Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೇಸಿಗೆ ಶುರು: ಹೀಗೆ ಮಾಡಿ, ತ್ವಚೆ ತುಂಬಾ ಹೊಳಪಿನಿಂದ ಕೂಡಿರುತ್ತೆ
ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆಯಲ್ಲಿ ಬದಲಾವಣೆಗಳನ್ನು ಮಾಡಬೇಕು. ಇದೀಗ ಚಳಿಗಾಲ ಮುಗೀತಾ ಬಂದಿದೆ, ಇನ್ನೇನು ಬೇಸಿಗೆಕಾಲ ಶುರುವಾಗುವುದು. ಆಯಾ ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆ ಮಾಡುತ್ತಿದ್ದರೆ ನಿಮ್ಮ ತ್ವಚೆ ತುಂಬಾನೇ ಚೆನ್ನಾಗಿರುತ್ತದೆ.
ಬೇಸಿಗೆ ಕಾಲದಲ್ಲಿ ತ್ವಚೆ ಆರೈಕೆ ಕಡೆ ನೀವು ಚಳಿಗಾಲದಲ್ಲಿ ಮಾಡಿದಂತೆ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಸಮಸ್ಯೆಯನೇ ಬೇರೆ ಇರುತ್ತದೆ. ತ್ವಚೆಯಲ್ಲಿ ತೇವಾಂಶ ಕಡಿಮೆಯಾಗುವುದು, ಸ್ಕಿನ್ ಟ್ಯಾನ್ ಆಗುವುದು, ಬೆವರು ದುರ್ವಾಸನೆ ಮಂತಾದ ಅನೇಕ ತ್ವಚೆ ಸಮಸ್ಯೆಗಳು ಇರುತ್ತದೆ. ನಿಮ್ಮ ಆರೈಕೆ ಸರಿಯಾಗಿದ್ದರೆ ಏನೂ ತೊಂದರೆಯಿಲ್ಲ.
ಬೇಸಿಗೆಯಲ್ಲಿ ನಿಮ್ಮ ತ್ವಚೆ ಆರೈಕೆಯಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳಿವು ನೋಡಿ:

1. ಮಾಯಿಶ್ಚರೈಸರ್:
ಯಾವುದೇ ಕಾಲವಾಗಿರಲಿ ನೀವು ನಿಮ್ಮ ತ್ವಚೆ ಮಾಯಿಶ್ಚರೈಸರ್ ಆಗಿ ಇಟ್ಟುಕೊಳ್ಳಬೇಕು. ಆದ್ದರಿಂದ ಯಾವುದೇ ಕಾಲವಾಗಿರಲಿ 8 ಲೋಟ ನೀರು ಕುಡಿಯಬೇಕು. ಬೇಸಿಗೆ ಕಾಲದಲ್ಲಿ ನೀರಿನ ಜೊತೆಗೆ ಒಂದೆರಡು ಲೋಟ ತಾಜಾ ಹಣ್ಣಿನ ಜ್ಯೂಸ್ ಕುಡಿಯಿರಿ. ದೇಹದಲ್ಲಿ ನೀರಿನಂಶ ಚೆನ್ನಾಗಿದ್ದರೆ ಮುಖದಲ್ಲಿ ಗ್ಲೋ ಸಿಗುವುದು.

