Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮೊಟ್ಟೆಯ ಸಿಪ್ಪೆ ಬಳಸಿಕೊಂಡು ತ್ವಚೆಯ ಆರೈಕೆಗೆ ಸರಳ ವಿಧಾನಗಳು
ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ಮಾತಿದೆ. ಇದನ್ನು ಪ್ರತೀ ದಿನ ಸೇವಿಸಿದರೆ ಆರೋಗ್ಯವನ್ನು ಚೆನ್ನಾಗಿ ಕಾಪಾಡಿ ಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆದರೆ ಇದರ ಸಿಪ್ಪೆಯು ನಿಮ್ಮ ತ್ವಚೆಗೆ ತುಂಬಾ ಲಾಭಕಾರಿ ಎಂದು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ಇಲ್ಲ ತಾನೇ? ನೀವು ಯಾವಾಗಲೂ ಬೇಯಿಸಿದ ಮೊಟ್ಟೆ ತಿಂದು ಅಥವಾ ಆಮ್ಲೇಟ್ ಮಾಡಿದ ಬಳಿಕ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೀರಿ. ಆದರೆ ಇನ್ನು ಮುಂದೆ ನೀವು ಹಾಗೆ ಮಾಡಬಾರದು. ಇದನ್ನು ನಿಮ್ಮ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಬಹುದು. ಮೊಟ್ಟೆಯ ಲೋಳೆಯಲ್ಲಿ ತ್ವಚೆಗೆ ಲಾಭಕಾರಿ ಆಗುವ ಅಂಶಗಳು ಇದೆ ಎಂದು ನಮಗೆ ತಿಳಿದಿದೆ.
ಇದರಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ ಸಂಕೀರ್ಣವಿದೆ. ಇದು ಚರ್ಮದ ಆರೈಕೆ ಮಾಡುವುದು ಮತ್ತು ವಯಸ್ಸು ಆಗುವ ಲಕ್ಷಣಗಳನ್ನು ತಡೆಯುವುದು. ಆದರೆ ಮೊಟ್ಟೆ ಮಾತ್ರವಲ್ಲದೆ ಅದರ ಸಿಪ್ಪೆ ಕೂಡ ತ್ವಚೆಯನ್ನು ರಕ್ಷಿಸುವುದು ಎಂದು ನೀವು ಈ ಲೇಖನದ ಮೂಲಕ ತಿಳಿಯಬಹುದು. ಮೊಟ್ಟೆಯ ಸಿಪ್ಪೆಯು ಸ್ವಲ್ಪ ಘರ್ಷಕ ಗುಣವನ್ನು ಹೊಂದಿದೆ. ಇದು ತ್ವಚೆ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ನಯವಾದ ಚರ್ಮವು ಬರುವಂತೆ ಮಾಡುವುದು. ಇದರಲ್ಲಿ 750-800 ಮಿ.ಗ್ರಾಂ ಕ್ಯಾಲ್ಸಿಯಂ ಇದೆ. ಇದು ಚರ್ಮದ ಹೊಸ ಕೋಶಗಳನ್ನು ಪುನರುಜ್ಜೀವನಗೊಳಿಸುವುದು. ಕಲೆ ಹಾಗೂ ಬಿಸಿಲಿನ ಸುಟ್ಟ ಕಲೆಗಳನ್ನು ತೆಗೆದು ಚರ್ಮದ ಕಾಂತಿ ವೃದ್ಧಿಸುವುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ಇಂದಾಗಿ ಕಾಲಜನ್ ಮಟ್ಟವು ಸುಧಾರಣೆ ಆಗುವುದು, ಸ್ಥಿತಿಸ್ಥಾಪಕತ್ವ ಉತ್ತಮವಾಗುವುದು ಮತ್ತು ಚರ್ಮವು ತುಂಬಾ ಬಿಗಿ ಮತ್ತು ನಯವಾಗುವುದು. ಮೊಟ್ಟೆಯ ಸಿಪ್ಪೆ ಬಳಸಿಕೊಂಡು ಸೌಂದರ್ಯದ ಆರೈಕೆ ಮಾಡುವುದು ಹೇಗೆ ಎಂದು ಇಲ್ಲಿ ವಿವರವಾಗಿ ನೀಡಲಾಗಿದೆ. ಓದಿಕೊಳ್ಳಿ....

