Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಮೊದಲ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಈ ಬಗ್ಗೆ ಇರಲಿ ಎಚ್ಚರ!
ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚಿನ ಯುವಜನತೆಗೆ ಪ್ಯಾಷನ್ ಆಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವುದು ಸಹಜವೇ ಆದರೂ ಕೆಲವು ಬದಲಾವಣೆಗಳನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ಅಗತ್ಯ.
ಟ್ಯಾಟೂ ಹಾಕಿಸಿಕೊಳ್ಳಲು ಹಲವರಿಗೆ ತುಂಬಾ ಇಷ್ಟ, ಆದರೆ ಈ ಬಗ್ಗೆ ಹಲವು ಗೊಂದಲಗಳು ಅವರನ್ನು ಕಾಡುತ್ತಿರುತ್ತದೆ. ಹಲವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳುವಾಗ ಟ್ಯಾಟೂ ಕುರಿತ ಸಾಮಾನ್ಯ ಸಂಗತಿಗಳನ್ನೆ ತಿಳಿದಿರುವುದಿಲ್ಲ. ಆದರೆ ಇಂತಹ ಸಣ್ಣ ಸಂಗತಿಗಳೇ ಕೆಲವು ಬಾರಿ ನಮ್ಮ ನಿರ್ಧಾರದ ಬಗ್ಗೆಯೇ ಸಂಶಯ ಹುಟ್ಟಿಸುತ್ತದೆ.

ಜಾಣ್ಮೆಯಿಂದ ಸರಿಯಾದ ಸ್ಥಳದಲ್ಲಿ, ಪರಿಣಿತ ಟ್ಯಾಟೂ ಕಲಾವಿದರಿಂದ ಟ್ಯಾಟೂ ಹಾಕಿಸದಿದ್ದರೆ ನಿಮ್ಮ ಟ್ಯಾಟೂ ವಿನ್ಯಾಸವೇ ನಿತ್ಯ ದುಸ್ವಪ್ನದಂತೆ ಕಾಡುತ್ತದೆ. ಹಾಗಿದ್ದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನೀವು ತಿಳಿದಿರಲೇಬೇಕಾದ ವಿಷಯಗಳೇನು?, ಯಾವ ವಿಷಯದಲ್ಲಿ ಎಚ್ಚರಿಕೆ ಅಗತ್ಯ? ಎಂಬುದನ್ನು ಈ ಲೇಖನ ನಿಮಗೆ ತಿಳಿಸಿಕೊಡಲಿದೆ.

ಇದು ನಿಮ್ಮದೇ ನಿರ್ಧಾರಕ್ಕೆ?
ನಿಮ್ಮ ಜೀವನದುದ್ದಕ್ಕೂ ನಿಮ್ಮ ಜತೆಗೇ ಬರುವ ಟ್ಯಾಟೂವನ್ನು ಹಾಕಿಸಿಕೊಳ್ಳುವುದು ಒಂದು ದೊಡ್ಡ ನಿರ್ಧಾರ. ಆದ್ದರಿಂದ ನೀವು ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಇದು ನಿಮ್ಮದೇ ನಿರ್ಧಾರವೆಂದು ಹಾಗೂ ಯಾರೂ ಇದಕ್ಕೆ ಪ್ರೇರಣೆ ನೀಡಿಲ್ಲವೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸುತ್ತಮುತ್ತ ಇರುವ ಎಲ್ಲರೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ನೀವು ಟ್ಯಾಟೂ ಹಾಕಿಸಿಕೊಳ್ಳುವ ಅವಶ್ಯವಿಲ್ಲ. ಹಾಗಿದ್ದರೆ ತಾತ್ಕಾಲಿಕ ಟ್ಯಾಟೂ ಹಾಕಿಸಿಕೊಳ್ಳಿ. ನಿಮ್ಮ ಟ್ಯಾಟೂ ನಿರ್ಧಾರಕ್ಕೆ ನಿಮ್ಮ ಬಳಿ ಅಗತ್ಯ, ಸೂಕ್ತ ಕಾರಣಗಳಿರಲಿ.

