ಹೀಗೆ ಮಾಡಿದರೆ ಚಳಿಗಾಲದಲ್ಲಿ ತ್ವಚೆ ಸಮಸ್ಯೆಯೇ ಇರಲ್ಲ

By Shreeraksha

ಚಳಿಗಾಲ ಆರಂಭ ಅಂದ್ರೆ ಅದರ ಜೊತೆಗೆ ಚರ್ಮದ ಸಮಸ್ಯೆಗಳೂ ಶುರುವಾಗುತ್ತವೆ. ಚಳಿಯ ವಾತಾವರಣವನ್ನು ನಾವು ಎಷ್ಟು ಇಷ್ಟ ಪಡುತ್ತೇವೆಯೋ ಅದು ತರುವ ಸಮಸ್ಯೆಯನ್ನು ಸಹ ಅಷ್ಟೇ ತಿರಸ್ಕಾರ ಮಾಡುತ್ತೇವೆ. ಮೂಳೆಗಳಿಂದ ಹಿಡಿದು ಚರ್ಮದವರೆಗೂ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಎಲ್ಲದಕ್ಕೂ ಒಂದು ಪರಿಹಾರವಿದೆ.

ನಿಮ್ಮ ಚರ್ಮವನ್ನು ನೀವು ಎಂದಿಗೂ ನಿರ್ಲಕ್ಷಿಸಬಾರದು, ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ. ಚಳಿಗಾಲದಲ್ಲಿ ಚರ್ಮದ ರಕ್ಷಣೆಯು ಸರಳವಾಗಿದ್ದು, ಇದನ್ನು ಅನಸರಿಸಿದರೆ ಚಳಿಗಾಲದುದ್ದಕ್ಕೂ ನಿಮ್ಮ ಚರ್ಮವನ್ನು ಸುಂದರವಾಗಿರುವಂತೆ ಮಾಡಬಹುದು. ಅದಕ್ಕಾಗಿ ಈ ನೀವು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು ಅಷ್ಟೇ.

ಚಳಿಗಾಲದಲ್ಲಿ ಚರ್ಮ ರಕ್ಷಣೆಗೆ ನೀವು ಅನುಸರಿಸಬೇಕಾದ ನಿಯಮಗಳು:

ಚಳಿಗಾಲದಲ್ಲಿ ಚರ್ಮ ರಕ್ಷಣೆಗೆ ನೀವು ಅನುಸರಿಸಬೇಕಾದ ನಿಯಮಗಳು:

ನಿಮ್ಮ ಚರ್ಮ ರಕ್ಷಣೆಯ ಗೇಮ್‌ನ್ನು ಬಲವಾಗಿರಿಸಿಕೊಳ್ಳಿ. ಸೂರ್ಯನ ತಾಪ, ಅತಿಯಾದ ಕೋಲ್ಡ್ ವಾತಾವರಣದಿಂದ ನಿಮ್ಮ ಸೂಕ್ಷ್ಮ ತ್ವಚೆಯನ್ನು ಕಾಪಾಡುವುದು ಅತೀಮುಖ್ಯ. ಚಳಿಗಾಲವು ಕಿರಿಕಿರಿ, ಶುಷ್ಕ ಮತ್ತು ನಿರ್ಜಲೀಕರಣಗೊಂಡ ಚರ್ಮಕ್ಕೆ ಕಾರಣವಾಗಬಹುದು. ಸೆರಾಮೈಡ್‌ಗಳು , ವಿಟಮಿನ್ ಸಿ, ನಿಯಾಸಿನಮೈಡ್ ಮತ್ತು ಮಾಯಿಶ್ಚರೈಸಿಂಗ್ ಗುಣಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಚರ್ಮದ ರಕ್ಷಣೆಗಾಗಿ ಬಳಸಿ.

