Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚೆಂದ... ಚೆಂದ ಮುಖಕ್ಕಾಗಿ ಹಚ್ಚಿ ಕಾಫಿ ಸ್ಕ್ರಬ್
ಕಾಫಿಯನ್ನು ಹೀರುವಾಗ ಅದರ ಘಮ ಆಸ್ವಾದಿಸುವುದೇ ಆನಂದ ಅಲ್ಲವೇ? ಇದೇ ಕಾಫಿಯನ್ನು ಮುಖದ ಅಂದ ಹೆಚ್ಚಿಸಲು ಬಳಸಬಹುದು. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ಕಾಫಿ ಸ್ಕ್ರಬ್ ತುಂಬಾನೇ ಸೌಂಡ್ ಮಾಡಿತ್ತು.
ಕಾಫಿ ಸ್ಕ್ರಬ್ ಮುಖದ ತ್ವಚೆಯನ್ನು ಆಳದಿಂದ ಕ್ಲೆನ್ಸ್ ಮಾಡುವುದು ಹಾಗೂ ಮುಖಕ್ಕೆ ನೈಸರ್ಗಿಕವಾದ ಹೊಳಪನ್ನು ನೀಡುತ್ತದೆ. ಅಲ್ಲದೆ ಕಾಫಿ ಸ್ಕ್ರಬ್ ತ್ವಚೆಗೆ ತುಂಬಾನೇ ಒಳ್ಳೆಯದು ಎಂದು ಹೇಳುವುದು ಏಕೆಂದರೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಬಿ3, ಕ್ಲೋರೋಜೆನಿಕ್ ಆಮ್ಲ ಇರುವುದರಿಂದ ಇದು ಮುಖದಲ್ಲಿರುವ ಕಪ್ಪು ಕಲೆ(ಪಿಗ್ಮೆಮೆಂಟೇಷನ್), ಮೊಡವೆ ಇವುಗಳನ್ನು ಹೋಗಲಾಡಿಸಿ, ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿ ಮಾಡುತ್ತದೆ. ಇದರಿಂದ ತ್ವಚೆಯ ಹೊಳಪು ಹೆಚ್ಚುವುದು.

ಮನೆಯಲ್ಲಿಯೇ ಕಾಫಿ ಸ್ಕ್ರಬ್ ಮಾಡುವುದು ಹೇಗೆ?
ಕಾಫಿ ಸ್ಕ್ರಬ್ ಮುಖದಲ್ಲಿ ಬಿದ್ದಿರುವ ಮೊಡವೆ ರಂಧ್ರಗಳನ್ನು ಮರೆಮಾಚುವಲ್ಲಿ ತುಂಬಾನೇ ಸಹಕಾರಿ. ಇದು ತ್ವಚೆಯಲ್ಲಿನ ಕಶ್ಮಲ ತೆಗೆದು ಹಾಕಿ ತ್ವಚೆಗೆ ಹೊಳಪನ್ನು ನೀಡುವುದು. ಏಕೆಂದರೆ ಈ ಸ್ಕ್ರಬ್ ನೀರಿನಲ್ಲಿ ಬೇಗನೆ ಕರಗುವುದಿಲ್ಲ, ಇದರಿಂದ ತ್ವಚೆಯ ಆಳದವರೆಗೆ ಇದರ ಪರಿಣಾಮ ಇರುತ್ತದೆ. ಇಲ್ಲಿ ನಾವು ಕಾಫಿ ಸ್ಕ್ರಬ್ ಮಾಡುವುದು ಹೇಗೆ ಎಂದು ಹೇಳಿದ್ದೇವೆ.
ಕಾಫಿ ಸ್ಕ್ರಬ್ ಅನ್ನು ಬೇರೆ-ಬೇರೆ ಸಾಮಗ್ರಿ ಜೊತೆ ಮಿಶ್ರ ಮಾಡಿ ತಯಾರಿಸಬಹುದು. ಇದಕ್ಕೆ ತೆಂಗಿನೆಣ್ಣೆ, ಆಲೀವ್ ಎಣ್ಣೆ, ನಿಂಬೆಹಣ್ಣು ಹೀಗೆ ನಿಮಗೆ ಸೂಕ್ತವೆನಿಸುವ ಸಾಮಗ್ರಿ ಬಳಸಬಹುದು.

ಮಾಡುವ ವಿಧಾನ 1
2 ಚಮಚ ಕಾಫಿ ಪುಡಿ ತೆಗೆದು ಅಷ್ಟೇ ಪ್ರಮಾಣದ ತೆಂಗಿನೆಣ್ಣೆ ಅಥವಾ ಆಲೀವ್ ಎಣ್ಣೆ ಹಾಕಿ ಶ್ರ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ನಂತರ 15 ನಿಮಿಷ ಬಿಟ್ಟು ಬಿಸಿ ನೀರಿನಿಂದ ಮುಖ ತೊಳೆಯಿರಿ.

ವಿಧಾನ 2
1 ಚಮಚ ಕಾಫಿ ಪುಡಿಗೆ 1 ಚಮಚ ಸಕ್ಕರೆ, 1 ಚಮಚ ನಿಂಬೆರಸ ಹಾಕ ಸ್ಕ್ರಬ್ ತಯಾರಿಸಿ. ಅದು ಮಿಶ್ರಣ ಮುಖಕ್ಕೆ ಹಚ್ಚುವ ಹದಕ್ಕೆ ಬಂದ ಮೇಲೆ ಇದನ್ನು ಮುಖಕ್ಕೆ , ಮೈಗೆ ಹಚ್ಚಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ.

ವಿಧಾನ 3
2 ಚಮಚ ಕಾಫಿ ಪುಡಿಯನ್ನು ಹಾಲು ಹಾಗೂ ಕೆನೆ ಜೊತೆ ಮಿಶ್ರ ಮಾಡಿ ಗಟ್ಟಿಯಾದ ಪೇಸ್ಟ್ ತಯಾರಿಸಿ. ಕಈ ಸ್ಕ್ರಬ್ ಮುಖದ ರಂಧ್ರಗಳನ್ನು ಮರೆ ಮಾಚುತ್ತೆ ಹಾಗೂ ಕೆನೆ ತ್ವಚೆ ಮಾಯಿಶ್ಚರೈಸರ್ ಆಗಿರುವಂತೆ ನೋಡಿಕೊಳ್ಳುತ್ತದೆ.

ವಿಧಾನ 4
ಒಂದು ಚಮಚ ಕಾಫಿ ಪುಡಿ ತೆಗೆದುಕೊಂಡು 1 ಚಮಚ ಟೊಮೆಟೊ ರಸದ ಜೊತೆ ಮಿಶ್ರ ಮಾಡಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ವಿಧಾನ 5
1 ಚಮಚ ಕಾಫಿ ಪುಡಿಯನ್ನುತೆಗೆದುಕೊಂಡು, ಅದಕ್ಕೆ 1 ಚಮಚ ಅಕ್ಕಿ ಹಿಟ್ಟು , 1 ಚಮಚ ನಿಂಬೆರಸ ಹಾಕಿ ಮಿಶ್ರ ಮಾಡಿ ಇದನ್ನು ಮುಖಕ್ಕೆ ಹಚ್ಚಿದರೆ ಸನ್‌ಟ್ಯಾನ್ ಹೋಗಲಾಡಿಸಬಹುದು.



Click it and Unblock the Notifications