ವಿನ್ಯಾಸ ಆಯ್ಕೆಗೆ ಸಮಯ ತೆಗೆದುಕೊಳ್ಳಿ
ಟ್ಯಾಟೂ ಹಾಕಿಸಿಕೊಳ್ಳುವ ನಿರ್ಧಾರ ಅಚಲವಾದ ನಂತರ ಯಾವ ವಿನ್ಯಾಸ ಹಾಕಿಸಿಕೊಳ್ಳಲಿ ಎಂಬುದು ಮುಂದಿನ ಗೊಂದಲ. ಇದು ಬಹಳ ಮುಖ್ಯವಾದ ಅಂಶವೂ ಹೌದು. ಸಾಕಷ್ಟು ಆಯ್ಕೆಗಳು ನಿಮ್ಮ ಕಣ್ಣ ಮುಂದಿರುವ ಕಾರಣ ಯಾವ ವಿನ್ಯಾಸ ಯಾವುದಿರಲಿ ಎಂದು ತೀರ್ಮಾನಿಸಲು ನಿಮಗೆ ಗೊಂದಲ ಎನಿಸಬಹುದು. ನಿಮ್ಮ ಜಾಣ್ಮೆ, ಬುದ್ದಿವತಿಕೆಯಿಂದ ವಿನ್ಯಾಸ ಆಯ್ಕೆ ಮಾಡಿ. ಒಮ್ಮೆ ಟ್ಯಾಟೂ ಹಾಕಿಸಿದ ನಂತರ ಅಥವಾ ಕೆಲವು ದಿನಗಳ ನಂತರ ವಿನ್ಯಾಸ ಇಷ್ಟವಾಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಮತ್ತೆ ಲೇಸರ್ ಚಿಕಿತ್ಸೆ ಪಡೆಯಬೇಕಷ್ಟೇ!

ಸಣ್ಣವಿನ್ಯಾಸದ ಮೂಲಕ ಆರಂಭಿಸಿ
ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ಸಣ್ಣ ವಿನ್ಯಾಸವನ್ನು ಆಯ್ಕೆ ಮಾಡುವುದು ಉತ್ತಮ. ಕೆಲವು ದಿನ ಸಮಯದ ನಂತರ ನಿಮಗೆ ಇಷ್ಟವಾದರೆ ಮತ್ತೆ ದೊಡ್ಡ ವಿನ್ಯಾಸಕ್ಕೆ ಪ್ರಯತ್ನಿಸಬಹುದು.

ಯಾವ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು
ದೇಹದ ಯಾವ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂಬುದು ಸಹ ಬಹಳ ಮುಖ್ಯವಾಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಮೀಸಲಿಟ್ಟು ಚಿಂತಿಸಿ ನಂತರ ನಿರ್ಧಾರ ಕೈಗೊಳ್ಳಿ. ಇದು ವಿನ್ಯಾಸದ ಮೇಲೂ ಅನ್ವಯವಾಗಿದೆ. ನಿಗದಿತ ಸ್ಥಳದಲ್ಲೇ ಎಂದು ನೀವು ಮೊದಲೇ ನಿರ್ಣಯಿಸಿದ್ದರೆ, ಜಾಣ್ಮೆಯಿಂದ ನಿರ್ಧಾರ ಕೈಗೊಳ್ಳಿ, ಹಾಕಿಸಿಕೊಳ್ಳುವ ಮುನ್ನ ಎರಡನೇ ಬಾರಿ ಚಿಂತಿಸಿ.

ನೋವಿಗೆ ಸಿದ್ಧರಾಗಿ
ಸಣ್ಣ ಚುಚ್ಚುಮದ್ದಿಗೆ ಹೆದರುವವರು ಟ್ಯಾಟೂ ಹಾಕಿಸಿಕೊಳ್ಳುವುದು ಕಷ್ಟ. ನಿಮಗೆ ಬೇಕಾದ ವಿನ್ಯಾಸವನ್ನು ಸಣ್ಣ ಸೂಜಿಯಿಂದ ಚುಚ್ಚಿ ವಿನ್ಯಾಸಗೊಳಿಸುತ್ತಾರೆ. ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿ. ಆರಂಭದಲ್ಲಿ ಸ್ವಲ್ಪ ನೋವು ಎನಿಸಿದರು ನಂತರ ಅದು ಅಭ್ಯಾಸವಾಗುತ್ತದೆ.

ಕಾಲಮಾನವನ್ನೂ ಗಮನದಲ್ಲಿಡಿ
ನೀವು ಯಾವ ಕಾಲದಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೀರಿ ಎನ್ನುವುದು ಸಹ ಅತೀ ಮುಖ್ಯವಾಗುತ್ತದೆ. ಬೇಸಿಗೆ ಕಾಲದಲ್ಲಿ ಹಾಕಿಸಿಕೊಂಡರೆ ಬೇಸಿಗೆಯ ಬಿಸಿಲಿಗೆ ಉರಿಯಬಹುದು ಅಥವಾ ಬೆವರಿಗೆ ತುರಿಕೆ ಆರಂಭವಾಗುತ್ತದೆ. ತಂಪಾದ ವಾತಾವರಣ ಇದಕ್ಕೆ ಸೂಕ್ತ.

