Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಈ ಕೊರಿಯನ್ ಪಾಪ್ ತಾರೆಯ ಇಷ್ಟು ಕಾಂತಿಯುತ ತ್ವಚೆಗೆ ಕಾರಣ ಈ ಫೇಸ್ ಮಾಸ್ಕ್!
ಸೌಂದರ್ಯ ಆರೈಕೆಯಲ್ಲಿ ಕೊರಿಯನ್ ಬ್ಯೂಟಿ ಕೇರ್‌ಗಳು ಬಹಳ ಫೇಮಸ್. ಅವರ ಕಾಂತಿಯುತ, ಸ್ಪಷ್ಟ ತ್ವಚೆಗಾಗಿ ನಾನಾ ಚಿಕಿತ್ಸೆ, ಮನೆಮದ್ದುಗಳನ್ನು ಬಳಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಇಂದು ನಾವು ಕೊರಿಯನ್ ಪಾಪ್ ತಾರೆ ಜೀಯೋನ್ ಸೋಮಿ ಅವರ ತ್ವಚೆಯ ಆರೈಕೆಗೆ ಏನು ಮಾಡುತ್ತಾರೆ? ಅವರ ಕಾಂತಿಯುತ ತ್ವಚೆಯ ಹಿಂದಿರುವ ರಹಸ್ಯವೊಂದನ್ನು ತಿಳಿಸಲಿದ್ದೇವೆ.

ಇತ್ತೀಚೆಗಷ್ಟೇ ಜೀಯೋನ್ ಸೋಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತ್ವಚೆಗಾಗಿ ಬಳಸುವ DIY ಬಗ್ಗೆ ಹಂಚಿಕೊಂಡಿದ್ದಾರೆ. ಅದೇ ಬಾಳೆಹಣ್ಣು ಹಾಗೂ ಬಾದಾಮಿ ಪುಡಿಯ ಫೇಸ್ ಪ್ಯಾಕ್. ಈ ಮನೆಮದ್ದಿನಿಂದ ತಮ್ಮ ತ್ವಚೆಯಲ್ಲಿ ಎಂತಹ ಬದಲಾವಣೆಯಾಯಿತು ಎಂಬುದನ್ನು ಕೂಡ ಹಂಚಿಕೊಂಡಿದ್ದಾರೆ. ಹಾಗಾದರೆ, ಬನ್ನಿ ಈ ಪ್ಯಾಕ್ ಹೇಗೆ ತಯಾರಿಸುವುದು? ಹೇಗೆ ಬಳಸುವುದು ಎಂಬುದನ್ನು ನೋಡೋಣ.
ಕಾಂತಿಯುತ ತ್ವಚೆಗೆ ಬಾಳೆಹಣ್ಣಿನ ಫೇಸ್ ಪ್ಯಾಕ್ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು
1/4 ಕಪ್ ಬಾದಾಮಿ ಪುಡಿ
1/4 ಕಪ್ ಪುಡಿ ಮಾಡಿದ ಓಟ್ಸ್

ತಯಾರಿಸುವ ವಿಧಾನ:
ಓಟ್ಸ್ ಸ್ವಲ್ಪ ಜಿಗುಟಾಗಿರುವುದರಿಂದ, ಅದನ್ನು ಪುಡಿ ಮಾಡಿ. ಅದಕ್ಕೆ ಚೆನ್ನಾಗಿ ಮ್ಯಾಶ್ ಮಾಡಿದ ಬಾಳೆಹಣ್ಣು ಹಾಗೂ ಬಾದಾಮಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಸುಮಾರು ಹತ್ತು ನಿಮಿಷಗಳನ್ನು ತೆಗೆದುಕೊಳ್ಳಬಹುದು. ಮಿಶ್ರಣ ಒಂದು ಹದಕ್ಕೆ ಬಂದ ನಂತರ ಇದನ್ನು ಮುಖಕ್ಕೆ ಪ್ಯಾಕ್ ರೀತಿಯಲ್ಲಿ ಹಚ್ಚಿಕೊಂಡು, ಅರ್ಧ ಗಂಟೆಗಳ ಕಾಲ ಬಿಡಿ. ತದನಂತರ, ಸಾಮಾನ್ಯ ನೀರಿನಿಂದ ತೊಳೆದರೆ, ಹೊಳೆಯುವ ತೇವಾಂಶಭರಿತ ಕಾಂತಿಯುತ ತ್ವಚೆ ನಿಮ್ಮದಾಗುವುದು. ಉತ್ತಮ ಫಲಿತಾಂಶಕ್ಕಾಗಿ ಈ ಪ್ಯಾಕನ್ನು ವಾರಕ್ಕೆ ಒಮ್ಮೆ ಹಾಕಿಕೊಳ್ಳಬಹುದು ಎಂದು ಜೀಯೋನ್ ಸೋಮಿ ಶಿಫಾರಸ್ಸು ಮಾಡುತ್ತಾರೆ.

ಜೀಯೋನ್ ಸೋಮಿಯ ಅಭಿಪ್ರಾಯವೇನು?:
ಈಕೆಯ ಪ್ರಕಾರ, ಫೇಸ್ ಶೀಟ್‌ಗಳು ಚರ್ಮಕ್ಕೆ ತೇವಾಂಶವನ್ನ ನೀಡಲು ಬಹಳ ಒಳ್ಳೆಯದು. ಜೊತೆಗೆ ಈ ಫೇಸ್ ಪ್ಯಾಕ್ ಬಹಳ ಪೋಷಕಾಂಶಗಳ ಆಗರವನ್ನು ಹೊಂದಿರುವುದರಿಂದ, ಅಷ್ಟೇ ಅಲ್ಲ, ತಯಾರಿಸಲು ಬಳಸಲು ಬಹಳ ಸುಲಭವಾಗಿರುವುದರಿಂದ, ಯಾರು ಬೇಕಾದರೂ ಈ ಪ್ಯಾಕನ್ನು ಬಳಸಬಹುದು. ಇದು ನಿಮ್ಮ ತ್ವಚೆಯ ಡಲ್‌ನೆಸ್ ತೆಗದು, ತಕ್ಷಣವೇ ಕಾಂತಿ ಚಿಮ್ಮಿಸುವುದು.

ಈ ಫೇಸ್ ಪ್ಯಾಕ್ ಹೇಗೆ ಪ್ರಯೋಜನಕಾರಿ?:
ಓಟ್ ಮೀಲ್ ಮತ್ತು ಬಾಳೆಹಣ್ಣು ಎರಡನ್ನೂ ಹೆಚ್ಚಾಗಿ ಉನ್ನತ-ಮಟ್ಟದ ತ್ವಚೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಓಟ್ ಮೀಲ್ ಎಫ್ಫೋಲಿಯೇಶನ್‌ಗೆ ಉತ್ತಮವಾಗಿದ್ದರೆ, ಬಾಳೆಹಣ್ಣು ನಿಮಗೆ ಹೊಳೆಯುವ ತ್ವಚೆಯನ್ನು ನೀಡುತ್ತದೆ. ಈ ಮೂಲಕ ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಗೆ ತೇವಾಂಶವನ್ನು ನೀಡಿ, ಮಂದವಾದ ಮೈಬಣ್ಣವನ್ನು ಬೆಳಗಿಸಲು ಸಹಾಯ ಮಾಡುತ್ತದೆ.



Click it and Unblock the Notifications
