Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ?
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಳಸುವ ಸನ್ ಸ್ಕ್ರೀನ್ ಸುರಕ್ಷಿತವೇ?
ಮನೆಯಿಂದ ಹೊರಗಡೆ ಹೋಗುವ ವೇಳೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸನ್ ಸ್ಕ್ರೀನ್ ನ್ನು ಹಚ್ಚಿಕೊಳ್ಳುವುದು ಸಾಮಾನ್ಯ ವಿಚಾರ. ಸನ್ ಸ್ಕ್ರೀನ್ ಹಚ್ಚಿಕೊಂಡರೆ, ಅದು ಸೂರ್ಯನ ಯುವಿ ಕಿರಣಗಳಿಂದ ನಮ್ಮನ್ನು ರಕ್ಷಿಸುವುದು ಎಂದು ಭಾವಿಸಲಾಗಿದೆ. ಅದೇ ರೀತಿಯಾಗಿ ಬಿಸಿಲಿನಿಂದ ಚರ್ಮಕ್ಕೆ ಆಗುವಂತಹ ಹಲವಾರು ರೀತಿಯ ಹಾನಿ ತಪ್ಪಿಸುವುದು. ಬಿರು ಬಿಸಿಲಿಗೆ ಹೊರಗಡೆ ಕಾಲಿಟ್ಟರೆ ಮೈಯ ಮೇಲೆ ಕೆಂಪು ಕಲೆಗಳು, ಸುಟ್ಟ ಗಾಯ ಹಾಗೂ ಚರ್ಮ ಕಪ್ಪಾಗುವಂತಹ ಸಮಸ್ಯೆಯು ಬರುವುದು.
ಹಿಂದೆ ಮುಂದೆ ನೋಡದೆ ನಾವು ಇಂತಹ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಸನ್ ಸ್ಕ್ರೀನ್ ನ್ನು ಹಚ್ಚುತ್ತೇವೆ. ಆದರೆ ಇದು ಎಷ್ಟು ಸುರಕ್ಷಿತ ಎನ್ನುವುದನ್ನು ನಾವು ತಿಳಿದಿಲ್ಲ. ಫುಡ್ ಆಂಡ್ ಡ್ರಗ್ಸ್ ಅಸೋಸಿಯೇಶನ್(ಎಫ್ ಡಿಎ) ಸನ್ ಸ್ಕ್ರೀನ್ ನ ಕೆಲವೊಂದು ಅಂಶಗಳು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಹೇಳಿವೆ. ಆದರೆ ಇದರಲ್ಲಿರುವಂತಹ ಕೆಲವು ಅಂಶಗಳ ಬಗ್ಗೆ ಪರೀಕ್ಷೆಗಳು ನಡೆಯಬೇಕಾಗಿದೆ ಎಂದು ಹೇಳುತ್ತದೆ.

ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆಯೇ?
ಆದರೆ ಎಫ್ ಡಿಎ ಹೇಳಿದ್ದರೂ ಇದುವರೆಗೆ ಸನ್ ಸ್ಕ್ರೀನ್ ಬಗ್ಗೆ ಇದುವರೆಗೆ ಯಾವುದೇ ರೀತಿಯ ಪರೀಕ್ಷೆಗಳು ಈ ಮಟ್ಟದಲ್ಲಿ ನಡೆದಿಲ್ಲ. ವಿಜ್ಞಾನಿಗಳು ಈಗಲೂ ಸನ್ ಸ್ಕ್ರೀನ್ ಗೆ ಬಳಸಿರುವಂತಹ ರಾಸಾಯನಿಕಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವರು. ಇದರಲ್ಲಿ ಇರುವಂತಹ ಕೆಲವು ಅಂಶಗಳು ಹಾರ್ಮೋನ್ ಮೇಲೆ ಪರಿಣಾಮ ಬೀರಬಹುದು. ಅದೇ ರೀತಿಯಾಗಿ ಇದು ಫಲವತ್ತತೆ ಸಮಸ್ಯೆ, ಮಕ್ಕಳಲ್ಲಿ ಅಂಗವೈಕಲ್ಯ ಮತ್ತು ಕ್ಯಾನ್ಸರ್ ಕೂಡ ಬರಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿರುವರು.
ಸನ್ ಸ್ಕ್ರೀನ್ ನಲ್ಲಿ ಬಳಸಲ್ಪಡುವಂತಹ ಆರು ಸಾಮಾನ್ಯ ಅಂಶಗಳನ್ನು ದೇಹವು ಹೀರಿಕೊಂಡಿದೆ ಮತ್ತು ಇದು ಕೆಲವು ದಿನ ಹಾಗೂ ವಾರಗಳ ಕಾಲ ಹಾಗೆ ಉಳಿಯಬಹುದು ಎಂದು ಹೇಳಲಾಗಿದೆ. ಸನ್ ಸ್ಕ್ರೀನ್ ಹಚ್ಚಿದ ವೇಳೆ ಇದರಲ್ಲಿನ ಕೆಲವು ಅಂಶಗಳು ದೇಹದಲ್ಲಿನ ರಕ್ತದ ಮಟ್ಟವನ್ನು ಎಫ್ ಡಿಎ ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚಿಸಿದೆ ಎಂದು ಅಧ್ಯಯನಗಳು ಹೇಳಿವೆ.