ಹಣದ ಬಗ್ಗೆ ಇರಲಿ ಮುಂಜಾಗ್ರತೆ
ನೀವು ಟ್ಯಾಟೂ ಹಾಕಿಸಿಕೊಳ್ಳವ ವೇಳೆ ಸಣ್ಣ ಪುಟ್ಟ ಬದಲಾವಣೆಯಿಂದಾಗಿ ವಿನ್ಯಾಸ ಬದಲಾಗಬಹುದು. ಅಥವಾ ಅದಕ್ಕೆ ಬಣ್ಣಗಳಿಂದ ವಿನ್ಯಾಸಗೊಳಿಸಲಿ ಹಣ ಹೆಚ್ಚಾಗಬಹುದು. ಹಣದ ವಿಚಾರದಲ್ಲಿ ಮುಕ್ತವಾಗಿರಿ, ಇಲ್ಲವಾದಲ್ಲಿ ವಿನ್ಯಾಸದ ಮೇಲೆ ಪ್ರಭಾವ ಬೀರಬಹುದು.

ಕಲಾವಿದನ ಬಗ್ಗೆ ಕೊಂಚ ಹಿನ್ನಲೆ ವಿಚಾರಿಸಿ
ನಿಮಗೆ ಟ್ಯಾಟೂ ಹಾಕುವ ಕಲಾವಿದ ಸಹ ಮುಖ್ಯವಾಗುತ್ತಾನೆ. ಮೊದಲಿಗೆ ಟ್ಯಾಟೂ ಹಾಕುವ ಸ್ಥಳದ, ಉಪಕರಣಗಳ ಸ್ವಚ್ಛತೆ ಹಾಗೂ ಎಲ್ಲಾ ಅಗತ್ಯ ಉಪಕರಣಗಳು ಇದೆಯೇ ಎಂಬುದನ್ನು ಪರಿಶೀಲಿಸಿ, ನಂತರ ಅವರ ಅನುಭವ, ಕೌಶಲ್ಯದ ಬಗ್ಗೆ ವಿಚಾರಿಸಿ. ಅವರ ಹಿಂದಿನ ಕೆಲಸಗಳನ್ನು ನೋಡಿ. ಇಲ್ಲವಾದಲ್ಲಿ ಇದು ನಿಮ್ಮ ಆರೋಗ್ಯ ಹಾಗೂ ಟ್ಯಾಟೂ ವಿನ್ಯಾಸದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.

ಹಣಕ್ಕಾಗಿ ರಾಜಿಯಾಗಬೇಡಿ
ಉತ್ತಮ ಟ್ಯಾಟೂ ಕಲಾವಿದ ಸಿಕ್ಕಾಗ ಹಣ ವಿಷಯಕ್ಕಾಗಿ ರಾಜಿಯಾಗಿ ನಿರಾಕರಿಸಬೇಡಿ. ಇದು ನಿಮ್ಮ ಜೀವನದುದ್ದಕ್ಕೂ ನಿಮ್ಮ ಜೊತೆಯಲ್ಲಿರುವ, ಅಲ್ಲದೆ ನಿಮ್ಮ ಮೊದಲ ಟ್ಯಾಟೂ ಇದಾಗಿದೆ ಎಂಬುದು ನೆನಪಿನಲ್ಲಿಡಿ. ಇವರು ಉತ್ತಮ ಅನುಭವಿಗಳೂ ಆಗಿರುತ್ತಾರೆ, ಟ್ಯಾಟೂ ಹಾಕಿದ ನಂತರ ಅವರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ.

ಹೆಸರು, ಮೊದಲಕ್ಷರಗಳು ಬೇಡ
ಈ ಒಂದು ತಪ್ಪನ್ನು ಎಲ್ಲರೂ ಮಾಡುತ್ತಾರೆ ಹಾಗೂ ನಂತರ ಪಶ್ಚಾತಾಪ ಪಡುತ್ತಾರೆ. ನೀವು ಆ ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದು ಮುಖ್ಯವಲ್ಲ, ಮುಂದೆ ಅದರ ಪರಿಣಾಮಗಳನ್ನು ಎದುರಿಸುವವರು ನೀವೇ. ಮನಸ್ಥಿತಿಗಳು ಒಂದೇ ಅಗಿರುವುದಿಲ್ಲ ಎಂಬುದನ್ನು ನೆನಪಿಡಿ.



Click it and Unblock the Notifications











