Latest Updates
-
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ -
ಡೇಟಿಂಗ್ ಆಪ್ಗಳಲ್ಲಿ ಎಐ ಚಾಟ್ಬಾಟ್ ವಂಚನೆ: ನಿಮ್ಮ ಪ್ರೀತಿಯೇ ಬಲೆ ಆಗಬಹುದು, ಎಚ್ಚರ! -
ಚೆನ್ನೈನಲ್ಲಿ ಭಾರಿ ಮಳೆ: ಅಪಾರ್ಟ್ಮೆಂಟ್ ನಿವಾಸಿಗಳು ಮರೆಯದೆ ಮಾಡಬೇಕಾದ 20 ನಿಮಿಷದ ಸೇಫ್ಟಿ ಚೆಕ್ಲಿಸ್ಟ್ -
ಗಣೇಶ ಹಬ್ಬದ ಪ್ರಸಾದ: ಕಲಬೆರಕೆ ಸಿಹಿತಿಂಡಿಗಳನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಎಫ್ಎಸ್ಎಸ್ಎಐ ಟಿಪ್ಸ್ -
ನಾಳೆ ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ -
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು!
ಶೇವಿಂಗ್ ಟಿಪ್ಸ್: ಹೀಗೆ ಮಾಡಿದರೆ ತ್ವಚೆ ಮೃದುವಾಗಿರುತ್ತೆ, ತುರಿಕೆ ಇರಲ್ಲ
ಬೇಡದ ಕೂದಲು ಮಹಿಳೆಯ ತ್ವಚೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ತುರಿಕೆ, ಬೆವರಿನ ವಾಸನೆ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುವುದು. ಅದರಲ್ಲೂ ಮಾರ್ಡನ್ ಡ್ರೆಸ್ ಧರಿಸಲು ಇಷ್ಟಪಡುವವರು ಬೇಡದ ಕೂದಲನ್ನು ತೆಗೆದರೆ ಮಾತ್ರ ಆಕರ್ಷಕವಾಗಿ ಕಾಣಲು ಸಾಧ್ಯ.
ಬೇಡದ ಕೂದಲನ್ನು ತೆಗೆಯಲು ಅನೇಕ ವಿಧಾನಗಳಿವೆ. ತುಂಬಾ ಹಣ ಇರುವವರು ಲೇಸರ್ ಟ್ರೀಟ್ಮೆಂಟ್ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಪಾರ್ಲರ್‌ಗೆ ಹೋಗಿ ತೆಗೆಯುತ್ತಾರೆ. ಪಾರ್ಲರ್‌ಗೆ ಹೋಗದೆ ರೇಝರ್ ಬಳಸಿ ತೆಗೆಯುವವರೇ ಅಧಿಕ.
ಪಾರ್ಲರ್ ಹೋಗಿ ಅಥವಾ ಮನೆಯಲ್ಲಿಯೇ ಬೇಡದ ಕೂದಲು ತೆಗೆದ ಬಳಿಕ ಕೆಲವೊಮ್ಮೆ ಆ ಭಾಗದಲ್ಲಿ ತುರಿಕೆ, ಬೊಬ್ಬೆ ಕಂಡು ಬರುವುದು. ಇದನ್ನು ತಪ್ಪಿಸಲು ಶೇವಿಂಗ್ ಮಾಡುವಾಗ ಹೀಗೆ ಮಾಡಿದರೆ ಯಾವುದೇ ಕಿರಿಕಿರಿ ಇರುವುದಿಲ್ಲ ನೋಡಿ:

ಮೊದಲಿಗೆ ಬಿಸಿ-ಬಿಸಿ ನೀರಿನಲ್ಲಿ ಸ್ನಾನ ಮಾಡಿ
ಶೇವ್ ಮಾಡುವ ಮೊದಲಿಗೆ ಮೈಗೆ ನೀರು ಹಾಕುವುದರಿಂದ ಇದು ತ್ವಚೆಯನ್ನು ಮೃದುವಾಗಿಸುತತ್ದೆ. ಇದರಿಂದ ಎಕ್ಸ್‌ಫೋಲೆಟ್‌ಗೆ ಸಹಕಾರಿ. ಇದು ಮೈಮೇಲೆರುವ ಎಣ್ಣೆಯಂಶ ತೆಗೆಯುತ್ತದೆ. ಮೈಮೇಲಿನ ಕೂದಲು ಒದ್ದೆಯಾದಾಗ ತೆಗೆಯಲು ಸುಲಭ.
* ಎಕ್ಸ್‌ಫೋಲೆಟ್ ಮಾಡಿ
ಮೊದಲಿಗೆ ಸ್ಕ್ರಬ್ಸ್ ಬಳಸಿ ಎಕ್ಸ್‌ಫೋಲೆಟ್ ಮಾಡಿ. ಎಕ್ಸ್‌ಫೋಲೆಟ್ ಮಾಡುವುದರಿಂದ ತ್ವಚೆಯಲ್ಲಿ ನಿರ್ಜೀವ ತ್ವಚೆಯನ್ನು ತೆಗೆಯಬಹುದು. ಇದು ರೇಝರ್ ಹಾಕುವಾಗ ಅನುಕೂಲಕರವಾಗಿದೆ.

