Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರತಿದಿನ ರಾತ್ರಿ ಈ 3 ಬ್ಯೂಟಿ ಟಿಪ್ಸ್ ಪಾಲಿಸಿದರೆ ನಿಮ್ಮ ಸೌಂದರ್ಯ ಹೆಚ್ಚುವುದು
ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸಲ್ಲ ಹೇಳಿ? ಎಲ್ಲರಿಗೂ ತನ್ನ ಮುಖ ನೋಡಲು ತುಂಬಾ ಚೆನ್ನಾಗಿ ಕಾಣಬೇಕು, ವಯಸ್ಸಾಗುತ್ತಿದ್ದರೂ ಯೌವನ ಕಳೆ ಮಾಸಬಾರದು ಎಂದೇ ಬಯಸುತ್ತಾರೆ. ಆದರೆ ಆಕರ್ಷಕ ತ್ವಚೆ ಬೇಕೆಂದು ಬಯಸುವುದಾದರೆ ಕೆಲವೊಂದು ಸರಳ ಬ್ಯೂಟಿ ಟಿಪ್ಸ್ ಪಾಲಿಸಲೇಬೇಕಾಗುತ್ತದೆ.

ಹಾಗಂತ ಸೌಂದರ್ಯ ವೃದ್ಧಿಗೆ ದುಬಾರಿ ಕ್ರೀಮ್ , ಬ್ಯೂಟಿ ಪಾರ್ಲರ್‌ಗೆ ಭೇಟಿ ನೀಡುವುದು ಏನೂ ಬೇಕಾಗಿಲ್ಲ, ರಾತ್ರಿ ಮಲಗುವ ಮುನ್ನ ಒಂದಿಷ್ಟು ಸಮಯ ತ್ವಚೆ ಆರೈಕೆಗಾಗಿ ಮೀಸಲಿಟ್ಟರೆ ಸಾಕು, ಮುಖದಲ್ಲಿ ಬೇಗನೆ ನೆರಿಗೆ ಮೂಡುವುದಿಲ್ಲ ಹಾಗೂ ನೈಸರ್ಗಿಕ ಸೌಂದರ್ಯದಿಂದ ನೀವು ಇತರರ ಗಮನ ಸೆಳೆಯುತ್ತೀರಿ. ಇಲ್ಲಿ ನಾವು ನಿಮ್ಮ ತ್ವಚೆ ಸೌಂದರ್ಯ ಕಾಪಾಡಲು ಮಲಗುವ ಮುಂಚೆ ನೀವು ಮಾಡಬೇಕಾದ ತ್ವಚೆ ಆರೈಕೆಗಳೇನು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

1. ಫೇಶ್‌ವಾಶ್
ಮೊದಲಿಗೆ ನೀವು ಮುಖವನ್ನು ಕ್ಲೆನ್ಸ್ ಮಾಡಬೇಕು. ರಾಸಾಯನಿಕಗಳು ಕಡಿಮೆ ಇರುವ ಫೇಶ್‌ವಾಶ್ ಬಳಸಿ. ಇದರಿಂದ ಮುಖದಲ್ಲಿರುವ ಜಿಡ್ಡಿನಂಶ ಕಡಿಮೆ ಮಾಡಲು ಸಹಕಾರಿ. ಸೋಪ್ ಹಚ್ಚಿ ತೊಳೆಯುವುದಕ್ಕಿಂತ ಫೇಶ್‌ವಾಶ್ ಬಳಸುವುದು ಒಳ್ಳೆಯದು. ಅಲ್ಲದೆ ಮುಖ ತೊಳೆಯುವುದರಿಂದ ಮುಖದಲ್ಲಿ ಮೇಕಪ್‌ನ ಯಾವುದೇ ಅಂಶ ಉಳಿಯುವುದಿಲ್ಲ,ಇದರಿಂದ ತ್ವಚೆಗೆ ಉಸಿರಾಡಲು ಅನುಕೂಲಕರವಾಗಿದೆ.
ಫೇಶ್‌ವಾಶ್ ಮಾಡುವ ಮುನ್ನ ಮುಖದಲ್ಲಿ ಮೇಕಪ್ ಇದ್ದರೆ ಎಣ್ಣೆ ಹಚ್ಚಿ ಅಥವಾ ಕ್ಲೆನ್ಸರ್ ಬಳಸಿ ನಂತರ ಮುಖ ತೊಳೆಯಿರಿ. ಮೇಕಪ್‌ನಲ್ಲಿಯೇ ಮಲಗುವುದರಿಂದ ಮುಖದ ತ್ವಚೆ ಹಾಳಾಗುವುದು ಅಲ್ಲದೆ ತ್ವಚೆಯಲ್ಲಿ ಬೇಗನೆ ನೆರಿಗೆ ಮೂಡುವುದು. ಆದ್ದರಿಂದ ಮಲಗುವ ಮುನ್ನ ಮುಖವನ್ನು ಫೇಶ್‌ವಾಶ್ ಬಳಸಿ ತೊಳೆಯಿರಿ.

2. ಸೆರಮ್ ಬಳಸಿ
ಯಾವಾಗಲೂ ಮಾಯಿಶ್ಚರೈಸರ್ ಬಳಸಿ, ಇದರಿಂದ ತ್ವಚೆ ಒಣಗುವುದು, ಅಕಾಲಿಕ ನೆರಿಗೆ ಇವುಗಳನ್ನು ತಡೆಗಟ್ಟಿ ತ್ವಚೆ ಹೊಳಪಿನಿಂದ ಕೂಡಿರುವಂತೆ ಕಾಪಾಡಬಹುದು. ಇನ್ನು ಮಾಯಿಶ್ಚರೈಸರ್ ಆಗಿ ಜೇನುತುಪ್ಪ ಬಳಸಿದರೆ ಇದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವುದು.

