Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮುಖದ ಕಾಂತಿ ಹೆಚ್ಚಿಸಲು ಡಬಲ್ ಕ್ಲೆನ್ಸಿಂಗ್ ಮಾಡುವುದು ಹೇಗೆ?
ನಮ್ಮ ತ್ವಚೆಯ ರಕ್ಷಣೆಗಾಗಿ ನಾವು ದಿನವೂ ಏನೆಲ್ಲಾ ಸರ್ಕಸ್ ಮಾಡ್ತೀವಿ, ಮುಖ ತೊಳೆಯುವುದು ಅನ್ನೋ ವಿಷಯವಂಥು ನಮ್ಮ ದಿನಚರಿಯ ಒಂದು ಭಾಗ. ಕೆಲವರಂತೂ ತ್ವಚೆಯನ್ನು ರಕ್ಷಿಸಿಕೊಳ್ಳಲು ದಿನದಲ್ಲಿ ಆಗಾಗ ಮುಖವನ್ನು ತೊಳೆಯುತ್ತಾರೆ. ಆದರೆ ಈ ಅಭ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಕೊಂಡರೆ ನಿಮ್ಮ ಚರ್ಮದ ಕಾಂತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.
ಮುಖ್ಯವಾಗಿ ಸಂಜೆ ಸಮಯದಲ್ಲಿ ಮುಖ ತೊಳೆಯುವ ಅಭ್ಯಾಸವನ್ನು ರೂಢಿ ಮಾಡಿಕೊಂಡರೆ ತುಂಬಾನೇ ಒಳ್ಖೆಯದು. ಯಾಕಂದ್ರೆ ಈಗಿನ ವಾಯು ಮಾಲಿನ್ಯದಿಂದಾಗಿ ನಿಮ್ಮ ಮುಖದ ಮೇಲೆ ಹೆಚ್ಚಿನ ಕೊಳೆ ಅಂಟಿಕೊಳ್ಳುತ್ತದೆ. ಇದು ನಿಮ್ಮ ಚರ್ಮದ ಕಾಂತಿಯನ್ನು ಕ್ಷೀಣಿಸುವಂತೆ ಮಾಡುತ್ತದೆ. ಅದಕ್ಕಾಗಿ ಸಂಜೆ ಸಮಯದಲ್ಲಿ ಡಬಲ್ ಕ್ಲೆನ್ಸಿಂಗ್ ಅತ್ಯುತ್ತಮ ವಿಧಾನ. ಇದು ನಿಮ್ಮ ಚರ್ಮವನ್ನು ರಕ್ಷಿಸುತ್ತದೆ.

ಈ ಡಬಲ್ ಕ್ಲೆನ್ಸಿಂಗ್ ಯಾಕೆ ಮಾಡಬೇಕು/ ಅಗತ್ಯ?
ಈ ಡಬಲ್ ಕ್ಲೆನ್ಸಿಂಗ್ ಅನ್ನು ಸರಿಯಾದ ಕ್ರಮದಲ್ಲಿ ಮಾಡಿದ್ರೆ ಅತಿ ಶೀಘ್ರದಲ್ಲಿ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು. ಮುಖ್ಯವಾಗಿ ಪಿಗ್ಮಂಟೇಷನ್, ಸ್ಕಿನ್ ಬ್ರೇಕ್ ಔಟ್ (ಚರ್ಮ ಒಡೆಯುವುದು) ಇಂತಹ ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂಬುದನ್ನು ಖ್ಯಾತ ಚರ್ಮರೋಗ ತಜ್ಞೆ ನಿಕೆತಾ ಸೋನವನೆ ಹೇಳಿದ್ದಾರೆ.

ಡಬಲ್ ಕ್ಲೆನ್ಸಿಂಗ್ ಅಂದರೆ ಏನು?
ಈ ಡಬಲ್ ಕ್ಲೆನ್ಸಿಂಗ್ ಮುಖ್ಯವಾಗಿ ನಿಮ್ಮ ಚರ್ಮಕ್ಕೆ ಅಂಟಿಕೊಂಡಿರುವ ಮೇಕಪ್ ತೆಗೆಯಲು, ಸನ್ ಟ್ಯಾನ್ ತಡೆಗಟ್ಟಲು, ಅದೇ ರೀತಿ ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಮೇದೋಗ್ರಂಥಿಗಳನ್ನು ಒಡೆಯಲು ಸಹಾಯ ಮಾಡುವ ಶುದ್ಧೀಕರಿಸುವ ಎಣ್ಣೆಯೊಂದಿಗೆ ಶುದ್ಧ ನೀರು ಹಾಗೂ ಮೈಸೆಲ್ಲರ್ ನೀರನ್ನು ಸೇರಿಸಿ ಮುಖವನ್ನು ತೊಳೆಯುವ ಕ್ರಮವೇ ಡಬಲ್ ಕ್ಲೆನ್ಸಿಂಗ್.
ಆದರೆ ಈ ಕ್ರಮವನ್ನು ನಿಮ್ಮ ತ್ವಚೆಗೆ ಅನುಗುಣವಾಗಿ ಮಾಡಬೇಕು. ಮುಖ್ಯವಾಗಿ ಯಾರಿಗೆ ಪಿಗ್ಮಂಟೇಷನ್, ಗುಳ್ಳೆಗಳ ಸಮಸ್ಯೆ, ಶುಷ್ಕ ತ್ವಚೆಯ ಸಮಸ್ಯೆ ಇರುತ್ತದೆಯೋ ಅವರು ಈ ಡಬಲ್ ಕ್ಲೆನ್ಸಿಂಗ್ ಅನ್ನು ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಈ ಡಬಲ್ ಕ್ಲೆನ್ಸಿಂಗ್‌ಗೆ ಬಳಸುವ ವಸ್ತುಗಳು
ಇದಕ್ಕೆ ಮುಖ್ಯವಾಗಿ ರೋಸ್ ಹಿಪ್ ಎಣ್ಣೆ ಹಾಗೂ ಸಾವಯವ ಜೊಜೊಬಾ ಎಣ್ಣೆಯನ್ನು ಬಳಸಬೇಕು.