ಶೇವ್ ಜೆಲ್ ಹಚ್ಚಿ
ರೇಝರ್ ಬಳಸುವಾಗ ಸೋಪ್ ಹಚ್ಚಬೇಡಿ, ಬದಲಿಗೆ ಶೇವ್ ಜೆಲ್ ಹಚ್ಚಿ. ಸೋಪ್ ಬಳಸಿದರೆ ತ್ವಚೆ ಒಣಗುವುದು ಹಾಗೂ ಶೇವಿಂಗ್ ಬಳಿಕ ತುರಿಕೆ ಅಥವಾ ಬೊಬ್ಬೆ ಕಂಡು ಬರಬಹುದು. ಆದ್ದರಿಂದ ಶೇವ್ ಜೆಲ್ ಬಳಸಿ, ಇದರಲ್ಲಿ ಮಾಯಿಶ್ಚರೈಸರ್ ಅಂಶ ಇರುವುದರಿಂದ ತ್ವಚೆಗೆ ಒಳ್ಳೆಯದು.

ಸರಿಯಾದ ರೇಝರ್ ಬಳಸಿ
ಕೆಲವರು ಯಾವುದಾದರೂ ಒಂದು ರೇಝರ್ ಬಳಸಿದರೆ ಆಯ್ತು ಅಂತ ಪುರುಷರು ಬಳಸುವ ರೇಝರ್ ಬಳಸುವುದುಂಟು. ಆದರೆ ಈ ರೇಝರ್ ಮಹಿಳೆಯರಿಗೆ ಒಳ್ಳೆಯದಲ್ಲ. ಏಕೆಂದರೆ ಆ ಬ್ಲೇಡ್ ಅನ್ನು ಪುರುಷರ ಗಡ್ಡ ಬೆಳೆಯುವಂತೆ ಮಾಡುವ ಹಾಗೆ ವಿನ್ಯಾಸ ಮಾಡಲಾಗಿರುತ್ತದೆ, ಅಲ್ಲದೆ ಇದು ಚರ್ಮವನ್ನು ಮತ್ತಷ್ಟು ಒರಟಾಗಿಸುತ್ತದೆ. ಆದ್ದರಿಂದ ಮಹಿಳೆಯರಿಗಾಗಿ ಇರುವ ರೇಝರ್‌ನ್ನಷ್ಟೇ ಬಳಸಬೇಕು.
ಹೊಸ ಬ್ಲೇಡ್ ಬಳಸಿ, ಇದು ಕೂದಲು ಕಟ್ಟಾಗುವುದನ್ನು ತಡೆಗಟ್ಟುತ್ತದೆ. ಅಲ್ಲದೆ ಹೊಸ ಬ್ಲೇಡ್ ಬಳಸುವುದರಿಂದ ತುರಿಕೆ ತಡೆಗಟ್ಟಬಹುದು.

ಕೂದಲು ಬೆಳೆಯುವ ವಿರುದ್ಧ ದಿಕ್ಕಿಗೆ ಶೇವ್ ಮಾಡಿ
ಕೂದಲು ಬೆಳೆಯವ ನೇರಕ್ಕೆ ಶೇವ್ ಮಾಡಿದರೆ ಕೂದಲು ತುಂಡಾಗುತ್ತದೆ, ಕೂದಲು ಕ್ಲೀನ್ ಆಗಿ ಬರಬೇಕೆಂದರೆ ಅದು ಬೆಳೆಯುವ ವಿರುದ್ಧ ದಿಕ್ಕಿಗೆ ಶೇವ್ ಮಾಡಿ. ಉದಾಹರಣೆಗೆ ನೀವು ಕಾಲು ಶೇವ್ ಮಾಡುವುದಾದರೆ ಕೆಳಗಿನಿಂದ ಮೇಲ್ಬಾಗಕ್ಕೆ ಮಾಡಿ.
* ಮಾಯಿಶ್ಚರೈಸರ್ ಹಚ್ಚಿ
ಶೇವ್ ಮಾಡಿದ ಬಳಿಕ ಸ್ನಾನ ಮಾಡಿ ಮಾಯಿಶ್ಚರೈಸರ್ ಹಚ್ಚಿ. ಇದು ತ್ವಚೆಯನ್ನು ಮೃದುವಾಗಿಸುತ್ತೆ ಹಾಗೂ ಶೇವಿಂಗ್ ನಂತರ ಕಾಡುವ ತುರಿಕೆ, ಗುಳ್ಳೆ ಏಳುವುದು ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ.



Click it and Unblock the Notifications