ಚರ್ಮಕ್ಕೆ ಮೊಟ್ಟೆಯ ಸಿಪ್ಪೆಯ ಲಾಭಗಳು
ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ನೆರವಾಗುವುದು
ವಯಸ್ಸಾಗುವುದನ್ನು ತಡೆಯುವುದು
ಕಾಂತಿ ಮತ್ತು ಹೊಳೆಯು ತ್ವಚೆ ನೀಡುವುದು
ಕಿರಿಕಿರಿ ಉಂಟು ಮಾಡುವ ಚರ್ಮಕ್ಕೆ ಶಮನ ನೀಡುವುದು
ನೆರಿಗೆ ಮತ್ತು ಗೆರೆ ಮೂಡುವುದನ್ನು ತಡೆಯುವುದು
ಕಪ್ಪು ಕಲೆ ನಿವಾರಣೆ ಮಾಡುವುದು
ಚರ್ಮದಲ್ಲಿನ ಸ್ಥಿತಿಸ್ಥಾಪಕತ್ವ ಕಾಪಾಡುವುದು. ಮೊಟ್ಟೆಯ ಸಿಪ್ಪೆಯನ್ನು ಚರ್ಮದ ಆರೈಕೆಗೆ ಬಳಸುವುದು ಹೇಗೆ

ಮೊಟ್ಟೆಯ ಸಿಪ್ಪೆ ಮತ್ತು ಆಪಲ್ ಸೀಡರ್ ವಿನೇಗರ್ ಚರ್ಮದ ಉರಿಯೂತಕ್ಕೆ ಪರಿಹಾರ
ಆಪಲ್ ಸೀಡರ್ ವಿನೇಗರ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ಇದು ಚರ್ಮದ ಸೋಂಕನ್ನು ತಡೆಯುವುದು ಮತ್ತು ಚರ್ಮದ ಉರಿಯೂತ ಕಡಿಮೆ ಮಾಡುವುದು.
ಬೇಕಾಗುವ ಸಾಮಗ್ರಿ
*½ ಕಪ್ ಆಪಲ್ ಸೀಡರ್ ವಿನೇಗರ್
*2 ಮೊಟ್ಟೆಯ ಸಿಪ್ಪೆ
ತಯಾರಿಸುವ ವಿಧಾನ
*ಮೊಟ್ಟೆಯ ಸಿಪ್ಪೆಯನ್ನು ಹುಡಿ ಮಾಡಿ ಮತ್ತು ಇದಕ್ಕೆ ಒಂದು ಅರ್ಧ ಪಿಂಗಾಣಿಯಷ್ಟು ಆಪಲ್ ಸೀಡರ್ ವಿನೇಗರ್ ಹಾಕಿ.
*ಇದು ಐದು ದಿನಗಳ ಕಾಲ ಹಾಗೆ ನೆನೆಯಲು ಬಿಡಿ.
*ಇದರ ಬಳಿಕ ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿಕೊಳ್ಳಿ ಮತ್ತು ಅದನ್ನು ತ್ವಚೆಗೆ ಹಚ್ಚಿಕೊಳ್ಳಿ.
*ಕೆಲವು ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ.
*ಉತ್ತಮ ಫಲಿತಾಂಶಕ್ಕಾಗಿ ನೀವು ವಾರದಲ್ಲಿ ಒಂದು ಅಥವಾ ಎರಡು ಸಲ ಹೀಗೆ ಮಾಡಿ.

ಮೊಟ್ಟೆಯ ಸಿಪ್ಪೆ ಮತ್ತು ಮೊಟ್ಟೆಯ ಬಿಳಿ ಭಾಗದಿಂದ ಚರ್ಮದ ರಂಧ್ರ ಕುಗ್ಗುವುದು
ಮೊಟ್ಟೆಯ ಬಿಳಿಯ ಭಾಗದಲ್ಲಿ ಸಂಕೋಚನ ಗುಣವು ಇದೆ ಮತ್ತು ಇದು ಚರ್ಮದ ರಂಧ್ರಗಳನ್ನು ಕುಗ್ಗಿಸಿ ಅದು ಬಿಗಿಯಾಗುವಂತೆ ಮಾಡುವುದು. ಇದರಿಂದಾಗಿ ಮುಖಕ್ಕೆ ಕಾಂತಿ ಹಾಗೂ ಹೊಳಪು ಬರುವುದು.
