Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ವಿಟಮಿನ್ ಇ ಹೀಗೆ ಬಳಸಿದ್ದೇ ಆದರೆ ಫಳ ಫಳ ಹೊಳೆಯುವ ತ್ವಚೆ ಕಾಂತಿ ನಿಮ್ಮದು
ವಿಟಮಿನ್ ಇ ತ್ವಚೆಗೆ ಒಳ್ಳೆಯದೆಂದು ಎಲ್ಲರಿಗೂ ಗೊತ್ತು. ನಾವು ಬಳಸುವ ಕ್ರೀಮ್, ಲೋಷನ್‌ಗಳಲ್ಲಿ ವಿಟಮಿನ್ ಇ ಇದೆಯೇ ಎಂದು ಪರಿಶೀಲಿಸಿ ಕೊಳ್ಳುತ್ತೇವೆ. ಇನ್ನು ಪೇಸ್‌ಮಾಸ್ಕ್‌ನಲ್ಲಿ, ತ್ವಚೆಗೆ ಮಸಾಜ್ ಮಾಡುವಾಗ ವಿಟಮಿನ್ ಇ ಬಳಸುತ್ತಾರೆ ಎಂದು ನಿಮಗೆ ಗೊತ್ತಿರಬಹುದು. ಆದರೆ ಅದನ್ನು ಯಾವ ರೀತಿ ಬಳಸಿದರೆ ಉತ್ತಮ ರಿಸಲ್ಟ್ ಸಿಗುತ್ತದೆ ಎಂಬುವುದೇ ಗೊತ್ತೇ? ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.

ಮೊದಲಿಗೆ ವಿಟಮಿನ್ ಇ ಇದರಲ್ಲಿರುವ ಗುಣಗಳ ಬಗ್ಗೆ ನೋಡೋಣ:
ವಿಟಮಿನ್ ಇ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು ತ್ವಚೆಯನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಪೋಷಣೆ ಮಾಡುತ್ತದೆ. ಇದು ತ್ವಚೆಯನ್ನು ಸೂರ್ಯ ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುತ್ತದೆ. ವಿಟಮಿನ್ ಇ ಇದರಲ್ಲಿ Tocopherols ಮತ್ತು tocotrienols ಅಂಶವಿದ್ದು ಇದು ತ್ವಚೆಯನ್ನು ಮಾಯಿಶ್ಚರೈಸರ್ ಮಾಡುತ್ತದೆ ಹಾಗೂ ತ್ವಚೆ ಆರೋಗ್ಯವನ್ನು ಕಾಪಾಡುತ್ತದೆ.
ಇಲ್ಲಿ ವಿಟಮಿನ್ ಇ ಅನ್ನು 7 ರೀತಿಯಲ್ಲಿ ಬಳಸುವ ವಿಧಾನ ಹೇಳಿದ್ದೇವೆ ನೋಡಿ:

1. ವಿಟಮಿನ್ ಇ, ಪಪ್ಪಾಯಿ, ರೋಸ್‌ವಾಟರ್ ಪೇಸ್‌ಮಾಸ್ಕ್
ಸಾಮಗ್ರಿ
2 ವಿಟಮಿನ್ ಇ ಕ್ಯಾಪ್ಸೂಲ್, 2 ಚಮಚ ಪಪ್ಪಾಯಿ, 1 ಚಮಚ ರೋಸ್ ವಾಟರ್
ಈ ಮೂರು ವಸ್ತುಗಳನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ, ನಂತರ ನೀರಿನಿಂದ ತೊಳೆಯಿರಿ.
ಪಪ್ಪಾಯಿಯಲ್ಲಿ ಸನ್ ಟ್ಯಾನ್, ಪಿಗ್ಮೆಂಟೇಷನ್, ಕಲೆ ಇವುಗಳನ್ನು ಹೋಗಲಾಡಿಸುತ್ತದೆ. ವಿಟಮಿನ್ ತ್ವಚೆ ಕಣಗಳು ಆರೋಗ್ಯಕರವಾಗಿ ಇರುವಂತೆ ನೋಡಿ ಕೊಳ್ಳುತ್ತದೆ, ರೋಸ್ ವಾಟರ್ ತ್ವಚೆ ಮಾಯಿಶ್ಚರೈಸರ್ ಆಗಿರುವಂತೆ ಮಾಡುತ್ತದೆ.

2. ವಿಟಮಿನ್ ಇ, ಮೊಸರು ಮತ್ತು ನಿಂಬೆ ಫೇಸ್ ಮಾಸ್ಕ್
ಸಾಮಗ್ರಿ
ಒಂದು ಚಮಚ ಮೊಸರು, 2 ವಿಟಮಿನ್ ಇ ಮಾತ್ರೆ ಹಾಗೂ ಸ್ವಲ್ಪ ನಿಂಬೆರಸ
ಈ ಮೂರು ವಸ್ತುಗಳನ್ನು ಮಿಶ್ರ ಮಾಡಿ, ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆಯಿರಿ.
ಈ ಮೂರು ಮಿಶ್ರಣ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಿ, ತ್ವಚೆ ಕಾಂತಿ ಹೆಚ್ಚಿಸುತ್ತದೆ. ಇನ್ನು ವಿಟಮಿನ್ ಸಿ ತ್ವಚೆಯನ್ನು ಬ್ಲೀಚ್ ಮಾಡುತ್ತದೆ, ಇದರಿಂದ ತ್ವಚೆ ಕಾಂತಿ ಹೆಚ್ಚುವುದು.

