Latest Updates
-
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ
ಎಣ್ಣೆಯುಕ್ತ ತ್ವಚೆಯವರಿಗೆ ಮೊಡವೆಗಳಾಗದಂತೆ ತಡೆಯಲು ಸರಳ ಮನೆಮದ್ದುಗಳು
ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವ ಹೆಣ್ಣು ಮಕ್ಕಳಿಗೆ ಮೊಡವೆಗಳ ಸಮಸ್ಯೆ ಬಾಧಿಸುವುದು ಹೆಚ್ಚು. ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವವರು ಕೆಲ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ಮೊಡವೆಗಳಾಗದಂತೆ ತಡೆಗಟ್ಟಬಹುದು.

ಅಂಥ ಎರಡು ಪ್ರಮುಖ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಮೊಡವೆಗಳಾಗದಂತೆ ತಡೆಯಲು ಎರಡು ಪ್ರಮುಖ ವಿಧಾನಗಳು

ನಿಂಬೆ ರಸ ಮತ್ತು ಜೇನು ತುಪ್ಪದ ಮಿಶ್ರಣ ವಿಧಾನ
ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವವರಿಗೆ ನಿಂಬೆ ಹಣ್ಣು ಅತ್ಯುತ್ತಮ ಪರಿಹಾರ ನೀಡಬಲ್ಲದು. ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಎಣ್ಣೆಯುಕ್ತ ತ್ವಚೆಯು ಹೆಚ್ಚುವರಿ ಎಣ್ಣೆಯ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಮೊಡವೆಗಳನ್ನು ನಿಯಂತ್ರಿಸಲು ನಿಂಬೆ ರಸ ಬಹಳ ಪರಿಣಾಮಕಾರಿ ಔಷಧವಾಗಿದೆ. ನಿಂಬೆ ರಸದಲ್ಲಿರುವ ಸಿಟ್ರಿಕ್ ಆಸಿಡ್ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ ಹಾಗೂ ಮೊಡವೆಗಳಾದ ನಂತರ ಉಂಟಾಗುವ ಕಲೆಗಳ ತೀವ್ರತೆಯನ್ನು ಸಹ ಕಡಿಮೆ ಮಾಡುತ್ತದೆ. ಜೇನು ತುಪ್ಪ ಕೂಡ ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಚರ್ಮದ ತೇವಾಂಶವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ ಹಾಗೂ ಮೊಡವೆಗಳಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಇದನ್ನು ಬಳಸುವುದು ಹೇಗೆ
*ಒಂದು ಚಮಚೆ ನಿಂಬೆ ರಸ ಹಾಗೂ ಅಷ್ಟೆ ಪ್ರಮಾಣದ ಜೇನು ತುಪ್ಪವನ್ನು ಬಟ್ಟಲಿಗೆ ಹಾಕಿಕೊಳ್ಳಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದಾಗ ಫೇಸ್ ಪ್ಯಾಕ್ ರೀತಿಯ ಪೇಸ್ಟ್ ರೆಡಿಯಾಗುತ್ತದೆ.
*ಚೆನ್ನಾಗಿ ಮುಖ ತೊಳೆದುಕೊಂಡು ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ.
ಮಿಶ್ರಣವನ್ನು ಚೆನ್ನಾಗಿ ಲೇಪಿಸಲು ಹತ್ತಿಯ ಉಂಡೆಯನ್ನು ಬಳಸುವುದು ಸೂಕ್ತ.
*ಲೇಪನವನ್ನು 15 ರಿಂದ 20 ನಿಮಿಷ ಇರಲು ಬಿಡಿ.
*ನಂತರ ಸಾದಾ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.
*ಈ ವಿಧಾನ ಆರಂಭಿಸಿದ ನಂತರ ಮೊಡವೆಗಳು ಕಡಿಮೆಯಾಗುವುದು ಹಾಗೂ ಚರ್ಮಕ್ಕೆ ಹೊಳಪು ಬರುವುದನ್ನು ನೀವೇ ನೋಡುವಿರಿ. ಮೊಡವೆಗಳ ಕಲೆಗಳು ಸಹ ಈ ಮಿಶ್ರಣದಿಂದ ಮಾಯವಾಗಲಾರಂಭಿಸುತ್ತವೆ. ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವವರಿಗಾಗಿ ಇದೊಂದು ಅತ್ಯಂತ ಪರಿಣಾಮಕಾರಿ ಮೊಡವೆ ಚಿಕಿತ್ಸಾ ವಿಧಾನವಾಗಿದೆ. ಆರಂಭದಲ್ಲಿ ಪ್ರತಿನಿತ್ಯ ಹಾಗೂ ಕೆಲ ದಿನಗಳ ನಂತರ ವಾರಕ್ಕೆರಡು ಬಾರಿ ಈ ವಿಧಾನ ಅನುಸರಿಸುವ ಮೂಲಕ ಮೊಡವೆಗಳಿಂದ ದೂರವಿರಬಹುದು.

