Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ಳುವಾಗ ಈ ತಪ್ಪುಗಳನ್ನು ಮಾಡದಿರಿ!
ದೇಹದ ಮೇಲೆ ಬೆಳೆಯುವ ಕೂದಲನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಮೊರೆಹೋಗುವುದು ಸಾಮಾನ್ಯ. ಆದರೆ ನಿಮಗೆ ಸಮಯ ಜೊತೆಗೆ ಹಣ ಎರಡೂ ಉಳಿತಾಯ ಆಗಬೇಕೆಂದರೆ, ವ್ಯಾಕ್ಸಿಂಗ್ ಮನೆಯಲ್ಲಿಯೇ ಮಾಡಿಕೊಳ್ಳುವುದು ಉತ್ತಮ ದಾರಿ. ಆದರೆ ಇದು ಸುಲಭದ ಕೆಲಸವಲ್ಲ.ಏಕೆಂದರೆ ಈ ಸಮಯದಲ್ಲಿ ಮಾಡುವ ಸಣ್ಣ ತಪ್ಪುಗಳು ನೋವು, ಕಿರಿಕಿರಿಗೆ ಕಾರಣವಾಗುತ್ತದೆ. ಆದ್ದರಿಂದ ಕೆಲವೊಂದು ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಹಾಗಾದರೆ, ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ಳುವುದು ಹೇಗೆ? ವ್ಯಾಕ್ಸಿಂಗ್ ಮಾಡಿಕೊಳ್ಳುವಾಗ ಮಾಡಬಾರದ ತಪ್ಪುಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ಳುವ ಮೊದಲು ನಿಮ್ಮ ತ್ವಚೆಯನ್ನು ಮೊದಲು ಈ ಹಂತಗಳಿಗೆ ಒಳಪಡಿಸುವುದು ಉತ್ತಮ. ಅವುಗಳೆಂದರೆ:

1. ಎಕ್ಸ್ಫೋಲಿಯೇಶನ್:
ಎಲ್ಲಕ್ಕಿಂತ ಮೊದಲು ವ್ಯಾಕ್ಸಿಂಗ್‌ಗೆ ನಿಮ್ಮ ಚರ್ಮವನ್ನು ಸಿದ್ಧಪಡಿಸಬೇಕು. ಇದರರ್ಥ ಅದನ್ನು ಎಫ್ಫೋಲಿಯೇಟ್ ಮಾಡಿ, ಅದರಲ್ಲಿರುವ ಡೆಡ್ ಸ್ಕಿಲ್‌ಗಳನ್ನು ತೆಗೆದುಹಾಕಿ, ಜೊತೆಗೆ ಹೆಚ್ಚುವರಿ ಕೂದಲನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದೆ. ನಿಮ್ಮ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು ಉತ್ತಮ ಮಾರ್ಗವೆಂದರೆ ಸಕ್ಕರೆ ಸ್ಕ್ರಬ್ ಬಳಕೆ ಮಾಡುವುದು. ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಒಟ್ಟಿಗೆ ಬೆರೆಸಿ, ಸ್ಕ್ರಬ್ ತಯಾರಿಸಿ, ಅದನ್ನು ನೀವು ವ್ಯಾಕ್ಸಿಂಗ್ ಮಾಡಬೇಕೆಂದುಕೊಂಡಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

2. ಕೂದಲನ್ನು ಟ್ರಿಮ್ ಮಾಡಿ:
ನೀವು ವ್ಯಾಕ್ಸ್ ಮಾಡಲು ಹೋಗುವ ಪ್ರದೇಶವನ್ನು ಟ್ರಿಮ್ ಅಥವಾ ಶೇವ್ ಮಾಡಿ. ಇದು ಮೇಣವನ್ನು ಉತ್ತಮವಾಗಿ ಅಂಟಿಕೊಳ್ಳಲು ಸಹಾಯ ಮಾಡುವ ಮೂಲಕ ಈ ಪ್ರಕ್ರಿಯೆಯನ್ನು ಹೆಚ್ಚು ಸುಗಮಗೊಳಿಸುತ್ತದೆ.
ಇವು ವ್ಯಾಕ್ಸಿಂಗ್ ಮುನ್ನ ಮಾಡಬೇಕಾದ ಆರೈಕೆಯಾದ್ರೆ, ವ್ಯಾಕ್ಸಿಂಗ್ ವೇಳೆ ಕೆಲವೊಂದು ತಪ್ಪುಗಳನ್ನು ತಪ್ಪಿಸಬೇಕಾಗುತ್ತದೆ. ಅವುಗಳನ್ನು ಯಾವುವು ಎಂಬುದು ಈ ಕೆಳಗಿದೆ.