3. ವಿಟಮಿನ್ ಇ, ಮೊಟ್ಟೆ, ಮೊಸರಿನ ಫೇಸ್ ಮಾಸ್ಕ್
ಬೇಕಾಗುವ ಸಾಮಗ್ರಿ
1 ವಿಟಮಿನ್ ಇ ಮಾತ್ರೆ, 1 ಚಮಚ ಮೊಸರು, 1 ಮೊಟ್ಟೆ
ಮೊಟ್ಟೆಯ ಬಿಳಿಯನ್ನು ಒಂದು ಬೌಲ್‌ಗೆ ಹಾಕಿ, 1 ಚಮಚ ಮೊಸರು ಹಾಕಿ, 1 ವಿಟಮಿನ್ ಇ ಮಾತ್ರೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಫೇಸ್ ಮಾಸ್ಕ್ ಆಗಿ ಬಳಸಿ.
ವಾರಕ್ಕೊಮ್ಮೆ ಈ ಮಾಸ್ಕ್ ಬಳಸಿ ನೋಡಿ ಯಾವ ಬ್ಯೂಟಿ ಪಾರ್ಲರ್‌ಗೂ ಹೋಗಬೇಕಾಗಿಲ್ಲ, ತುಂಬಾ ತ್ವಚೆ ಆಕರ್ಷಕವಾಗಿ ಕಾಣುವುದು.

4. ವಿಟಮಿನ್ ಇ ಮತ್ತು ಲೋಳೆಸರ ಫೇಸ್ ಮಾಸ್ಕ್
ಬೇಕಾಗುವ ಸಾಮಗ್ರಿ
ಒಂದು ಚಮಚ ಲೋಳೆಸರ
1 ಚಮಚ ವಿಟಮಿನ್ ಇ ಮಾತ್ರೆ
ಒಂದು ಚಮಚ ಲೋಳೆಸರ ಹಾಗೂ ವಿಟಮಿನ್ ಇ ಮಾತ್ರೆ ಮಿಶ್ರ ಮಾಡಿ ಇದನ್ನು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆಯಿರಿ.
ಈ ಮಿಶ್ರಣವನ್ನು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಪ್ರತಿದಿನ ಬಳಸಿದರೂ ಒಳ್ಳೆಯದು.

5. ವಿಟಮಿನ್ ಇ, ಜೇನು ಮತ್ತು ಹಾಲಿನ ಮಾಸ್ಕ್
ಬೇಕಾಗುವ ಸಾಮಗ್ರಿ
2 ವಿಟಮಿನ್ ಇ ಮಾತ್ರೆ
1 ಚಮಚ ಜೇನು
1 ಚಮಚ ಹಾಲು
ಈ ಮೂರು ಮಿಶ್ರಣವನ್ನು ಮಿಶ್ರ ಮಾಡಿ ದಿನಾ ಸ್ನಾನಕ್ಕೆ ಮುನ್ನ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆಯಲ್ಲಿ ಹೊಳಪು ಹೆಚ್ಚಾಗಿರುವುದನ್ನು ಗಮನಿಸಬಹುದು.

6. ವಿಟಮಿನ್ ಇ, ಗ್ಲಿಸರಿನ್ ಮತ್ತು ರೋಸ್‌ವಾಟರ್ ಮಾಸ್ಕ್
ಬೇಕಾಗುವ ಸಾಮಗ್ರಿ
1 ಚಮಚ ಗ್ಲಿಸರಿನ್
1 ಚಮಚ ರೋಸ್ ವಾಟರ್
1 ವಿಟಮಿನ್ ಇ ಮಾತ್ರೆ
ನಿಮ್ಮದು ಒಣ ಚರ್ಮವಾಗಿದ್ದರೆ ಸೂಕ್ತವಾದ ಫೇಸ್ ಮಾಸ್ಕ್ ಇದಾಗಿದೆ. ಇದು ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡಿ ತ್ವಚೆಯನ್ನು ಮೃದುವಾಗಿಸುತ್ತದೆ.

7. ವಿಟಮಿನ್ ಇ, ತೆಂಗಿನೆಣ್ಣೆಯ ಫೇಸ್ ಮಾಸ್ಕ್
ನಿಮ್ಮ ತುಂಬಾ ಒಣ ಚರ್ಮವೇ? ಈ ಫೇಸ್ ಮಾಸ್ಕ್ ತುಂಬಾ ಒಳ್ಳೆಯದು, ಎಣ್ಣೆ ತ್ವಚೆಯವರು ಈ ಮಾಸ್ಕ್ ಬಳಸಬೇಡಿ.
ಬೇಕಾಗುವ ಸಾಮಗ್ರಿ
1 ಚಮಚ ತೆಂಗಿನೆಣ್ಣೆ
1 ಚಮಚ ವಿಟಮಿನ್ ಇ ಮಾತ್ರೆ
ತೆಂಗಿನೆಣ್ಣೆ ಹಾಗೂ ವಿಟಮಿನ್ ಇ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಿದ್ದರೆ ನಿಮ್ಮ ತ್ವಚೆ ಮೃದುವಾಗುವುದು. ಇನ್ನು ಚಳಿಗಾಲದಲ್ಲಿ ತ್ವಚೆ ತುಂಬಾ ಡ್ರೈಯಾಗುವುದು, ಒಡೆಯುವುದು ಈ ಸಮಸ್ಯೆ ಕಾಡುವುದಿಲ್ಲ.



Click it and Unblock the Notifications
