Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಹೊಳೆಯುವ, ಮೊಡವೆ ರಹಿತ ತ್ವಚೆಗೆ ಐಸ್‌ಕ್ಯೂಬ್ ನಿತ್ಯ ಬಳಸಿ
ಹೊಳೆಯುವ, ಕಾಂತಿಯುತ, ಮೊಡವೆ ರಹಿತ, ನಯವಾದ ತ್ವಚೆಯ ಯಾರಿಗೆ ತಾನೆ ಇಷ್ಟವಿಲ್ಲ. ಪ್ರತಿ ಹೆಣ್ಣುಮಕ್ಕಳು, ಅಲ್ಲದೆ ಇತ್ತೀಚೆಗೆ ಪುರುಷರು ಸಹ ತ್ವಚೆಯ ಕಾಳಜಿಯನ್ಉ ಹೆಚ್ಚು ಮಾಡುತ್ತಿರುವುದರಿಂದ ಪುರುಷರು ಎಲ್ಲರಿಗೂ ಉತ್ತಮ ತ್ವಚೆ ಹೊಂದಬೇಕು ಎಂಬುದು ಬಯಕೆಯಾಗಿರುತ್ತದೆ. ಅದರಲ್ಲೂ ಯಾವುದೇ ಕ್ರೀಮ್‌ಗಳ ಬಳಕೆ ಇಲ್ಲದೆ, ರಾಸಾಯನಿಕಗಳ ಸೋಗಿಲ್ಲದೆ ನೈಸರ್ಗಿಕವಾಗಿಯೇ ಇಂಥಾ ತ್ವಚೆ ನಿಮ್ಮದಾಗುತ್ತದೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ. ನಾವಿಂದು ನಿಮಗೆ ಇಂಥದ್ದೇ ಒಂದು ಬಹಳ ಸಿಂಪಲ್ ಟಿಪ್ಸ್ ಅನ್ನು ಹೇಳಲಿದ್ದೇವೆ.
ನೀರು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಅತ್ಯುತ್ತಮ ಅತ್ಯಗತ್ಯ ವಸ್ತು. ಈ ನೀರನ್ನು ಘನೀಕರಿಸಿದ ರೂಪ ಐಸ್‌ಕ್ಯೂಬ್ ಎಲ್ಲರಿಗೂ ಸುಲಭವಾಗಿ ಸಿಗುವ ವಸ್ತು. ಇದನ್ನು ನಿತ್ಯ ನಿಯಮಿತವಾಗಿ ತ್ವಚೆಗೆ ಅನ್ವಯಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿದೆ ಗೊತ್ತಾ?
ಹೌದು ಐಸ್ ಕ್ಯೂಬ್ ಅನ್ನು ನಿತ್ಯ ನಿಮ್ಮ ತ್ವಚೆಯ ಮೇಲೆ ಉಜ್ಜಿದರೆ ಧೂಳು, ಮಾಲಿನ್ಯ, ಬೆವರು, ಸೂರ್ಯನ ಕಿರಣಗಳು ಮತ್ತು ಬದಲಾಗುತ್ತಿರುವ ಹವಾಮಾನಗಳಿಂದ ರಕ್ಷಿಸುತ್ತದೆ. ಚರ್ಮವನ್ನು ಪುನರ್ಯೌವನಗೊಳಿಸಲು ಮತ್ತು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಚರ್ಮವು ಕಪ್ಪು ಚುಕ್ಕೆಗಳು, ಸನ್ ಬರ್ನ್, ಪಿಗ್ಮೆಂಟೇಶನ್ ಅಥವಾ ಮೊಡವೆ ಕಲೆಗಳನ್ನು ಹೊಂದಿದ್ದರೂ ಪರವಾಗಿಲ್ಲ. ಅವೆಲ್ಲವನ್ನೂ ನಿಭಾಯಿಸಲು ಐಸ್ ಸಹಾಯ ಮಾಡುತ್ತದೆ ಮತ್ತು ಅವುಗಳ ಮೇಲೆ ಮ್ಯಾಜಿಕ್ ನಂತಹ ಕೆಲಸ ಮಾಡುತ್ತದೆ. ಐಸ್ ಕ್ಯೂಬ್‌ನ ಇನ್ನಷ್ಟು ಪ್ರಯೋಜನಗಳ ಬಗ್ಗೆ ಮುಂದೆ ಹೇಳಲಿದ್ದೇವೆ:

ಮೊಡವೆ ನಿವಾರಿಸುತ್ತದೆ
ಮೊಡವೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುವುದರಿಂದ ನೀವು ಬೇಸರಗೊಂಡಿದ್ದರೆ ಇಂದೇ ಚಿಂತೆ ಬಿಡಿ. ಈ ಸಿಂಪಲ್ ಮನೆಮದ್ದಿನ ಮೂಲಕ ಮೊಡವೆಗೆ ಗುಡ್‌ಬೈ ಹೇಳಬಹುದು. ದಿನಕ್ಕೆ ಒಮ್ಮೆ ಐಸ್ ಕ್ಯೂಬ್ ಅನ್ನು ತೆಗೆದುಕೊಂಡು ಅದನ್ನು ನಿಮ್ಮ ಚರ್ಮದ ಮೇಲೆ ಉಜ್ಜಿಕೊಳ್ಳಿ. ಮೊಡವೆಗಳ ಮೇಲಿನ ಐಸ್ ಕ್ಯೂಬ್ ಮ್ಯಾಜಿಕ್ ನಂತಹ ಕೆಲಸ ಮಾಡುತ್ತದೆ. ಐಸ್ ಚರ್ಮದಲ್ಲಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಹೊಳೆಯುವ ಚರ್ಮವನ್ನು ನೀಡುತ್ತದೆ
ಹೊಳೆಯುವ ಚರ್ಮವನ್ನು ಹೊಂದಲು ಎಲ್ಲರಿಗೂ ಇಷ್ಟ. ಇದಕ್ಕೆ ಐಸ್ ಕ್ಯೂಬ್ ನಿಮಗೆ ಸಹಾಯ ಮಾಡುತ್ತದೆ. ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಪರಿಹಾರ ಇದಾಗಿದೆ. ಪ್ರತಿದಿನ ನಿಮ್ಮ ಮುಖದ ಮೇಲೆ ಐಸ್ ಕ್ಯೂಬ್ ಅನ್ನು ಉಜ್ಜುವುದರಿಂದ ಸರಿಯಾದ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ನಿಮ್ಮ ಮುಖವು ಹೆಚ್ಚು ಉತ್ಸಾಹಭರಿತ ಮತ್ತು ಕಾಂತಿಯುತವಾಗಿರುತ್ತದೆ.

