Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ತ್ವಚೆ ಬಿಳುಪಾಗಿಸುತ್ತೆ ಈ ಬೀಟ್‌ರೂಟ್ ಸೆರಮ್, ಇಲ್ಲಿದೆ ನೋಡಿ ಮಾಡುವ ವಿಧಾನ
ಮುಖ ಏಕೋ ಡಲ್ ಆಗಿ ಕಾಣುತ್ತಿದೆ, ತ್ವಚೆಗೆ ಹೊಳಪು ಬರುವಂತೆ ಮಾಡಲು ಏನು ಮಾಡಬೇಕೆಂದು ಯೋಚಿಸುತ್ತಿದ್ದರೆ ನೀವು ಸೆರಮ್ ಬಳಸುವುದು ಸೂಕ್ತ ಎಂಬುವುದೇ ನಾವು ನೀಡುವ ಟಿಪ್ಸ್ ಆಗಿದೆ.

ಸೆರಮ್ ಅಂದ ತಕ್ಷಣ ಅಯ್ಯೋ ಅದಕ್ಕೆ ಯಾರು ಅಷ್ಟೊಂದು ದುಡ್ಡು ಸುರಿಯುತ್ತಾರೆ ಎಂದು ಭಯಪಡಬೇಡಿ, ಏಕೆಂದರೆ ಇಲ್ಲಿ ನಾವು ನಿಮಗೆ ಮನೆಯಲ್ಲಿಯೇ ಸೆರಮ್ ಮಾಡುವ ಟಿಪ್ಸ್ ನೀಡಲಿದ್ದೇವೆ. ಈ ಸೆರಮ್ ಮಾಡಿ ಬಳಸಲಾರಂಭಿಸಿದರೆ ಹೆಚ್ಚಿನ ಖರ್ಚು ಇಲ್ಲದೆ ಬ್ಯೂಟಿ ಪಾರ್ಲರ್ ಹೋಗಿ ಫೇಶಿಯಲ್ ಮಾಡಿಸಿದಾಗ ಸಿಗುವ ಹೊಳಪನ್ನು ಪಡೆಬಹುದು.
ಹಾಗಾದರೆ ಆ ಸೆರಮ್ ಮಾಡುವುದು ಹೇಗೆ ಎಂದು ನೋಡೋಣವೇ? ಈ ಸೆರಮ್ ಅನ್ನು ನಾವು ಬೀಟ್‌ರೂಟ್ ಬಳಸಿ ಮಾಡಬಹುದು, ಇದನ್ನು ಪ್ರತಿದಿನ ಬಳಸುತ್ತಿದ್ದರೆ ತ್ವಚೆ ಹೊಳಪು ಕೂಡ ಹೆಚ್ಚಾಗುವುದು.

ಬೀಟ್‌ರೂಟ್ ತ್ವಚೆಗೆ ಏಕೆ ಒಳ್ಳೆಯದು?
ಬೀಟ್‌ರೂಟ್‌ನಲ್ಲಿ ಪೊಟಾಷ್ಯಿಯಂ, ಪ್ರೊಟೀನ್, ವಿಟಮಿನ್ ಎ, ವಿಟಮಿನ್ ಡಿ, ಸಿ, ವಿಟಮಿನ್ ಬಿ-6, ಕಬ್ಬಿಣದಂಶವಿದೆ. ಬೀಟ್‌ರೂಟ್ ಮುಖ ತ್ವಚೆಯ ಹೊಳಪು ಹೆಚ್ಚಿಸುವುದು, ಇದನ್ನು ಪ್ರತಿದಿನ ಬಳಸುತ್ತಿದ್ದರೆ ಕೆನ್ನೆ ಗುಲಾಬಿ ರಂಗು ಪಡೆಯುವುದು ಅಲ್ಲದೆ ಬೀಟ್‌ರೂಟ್‌ಗೆ ಮೊಡವೆ ನಿಯಂತ್ರಣ ಮಾಡುವ ಗುಣವೂ ಇದೆ.

ಬೀಟ್‌ರೂಟ್ ಸೆರಮ್ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
1 ಬೀಟ್‌ರೂಟ್
1 ಚಮಚ ರೋಸ್‌ವಾಟರ್
1 ಚಮಚ ಹಾಲು
2 ಚಮಚ ವಿಟಮಿನ್ ಇ ಮಾತ್ರೆ
1 ಚಮಚ ಅಲೋವರಾ ಜೆಲ್(ಲೋಳೆಸರ ರಸ)

ಮಾಡುವುದು ಹೇಗೆ?
- ಬೀಟ್‌ರೂಟ್ ತುರಿದು ಅದನ್ನು ಒಂದು ಬಿಳಿ ಶುದ್ಧ ಬಟ್ಟೆಯಲ್ಲಿ ಹಾಕಿ ಹಿಂಡಿ ಆ ರಸವನ್ನು ಒಂದು ಬೌಲ್‌ಗೆ ಹಾಕಿ.
- ಈಗ ರೋಸ್‌ವಾಟರ್, ಲೋಳೆಸರ ರಸ, ಹಾಲು, ವಿಟಮಿನ್ ಇ ಮಾತ್ರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
- ನಂತರ ಇದನ್ನು ಗಾಳಿಯಾಡದ ಗಾಜಿನ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಟ್ಟು 10-15 ದಿನ ಇಟ್ಟು ಬಳಸಬಹುದು.

ಬೀಟ್‌ರೂಟ್ ಸೆರಮ್ ಹೇಗೆ ಪರಿಣಾಮಕಾರಿ?
1. ಬೀಟ್‌ರೂಟ್ ತ್ವಚೆ ಹೊಳಪು ಹೆಚ್ಚಿಸುತ್ತದೆ, ಇದು ಮೊಡವೆ ನಿಯಂತ್ರಿಸುತ್ತದೆ ಹಾಗೂ ತ್ವಚೆಯಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.
2. ರೋಸ್ ವಾಟರ್ ಇದು ಅತ್ಯುತ್ತಮವಾದ ಕ್ಲೆನ್ಸರ್ ಆಗುದ್ದು ಇದು ಮುಖದಲ್ಲಿರುವ ಅಧಿಕ ಎಣ್ಣೆಯಂಶ ಉಂಟಾಗದಂತೆ ತಡೆಗಟ್ಟುತ್ತದೆ
3. ಲೋಳೆಸರ ರಸ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.
4. ವಿಟಮಿನ್ ಇ ಇದು ಹಾಳಾದ ತ್ವಚೆಯನ್ನು ಸರಿಪಡಿಸುತ್ತದೆ, ಇನ್ನು ಮುಖದಲ್ಲಿ ಕಲೆಗಳು ಇದ್ದರೆ ಅದನ್ನು ಹೋಗಲಾಡಿಸುತ್ತದೆ.
5. ಹಾಲು ಮುಖದ ಬಿಳುಪು ಹೆಚ್ಚಿಸುತ್ತದೆ, ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ.
ಸೂಚನೆ (ನಿಮ್ಮ ತ್ವಚೆ ತುಂಬಾ ಎಣ್ಣೆ-ಎಣ್ಣೆಯಾಗಿದ್ದರೆ ಹಾಲು ಹಾಕಬೇಡಿ)
ಈ ಸೆರಮ್ ಬಳಸುತ್ತಿದ್ದರೆ 15 ದಿನಗಳಲ್ಲಿ ನಿಮ್ಮ ತ್ವಚೆಯಲ್ಲಿ ಉಂಟಾದ ಬದಲಾವಣೆ ನಿಮ್ಮ ಗಮನಕ್ಕೆ ಬರುವುದು.



Click it and Unblock the Notifications