2. SPF
ಬೇಸಿಗೆಯಲ್ಲಿ ಮೈಯೆಲ್ಲಾ ಬೆವರುವುದು, ಅಷ್ಟು ಮಾತ್ರವಲ್ಲ ಬಿಸಿಲಿಗೆ ಹೋದಾಗ ಟ್ಯಾನ್ ಆಗುವುದು ಈ ಸಮಸ್ಯೆ ತಡೆಗಟ್ಟಲು ಸನ್‌ಸ್ಕ್ರಿನ್ ಲೋಷನ್ ಬಳಸಿ. ನೀವು ಬಳಸುವ SPF 40 ಮೇಲಿರಲಿ.
ನಿಮ್ಮದು ಎಣ್ಣೆ ಅಥವಾ ಮೊಡವೆ ಇರುವ ತ್ವಚೆಯಾಗಿದ್ದರೆ ಜೆಲ್ ರೀತಿಯ, ಲೈಟ್ ಮ್ಯಾಟ್ ಸನ್‌ಸ್ಕ್ರೀನ್ ಲೋಷನ್ ಬಳಸಿ. ನಿಮ್ಮದು ನಾರ್ಮಲ್ ಅಥವಾ ಡ್ರೈ ಸ್ಕಿನ್ ಆಗಿದ್ದರೆ ಕ್ರೀಮ್ ರೀತಿಯ ಸನ್‌ಸ್ಕ್ರೀನ್ ಬಳಸಿ.

3. ಎಕ್ಸ್‌ಫೋಲೆಟಿಂಗ್
ವಾರಕ್ಕೊಮ್ಮೆ ಅಥವಾ ಎರಡು ಬಾರಿ ಎಕ್ಸ್‌ಫೋಲೆಟ್ ಮಾಡಿ. ಎಕ್ಸ್‌ಫೋಲೆಟ್ ಮಾಡುವುದರಿಂದ ಮುಖದಲ್ಲಿರುವ ರಂಧ್ರಗಳು ಮುಚ್ಚುವುದು. ನೀವು ಸಿಲ್ಕ್ ಪೀಲ್ಸ್, ಕಾರ್ಬನ್ ಪೀಲ್ಸ್ ವಾರಕ್ಕೊಮ್ಮೆ ಮಾಡಿ. ಹೀಗೆ ಮಾಡುವುದರಿಂದ ಸೆಕೆಗಾಲದಲ್ಲೂ ನಿಮ್ಮ ತ್ವಚೆ ಹೊಳೆಯುವಂತೆ ಇಡಬಹುದು.

4. ಆಹಾರಕ್ರಮ
ಬೇಸಿಗೆಯಲ್ಲಿ ಆಹಾರಕ್ರಮದ ಕಡೆ ಗಮನ ನೀಡಿ. ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಹೆಚ್ಚು ಖಾರ ಅಥವಾ ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ. ಜಂಕ್ ಫುಡ್ಸ್ ದೂರವಿಡಿ. ಜೊತೆಗೆ ಕೆಲವೊಮ್ಮೆ ಆಹಾರಕ್ರಮದ ಮೂಲಕ ದೇಹವನ್ನು ಡಿಟಾಕ್ಸ್ ಮಾಡಿ. ಇನ್ನು ಒಂದು ಲೀಟರ್ ನೀರಿಗೆ ಸ್ವಲ್ಪ ಸೌತೆಕಾಯಿ , 2 ಪುದೀನಾ ಎಲೆ, ಅರ್ಧ ನಿಂಬು ಕತ್ತರಿಸಿ ಹಾಕಿ ಆ ನೀರನ್ನು ಕುಡಿದರೆ ಇದರಿಂದ ಕೂಡ ದೇಹ ಡಿಟಾಕ್ಸ್ ಆಗುವುದು.

5. ವರ್ಕೌಟ್ ಮಾಡಿ
ವರ್ಕೌಟ್ ಮಾಡುವುದರಿಂದ ಆರೋಗ್ಯಕ್ಕೆ ಹಾಗೂ ತ್ವಚೆಗೆ ಒಳ್ಳೆಯದು, ವರ್ಕೌಟ್ ಮಾಡುವುದರಿಂದ ತ್ವಚೆ ಹೊಳಪಿನಿಂದ ಕೂಡಿರುತ್ತದೆ. ವರ್ಕೌಟ್ ಮಾಡಿದ ಬಳಿಕ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ, ತ್ವಚೆಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಇದರಿಂದ ತ್ವಚೆಯ ಹೊಳಪು ಹೆಚ್ಚುವುದು.



Click it and Unblock the Notifications
