್ಟೈಲ್‌ಗೆ ಬ್ಯೂಟಿಷಿಯನ್ ಹೆಲ್ಪ್ ಬೇಕಾಗಬಹುದು
ತುರುಬು ಕಟ್ಟಿ ಮಲ್ಲಿಗೆ ಮುಡಿಯುವುದು, ನೋಡಲು ತುಂಬಾನೇ ಆಕರ್ಷಕವಾಗಿದೆ ಅಲ್ವಾ, ಮದುವೆಗೆ ದುಂಡು ಮುಖದವರೆಗೆ ಈ ಬಗೆಯ ಹೇರ್‌ಸ್ಟೈಲ್ ತುಂಬಾನೇ ಆಕರ್ಷಕವಾಗಿ ಕಾಣುತ್ತೆ.
ಕೃತಕ ಮಲ್ಲಿಗೆ
ಈ ರೀತಿಯ ವಸ್ತುಗಳು ಫ್ಯಾನ್ಸಿ ಅಂಗಡಿಯಲ್ಲಿ ಸಿಗುತ್ತೆ, ಈ ರಿತಿಯ ಸ್ಟೈಲ್ ಗ್ರ್ಯಾಂಡ್ ಸೀರೆಗೆ ಆಕರ್ಷಕವಾಗಿ ಕಾಣುತ್ತೆ.
ತುರುಬಿಗೆ ಗುಲಾಬಿಯ ಅಂದ
ಇದಕ್ಕೆ ನೀವು ಹೂ ಮಾರಾಟ ಮಾಡುವವರಿಗೆ ಮೊದಲೇ ಆರ್ಡರ್ ಕೊಟ್ಟರೆ ಒಳ್ಳೆಯದು. ನಂತರ ತುರುಬಿನ ಹೇರ್‌ಸ್ಟೈಲ್
ಮಾಡಿ ಆ ಗುಲಾಬಿ ಹೂವುಗಳನ್ನು ತುರುಬಿನ ಸುತ್ತ ಅಲಂಕರಿಸಿದರೆ ಸಾಕು.
ಈ ಹೇರ್ ಸ್ಟೈಲ್ ಕೂದಲು ತೆಳುವಿದ್ದರೆ ಸೂಟ್ ಆಗುತ್ತೆ
ತುರುಬು ಕಟ್ಟುವಾಗ ಕೃತಕ ಜಡೆ ಇಟ್ಟು ಕಟ್ಟಿ, ಅದು ಕಾಣದಂತೆ ಈ ರೀತಿ ಅಲಂಕರಿಸಿದರೆ ತುಂಬಾನೇ ಚೆನ್ನಾಗಿ ಕಾಣುವುದು.
ಇದನ್ನು ನೀವೇ ಸ್ವಂತ ಮಾಡುವುದು ಕಷ್ಟವಾಗುತ್ತೆ, ಬ್ಯುಟಿಷಿಯನ್ ಬಳಿ ಮಾಡಿಸಬಹುದು, ನಂತರ ಈ ರೀತಿ ಹೂವಿನಿಂದ ಅಲಂಕರಿಸಿದರೆ ಚೆನ್ನಾಗಿ ಕಾಣುತ್ತೆ.
ಈ ಹೇರ್ ಸ್ಟೈಲ್ ನೋಡಿ ಸುತ್ತ ಪ್ಲಾಸ್ಟಿಕ್ ಹೂ ಅಥವಾ ನೈಜಹೂವಿನಿಂದ ಅಲಂಕರಿಸಿ ನಂತರ ಮಧ್ಯದಲ್ಲಿ ಡಿಸೈನ್ ಕೂರಿಸಿದರ ಚೆನ್ಬಾಗಿ ಕಾಣುತ್ತೆ.



Click it and Unblock the Notifications