 ಎಕ್ಸ್ಫೋಲಿಯೇಶನ್ ಅನ್ನು ಕಡಿಮೆ ಮಾಡಿ:

ಎಕ್ಸ್ಫೋಲಿಯೇಶನ್ ಅನ್ನು ಕಡಿಮೆ ಮಾಡಿ:

ಚಳಿಗಾಲ ಆರಂಭವಾದ ಬಳಿಕ ಎಕ್ಸ್ಫೋಲಿಯೇಶನ್‌ನ್ನು ಕಡಿಮೆ ಮಾಡಿ. ನೀವು ಆಗಾಗ್ಗೆ ಎಕ್ಸ್ಫೋಲಿಯೇಟ್ ಮಾಡುವವರಾದರೆ ಅದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿಗೆ ಇಳಿಸಿಕೊಳ್ಳಿ. ನೀವು ಏನೇ ಮಾಡಿದರೂ, ಅದನ್ನು ಅತಿಯಾಗಿ ಮಾಡಬೇಡಿ. ಚರ್ಮದಲ್ಲಿನ ಕಿರಿಕಿರಿಯನ್ನು ತಡೆಗಟ್ಟಲು ಮನೆಯಲ್ಲಿಯೇ ಬಳಸಿದ ಎಕ್ಸ್ಫೋಲಿಯೇಟರ್‌ಗಳಿಗೆ ಹೆಚ್ಚು ಆದ್ಯತೆ ಕೊಡಿ.

 ಸನ್‌ಸ್ಕ್ರೀನ್ ಅನ್ನು ಮರೆಯಬೇಡಿ:

ಸನ್‌ಸ್ಕ್ರೀನ್ ಅನ್ನು ಮರೆಯಬೇಡಿ:

ಯುವಿ ಕಿರಣಗಳ ವಿರುದ್ಧ ನಿಮ್ಮ ಚರ್ಮವನ್ನು ರಕ್ಷಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ಸನ್‌ಸ್ಕ್ರೀನ್ ಬಳಸುವುದು ಚಳಿಗಾಲದಲ್ಲಿ ನಿಮ್ಮ ಚರ್ಮ ರಕ್ಷಣೆಯ ಪ್ರಮುಖ ದಿನಚರಿಯಾಗಬೇಕು. ಏಕೆಂದರೆ ಇದು ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಯುವಿ ಕಿರಣಗಳು ನಿಮ್ಮ ಚರ್ಮದಲ್ಲಿನ ಕೊಲಾಜೆನ್ ಅನ್ನು ನಾಶಮಾಡಿ ಅಕಾಲಿಕ ವಯಸ್ಸಿನ ಚರ್ಮಕ್ಕೆ ಕಾರಣವಾಗುತ್ತದೆ. ಚರ್ಮದ ತೊಂದರೆಗಳನ್ನು ತಪ್ಪಿಸಲು ನೀವು ಪ್ರತಿ 2-3 ಗಂಟೆಗಳಿಗೊಮ್ಮೆ (ವಿಶೇಷವಾಗಿ ನೀವು ಹೊರಗೆ ಹೋಗುತ್ತಿದ್ದರೆ) ಸನ್‌ಸ್ಕ್ರೀನ್ ಬಳಸುತ್ತಿರಿ. ಇದರಿಂದ ಚರ್ಮದ ಕುಗ್ಗುವಿಕೆ, ಸುಕ್ಕುಗಳು ಇಂತಹ ಚರ್ಮದ ಸಮಸ್ಯೆಗಳನ್ನು ತಡೆಗಟ್ಟಬಹುದು.

ನಿಮ್ಮ ರಾತ್ರಿ ದಿನಚರಿಯನ್ನು ಪರಿಶೀಲಿಸಿ:

ನಿಮ್ಮ ರಾತ್ರಿ ದಿನಚರಿಯನ್ನು ಪರಿಶೀಲಿಸಿ:

ನಿಮ್ಮ ಚರ್ಮವು ರಾತ್ರಿಯಲ್ಲಿ ಸ್ವಾಭಾವಿಕವಾಗಿ ರಿಪೇರಿಯಾಗುತ್ತದೆ. ಆದ್ದರಿಂದ ನಿಮ್ಮ ರಾತ್ರಿಯ ಸಮಯವನ್ನು ಚರ್ಮದ ಚಿಕಿತ್ಸೆಯ ಬಗ್ಗೆ ಮತ್ತು ನಿಮ್ಮ ಚರ್ಮಕ್ಕೆ ಅಗತ್ಯವಿರುವದನ್ನು ನೀಡುವಂತೆ ನೋಡಿಕೊಳ್ಳಿ. ಚಳಿಯ ವಾತಾವರಣದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಲು ಪಾಲಿಹೈಡ್ರಾಕ್ಸಿ ಆಮ್ಲಗಳು, ರೆಟಿನಾಲ್ ಮತ್ತು ಸೆರಾಮೈಡ್‌ಗಳನ್ನು ನೋಡಿ.

ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ತೈಲಗಳನ್ನು ತಪ್ಪಿಸಿ:

ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ತೈಲಗಳನ್ನು ತಪ್ಪಿಸಿ:

ಚಳಿಗಾಲ ಎಂದು ನಿಮ್ಮ ಚರ್ಮವನ್ನು ಮಾಯಿಶ್ಚರೈಸರ್ ಮಾಡಿಕೊಳ್ಳಬೇಕು ಎಂದರ್ಥವಲ್ಲ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಅಥವಾ ಮೊಡವೆ ಪೀಡಿತ ಚರ್ಮವನ್ನು ಹೊಂದಿದ್ದರೆ, ಚರ್ಮದ ಮೇಲೆ ಎಣ್ಣೆಯನ್ನು ಬಳಸುವುದರಿಂದ ಬ್ರೇಕೌಟ್ಸ್ಗೆ ಕಾರಣವಾಗಬಹುದು. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಚರ್ಮರೋಗ ತಜ್ಞರು ಒಂದು ಲೇಯರ್ ಮಾಯಿಶ್ಚರೈಸರ್ ಅನ್ನು ಬಳಸಲು ಶಿಫಾರಸು ಮಾಡುತ್ತಾರೆ.

ತೇವಾಂಶ, ತೇವಾಂಶ!:

ತೇವಾಂಶ, ತೇವಾಂಶ!:

ಶುಷ್ಕ ಚರ್ಮ ಹೊಂದಿರುವವರಿಗೆ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಮೃದುಗೊಳಿಸಲು ಮಾಯಿಶ್ಚರೈಸ್ ಮಾಡುವುದು ಅತ್ಯಗತ್ಯ. ಚರ್ಮದ ರಕ್ಷಣೆಗಾಗಿ ನೀವು ಬಳಸುವ ಸೂತ್ರವು ಚರ್ಮದ ಜಿಡ್ಡಿಗೆ ಕಾರಣವಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಡಿ ಆಹಾರದಲ್ಲಿ ಸೇರಿಸಿ:

ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಡಿ ಆಹಾರದಲ್ಲಿ ಸೇರಿಸಿ:

ಮಾಲಿನ್ಯ ಮತ್ತು ಯುವಿ ಹಾನಿಯಿಂದ ರಕ್ಷಿಸಲು

ಆ್ಯಂಟಿಆಕ್ಸಿಡೆಂಟ್‌ಗಳು ಇರುವ ಸಮೃದ್ಧ ಆಹಾರವನ್ನು ಸೇವಿಸಿ. ನಿಮ್ಮ ಚಳಿಗಾಲದ ಆಹಾರದಲ್ಲಿ ವಿಟಮಿನ್ ಡಿ ಅನ್ನು ಸೇರಿಸುವುದರಿಂದ ಮೊಡವೆ, ರೊಸಾಸಿಯಾ ಮತ್ತು ಎಸ್ಜಿಮಾದಂತಹ ಉರಿಯೂತದ ಪರಿಸ್ಥಿತಿಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಈ ವಿಟಮಿನ್ ಕೊರತೆಯು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಚಳಿಗಾಲದ ಚರ್ಮದ ರಕ್ಷಣೆಯ ದಿನಚರಿಯಲ್ಲಿ

ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಡಿ ಸೇರಿಸುವುದು ಬಹಳ ಮುಖ್ಯ.

English summary

Simple Winter Skincare Rules To Follow For The Best Skin

Here are simple winter skincare rules to follow the best skin, read on...
Story first published: Thursday, December 3, 2020, 15:13 [IST]
X
Desktop Bottom Promotion