Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಚಳಿಗಾಲ: ಸ್ಟ್ರಾಬೆರ್ರಿಯನ್ನು ಈ 5 ರೀತಿ ಬಳಸಿ ತ್ವಚೆ ಕಾಂತಿ ಹೆಚ್ಚಿಸಬಹುದು
ಚಳಿಗಾಲದಲ್ಲಿ ಸಿಗುವ ಸೀಸನ್ ಫುಡ್‌ಗಳಲ್ಲೊಂದು ಸ್ಟ್ರಾಬೆರ್ರಿ. ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ಇನ್ನು ನಿಮ್ಮ ಮುಖದ ಅಂದ ಹೆಚ್ಚಿಸಲು ಕೂಡ ಬಳಸಬಹುದು. ಇದನ್ನು ಸ್ಕ್ರಬ್ಬರ್, ಫೇಸ್ ಮಾಸ್ಕ್ ಹೀಗೆ ಅನೇಕ ರೀತಿಯಲ್ಲಿ ಬಳಸಿ ನಿಮ್ಮ ಮುಖ ಅಂದ ಹೆಚ್ಚಿಸಬಹುದು.

ನಾವಿಲ್ಲಿ ಸ್ಟ್ರಾಬೆರ್ರಿ ಬಳಸಿ ಮುಖದ ಅಂದ ಹೆಚ್ಚಿಸುವ 5 ವಿಧಾನಗಳ ಬಗ್ಗೆ ಹೇಳಿದ್ದೇವೆ ನೋಡಿ:
1. ಸ್ಟ್ರಾಬೆರ್ರಿ ಮತ್ತು ಹಾಲಿನ ಕೆನೆ
ಇದನ್ನು ಚಳಿಗಾಲ, ಬೇಸಿಗೆ, ಮಳೆಗಾಲ ಹೀಗೆ ಯಾವುದೇ ಸಮಯದಲ್ಲಿ ಬಳಸಿ ಮುಖದ ಕಾಂತಿ ಹೆಚ್ಚಿಸಬಹುದು. ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ ಈ ವಿಧಾನ ನಿಮ್ಮ ತ್ವಚೆ ಸಮಸ್ಯೆ ದೂರ ಮಾಡುವಲ್ಲಿ ತುಂಬಾನೇ ಸಹಕಾರಿ. ಒಂದು ಬೌಲ್‌ಗೆ ಒಂದು ಸ್ಟ್ರಾಬೆರ್ರಿ ಹಾಕಿ ಮ್ಯಾಶ್ ಮಾಡಿ, ಅದಕ್ಕೆ ಹಾಲಿನ ಕೆನೆ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿದರೆ 15-20 ದಿನದಲ್ಲಿ ಮುಖದ ಕಾಂತಿ ಹೆಚ್ಚುವುದು, ಡ್ರೈ ತ್ವಚೆ ಸಮಸ್ಯೆ ಇರಲ್ಲ.
2. ಸ್ಟ್ರಾಬೆರ್ರಿ ಫೇಸ್ ಮಾಸ್ಕ್
ಸ್ಟ್ರಾಬೆರ್ರಿಯನ್ನು ಕೈಯಿಂದಲೇ ಪೇಸ್ಟ್ ರೀತಿ ಮಾಡಿ ಅದಕ್ಕೆ 2 ಚಮಚ ಮೊಸರು, 1 ವಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 2 ಬಾರಿ ಮಾಡಿ. ಎಲ್ಲಾ ಬಗೆಯ ತ್ವಚೆಯವರಿಗೆ ಇದು ಸೂಟ್ ಆಗುತ್ತೆ.
3. ಸ್ಟ್ರಾಬೆರ್ರಿ ಸ್ಕ್ರಬ್'
ಒಂದು ಸ್ಟ್ರಾಬೆರ್ರಿಯನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ಓಟ್ಸ್ ಸೇರಿಸಿ ಮಿಕ್ಸ್ ಮಾಡಿ ಸ್ಕ್ರಬ್ ಮಾಡಿದರೆ ಡೆಡ್‌ಸ್ಕಿನ್ ಹೋಗಿ ಮುಖದ ತ್ವಚೆ ಮೃದುವಾಗುವುದು, ಹೊಳಪು ಹೆಚ್ಚುವುದು.
4. ಸ್ಟ್ರಾಬೆರ್ರಿ ಮತ್ತು ಚಾಕೋಲೆಟ್ ಮಾಸ್ಕ್
ಸ್ಟ್ರಾಬೆರ್ರಿ ಹಾಗೂ ಡಾರ್ಕ್‌ಚಾಕೋಲೆಟ್ ಮಿಕ್ಸ್ ಮಾಡಿ ಆ ಪೇಸ್ಟ್ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುವುದು. ಈ ಮಿಶ್ರಣ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಚಾಕೋಲೆಟ್ ಬದಲಿಗೆ ಕಾಫಿಪುಡಿ ಕೂಡ ಮಿಕ್ಸ್ ಮಾಡಬಹುದು.
5. ಸ್ಟ್ರಾಬೆರ್ರಿ ಹಾಗೂ ನಿಂಬೆರಸ
ಸನ್‌ಬರ್ನ್ ಆಗಿದ್ದರೆ ಹೋಗಲಾಡಿಸಲು ಈ ಮಾಸ್ಕ್ ಪರಿಣಾಮಕಾರಿ. ಸ್ಟ್ರಾಬೆರ್ರಿಗೆ ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಮುಖವನ್ನು ಸ್ಕ್ರಬ್ ಮಾಡಿ ಮುಖದ ಹೊಳಪು ಹೆಚ್ಚುವುದು.



Click it and Unblock the Notifications