ಬೇಕಾಗುವ ಸಾಮಗ್ರಿಗಳು
*1 ಮೊಟ್ಟೆಯ ಬಿಳಿ ಭಾಗ
*1 ಮೊಟ್ಟೆಯ ಸಿಪ್ಪೆ
ತಯಾರಿಸುವ ಹಾಗು ಬಳಸುವ ವಿಧಾನ
*ಮೊಟ್ಟೆಯ ಸಿಪ್ಪೆಯನ್ನು ಸರಿಯಾಗಿ ಜಜ್ಜಿಕೊಳ್ಳಿ ಮತ್ತು ಅದು ಸರಿಯಾಗಿ ಒಣಗಲು ಬಿಡಿ.
*ಇದು ಒಣಗಿದ ಬಳಿಕ ರುಬ್ಬಿಕೊಂಡು ಹುಡಿ ಮಾಡಿ. ಇದನ್ನು ಒಂದು ಪಿಂಗಾಣಿಗೆ ಹಾಕಿ.
*ಮತ್ತೊಂದು ಮೊಟ್ಟೆ ತೆಗೆದು ಅದರಿಂದ ಹಳದಿ ಭಾಗ ಬೇರೆ ಮಾಡಿ.
*ಮೊಟ್ಟೆಯ ಸಿಪ್ಪೆಯ ಹುಡಿಯನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ಸೇರಿಸಿಕೊಂಡು ಸರಿಯಾಗಿ ಎರಡನ್ನು ಮಿಶ್ರಣ ಮಾಡಿಕೊಳ್ಳಿ.
*ಮುಖದ ಮೇಲೆ ಸರಿಯಾಗಿ ಇದನ್ನು ಹಚ್ಚಿಕೊಳ್ಳಿ ಮತ್ತು ಇದು ಒಣಗಲು ಬಿಡಿ.
*ತಣ್ಣೀರಿನಿಂದ ಮುಖ ತೊಳೆಯಿರಿ.
*ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಮೊಟ್ಟೆಯ ಸಿಪ್ಪೆ ಮತ್ತು ಜೇನುತುಪ್ಪದಿಂದ ಕಪ್ಪು ಕಲೆ ಮಾಯ
ಜೇನುತುಪ್ಪವು ಸತ್ತ ಚರ್ಮವನ್ನು ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಸತ್ತ ಚರ್ಮವನ್ನು ತೆಗೆಯುವುದು ಮತ್ತು ಚರ್ಮದಲ್ಲಿ ಇರುವಂತಹ ಕಲ್ಮಶ ಮತ್ತು ವಿಷವನ್ನು ತೆಗೆಯಲು ಇದು ನೆರವಾಗುವುದು. ಇದು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು ಮತ್ತು ಕಪ್ಪು ಕಲೆಗಳು ಅದಾಗಿಯೇ ಮಾಯವಾಗಲು ಇದು ನೆರವಾಗುವುದು.
ಬೇಕಾಗುವ ಸಾಮಗ್ರಿಗಳು
*ಒಂದು ಮೊಟ್ಟೆಯ ಸಿಪ್ಪೆ
*2 ಚಮಚ ಜೇನುತುಪ್ಪ
ತಯಾರಿಸಿಕೊಳ್ಳುವ ವಿಧಾನ
*ಮೊಟ್ಟೆಯ ಸಿಪ್ಪೆಯ ಹುಡಿ ಮತ್ತು ಜೇನುತುಪ್ಪವನ್ನು ಸರಿಯಾಗಿ ಪಿಂಗಾಣಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.
*ಇದನ್ನು ಮುಖಕ್ಕೆ ಸಂಪೂರ್ಣವಾಗಿ ಹಚ್ಚಿಕೊಂಡು ಒಣಗಲು ಬಿಡಿ.
*ತಣ್ಣೀರಿನಿಂದ ಮುಖ ತೊಳೆಯಿರಿ.