ಸನ್ ಸ್ಕ್ರೀನ್ ನಲ್ಲಿನ ಯುವಿ ಶೋಧಕಗಳ ಪರೀಕ್ಷೆ
ಎಫ್ ಡಿಎ ಕಳೆದ ವರ್ಷ ನಡೆಸಿರುವಂತಹ ಸಂಶೋಧನೆಯ ಪ್ರಕಾರ ಸನ್ ಸ್ಕ್ರೀನ್ ನಲ್ಲಿ ಬಳಸಲ್ಪಡುವಂತಹ ನಾಲ್ಕು ರೀತಿಯ ಯುವಿ ಶೋಧಕ ರಾಸಾಯನಿಕಗಳು ಬಳಸಿದ ಹಲವಾರು ದಿನಗಳ ಕಾಲ ದೇಹದಲ್ಲಿ ಉಳಿದಿರುವುದು ಪತ್ತೆಯಾಗಿದೆ. ಅವುಗಳೆಂದರೆ ಅವೊಬೆಜೊನ್, ಆಕ್ಸಿಬೆನ್ ಜೊನ್, ಆಕ್ಟೊಕ್ರಿಲೀನ್ ಮತ್ತು ಎಕಾಮ್ಸುಲ್ ರಾಸಾಯನಿಕಗಳು.

ಅಧ್ಯಯನಗಳು ಏನು ಹೇಳಿವೆ?
ಈ ನಾಲ್ಕು ರಾಸಾಯನಿಕಗಳ ಹೊರತಾಗಿ ಎಫ್ ಡಿಎಗೆ ಇನ್ನು ಎಂಟು ಅಂಶಗಳು ತುಂಬಾ ಭೀತಿ ಉಂಟು ಮಾಡಿದೆ. ಎಫ್ ಡಿಎ ಇನ್ನು ಸ್ವಲ್ಪ ಮುಂದಕ್ಕೆ ಹೋಗಿ ಹೋಮೋಸಲೇಟ್, ಆಕ್ಟಿಸಾಲೇಟ್ ಮತ್ತು ಆಕ್ಟಿನೊಕ್ಸೇಟ್ ನ್ನು ಸುರಕ್ಷತೆ ದೃಷ್ಟಿಯಿಂದ ಪರೀಕ್ಷೆ ಮಾಡಿದೆ. ಇದಕ್ಕಾಗಿ ಸುಮಾರು 48 ಮಂದಿ ವಯಸ್ಕರ ಮೇಲೆ ಪರೀಕ್ಷೆ ಕೂಡ ಮಾಡಲಾಯಿತು ಮತ್ತು ಅವರ ಮೇಲೆ ಶೇ.75ರಷ್ಟು ಸನ್ ಸ್ಕ್ರೀನ್ ನ್ನು ಹಚ್ಚಲಾಗಿದೆ.
ಈ ಅಧ್ಯಯನದ ವೇಳೆ ಕಂಡುಬಂದಿರುವಂತಹ ಅಂಶವೆಂದರೆ ರಕ್ತದಲ್ಲಿ ಆಕ್ಸಿಬೆನ್ ಜೊನ್ ಅಂಶವು ಮಟ್ಟವು ಅಧಿಕ ಪ್ರಮಾಣದಲ್ಲಿ ಪತ್ತೆಯಾಗಿದೆ. ಮೊದಲ ದಿನ ಒಂದು ಸಲ ಬಳಸಿದ ವೇಳೆ, 2,3 ಮತ್ತು 4ನೇ ದಿನ ಎರಡು ಗಂಟೆಗೊಮ್ಮೆ ಹಚ್ಚಿದ ವೇಳೆ ಇದು ಹೆಚ್ಚಾಗಿದ್ದು ಕಂಡುಬಂದಿದೆ.
ಅಧ್ಯಯನದಲ್ಲಿ ಭಾಗಿಯಾದ ಸುಮಾರು 34 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಮೊದಲ ದಿನ, ಒಂದು ವಾರ, ಎರಡು ವಾರ ಮತ್ತು ಮೂರು ವಾರಗಳ ಕಾಲ ಇದರ ಪರೀಕ್ಷೆಯು ಮುಂದುವರಿದಿದೆ. ಇದರಲ್ಲಿ ಬಳಕೆ ಮಾಡಿದಂತಹ ಆರು ಅಂಶಗಳನ್ನು ದೇಹವು ಹೀರಿಕೊಂಡಿದೆ. ಅಧ್ಯಯನಗಳು ಹೇಳಿರುವ ಪ್ರಕಾರ ರಕ್ತದಲ್ಲಿ ಆಕ್ಸಿಬೆನ್ ಜೊನ್ ಮಟ್ಟವು ಎಫ್ ಡಿಎ ನಿಗದಿ ಮಾಡಿದಕ್ಕಿಂತಲೂ 180 ಪಟ್ಟು ಹೆಚ್ಚಾಗಿತ್ತು. ನಾಲ್ಕು ದಿನಗಳ ಕಾಲ ನಿಯಮಿತವಾಗಿ ಬಳಕೆ ಮಾಡಿದ ವೇಳೆ ಇದು 500 ಪಟ್ಟು ಹೆಚ್ಚಾಗಿರುವುದು ತಿಳಿದುಬಂದಿದೆ.