ಇದರ ಪ್ರಯೋಜನಗಳು
ಜೊಜೊಬಾ ಎಣ್ಣೆಯು ನಿಮ್ಮ ಚರ್ಮಕ್ಕೆ ಬೇಕಾದ ನೈಸರ್ಗಿಕ ಎಣ್ಣೆಯ ಅಂಶವನ್ನು ನೀಡುತ್ತದೆ. ಇನ್ನು ರೋಸ್‌ಶಿಪ್ ಎಣ್ಣೆಯು ತ್ವಚೆಯಲ್ಲಿನ ಡೆಡ್ ಸ್ಕಿನ್ (ಚರ್ಮದ ಸತ್ತ ಜೀವಕೋಶಗಳನ್ನು) ನ್ನು ತೊಡೆದುಹಾಕುತ್ತದೆ. ನಮ್ಮ ಚರ್ಮದಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾಗಬೇಕಾಗಿರುವ ಎಣ್ಣೆ ಉತ್ಪಾದನೆ ಆಗದೇ ಇದ್ದಾಗ ತ್ವಚೆ ಶುಷ್ಕವಾಗುತ್ತದೆ. ಈ ಶುಷ್ಕ ತ್ವಚೆಯಿಂದಾಗಿ ಮುಖವು ಕಳೆಗುಂದುತ್ತದೆ. ಅಲ್ಲದೆ, ಡೆಡ್ ಸ್ಕಿನ್ ಗಳು ಒಣ ಚರ್ಮದ ಮೇಲೆ ಹೆಚ್ಚು ಸಂಗ್ರಹಗೊಳ್ಳುತ್ತವೆ. ಹಾಗಾಗಿ ಈ ಎರಡು ಎಣ್ಣೆಗಳ ಸಂಯೋಜನೆಯು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ರಿಫ್ರೆಶ್ ಮಾಡುತ್ತದೆ.

ಡಬಲ್ ಕ್ಲೆನ್ಸಿಂಗ್ ಮಾಡುವ ಕ್ರಮ
* ನಿಮ್ಮ ಕೈಗಳಿಗೆ ರೋಸ್ ಹಿಪ್ ಎಣ್ಣೆ ಹಾಗೂ ಜೊಜೋಬಾ ಎಣ್ಣೆಯನ್ನು ಹಾಕಿಕೊಂಡು ಎರಡೂ ಕೈಗಳನ್ನು ಒಟ್ಟಿಗೆ ಉಜ್ಜುವ ಮೂಲಕ ಎಣ್ಣೆಯನ್ನು ಬೆಚ್ಚಗಾಗಿಸಿ. ನಂತರ ಮೃದುವಾಗಿ ವೃತ್ತಾಕಾರದಲ್ಲಿ, ಹೊರ ಮುಖವಾಗಿ ಕೈಗಳಿಂದ ಮುಖದ ಮೇಲೆ ಮಸಾಜ್ ಮಾಡಿ. ಇದನ್ನು ೨-5 ನಿಮಿಷಗಳ ಕಾಲ ಮುಂದುವರಿಸಿ.
* ಎಣ್ಣೆಯ ಮಸಾಜ್ ಮಾಡಿದ ನಂತರ, ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಮತ್ತೆ ಮೈಕೆಲ್ಲರ್ ನೀರನ್ನು ಬಳಸಿ ಮುಖವನ್ನು ಸ್ವಚ್ಛಗೊಳಿಸಿ. ಇನ್ನು ಇದರ ಬದಲು, ಮುಖವನ್ನು ಸಾಬೂನು ರಹಿತ ಕ್ಲೆನ್ಸರ್ ಮೂಲಕ, ಅಥವಾ ಕಡಲೆ ಹಿಟ್ಟಿನಿಂದಲೂ ಕೂಡ ಶುಚಿಗೊಳಿಸಬಹುದು.
* ಇನ್ನು ಮುಖ ತೊಳೆದ ಮೇಲೆ ನಿಮ್ಮ ತ್ವಚೆಗೆ ಯಾವುದಾದರೂ ಮಾಯಿಶ್ಚರೈಸರ್ ಹಚ್ಚಿದ್ರೆ ತ್ವಚೆಯು ಫ್ರೆಶ್ ಆಗಿ ಕಾಣುತ್ತದೆ. ಆದಷ್ಟು ರಾಸಾಯನಿಕ ಸೌಂದರ್ಯವರ್ಧಕಗಳ ಬಳಕೆ ಕಡಿಮೆ ಮಾಡಿದರೆ ಈ ರೀತಿಯ ಕ್ರಮಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ನಿಮ್ಮ ತ್ವಚೆಯ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.



Click it and Unblock the Notifications