ಡಾರ್ಕ್ ಸರ್ಕಲ್‌ಗೆ ಇದೆ ಮದ್ದು
ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್‌ಗೆ (ಕಪ್ಪು ವೃತ್ತ)ಗಳಿಗೆ ಹಲವು ಕಾರಣಗಳಿವೆ, ಅವುಗಳಲ್ಲಿ ಒಂದು ಸರಿಯಾದ ರಕ್ತ ಪರಿಚಲನೆ ಆಗದಿರುವುದು. ಇದಕ್ಕೆ ಪರಿಹಾರ ನೀವು ಕಪ್ಪು ವೃತ್ತಗಳ ಮೇಲೆ ಐಸ್ ಕ್ಯೂಬ್ ಅನ್ನು ಉಜ್ಜಿದಾಗ, ಆ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಡಾರ್ಕ್ ಸರ್ಕಲ್‌ಗಳನ್ನು ತೆಗೆದುಹಾಕುವುದು ಒಂದು ದಿನದಲ್ಲಿ ಆಗುವುದಿಲ್ಲ, ಫಲಿತಾಂಶಗಳನ್ನು ತೋರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಕ್ರೀಮ್‌ಗಳ ಹೀರಿಕೊಳ್ಳುವಿಕೆಯನ್ನು ಉತ್ತಮಗೊಳಿಸುತ್ತದೆ
ಅನೇಕ ಸೆಲೆಬ್ರಿಟಿಗಳು ಈ ತಂತ್ರವನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೆ. ನೀವು ಯಾವುದೇ ನೈಟ್ ಕ್ರೀಮ್ ಅಥವಾ ಯಾವುದೇ ಸೀರಮ್ ಅನ್ನು ಅನ್ವಯಿಸಿದಾಗ, ಅದರ ಮೇಲೆ ಐಸ್ ಕ್ಯೂಬ್ ಅನ್ನು ಉಜ್ಜುವುದರಿಂದ ಈ ಉತ್ಪನ್ನಗಳ ಸರಿಯಾದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಐಸ್ ರಂಧ್ರದ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಕ್ರೀಮ್ ಅನ್ನು ಹೆಚ್ಚು ಸಮಯ ಮುಖದಲ್ಲಿಯೇ ಉಳಿಯಲು ಸಹಾಯ ಮಾಡುತ್ತದೆ.

ಫೌಂಡೇಶನ್ ದೋಷರಹಿತ ಸರಿಯಾಗಿ ಕಾಣಲು
ಸೌಂದರ್ಯ ಟಿಪ್ಸ್‌ಗಳಲ್ಲಿ ಇದು ಅತ್ಯುತ್ತಮ ಟಿಪ್ಸ್ ಎನ್ನಬಹುದು. ನೀವು ನಿಮ್ಮ ತ್ವಚೆಗೆ ಫೌಂಡೇಷನ್ ಅನ್ನು ಅನ್ವಯಿಸಿದ ನಂತರ, ನಿಮ್ಮ ಮುಖದ ಮೇಲೆ ಐಸ್ ಕ್ಯೂಬ್ ಅನ್ನು ಉಜ್ಜಿಕೊಳ್ಳಿ. ಇದು ಫೌಂಡೇಷನ್ ಅನ್ನು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮೇಕಪ್ ದೋಷರಹಿತವಾಗಿ, ಪ್ಯಾಚ್ ಇಲ್ಲದಂತೆ ಕಾಣಲು ಸಹಕಾರಿಯಾಗಿದೆ.

ರಂಧ್ರಗಳನ್ನು ಕಡಿಮೆ ಮಾಡುತ್ತದೆ
ಐಸ್ ಕ್ಯೂಬ್‌ನ ಹಲವು ಪ್ರಯೋಜನಗಳಲ್ಲಿ ಇದು ಸಹ ಒಂದಾಗಿದೆ. ಮುಖದ ಮೇಲೆ ಪ್ರತಿ ದಿನ ಐಸ್ ಕ್ಯೂಬ್ ಅನ್ನು ನಯವಾಗಿ ಉಜ್ಜಿದರೆ, ದಿನಕಳೆದಂತೆ ಇದು ಚರ್ಮವನ್ನು ದೋಷರಹಿತ ಮತ್ತು ನಯವಾಗಿ ಮಾಡುತ್ತದೆ, ರಂಧ್ರಗಳನ್ನು ಕುಗ್ಗಿಸಲು ಸಹಾಯ ಮಾಡುತ್ತದೆ.



Click it and Unblock the Notifications