ಪರ್ಯಾಯ ಏನಿದೆ?
ಸೂರ್ಯವ ಬಿಸಿಲಿನಿಂದಾಗುವ ಹಾನಿ ತಪ್ಪಿಸಲು, ನೆರಿಗೆ, ಗೆರೆ ಇತ್ಯಾದಿಗಳು ಮೂಡದಂತೆ ಮಾಡಲು ಸನ್ ಸ್ಕ್ರೀನ್ ನ್ನು ಪ್ರತಿಯೊಬ್ಬರು ಬಳಕೆ ಮಾಡುವರು. ಆದರೆ ಎಲ್ಲಾ ಸನ್ ಸ್ಕ್ರೀನ್ ಗಳು ಸುರಕ್ಷಿತವಲ್ಲ. ನೀವು ಸನ್ ಸ್ಕ್ರೀನ್ ಬಳಕೆ ಮಾಡುವ ವೇಳೆ ಅದರ ಲೇಬಲ್ ನ್ನು ಓದಿಕೊಳ್ಳಿ. ರಾಸಾಯನಿಕಗಳಿಂತ ಖನಿಜಾಂಶಗಳನ್ನು ಹೊಂದಿರುವ ಸನ್ ಸ್ಕ್ರಿನ್ ಗಳು ಅದ್ಭುತವಾಗಿರುವುದು ಎಂದು ತಜ್ಞರು ಅಭಿಪ್ರಾಯಪಡುವರು.
ನೀವು ಸನ್ ಸ್ಕ್ರೀನ್ ಬಳಸುವ ಬದಲು ಮುಖವನ್ನು ಬಟ್ಟೆಯಿಂದ ಸುರಕ್ಷಿತವಾಗಿ ಮುಚ್ಚಿಕೊಳ್ಳಿ. ಮಾರುಕಟ್ಟೆಯಲ್ಲಿ ಯುಪಿಎಫ್ ಅಂಶವಿರುವಂತಹ ಬಟ್ಟೆಗಳು ಲಭ್ಯವಿದೆ. ಜಿಂಕ್ ಆಕ್ಸೈಡ್ ಅಥವಾ ಟೈಟೇನಿಯಂ ಆಕ್ಸೈಡ್ ಇರುವಂತಹ ಸನ್ ಸ್ಕ್ರೀನ್ ಬಳಕೆ ಮಾಡಿ.



Click it and Unblock the Notifications











