Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹೊಳೆಯುವ ತ್ವಚೆಗೆ ಮಾವಿನ ಹಣ್ಣಿನ ಮಾಸ್ಕ್
ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಮಾವಿನ ಹಣ್ಣು ಕೇವಲ ಇದರ ರುಚಿಯಿಂದ ಮಾತ್ರ ಈ ಹೆಗ್ಗಳಿಕೆಯನ್ನು ಪಡೆದಿಲ್ಲ. ಇದರ ಸೇವನೆಯಿಂದ ದೊರಕಬಹುದಾದ ಹಲವು ಪ್ರಯೋಜನಗಳಿಂದಾಗಿಯೇ ಈ ಪಟ್ಟ ದೊರಕಿದೆ. ಇದು ಕೇವಲ ನಾಲಿಗೆಗೆ ರುಚಿಕರ ಮಾತ್ರವಲ್ಲ ತ್ವಚೆಯ ಆರೈಕೆಗೂ ಉತ್ತಮವಾಗಿದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಮಾವು ಋತು ಆಧಾರಿತವಾದ ಕಾರಣ ವರ್ಷದ ಎಲ್ಲಾ ತಿಂಗಳುಗಳಲ್ಲಿ ದೊರಕುವುದಿಲ್ಲ. ಹಾಗಾಗಿ ಯಥೇಚ್ಛವಾಗಿ ಸಿಗುತ್ತಿರುವಾಗ ಇದರ ಪ್ರಯೋಜನವನ್ನು ಹೆಚ್ಚಾಗಿ ಪಡೆದುಕೊಳ್ಳುವುದೇ ಜಾಣತನದ ಲಕ್ಷಣ. ಈ ಅದ್ಭುತ ಹೊಂಬಣ್ಣದ ಹಣ್ಣಿನ ರಸದ ಗುಣಗಳನ್ನು ಪಡೆದು ನಿಮ್ಮ ತ್ವಚೆಗೂ ಹೊನ್ನಿನ ಆರೈಕೆಯನ್ನು ಪಡೆಯಬಹುದು. ಬನ್ನಿ, ಈ ಅದ್ಭುತ ಹಣ್ಣಿನ ರಸವನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

ಮಾವು ಮತ್ತು ಮುಲ್ತಾನಿ ಮಿಟ್ಟಿ
1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು
1 ಚಮಚ ಮೊಸರು
3 ಚಮಚ ಮುಲ್ತಾನಿ ಮಿಟ್ಟಿ
- ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
- ಇದಕ್ಕೆ ಉಳಿದೆರಡು ಸಾಮಾಗ್ರಿಗಳನ್ನು ಬೆರೆಸಿ ಮಿಶ್ರಣ ಮಾಡಿ.
- ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಕಣ್ಣುಗಳನ್ನು ಮುಚ್ಚಿ ಕಣ್ಣು ರೆಪ್ಪೆ ಹಾಗೂ ಕಣ್ಣಿನ ಕೆಳಭಾಗದಲ್ಲಿಯೂ ದಪ್ಪನಾಗಿ ಹಚ್ಚಿ.
- 20 ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ.
- ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
- ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
- ಇದಕ್ಕೆ ಉಳಿದೆರಡು ಸಾಮಾಗ್ರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಹುಬ್ಬುಗಳನ್ನು ಬಿಟ್ಟು (ಕೂದಲಿಗೆ ತಾಕದಂತೆ) ಉಳಿದೆಡೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪ ಒಣಗಿ ಕೊಂಚ ಬಿರುಕು ಬರುವವರೆಗೂ ಹಾಗೇ ಬಿಡಿ.
- ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
- ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
- ಓಟ್ ರವೆಯನ್ನು ಕುಟ್ಟಿ ಆದಷ್ಟೂ ನುಣ್ಣಗಿನ ಪುಡಿ ಮಾಡಿ ಬಾದಾಮಿಗಳನ್ನು ಕಲ್ಲಿನ ಮೇಲೆ ಅರೆದು ಲೇಪವಾಗಿಸಿ ಮಾಡಿ.
- ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿದ ಬಳಿಕ ಕೊನೆಯಲ್ಲಿ ಹಾಲನ್ನು ಹಾಕಿ ಕಲಸಿ.
- ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ಮುಖ, ಕುತ್ತಿಗೆಗಳಿಗೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ.
- ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
- ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
- ಇದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ಮೊಸರನ್ನು ಹಾಕಿ ಮಿಶ್ರಣ ಮಾಡಿ. ಲೇಪ ಹಚ್ಚಿಕೊಂಡರೆ ನೀರಿನಂತೆ ಇಳಿಯದಷ್ಟೇ ಪ್ರಮಾಣದ ಗುಲಾಬಿ ನೀರನ್ನು ಬೆರೆಸಿ.
- ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ಮುಖ, ಕುತ್ತಿಗೆಗಳಿಗೆ ಹಚ್ಚಿ 15-20 ನಿಮಿಷ ಒಣಗಲು ಬಿಡಿ.
- ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
- ಎಲ್ಲಾ ಸಾಮಾಗ್ರಿಗಳನ್ನು ಒಂದು ಬೋಗುಣಿಯಲ್ಲಿ ಹಾಕಿ ಮಿಶ್ರಣ ಮಾಡಿ
- ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ನಯವಾದ ಮಸಾಜ್ ಮೂಲಕ ಮುಖ, ಕುತ್ತಿಗೆಗಳಿಗೆ ಹಚ್ಚಿ
- ಈ ಪದರ ಒಣಗುವವರೆಗೂ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.

ಮಾವು ಮತ್ತು ಬೆಣ್ಣೆಹಣ್ಣಿನ ಮುಖಲೇಪ
1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು
2 ಚಮಚ ಚೆನ್ನಾಗಿ ಹಣ್ಣಾಗಿರುವ ಬೆಣ್ಣೆಹಣ್ಣಿನ ತಿರುಳು, ಚೆನ್ನಾಗಿ ಕಲಸಿರಬೇಕು.
2 ಚಮಚ ಜೇನುತುಪ್ಪ

ಮಾವು ಮತ್ತು ಓಟ್ಸ್ ರವೆಯ ಮುಖಲೇಪ
1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು
3 ಚಮಚ ಓಟ್ಸ್ ರವೆ
7-8 ಬಾದಾಮಿಗಳು (ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ಸುಲಿಯಬೇಕು)
2 ಚಮಚ ಹಸಿ ಹಾಲು

ಮಾವು ಮತ್ತು ಗುಲಾಬಿ ನೀರಿನ ಮುಖಲೇಪ
1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು
2 ಚಮಚ ಮುಲ್ತಾನಿ ಮಿಟ್ಟಿ
2 ಚಮಚ ಮೊಸರು
2 ಚಮಚ ಗುಲಾಬಿ ನೀರು.

ಮಾವು ಮತ್ತು ಕಡ್ಲೆಹಿಟ್ಟಿನ ಮುಖಲೇಪ
4 ಚಮಚ ಮಾವಿನ ಹಣ್ಣಿನ ತಿರುಳು
2 ಚಮಚ ಕಡ್ಲೆಹಿಟ್ಟು
1 ಚಮಚ ಜೇನು
1 ಚಮಚ ಮೊಸರು



Click it and Unblock the Notifications