ಕಡಲೆ ಹಿಟ್ಟು ಮತ್ತು ಮೊಸರಿನ ಫೇಸ್ ಪ್ಯಾಕ್
ಕಡಲೆ ಹಿಟ್ಟು ಹಾಗೂ ಮೊಸರು ಬಹುತೇಕ ಎಲ್ಲರ ಅಡುಗೆ ಮನೆಯಲ್ಲಿ ಇರುವ ವಸ್ತುಗಳೇ ಆಗಿವೆ. ಈ ವಸ್ತುಗಳನ್ನು ಹುಡುಕಾಡಲು ಮತ್ತೆಲ್ಲೂ ಹೋಗಬೇಕಿಲ್ಲ. ಕಡಲೆ ಹಿಟ್ಟು ಪ್ರೋಟೀನ್, ವಿಟಮಿನ್ ಹಾಗೂ ಮೊಸರು ವಿಟಮಿನ್ ಎ, ಸಿ ಗಳಿಂದ ಸಮೃದ್ಧವಾಗಿರುತ್ತವೆ. ಮೊಸರು ಚರ್ಮದ ತೇವಾಂಶವನ್ನು ಕಾಪಾಡಿ ಚರ್ಮಕ್ಕೆ ಮೃದುತ್ವವನ್ನು ನೀಡುತ್ತದೆ. ಇನ್ನು ಕಡಲೆ ಹಿಟ್ಟು ಚರ್ಮದಲ್ಲಿರುವ ಹೆಚ್ಚುವರಿ ಜಿಡ್ಡನ್ನು ನಿವಾರಿಸುತ್ತದೆ. ಹೀಗಾಗಿ ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವವರು ಮೊಡವೆ ತಡೆಗಟ್ಟಲು ಈ ವಿಧಾನ ಬಳಸುವುದು ಉಪಯುಕ್ತವಾಗಿದೆ.

ಇದನ್ನು ಬಳಸುವುದು ಹೇಗೆ
*2 ಟೇಬಲ್ ಸ್ಪೂನ್ ಕಡಲೆ ಹಿಟ್ಟು ಮತ್ತು ಒಂದು ಟೇಬಲ್ ಸ್ಪೂನ್ ಮೊಸರು ತೆಗೆದುಕೊಳ್ಳಿ. ಚಮಚೆಯೊಂದರಿಂದ ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.
ಈ ಪೇಸ್ಟ್‌ಗೆ ಎರಡು ಹನಿ ನಿಂಬೆ ರಸ ಹಾಗೂ ಚಿಟಿಕೆ ಅರಿಶಿನ ಪುಡಿ ಸೇರಿಸಿ ಮಿಕ್ಸ್ ಮಾಡಿ.
*ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಸಮನಾಗಿ ಲೇಪಿಸಿಕೊಳ್ಳಿ. ಈ ಮಿಶ್ರಣ ಒಣಗಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿರಲಿ.
*ಇದನ್ನು 20 ರಿಂದ 30 ನಿಮಿಷ ಇರಲು ಬಿಡಿ. ನಂತರ ಬೆಚ್ಚಗಿನ ನೀರು ಚಿಮುಕಿಸಿ ಫೇಸ್ ಪ್ಯಾಕ್ ಅನ್ನು ಸಡಿಲಗೊಳ್ಳುವಂತೆ ಮಾಡಿ.
*ಈಗ ನಿಧಾನವಾಗಿ ಉಜ್ಜುತ್ತ ಪ್ಯಾಕ್ ಅನ್ನು ತೆಗೆಯುತ್ತ ಬನ್ನಿ. ಹೀಗೆ ಉಜ್ಜುವುದರಿಂದ ಚರ್ಮದ ಸತ್ತ ಜೀವಕೋಶಗಳು ಸಹ ಹೊರ ಹೋಗುತ್ತವೆ. ನಂತರ ಸಾದಾ ನೀರಿನಿಂದ ಚೆನ್ನಾಗಿ ಮುಖ ತೊಳೆದುಕೊಳ್ಳಿ.
ಈ ಮಿಶ್ರಣದಲ್ಲಿ ಬಳಸಲಾಗಿರುವ ಅರಿಶಿನ ಹಾಗೂ ಜೇನು ತುಪ್ಪ ಸೋಂಕು ನಿರೋಧಕ ಗುಣಗಳನ್ನು ಹೊಂದಿವೆ. ಇವು ಚರ್ಮಕ್ಕೆ ಆರಾಮ ನೀಡಿ ಚರ್ಮದ ನೈಜ ಹೊಳಪು ಮರಳಲು ಸಹಾಯ ಮಾಡುತ್ತವೆ. ಅರಿಶಿನದಿಂದ ಚರ್ಮದ ನೈಜ ಬಣ್ಣವು ಮರಳಿ ಬರುತ್ತದೆ. ಅಲ್ಲದೆ ಅರಿಶಿನದಲ್ಲಿರುವ ಹಳದಿ ವರ್ಣದಿಂದ ಚರ್ಮದ ಕಾಂತಿ ಹೆಚ್ಚಾಗಿ ಚರ್ಮ ಹೊಳೆಯಲಾರಂಭಿಸುತ್ತದೆ. ಚರ್ಮಕ್ಕೆ ಹಾನಿ ಮಾಡಬಲ್ಲ ಪ್ರಖರ ಸೂರ್ಯನ ಕಿರಣಗಳ ಪ್ರಭಾವವನ್ನು ಸಹ ಅರಿಶಿನ ಕಡಿಮೆ ಮಾಡುತ್ತದೆ. ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸಬಲ್ಲ ಅಂಶಗಳು ಮೊಸರಿನಲ್ಲಿವೆ.
ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವವರು ಆರಂಭದಲ್ಲಿ ವಾರಕ್ಕೆರಡು ಬಾರಿ ಹಾಗೂ ನಂತರದಲ್ಲಿ 15 ದಿನಕ್ಕೊಮ್ಮೆ ಈ ವಿಧಾನ ಅನುಸರಿಸಿದಲ್ಲಿ ಮೊಡವೆಗಳ ಸಮಸ್ಯೆಯಿಂದ ಮುಕ್ತವಾಗಲು ಸಾಧ್ಯವಾಗುತ್ತದೆ.



Click it and Unblock the Notifications











