Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮುಟ್ಟಿನ ಸಮಯದಲ್ಲಿ ಕಾಡುವ ಮೊಡವೆ: ಕಾರಣವೇನು? ತಡೆಗಟ್ಟುವುದು ಹೇಗೆ?
ಹೆಚ್ಚಿನ ಹೆಣ್ಮಕ್ಕಳಿಗೆ ಮದುವೆ ಸಮಯದಲ್ಲಿ ಕಾಡುವ ಸಮಸ್ಯೆಯೆಂದರೆ ಮೊಡವೆ. ಆ ಸಮಯ ಹತ್ತಿರ ಬರುತ್ತಿರುವಾಗ ಮುಖದಲ್ಲಿ ಒಂದೋ ಅಥವಾ ಎರಡು ಇನ್ನು ಕಲೆವರಿಗೆ ತುಂಬಾ ಮೊಡವೆ ಬರಲಾರಂಭಿಸುತ್ತದೆ, ಇದರಿಂದ ಮುಖದಲ್ಲಿ ಕಲೆಯೂ ಉಂಟಾಗುವುದು.
ಮುಟ್ಟಿನ ಸಮಯದಲ್ಲಿ ಮೊಡವೆ ಹೆಚ್ಚಲು ಕಾರಣವೇನು, ಮೊಡವೆ ಕಲೆ ಹೋಗಲಾಡಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ:

ಮುಟ್ಟಿನ ಸಮಯದಲ್ಲಿ ಮೊಡವೆ ಹೆಚ್ಚುವುದೇಕೆ?
ಡಾಕ್ಟರ್ ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂನ್ಸರ್ ಆಗಿರುವ ಡಾ. ತಾನಿಯಾ ಅವರು ಮುಟ್ಟಿನ ಸಮಯದಲ್ಲಿ ಮೊಡವೆ ಏಕೆ ಬರುತ್ತದೆ ಎಂಬುವುದನ್ನು ವಿವರಿಸಿದ್ದಾರೆ.
ಮುಟ್ಟಿನ ಸಮಯದಲ್ಲಿ ಕಾಡುವ ಮೊಡವೆ ಸಮಸ್ಯೆಗೆ ನಿಮ್ಮ ಟೆಸ್ಟೋಸ್ಟಿರೋನೆ ಕಾರಣವಾಗಿದೆ. ಮಹಿಳೆಯರ ದೇಹದಲ್ಲಿ ಟೆಸ್ಟೋಸ್ಟಿರೋನೆ ಪ್ರಮಾಣವನ್ನು ಈಸ್ಟ್ರೋಜಿನ್ ಹಾಗೂ ಪ್ರೊಗೆಸ್ಟಿರೋನೆ ನಿಯಂತ್ರಿಸುತ್ತದೆ ಆದರೆ ಮುಟ್ಟಿನ ಸಮಯದಲ್ಲಿ ಟೆಸ್ಟೋಸ್ಟಿರೋನೆ ನಿಯಂತ್ರಣದಲ್ಲಿರುವುದಿಲ್ಲ. ಇದರ ಪ್ರಮಾಣ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ ಮುಖದಲ್ಲಿ ಮೊಡವೆ ಏಳುವುದು.

ಮುಟ್ಟಿನ ಸಮಯದಲ್ಲಿ ಕಾಡುವ ಮೊಡವೆ ಮುಖದಲ್ಲಿ ಕಲೆ ಹೆಚ್ಚುವುದೇ?
ಮುಟ್ಟಿನ ಸಮಯದಲ್ಲಿ ಏಳುವ ಮೊಡವೆ ಮುಟ್ಟಿನ ಚಕ್ರ ಮುಗಿದಂತೆ ಅದು ಕೂಡ ಮಾಯವಾಗುವುದು, ಆದರೆ ಅದನ್ನು ಚಿವುಟುವುದು ಮಾಡಿದರೆ ಮೊಡವೆ ಕಲೆ ಉಳಿಯುವ ಸಾಧ್ಯತೆ ಇದೆ. ಇನ್ನು ಮುಟ್ಟಿನ ಸಮಯದಲ್ಲಿ ಬರುವ ಮೊಡವೆ ಸಮಸ್ಯೆ ತಿಂಗಳು ಪೂರ್ತಿ ಇರುವುದಿಲ್ಲ. ಆದ್ದರಿಂದ ಈ ಕುರಿತು ಚಿಂತಿಸಬೇಕಾಗಿಲ್ಲ.
ಅದೇ ಮೊಡವೆ ತುಂಬಾ ವಿಪರೀತ ಕಾಡುತ್ತಿದ್ದರೆ ಆಗ ನೀವು ಬೇಕಾದರೆ ಚರ್ಮರೋಗ ತಜ್ಞರ ಬಳಿ ಚಿಕಿತ್ಸೆ ಪಡೆಯಬಹುದು.

ಈ ಮೊಡವೆ ಸಮಸ್ಯೆ ತಡೆಗಟ್ಟಲು ಏನಾದರೂ ಮಾರ್ಗವಿದೆಯೇ?
ದೇಹದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ಈ ಮೊಡವೆ ಉಂಟಾಗುವುದು. ಈ ಮೊಡವೆ ಸಮಸ್ಯೆ ತಡೆಗಟ್ಟಲು ಕೆಲವೊಂದು ಸೋಪ್ ಅಥವಾ ಕ್ರೀಮ್ ಸಹಕಾರಿ. ಅವುಗಳನ್ನು ಬಳಸಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುವುದು. ನಿಮಗೆ ವೈದ್ಯರು salicylic acid ಅಥವಾ benzoyl peroxide ಇರುವ ಸೋಪ್ ಬಳಸಲು ಸೂಚಿಸಬಹುದು. ಇದು ಉರಿಯೂತ ಕಡಿಮೆ ಮಾಡುವುದು. ಅಲ್ಲದೆ ಮೊಡವೆ ಬಂದಾಗ ಚಿವುಟುವುದು, ತುರಿಸುವುದು ಮಾಡಬೇಡಿ, ಇಲ್ಲದಿದ್ದರೆ ಮೊಡವೆ ಕಲೆಗಳು ಉಳಿಯುವುದು.



Click it and Unblock the Notifications