3. ನೈಟ್‌ಕ್ರೀಮ್
ತ್ವಚೆ ಆರೋಗ್ಯಕರವಾಗಿ, ಹೊಳಪಿನಿಂದ ಕೂಡಿರಲು ನೈಟ್ ಕ್ರೀಮ್ ಹಚ್ಚಿ. ಇದು ತ್ವಚೆ ಮಂಕಾಗುವುದನ್ನು ತಡೆಗಟ್ಟುತ್ತದೆ, ಅಲ್ಲದೆ ಇದು ನಿರ್ಜೀವ ತ್ವಚೆಯನ್ನು ಹೋಗಲಾಡಿಸಲು ಸಹಕಾರಿ ಹಾಗೂ ತ್ವಚೆ ಕೂಡ ಮೃದುವಾಗಿರುತ್ತದೆ. ಅಲ್ಲದೆ ಬೆಳಗ್ಗೆ ನಿಮ್ಮ ತ್ವಚೆ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.
ಈ ಮೂರು ಅಂಶಗಳನ್ನು ಪ್ರತಿನಿತ್ಯ ತಪ್ಪದೇ ಮಾಡಬೇಕು. ಇದರ ಜೊತೆಗೆ ವಾರಕ್ಕೊಮ್ಮೆ ಫೇಸ್‌ಮಾಸ್ಕ್ ಹಚ್ಚುವುದು ಒಳ್ಳೆಯದು: ವಾರಕ್ಕೊಮ್ಮೆ ಮುಲ್ತಾನಿಮಿಟಿ ಅಥವಾ ಹಣ್ಣುಗಳಿಂದ ಮಾಡಿದ ಫೇಸ್‌ಪ್ಯಾಕ್ ಮುಖಕ್ಕೆ ಹಚ್ಚಿ. ಇಲ್ಲಿ ನಾವು ಕೆಲ ಫೇಸ್‌ಮಾಸ್ಕ್ ಹೇಳಿದ್ದೇವೆ. ಅವುಗಳನ್ನು ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುವುದು.

ಫೇಸ್ ಮಾಸ್ಕ್
ಮೊಸರು, ಜೇನುತುಪ್ಪ ಮತ್ತು ಬಾಳೆಹಣ್ಣು
- ಬಾಳೆ ಹಣ್ಣನ್ನು ಕೈಯಲ್ಲಿ ಹಿಸುಕಿ ಪೇಸ್ಟ್ ಮಾಡಿ ಒಂದು ಚಮಚ ಗಟ್ಟಿ ಮೊಸರು ಮತ್ತು ಎರಡು ಚಮಚ ಹಸಿ ಜೇನು ಹಾಕಿ ಮಿಶ್ರ ಮಾಡಿ ತ್ವಚೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.
- 5-8 ತಾಜಾ ಸ್ಟ್ರಾಬೆರಿಯನ್ನು ತೊಳೆದುಕೊಂಡು ಅದನ್ನು ರುಬ್ಬಿ ರಸ ತೆಗೆಯಿರಿ.
- ಈ ರಸಕ್ಕೆ ಎರಡು ಚಮಚ ಲಿಂಬೆ ರಸ ಹಾಕಿ.
- ಒಂದು ಚಮಚ ಮೊಸರನ್ನು ಸುಮಾರು 15 ನಿಮಿಷ ಕಾಲ ಬಿಗಿಯಾಗಿ ಬಟ್ಟೆಯಲ್ಲಿ ಕಟ್ಟಿ ನೀರು ತೆಗೆಯಿರಿ. ಉಳಿದ ಗಟ್ಟಿ ಮೊಸರನ್ನು ಮಾತ್ರ ಸ್ಟ್ರಾಬೆರಿ-ಲಿಂಬೆ ಮಿಶ್ರಣಕ್ಕೆ ಹಾಕಿ.
ಬೆಣ್ಣೆಹಣ್ಣು, ಜೇನುತುಪ್ಪ ಮತ್ತು ಕೋಕಾ ಹುಡಿ
ಬೆಣ್ಣೆ ಹಣ್ಣಿಗೆ ಕೋಕಾಹುಡಿ, ಜೇನು ತುಪ್ಪ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.
ಸ್ಟ್ರಾಬೆರಿ, ಮೊಸರು, ಲಿಂಬೆ ಮತ್ತು ಜೇನುತುಪ್ಪ
ಸ್ಕ್ರಬ್ಬಿಂಗ್
ವಾರದಲ್ಲಿ 2-3 ಬಾರಿ ಮುಖವನ್ನು ಸ್ಕ್ರಬ್ಬಿಂಗ್ ಮಾಡಿ. ಒಂದು ಚಮಚ ಆಲೀವ್ ಎಣ್ಣೆಗೆ ಸಕ್ಕರೆ ಹಾಕಿ ಮಿಶ್ರ ಮಾಡಿ ಅದರಿಂದ ಮುಖವನ್ನು ಉಜ್ಜಿದರೆ ನಿರ್ಜೀವ ತ್ವಚೆ ತೆಗೆಯಬಹುದು. ಇದು ಮುಖದ ತ್ವಚೆಯ ಹೊಳಪನ್ನು ಹೆಚ್ಚಿಸುವುದು.



Click it and Unblock the Notifications
