Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುವುದೇಕೆ? ತಡೆಗಟ್ಟುವುದು ಹೇಗೆ?
ನೀವು ಗಮನಿಸಿರಬಹುದು ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ, ಅಲ್ಲದೆ ಈ ಅವಧಿಯಲ್ಲಿ ಮುಖದಲ್ಲಿ ಬ್ಲ್ಯಾಕ್ ಹೆಡ್ ಸಮಸ್ಯೆ ಕೂಡ ಹೆಚ್ಚುವುದು ಏಕೆ? ಈ ಬಗೆಯ ಸಮಸ್ಯೆ ತಡೆಗಟ್ಟುವುದು ಹೇಗೆ ಎಂದು ನೋಡೋಣ:

ಚಳಿಗಾಲದಲ್ಲಿ ತ್ವಚೆ ತುಂಬಾ ಡ್ರೈಯಾಗುವುದು
ಚಳಿಗಾಲದಲ್ಲಿ ತ್ವಚೆ ತುಂಬಾ ಡ್ರೈಯಾಗುತ್ತದೆ, ಅಲ್ಲದೆ ಈ ಸಮಯದಲ್ಲಿ ತ್ವಚೆಯಲ್ಲಿ ಸೆಬಮ್ ಉತ್ಪತ್ತಿ ಹೆಚ್ಚಿರುತ್ತದೆ, ಇದರಿಂದ ಮುಖದಲ್ಲಿ ಮೊಡವೆ ಸಮಸ್ಯೆ ಹೆಚ್ಚುವುದು.
ಮುಖದ "T-zone" ಅಂದರೆ ಹಣೆ, ಮೂಗು, ಕೆನ್ನೆ ಭಾಗದಲ್ಲಿ ಈ ಸೆಬಮ್ ಅಧಿಕ ಉತ್ಪತ್ತಿಯಾಗುವುದರಿಂದ ಈ ಭಾಗದಲ್ಲಿ ಮೊಡವೆ ಹೆಚ್ಚಾಗಿ ಕಂಡು ಬರುತ್ತದೆ.
ಚಳಿಗಾಲದಲ್ಲಿ ಮುಖದಲ್ಲಿ ಇನ್‌ಫ್ಲೇಮೇಷನ್ ಹೆಚ್ಚುವುದು
ವಾತಾವರಣ ತಂಪಾಗಿ ಇರುವುದರಿಂದ ಮುಖ ಬೇಗನೆ ಡ್ರೈಯಾಗುತ್ತದೆ, ಇದರಿಂದ ಸೆಬಮ್ ಉತ್ಪತ್ತಿ ಹೆಚ್ಚಿ ಮುಖದಲ್ಲಿ ಜಿಡ್ಡಿನಂಶ ಹೆಚ್ಚಾಗಿ ಮೊಡವೆ ಉಂಟಾಗುವುದು. ಅಲ್ಲದೆ ಉರಿಯೂತದ ಸಮಸ್ಯೆ ಕೂಡ ಹೆಚ್ಚಾಗುವುದು.
ಚಳಿಗಾಲದಲ್ಲಿ ಮೊಡವೆ ಸಮಸ್ಯೆ ತಡೆಗಟ್ಟುವುದು ಹೇಗೆ?
* ನೀವು ಆಯಿಲ್ ಫ್ರೀ ಸ್ಕಿನ್ ಮಾಯಿಶ್ಚರೈಸರ್ ಬಳಸಬೇಕು.
* ನೀವು ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಸ್ಟಾಪ್‌ಮಾಡಬೇಡಿ.
* ಮುಖವನ್ನು ಆಗಾಗ ತೊಳೆಯಬೇಡಿ: ಇದರಿಂದ ಕೂಡ ಮುಖ ತುಂಬಾ ಡ್ರೈಯಾಗಿ ಮೊಡವೆ ಹೆಚ್ಚುವುದು.
ಇತರೆ ಸಲಹೆ
* ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ: ಚಳಿಗಾಲದಲ್ಲಿ ಮೈಗೆ ಬಿಸಿ ಬಿಸಿ ನೀರು ಹಾಕಬೇಕೆನಿಸುವುದು, ಆದರೆ ಹದ ಬಿಸಿ ನೀರು ಮಾತ್ರ ಬಳಸಿ. ಮುಖ ತೊಳೆಯಲು ಮೈಲ್ಡ್ ಕ್ಲೆನ್ಸರ್ ಬಳಸಿ, ಸೋಪ್ ಬಳಸಬೇಡಿ.
* ಸ್ನಾನದ ಬಳಿಕ ಮಾಯಿಶ್ಚರೈಸರ್ ಹಚ್ಚಿ: ಮುಖ, ಕುತ್ತಿಗೆ, ಬೆನ್ನು ಹೀಗೆ ಯಾವ ಭಾಗದಲ್ಲಿ ಹೆಚ್ಚಾಗಿ ಮೊಡವೆ ಕಂಡು ಬರುತ್ತದೋ ಆ ಭಾಗಕ್ಕೆ ಆಯಿಲ್ ಫ್ರೀ ಮಾಯಿಸ್ಚರೈಸರ್ ಹಚ್ಚಿಕೊಳ್ಳಿ.
* ಪ್ರತಿ ದಿನ ಎಕ್ಸ್‌ಫೋಲೆಟ್ ಮಾಡಿ: ಇದರಿಂದ ಡೆಡ್ ಸ್ಕಿನ್ ತೆಗೆಯಬಹುದು, ಮುಖದಲ್ಲಿ ಮೊಡವೆ ಸಮಸ್ಯೆ ಕಡಿಮೆಯಾಗುವುದು.
ಚಳಿಗಾಲದಲ್ಲಿ ಈ ಟಿಪ್ಸ್ ಪಾಲಿಸಿ, ಮೊಡವೆ ಕಡಿಮೆಯಾಗುವುದು.



Click it and Unblock the Notifications

