Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಫೇಸ್‌ಮಾಸ್ಕ್ ತುಂಬಾ ಹೊತ್ತು ಇಟ್ಟರೆ ತ್ವಚೆಗೆ ಏನಾಗುತ್ತೆ ಗೊತ್ತಾ?
ನಾವು ಸುಂದರವಾಗಿ ಕಾಣಬೇಕೆಂದರೆ ತಮ್ಮ ತ್ವಚೆ ಆರೈಕೆ ಕಡೆಗೆ ಸ್ವಲ್ಪ ಗಮನ ನೀಡಲೇಬೇಕು. ವಾರಕ್ಕೊಮ್ಮೆ ಅಥವಾ ಕನಿಷ್ಠ ಹದಿನೈದು ದಿನಕ್ಕೊಮೆಮ ಮುಖಕ್ಕೆ ಫೇಶಿಯಲ್ ಹಚ್ಚುವುದು, ಫೇಸ್ ಮಾಸ್ಕ್ ಬಳಸುವುದು, ಎಕ್ಸ್‌ಫೋಲೆಟ್, ದಿನಾ ಸ್ಕ್ರಬ್ಬಿಂಗ್ ಹೀಗೆ ಸ್ವಲ್ಪ ಆರೈಕೆ ಮಾಡಲೇಬೇಕು. ಇಲ್ಲದಿದ್ದರೆ ಮುಖದ ಸೌಂದರ್ಯ ನೀವು ಬಯಸಿದಷ್ಟು ತಾಜಾದಿಂದ ಕಾಣಲು ಸಾಧ್ಯವಿಲ್ಲ.
ಆದರೆ ನಾವು ಚೆನ್ನಾಗಿ ಕಾಣಿಸಲು ಮಾಡುವ ಆರೈಕೆಯಿಂದಲೇ ಕೆಲವೊಮ್ಮೆ ಎಡವಟ್ಟು ಉಂಟಾಗುವುದುಂಟು. ನಾವು ಮುಖಕ್ಕೆ ಫೇಸ್ ಮಾಸ್ಕ್ ಹಚ್ಚಿದರೆ ಹೆಚ್ಚಿಂದರೆ ಅರ್ಧ ಗಂಟೆ ಇಡಬೇಕು ಅಷ್ಟೇ. ಆದರೆ ನಾವು ಏನು ಯೋಚನೆ ಮಾಡುತ್ತೇವೆ, ಇದರಿಂದ ಮುಖದ ತ್ವಚೆ ಚೆನ್ನಾಗಿ ಕಾಣುವುದು ಆದ್ದರಿಂದ ಇನ್ನೂ ಸ್ವಲ್ಪ ಹೊತ್ತು ಇಟ್ಟರೆ ಒಳ್ಳೆಯದೆಂದು ಭಾವಿಸಿ ಒಂದು ಗಂಟೆ ಎರಡು ಗಂಟೆ ಹಾಗೇ ಬಿಡುತ್ತೇವೆ. ಆದರೆ ಹೀಗೆ ಮಾಡುವುದರಿಂದ ಒಳ್ಳೆಯದು ಎಂದು ನೀವು ಅಂದುಕೊಂಡಿದ್ದರೆ ಒಂದು ಸಣ್ಣ ಎಚ್ಚರಿಕೆ, ಇದರಿಂದ ನಿಮ್ಮ ತ್ವಚೆಗೆ ಹಾನಿಯುಂಟಾಗುತ್ತದೆ ಹುಷಾರ್!
ಏಕೆ ಫೇಸ್‌ಮಾಸ್ಕ್ ತುಂಬಾ ಹೊತ್ತು ಇಡಬಾರದು ಎಂದು ನೋಡುವ ಮುನ್ನ ಪೇಸ್‌ಮಾಸ್ಕ್‌ನ ಗುಣಗಳ ಬಗ್ಗೆ ಮೊದಲು ನೋಡೋಣ:

ಫೇಸ್‌ಮಾಸ್ಕ್ ಏಕೆ ಬಳಸಬೇಕು?
ನೀವು ತ್ವಚೆ ಸೌಂದರ್ಯಕ್ಕಾಗಿ ಈಗಾಗಲೇ ಡೇ ಕ್ರೀಮ್, ನೈಟ್ ಕ್ರೀಮ್ ಅಂತ ಬಳಸುತ್ತಿರುತ್ತೀರಿ, ಮತ್ಯಾಕೆ ಫೇಸ್‌ಮಾಸ್ಕ್ ಬೇಕೆಂದು ನೋಡುವುದಾದರೆ ಇತರ ಸೌಂದರ್ಯವರ್ಧಕಗಳಿಗಿಂತ ಇದು ತ್ವಚೆಯನ್ನು ಆಳದಿಂದ ಆರೈಕೆ ಮಾಡುತ್ತದೆ. ಅಲ್ಲದೆ ಫೇಸ್‌ಮಾಸ್ಕ್ ಬೇಗನೆ ತ್ವಚೆಯನ್ನು ಆರೈಕೆ ಮಾಡುತ್ತದೆ. ನೀವು ಫೇಸ್‌ಮಾಸ್ಕ್ ಹಾಕಿ ಅರ್ಧ ಗಂಟೆ ಬಿಟ್ಟು ತೊಳೆದ ತಕ್ಷಣ ಮುಖದಲ್ಲಿ ವ್ಯತ್ಯಾಸ ಕಂಡು ಬರುವುದು, ಇದು ತ್ವಚೆಯನ್ನು ಮತ್ತಷ್ಟು ಆರೈಕೆ ಮಾಡುವುದರಿಂದ ವಾರಕ್ಕೊಮ್ಮೆ ಫೇಸ್‌ಮಾಸ್ಕ್ ಹಚ್ಚುವುದು ಒಳ್ಳೆಯದು.
ಈಗ ನಾವು ಫೇಸ್‌ಮಾಸ್ಕ್ ಏಕೆ ತುಂಬಾ ಹೊತ್ತು ಮುಖದಲ್ಲಿ ಇಡಬಾರದು ಎಂದು ನೋಡೋಣ:

ರಂಧ್ರಗಳು ಮುಚ್ಚುವುದು ತ್ವಚೆಗೆ ಆರೋಗ್ಯಕರವಲ್ಲ
ತ್ವಚೆಯಲ್ಲಿ ಚಿಕ್ಕ ರಂಧ್ರಗಳು ಇರುತ್ತವೆ, ಅದು ಮುಚ್ಚಿದರೆ ತ್ವಚೆ ಆರೈಕೆ ಸರಿಯಾದ ರೀತಿಯಲ್ಲಿ ಆಗುವುದಿಲ್ಲ. ಫೇಸ್‌ಮಾಸ್ಕ್ ಹೆಚ್ಚು ಹೊತ್ತು ಇಟ್ಟರೆ ತ್ವಚೆಯ ರಂಧ್ರಗಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ, ಇದರಿಂದ ಮೊಡವೆ ಸಮಸ್ಯೆ ಹೆಚ್ಚುವುದು. ಆದ್ದರಿಂದ ಫೇಸ್‌ಮಾಸ್ಕ್ ಬಳಸುವಾಗ ಎಷ್ಟು ಸಮಯ ಇಡಬೇಕು ಎಂದು ಅದರ ಮೇಲೆ ಬರೆದಿರುವ ಸೂಚನೆ ನೋಡಿ ಅಷ್ಟೇ ಹೊತ್ತು ಇಡಿ.

ತ್ವಚೆ ಮಾಯಿಶ್ಚರೈಸರ್ ಕಡಿಮೆಯಾಗುವುದು
ತುಂಬಾ ಹೊತ್ತು ಫೇಸ್‌ಮಾಸ್ಕ್ ಇಡುವುದರಿಂದ ತ್ವಚೆ ಡ್ರೈಯಾಗುತ್ತದೆ, ಮಾಯಿಶ್ಚರೈಸರ್ ಕಡಿಮೆಯಾದಾಗ ತ್ವಚೆಯ ಹೊಳಪು ಕಳೆಗುಂದುವುದು. ಇದರಿಂದ ನೀವು ಅಂದ ಹೆಚ್ಚಿಸಲು ಬಳಸಿದ ಫೇಸ್‌ಮಾಸ್ಕ್‌ನಿಂದಾಗಿ ಅಂದ ಹಾಳಾಗುವುದು.

ಆಗಾಗ ಫೇಸ್ ಮಾಸ್ಕ್ ಬಳಸಬೇಡಿ
ಇನ್ನು ಎರಡು ದಿನಕ್ಕೊಮ್ಮೆ ಅಥವಾ ವಾರದಲ್ಲಿ ಎರಡರಿಂದ ಮೂರು ಬಾರಿ ಫೇಸ್‌ಮಾಸ್ಕ್ ಬಳಸಿದರೆ ತ್ವಚೆ ತುಂಬಾ ಚೆನ್ನಾಗಿರುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ತ್ವಚೆಗೆ ಫೇಸ್‌ಮಾಸ್ಕ್ ವಾರಕೊಮ್ಮೆ ಹಚ್ಚಿದರೆ ಸಾಕು, ತಿಂಗಳಿಗೆ ಒಮ್ಮೆಯಾದರೂ ಅಡ್ಡಿಯಿಲ್ಲ. ಆದರೆ ದಿನ ಬಿಟ್ಟು ದಿನ ಸ್ಕ್ರಬ್ಬರ್ ರೀತಿ ಬಳಸಲು ಹೋಗಬೇಡಿ.

ಸಲಹೆ:
ಈಗ ಗೊತ್ತಾಯ್ತಲ್ಲ ಫೇಸ್‌ಮಾಸ್ಕ್ ಹೇಗೆ ಬಳಸಬೇಕೆಂದು. ಆದ್ದರಿಂದ ಯಾವುದೇ ಫೇಸ್‌ಮಾಸ್ಕ್ ಬಳಸುವುದಾದರೂ ತುಂಬಾ ಹೊತ್ತು ಇಡಬೇಡಿ. ಆದಷ್ಟೂ ನೈಸರ್ಗಿಕವಾದ ಫೇಸ್‌ಮಾಸ್ಕ್ ಬಳಸಿ.
ಕೆಲವೊಂದು ನೈಸರ್ಗಿಕವಾದ ಫೇಸ್‌ಮಾಸ್ಕ್
1. ಮೊಟ್ಟೆಯ ಬಿಳಿ+ಮೊಸರು: ಈ ಎರಡು ವಸ್ತು ಮಿಶ್ರ ಮಾಡಿ 15 ನಿಮಿಷದ ಬಳಿಕ ಮುಖ ತೊಳೆಯಿರಿ.
2.ಓಟ್ಸ್_ಜೇನು+ಮೊಸರು: ಈ ಮೂರು ಸಾಮಗ್ರಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.



Click it and Unblock the Notifications
