Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತ್ವಚೆಯ ಅಂದಕ್ಕಾಗಿ ತಾವು ಫಾಲೋ ಮಾಡುತ್ತಿರುವ 6 ಟಿಪ್ಸ್ ಫ್ಯಾನ್ಸ್‌ಗೆ ತಿಳಿಸಿದ ಸಮಂತಾ ಪ್ರಭು
ದಕ್ಷಿಣ ಭಾರತದ ಪ್ರಸಿದ್ಧ ತಾರೆ ಸಮಂತಾ ಪ್ರಭು ಅವರಿಗೆ ಕೋಟಿಗಟ್ಟಲೆ ಫಾಲೋವರ್ಸ್ ಇದ್ದಾರೆ. ಅವರ ಸೌಂದರ್ಯ ನೋಡಿದವರು ಅವರ ಸ್ಕಿನ್ ಕೇರ್ ಬಗ್ಗೆ ತಿಳಿದುಕೊಳ್ಳಲು ಬಯಸುವುದಂತೂ ಖಂಡಿತ. ವಯಸ್ಸಾಗುತ್ತಿದ್ದಂತೆ ಅಂದ ಕಮ್ಮಿಯಾಗುವುದು ಅಂತಾರೆ, ಆದರೆ ಈ ನಟಿಯ ಚೆಲುವು ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದರೆ ತಪ್ಪಲ್ಲ.
ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ 13 ಮಿಲಿಯನ್‌ಗೂ ಅಧಿಕ ಫ್ಯಾನ್ ಫಾಲೋವರ್ಸ್ ಇದ್ದಾರೆ. ಅವರು ತಮ್ಮ ಸಾಮಾಜಿಕ ತಾಣದಲ್ಲಿ ಫ್ಯಾನ್ಸ್‌ಗಾಗಿ ಕೆಲವೊಂದು ಬ್ಯೂಟಿ ಸೀಕ್ರೆಟ್ ಹೇಳಿದ್ದಾರೆ, ಏನೆಂದು ನೋಡೋಣ:

ಸ್ಟೀಮಿಂಗ್
ನಿಮ್ಮ ತ್ವಚೆಯ ತೇವಾಂಶ ಕಾಪಾಡಲು, ತ್ವಚೆ ಡ್ರೈಯಾಗುವುದನ್ನು ತಡೆಗಟ್ಟಲು ಸ್ಟೀಮಿಂಗ್ ಬೆಸ್ಟ್ ಅಂತಾರೆ ಸಮಂತಾ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಬಿಸಿ ನೀರು ಹಾಗೂ ಸ್ವಚ್ಛವಾದ ಟವೆಲ್ ಬಳಸಿ ಸ್ಟೀಮಿಂಗ್ ಮಾಡಿ.

ಮಿನಿಮಮ್ ಮೇಕಪ್
ನೀವು ಸಮಂತಾ ಫೋಟೋಗಳನ್ನು ಗಮನಿಸಿದರೆ ಅವರು ತುಂಬಾ ಕಡಿಮೆ ಮೇಕಪ್ ಮಾಡಿಕೊಳ್ಳುತ್ತಾರೆ. ಕೆಲವೊಂದು ಫೋಟೋಶೂಟ್, ಸಿನಿಮಾ ಬಿಟ್ಟರೆ ಅವರು ಟ್ರಿಪ್ ಹೋಗುವಾಗ, ಹೊರಗಡೆ ಹೋಗುವಾಗ ತುಂಬಾ ಮಿನಿಮಮ್ ಮೇಕಪ್ ಮಾಡಿರುತ್ತಾರೆ.

ವಿಟಮಿನ್ ಇನ್‌ಫ್ಯೂಸಿನ್ ಥೆರಪಿ
ಸಮಂತಾ ವಿಟಮನ್ ಇನ್‌ಫ್ಯೂಸಿನ್ ಥೆರಪಿ ಮಾಡಿಸುತ್ತಾರೆ. ಇದು ಮುಖದಲ್ಲಿ ನೆರಿಗೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಡಬಲ್ ಮಾಸ್ಕಿಂಗ್
ಒಂದು ಬಗೆಯ ಫೇಸ್ ಮಾಸ್ಕ್ ಬಳಸುವ ಬದಲಿಗೆ ಡಬಲ್ ಫೇಸ್ ಮಾಸ್ಕ್ ಬಳಸಲು ಸಮಂತಾ ಇಚ್ಚಿಸುತ್ತಾರೆ. ನೀವು ನಿಮ್ಮ ತ್ವಚೆಗೆ ಹೊಂದುವ ಎರಡು ಫೇಸ್ ಮಾಸ್ಕ್ ಬಳಸಿ.

ತ್ವಚೆ ಹೊಳಪು ಹೆಚ್ಚಿಸುವ ಯೋಗ
ಯೋಗದಿಂದ ತ್ವಚೆಯ ಹೊಳಪು ಸ್ವಭಾವಿಕವಾಗಿ ಹೆಚ್ಚುವುದು. ಯೋಗದಿಂದ ದೇಹದೊಳಗಿನ ಕಶ್ಮಲ ದೂರಾಗುವುದು, ಇದರಿಂದ ಮುಖದಲ್ಲಿ ಹೊಳಪು ಹೆಚ್ಚುವುದು.

ಹಸಿರು ತರಕಾರಿ, ಹಣ್ಣುಗಳು
ಸಮಂತಾ ಆರೋಗ್ಯಕರ ಆಹಾರಕ್ರಮದ ಕಡೆಗೆ ತುಂಬಾ ಗಮನ ನೀಡುತ್ತಾರೆ. ಅವರು ಹಸಿರು ತರಕಾರಿ ತಮ್ಮ ಆಹಾರಕ್ರಮದಲ್ಲಿ ಹೆಚ್ಚಾಗಿ ಸೇವಿಸುತ್ತಾರೆ, ಗ್ರೀನ್ ಜ್ಯೂಸ್ ಕುಡಿಯುತ್ತಾರೆ. ಇವೆಲ್ಲಾ ತ್ವಚೆಯ ಅಂದ ಹೆಚ್ಚಿಸುವುದು.



Click it and Unblock the Notifications
