Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
ಮುಖದ ಸೌಂದರ್ಯ ಹೆಚ್ಚಿಸುತ್ತೆ ಸ್ಲ್ಯಾಪ್ ಥೆರಪಿ, ಏನಿದು ಸ್ಲ್ಯಾಪ್ ಥೆರಪಿ?
ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವ ಯಾರೇ ಅದರೂ ಹೊಸದಾಗಿ ಬರುತ್ತಿರುವ ಟ್ರೆಂಡ್ಗಳನ್ನು ಪ್ರಯತ್ನಿಸುತ್ತಾರೆ. ಅಂಥಾ ಟ್ರೆಂಡ್ ಗಳಲ್ಲಿ ಒಂದು ಸ್ಲ್ಯಾಪ್ ಥೆರಪಿ. ಇದು ವಿದೇಶಗಳಲ್ಲಿ ಹಿಂದಿನಿಂದಲೂ ಇರುವ ಸೌಂದರ್ಯ ಕಾಳಜಿ ಅದರೂ ಭಾರತದಲ್ಲಿ ಇತ್ತೀಚೆಗೆ ಇದು ಟ್ರೆಂಡ್ ಆಗುತ್ತಿದೆ.
ಏನಿದು ಸ್ಲ್ಯಾಪ್ ಥೆರಪಿ?, ಇದರ ಪ್ರಯೋಜನಗಳೇನು?, ಸ್ಲ್ಯಾಪ್ ಥೆರಪಿ ಮಾಡುವ ವಿಧಾನ ಹೇಗೆ? ಮುಂದೆ ನೋಡೋಣ:

ಸ್ಲ್ಯಾಪ್ ಥೆರಪಿ ಎಂದರೇನು?
ಹೆಸರೇ ಸೂಚಿಸುವಂತೆ, ಸ್ಲ್ಯಾಪ್ ಥೆರಪಿಗಾಗಿ ಸ್ಲ್ಯಾಪ್ಗಳನ್ನು ಬಳಸಲಾಗುತ್ತದೆ. ಇದನ್ನು ಕನ್ನಡದಲ್ಲಿ ಬಡಿಯುವ ಚಿಕಿತ್ಸೆ ಎಂದೂ ಕರೆಯುತ್ತಾರೆ. ಈ ಚಿಕಿತ್ಸಾ ಕ್ರಮದಲ್ಲಿ ಮುಖದ ಎಲ್ಲಾ ಭಾಗಗಳಿಗೂ ಹಗುರವಾದ ಕೈಗಳಿಂದ ಹೊಡೆಯಲಾಗುತ್ತದೆ. ಮುಖದ ಮೇಲೆ ಬಡಿಯುವುದರಿಂದ ರಕ್ತ ಸಂಚಾರ ಸರಿಯಾಗಿ ಆಗಲು ತುಂಬಾ ಸಹಾಯವಾಗುತ್ತದೆ. ಅಷ್ಟೇ ಅಲ್ಲ, ಇದರ ಸಹಾಯದಿಂದ ಮುಖದಲ್ಲಿ ಆಗುವ ಹಲವಾರು ರೀತಿಯ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತದ ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಈ ಚಿಕಿತ್ಸೆಯನ್ನು ಬಳಸುತ್ತಿದ್ದಾರೆ.
ಸ್ಲ್ಯಾಪ್ ಚಿಕಿತ್ಸೆಯ ಪ್ರಯೋಜನಗಳು
* ಸ್ಲ್ಯಾಪ್ ಥೆರಪಿಯಲ್ಲಿ, ಹಗುರವಾದ ಕೈಗಳಿಂದ ಮುಖದ ಮೇಲೆ ಹೊಡೆಯುವುದರಿಂದ ಈ ಕ್ರಿಯೆಯು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ.
* ಸ್ಲ್ಯಾಪ್ ಥೆರಪಿ ಚಿಕಿತ್ಸೆಯ ಸಹಾಯದಿಂದ, ಚರ್ಮದ ಸಣ್ಣ ರಂಧ್ರಗಳನ್ನು ತೆರೆಯಲಾಗುತ್ತದೆ ಇದರಿಂದಾಗಿ ಮುಖದ ಸುಕ್ಕುಗಳು ಕಡಿಮೆಯಾಗುತ್ತವೆ.
* ಸ್ಲ್ಯಾಪ್ ಥೆರಪಿಯ ಸಹಾಯದಿಂದ, ಫೈನ್-ಲೈನ್ಗಳ ಸಮಸ್ಯೆಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ನಿವಾರಣೆಯಾಗುತ್ತವೆ.
* ನಿಮ್ಮ ಮುಖದ ಸ್ನಾಯುಗಳನ್ನು ಸಕ್ರಿಯವಾಗಿಡಲು ಬಯಸಿದರೆ, ಸ್ಲ್ಯಾಪ್ ಥೆರಪಿ ಉತ್ತಮ ಆಯ್ಕೆಯಾಗಿದೆ.
* ಸ್ಲ್ಯಾಪ್ ಥೆರಪಿಯಿಂದ ಮುಖದ ರಕ್ತ ಸಂಚಾರವೂ ಹೆಚ್ಚುತ್ತದೆ.
* ಸ್ಲ್ಯಾಪ್ ಥೆರಪಿ ಬಳಸುವುದರಿಂದ ನಿಮ್ಮ ಮುಖವು ಹೆಚ್ಚು ಹೊಳೆಯುತ್ತದೆ.
* ಹಗುರವಾದ ಕೈಗಳಿಂದ ಬಡಿಯುವ ಮೂಲಕ ಮೊಡವೆಗಳಂಥ ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಬಹುದು.
* ಸ್ಲ್ಯಾಪ್ ಥೆರಪಿಯು ನಿಮ್ಮ ತ್ವಚೆಯಿಂದ ವಿಷವನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ.
ಸ್ಲ್ಯಾಪ್ ಥೆರಪಿ ಮೊದಲು ಎಲ್ಲಿ ಆರಂಭವಾಯಿತು?
ಸ್ಲ್ಯಾಪ್ ಥೆರಪಿ ಹಲವು ವರ್ಷಗಳ ಹಿಂದೆ ಕೊರಿಯಾದಲ್ಲಿ ಮೊದಲು ಹುಟ್ಟಿಕೊಂಡಿತು. ತಮ್ಮ ಮುಖದ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು, ಕೊರಿಯಾ ಮತ್ತು ಅಮೆರಿಕದ ಮಹಿಳೆಯರು ನಿರಂತರವಾಗಿ ಸ್ಲ್ಯಾಪ್ ಥೆರಪಿಯನ್ನು ಬಳಸುತ್ತಿದ್ದರು. ಈಗ ಈ ಚಿಕಿತ್ಸೆಯು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.
* ಈ ಚಿಕಿತ್ಸೆಗಾಗಿ, ನೀವು ಹಗುರವಾದ ಕೈಗಳಿಂದ ನಿಮ್ಮ ಮುಖದ ಮೇಲೆ ನಿತ್ಯ 50 ಬಾರಿ ಬಡಿಯಬೇಕು.
* ಬಡಿಯುವ ವೇಗ ಬಹಳ ಹಿತವಾಗಿರಬೇಕು, ನೋವಾಗದಂತಿರಲಿ.
* ಮುಖ ಎಲ್ಲಾ ಭಾಗಗಳಿಗೂ ಸಮವಾಗಿ ಬಡಿಯಬೇಕು. ಇದು ರಕ್ತಸ ಸಂಚಾರಕ್ಕರ ಸಹಕಾರಿ.



Click it and Unblock the Notifications