*ವಾರದಲ್ಲಿ ಒಂದು ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಮೊಟ್ಟೆಯ ಸಿಪ್ಪೆ ಮತ್ತು ಸಕ್ಕರೆಯಿಂದ ಸತ್ತ ಚರ್ಮದ ಕೋಶ ತೆಗೆಯುವುದು
ಸಕ್ಕರೆಯು ಚರ್ಮದಲ್ಲಿ ಮೊಶ್ಚಿರೈಸ್ ಆಗಿ ಇಡುವಂತೆ ಮಾಡುವುದು. ಚರ್ಮದಲ್ಲಿ ಇರುವಂತಹ ಸತ್ತ ಚರ್ಮದ ಕೋಶಗಳನ್ನು ಇದು ತೆಗೆಯುವುದು.
ಬೇಕಾಗುವ ಸಾಮಗ್ರಿಗಳು
*1 ಮೊಟ್ಟೆಯ ಸಿಪ್ಪೆ
*2 ಚಮಚ ಸಕ್ಕರೆ
ತಯಾರಿಸುವ ಹಾಗೂ ಬಳಸುವ ವಿಧಾನ
*ಮೊಟ್ಟೆಯ ಸಿಪ್ಪೆಯ ಹುಡಿ ಮತ್ತು ಜೇನುತುಪ್ಪವನ್ನು ಪಿಂಗಾಣಿಯಲ್ಲಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಈ ಮಿಶ್ರಣದಿಂದ ಮುಖಕ್ಕೆ ಸರಿಯಾಗಿ 3-5 ನಿಮಿಷ ಕಾಲ ಸ್ಕ್ರಬ್ ಮಾಡಿಕೊಳ್ಳಿ ಮತ್ತು 10 ನಿಮಿಷ ಕಾಲ ಹಾಗೆ ಬಿಡಿ.
*ತಣ್ಣೀರಿನಿಂದ ಇದನ್ನು ತೊಳೆಯಿರಿ.
*ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ನೀವು ಪ್ರಯೋಗಿಸಿ ನೋಡಿ.

ಮೊಟ್ಟೆಯ ಸಿಪ್ಪೆ ಮತ್ತು ಬೆಲ್ಲದಿಂದ ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು
ಬೆಲ್ಲವು ಹಲವಾರು ರಿತಿಯ ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು ಮತ್ತು ತಡೆಯುವುದು. ಇದರಲ್ಲಿ ಮುಖ್ಯವಾಗಿ ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆ ಮಾಡುವುದು ಹಾಗೂ ಬರದಂತೆ ತಡೆಯುವುದು ಮತ್ತು ಚರ್ಮಕ್ಕೆ ಪೋಷಣೆ ನೀಡುವುದು. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಇದು ಕಾಪಾಡುವುದು.
ಬೇಕಾಗುವ ಸಾಮಗ್ರಿಗಳು
*ಒಂದು ಮೊಟ್ಟೆಯ ಸಿಪ್ಪೆ
*ಒಂದು ಚಮಚ ಬೆಲ್ಲದ ಹುಡಿ
ಬಳಸುವ ವಿಧಾನ
*ಮೊಟ್ಟೆಯ ಸಿಪ್ಪೆಯನ್ನು ಹುಡಿ ಮಾಡಿ ಮತ್ತು ಇದು ಸಂಪೂರ್ಣವಾಗಿ ಒಣಗಲು ಬಿಡಿ.
*ಇದನ್ನು ರುಬ್ಬಿಕೊಂಡು ಮೆತ್ತಗಿನ ಹುಡಿ ಮಾಡಿ ಮತ್ತು ಒಂದು ಪಿಂಗಾಣಿಗೆ ಹಾಕಿ.
*ಇದಕ್ಕೆ ಸ್ವಲ್ಪ ಬೆಲ್ಲದ ಹುಡಿ ಹಾಕಿ.
*ಈ ಮಿಶ್ರಣವನ್ನು ಸಂಪೂರ್ಣವಾಗಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಒಣಗಲು ಬಿಡಿ.
*ತಣ್ಣೀರಿನಿಂದ ಮುಖ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಬಳಸಿ.



Click it and Unblock the Notifications











