Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ತ್ವಚೆ ಆರೈಕೆಗೆ ತಮ್ಮ ಎಂಜಲನ್ನೇ ಮುಖಕ್ಕೆ ಹಚ್ಚುತ್ತಾರಂತೆ ತಮನ್ನಾ!
ಸೆಲೆಬ್ರಿಟಿಗಳನ್ನು ನೋಡುವಾಗ ಅವರ ಸೌಂದರ್ಯದ ಗುಟ್ಟೇನು? ಅವರು ತಮ್ಮ ತ್ವಚೆ ಆರೈಕೆಗೆ ಏನು ಮಾಡುತ್ತಾರೆ? ಅವರು ಯಾವ ಫೇಶಿಯಲ್ ಮಾಡಿಸುತ್ತಾರೆ ಎಂದೆಲ್ಲಾ ತಿಳಿಯುವ ಕುತೂಹಲ ಹಲವರಲ್ಲಿ ಇರುತ್ತದೆ.
ಆದರೆ ಸಿನಿ ಸ್ಟಾರ್ ತಮನ್ನಾ ತಮ್ಮ ತ್ವಚೆ ಆರೈಕೆಗೆ ತಾವು ಅನುಸರಿಸಿರುವ ವಿಧಾನ ತಿಳಿಸಿದ್ದು ಕೇಳಿದವರಿಗೆ ಹೀಗೂ ಉಂಟೇ... ಎಂದು ಅಚ್ಚರಿಯಾಗದೇ ಇರಲ್ಲ.
ಮಿಲ್ಕ್ ಬ್ಯೂಟಿ ತಮನ್ನಾ ರೂಪವತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಕಲೆರಹಿತ ನುಣಪಾದ ಕೆನ್ನೆ ನೋಡಿದವರಿಗೆ ಇವರಿಗೇನು ಮೊಡವೆ ಸಮಸ್ಯೆಯೇನು ಬರಲ್ವಾ? ತಮ್ಮ ತ್ವಚೆ ಆರೈಕೆಗೆ ಏನು ಮಾಡುತ್ತಾರೆ ಎಂದು ಅನಿಸದೇ ಇರಲ್ಲ.
ಎಲ್ಲರಂತೆ ತಮನ್ನಾ ಅವರಿಗೂ ಮೊಡವೆ ಸಮಸ್ಯೆ ಕಾಡಿತ್ತು, ಅದನ್ನು ಹೇಗೆ ಹೋಗಲಾಡಿಸಿದೆ ಎಂಬುವುದರ ಬಗ್ಗೆ ಅವರೇ ಏನು ಹೇಳಿದ್ದಾರೆ ನೋಡೋಣ ಬನ್ನಿ:

ಮೊಡವೆಗೆ ಎಂಜಲು ಮದ್ದು
ಕೇಳಿದಾಗ ಸ್ವಲ್ಪ ವಿಚಿತ್ರ ಅನಿಸಿದರೂ ತಮನ್ನಾ ತಮ್ಮ ತ್ವಚೆ ಆರೈಕೆ ವಿಧಾನವನ್ನು ಯಾವುದೇ ಹಿಂಜರಿಕೆಯಿಲ್ಲದೆ ಹಂಚಿಕೊಂಡಿದ್ದಾರೆ. ತಾನು ನನ್ನ ಮುಖಕ್ಕೆ ನನ್ನದೇ ಎಂಜಲು ಹಚ್ಚುತ್ತೇನೆ ಎಂಬುವುದಾಗಿ ಹೇಳಿದ್ದಾರೆ,

ತ್ವಚೆ ಆರೈಕೆಗೆ ವಿಚಿತ್ರವಾದ ಯಾವ ವಿಧಾನ ಅನುಸರಿಸುತ್ತೀರಿ ಎಂಬ ಪ್ರಶ್ನೆಗೆ ತಮನ್ನಾ
ನಿಮ್ಮ ತ್ವಚೆ ಆರೈಕೆಗೆ ವಿಚಿತ್ರವಾದ ಯಾವ ವಿಧಾನ ಅನುಸರಿಸುತ್ತೀರಿ ಎಂದು ಪಿಂಕ್‌ವಿಲ್ಲಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಮ್ಮನ್ನಾ ವಿಚಿತ್ರ ಅನಿಸಿದರೂ ಈ ವಿಧಾನ ಅಷ್ಟೇನೂ ಅಪರಿಚಿತವಲ್ಲ, ನಾನು ಬೆಳಗ್ಗೆ ನನ್ನದೇ ಎಂಜಲು ಹಚ್ಚುತ್ತೇನೆ, ಇದು ಮುಖದಲ್ಲಿರುವ ಮೊಡವೆಯನ್ನು ಒಣಗಿಸುವುದು ಎಂದು ಹೇಳಿದ್ದಾರೆ.

ತ್ವಚೆ ತಜ್ಞರ ಸಲಹೆ ಪಡೆಯಲು ತಮನ್ನಾ ಸಲಹೆ
ಏನಾದರೂ ತ್ವಚೆ ಸಮಸ್ಯೆ ಕಾಣಿಸಿದಾಗ ತ್ವಚೆ ತಜ್ಞರ ಸಲಹೆ ಪಡೆಯುವಂತೆ ತಮನ್ನಾ ಹೇಳಿದ್ದಾರೆ. ನಾನು ಕ್ಲೇ ಮಾಸ್ಕ್ ಕೂಡ ಹಾಕಿಲ್ಲ, ಆದರೆ ಎಂಜಲು ಹಚ್ಚುವ ವಿಧಾನ ಬಳಸಲು ಹೇಗೆ ನಿರ್ಧರಿಸಿದೆ ಎಂಬುವುದೇ ನೆನಪಿಲ್ಲ, ಆದರೆ ಎಂಜಲು ಹಾಕಿದ ಬಳಿಕ ಅದರ ಗುಣ ಕಂಡಿದ್ದೇನೆ ಎಂದಿದ್ದಾರೆ.

ಕೊನೆಯದಾಗಿ
ನಿಮ್ಮ ತ್ವಚೆ ಆರೈಕೆಗೆ ಯಾವ ವಿಧಾನ ಬಳಸಬೇಕೆಂಬುವುದು ನಿಮ್ಮ ಇಚ್ಛೆಗೆ ಬಿಟ್ಟದ್ದು. ಈ ಪ್ರಪಂಚದಲ್ಲಿ ತ್ವಚೆ ಸೌಂದರ್ಯಕ್ಕಾಗಿ ಅನೇಕ ವಿಚಿತ್ರವಾದ ವಿಧಾನಗಳನ್ನು ಅನುಸರಿಸುತ್ತಾರೆ, ನಿಮಗೇನಾದರೂ ತ್ವಚೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.



Click it and Unblock the Notifications