3. ತಜ್ಞರ ಪ್ರಕಾರ, ಮನೆಯಲ್ಲಿ ವ್ಯಾಕ್ಸಿಂಗ್ ಮಾಡುವಾಗ ತಪ್ಪಿಸಬೇಕಾದ 5 ತಪ್ಪುಗಳು ಇಲ್ಲಿವೆ:
1. ನಿಮ್ಮ ಚರ್ಮವು ವ್ಯಾಕ್ಸ್‌ಗೆ ಸಿದ್ಧವಾಗುವುದು ಬಹಳ ಮುಖ್ಯ. ಆದ್ದರಿಂದ ನಿಮ್ಮ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುವುದನ್ನು ಅಥವಾ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.
2. ಹೆಚ್ಚು ವ್ಯಾಕ್ಸ್ ಹಚ್ಚಬೇಡಿ, ಇದು ಅಷ್ಟು ತೆಳುವಾಗಿರಬೇಕು.
3. ಮೇಣ ಸಂಪೂರ್ಣವಾಗಿ ಒಣಗುವ ಮೊದಲು ಅದನ್ನು ತೆಗೆಯಬೇಡಿ. ಇಲ್ಲದಿದ್ದರೆ, ಇದು ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು
4. ಒಂದೇ ತಿಂಗಳಲ್ಲಿ ಅದೇ ಪ್ರದೇಶಕ್ಕೆ ಮತ್ತೆ ವ್ಯಾಕ್ಸ್ ಮಾಡಬೇಡಿ.
5. ವ್ಯಾಕ್ಸ್ ಹೆಚ್ಚು ಬಿಸಿ ಮಾಡಬೇಡಿ. ಅದನ್ನು ಹಚ್ಚುವ ಮೊದಲು ರೂಮ್ ಟೆಂಪರೇಚರ್‌ನಲ್ಲಿ ಇರಿಸಿ.

4. ಯಾರು ವ್ಯಾಕ್ಸ್ ಮಾಡಬಾರದು?:
* ನೀವು ಸನ್‌ಬರ್ನ್ ಅಥವಾ ಇತರ ಚರ್ಮದ ಕಿರಿಕಿರಿಯನ್ನು ಹೊಂದಿದ್ದರೆ ವ್ಯಾಕ್ಸಿಂಗ್ ತಪ್ಪಿಸಿ.
* ಗರ್ಭಿಣಿಯಾಗಿದ್ದರೆ ಅಥವಾ ಸ್ತನ್ಯಪಾನ ಮಾಡುತ್ತಿದ್ದರೆ ವ್ಯಾಕ್ಸಿಂಗ್ ನಿಂದ ದೂರವಿರಿ.
* ಯಾವುದೇ ಗಾಯಗಳನ್ನು ಹೊಂದಿದ್ದರೆ ವ್ಯಾಕ್ಸಿಂಗ್ ಬೇಡ.
* ತಿಂಗಳ ಮುಟ್ಟಿನ ಸಮಯದಲ್ಲಿ ವ್ಯಾಕ್ಸಿಂಗ್ ಮಾಡುವುದನ್ನು ತಪ್ಪಿಸಿ.

5. ಹಾಗಾದ್ರೆ, ಮನೆಯಲ್ಲಿ ವ್ಯಾಕ್ಸ್ ಮಾಡುವುದು ಹೇಗೆ?:
ಹಂತ 1: ವ್ಯಾಕ್ಸಿಂಗ್ ಪ್ರಾರಂಭಿಸುವ ಮೊದಲು ನಿಮ್ಮ ಚರ್ಮವು ಸ್ವಚ್ಛ ಮತ್ತು ಒಣಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಹಂತ 2: ವ್ಯಾಕ್ಸ್ ಬಿಸಿಯಾದ ನಂತರ, ಅದನ್ನು ನೀವು ವ್ಯಾಕ್ಸ್ ಮಾಡಬೇಕೆಂದಿರುವ ಜಾಗಕ್ಕೆ ತೆಳುವಾದ ಪದರದ ರೀತಿ ಹಚ್ಚಿ, ಇದನ್ನು ಹಚ್ಚಲು ವ್ಯಾಕ್ಸ್ ಲೇಪಕವನ್ನು ಬಳಸುವುದು ಉತ್ತಮ. ಇದರಿಂದ ವ್ಯಾಕ್ಸ್ ಸಮನಾಗಿ ಹಂಚಿಕೆಯಾಗುತ್ತದೆ.
ಹಂತ 3: ವ್ಯಾಕ್ಸ್ ಹಚ್ಚಿದ ನಂತರ, ವ್ಯಾಕ್ಸ್ ಪಟ್ಟಿಯನ್ನು ತೆಗೆದುಕೊಂಡು, ಆ ಪ್ರದೇಶದ ಮೇಲೆ ಹಾಕಿ, ಗಟ್ಟಿಯಾಗಿ ಉಜ್ಜಿ.ಇದರಿಂದ ಮೇಣವು ಅದಕ್ಕೆ ಅಂಟಿಕೊಳ್ಳುತ್ತದೆ.
ಹಂತ 4: ನಂತರ, ನಿಮ್ಮ ಕೂದಲು ಬೆಳೆಯುವ ದಿಕ್ಕಿನಿಂದ ವ್ಯಾಕ್ಸ್ ಪಟ್ಟಿಯನ್ನು ನಿಧಾನವಾಗಿ ಎಳೆಯಿರಿ. ಆದರೆ ಈ ವೇಳೆ ಹೆಚ್ಚು ಒತ್ತಡ ಹಾಕದಿರುವುದು ಉತ್ತಮ.
ಹಂತ 5: ನೋವನ್ನು ನಿವಾರಿಸಲು, ತಕ್ಷಣವೇ ನಿಮ್ಮ ಅಂಗೈಯಿಂದ ವ್ಯಾಕ್ಸ್ ಮಾಡಿದ ಜಾಗದ ಮೇಲೆ ಒತ್ತಿರಿ.
ಗಮನಿಸಿ: ವ್ಯಾಕ್ಸಿಂಗ್ ಮಾಡಿದ ನಂತರ ಆ ಜಾಗಕ್ಕೆ ಯಾವುದಾದರೂ ಕ್ರೀಮ್ ಅಥವಾ ಲೋಷನ್ ಸಹ ಹಚ್ಚಿ.



Click it and Unblock the Notifications
