ನಿಮಗೆ ಗೊತ್ತೇ? ಬದನೆಕಾಯಿ ಬಳಸಿಕೊಂಡು ಕೂಡ ಸೌಂದರ್ಯ ಹೆಚ್ಚಿಸಬಹುದು!

ಪ್ರತಿಯೊಂದು ತರಕಾರಿ ಹಾಗು ಹಣ್ಣುಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಇರುವುದು. ಇದು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವುದರ ಜತೆಗೆ ಹಲವಾರು ರೀತಿಯಲ್ಲಿ ನಮಗೆ ನೆರವಾಗುವುದು. ಮುಖ್ಯವಾಗಿ ಇದು ನಮ್ಮ ಸೌಂದರ್ಯ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು. ಹಲವಾರು ತರಕಾರಿಗಳು ಹಾಗೂ ಹಣ್ಣುಗಳನ್ನು ಸೌಂದರ್ಯವರ್ಧಕವಾಗಿ ಬಳಕೆ ಮಾಡುವುದು ಹೇಗೆ ಎಂದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಈ ಲೇಖನದಲ್ಲಿ ಬದನೆಕಾಯಿ ಬಳಸಿಕೊಂಡು ಸೌಂದರ್ಯದ ಆರೈಕೆ ಹೇಗೆ ಎಂದು ತಿಳಿಯುವ.

ಬದನೆಕಾಯಿಯನ್ನು ತಿಂದರೆ ಅಥವಾ ಅದನ್ನು ಬಾಹ್ಯವಾಗಿ ಬಳಸಿಕೊಂಡರೂ ಅದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಸೌಂದರ್ಯದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಬದನೆಯಕಾಯಿಗೆ ಭಾರತವು ಮೂಲ ಎಂದು ಕೆಲವು ಇತಿಹಾಸ ತಜ್ಞರು ಹೇಳುತ್ತಾರೆ. ಆದರೆ ಇನ್ನು ಕೆಲವರ ಪ್ರಕಾರ ಇದು ಚೀನಾದಲ್ಲಿ ಮೊದಲ ಬಾರಿಗೆ ಬೆಳೆದಿರುವುದು ಎಂದು ಹೇಳಲಾಗುತ್ತದೆ. ಐದನೇ ಶತಮಾನದಲ್ಲಿ ಬದನೆಕಾಯಿಯು ಚೀನಾದಲ್ಲಿ ಕಂಡುಬಂದಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಅದೇನೇ ಇರಲಿ, ನಾವು ಇಲ್ಲಿ ಬದನೆಕಾಯಿಯು ನೀಡುವಂತಹ ಕೆಲವೊಂದು ಸೌಂದರ್ಯ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಕೆಲವು ಮಹಿಳೆಯರು ತಮ್ಮ ಹಲ್ಲುಗಳನ್ನು ಬದನೆಕಾಯಿಯಿಂದ ಉಜ್ಜಿಕೊಳ್ಳುತ್ತಿದ್ದರೆ ಎಂದು ಹೇಳಲಾಗುತ್ತದೆ. ಹಳದಿ ಬಣ್ಣಕ್ಕೆ ತಿರುಗಿರುವಂತಹ ಹಲ್ಲುಗಳು ಇದರಿಂದ ಶುದ್ಧವಾಗುವುದು ಎಂದು ಹೇಳಲಾಗುತ್ತದೆ.

ಕಂಡು ಕಲೆಗಳ ನಿವಾರಣೆ ಮಾಡುವುದು

ಕಂಡು ಕಲೆಗಳ ನಿವಾರಣೆ ಮಾಡುವುದು

ಮುಖದಲ್ಲಿ ಕಾಣಿಸಿಕೊಳ್ಳುವಂತಹ ಕಂದು ಕಲೆಗಳ ನಿವಾರಣೆ ಮಾಡಲು ಬದನೆಕಾಯಿ ಬಳಸಬಹುದು. ಚರ್ಮದಲ್ಲಿ ಮೆಲನಿನ್ ಅಂಶವು ಕಡಿಮೆ ಆದ ವೇಳೆ ಚರ್ಮದಲ್ಲಿ ಇಂತಹ ಕಂದು ಕಲೆಗಳು ಮೂಡುವುದು. ಇದು ಮುಖದ ಸೌಂದರ್ಯ ಕೆಡಿಸುವುದು. ಇದು ಮುಖ ಮಾತ್ರವಲ್ಲದೆ, ದೇಹದ ಯಾವುದೇ ಭಾಗದಲ್ಲೂ ಕಾಣಿಸಬಹುದು. ಬದನೆಕಾಯಿಯು ಇಂತಹ ಕಲೆಗಳನ್ನು ನಿವಾರಣೆ ಮಾಡುವುದು. ಬದನೆಕಾಯಿಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ಆಗ ಚರ್ಮದಲ್ಲಿನ ಕಂದು ಕಲೆಗಳು ಮಾಸುವುದು ಮತ್ತು ನೈಸರ್ಗಿಕವಾಗಿ ಇದು ನಿವಾರಣೆ ಆಗುವುದು. ನೀವು ಈ ವಿಧಾನ ಅನುಸರಿಸಿಕೊಂಡು ಹೋಗುತ್ತಲಿದ್ದರೆ ಆಗ ನೀವು ಹತ್ತು ದಿನಗಳ ಕಾಲ ಕಾಯಬೇಕು.

ಮೊದಲ ವಿಧಾನ

ಮೊದಲ ವಿಧಾನ

ಒಂದು ಬದನೆಕಾಯಿಯನ್ನು ¼ ಇಂಚುಗಳ ದಪ್ಪಗೆ ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ. ತಾಜಾ ಆಗಿರುವ ಮತ್ತು ಅದರಲ್ಲಿ ದ್ರವಾಂಶವಿರುವ ಬದನೆಕಾಯಿ ಬಳಸಿ.

ಎರಡನೇ ವಿಧಾನ

ಈ ಬದನೆಕಾಯಿ ತುಂಡುಗಳನ್ನು ವೃತ್ತಾಕಾರದಲ್ಲಿ ಮುಖದ ಮೇಲೆ ಇರುವಂತಹ ಕಂದು ಕಲೆಗಳ ಮೇಲೆ ಮೂರರಿಂದ ಐದು ನಿಮಿಷ ಕಾಲ ಉಜ್ಜಿಕೊಳ್ಳಿ. ಬದನೆಕಾಯಿಯಲ್ಲಿ ಪೈಥೋನ್ಯೂಟ್ರಿಯಂಟ್ಸ್ ಗಳು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿದೆ. ಇದೆಲ್ಲವೂ ಚರ್ಮಕ್ಕೆ ತುಂಬಾ ಲಾಭ ನೀಡಲಿದೆ.

ಮೂರನೇ ವಿಧಾನ

ಮೂರನೇ ವಿಧಾನ

ಬಿಸಿ ನೀರಿನಿಂದ ಮುಖ ತೊಳೆಯುವ ಮೊದಲು ಬದನೆಕಾಯಿ ರಸವನ್ನು ಸುಮಾರು 15 ನಿಮಿಷ ಕಾಲ ಮುಖದ ಮೇಲೆ ಹಾಗೆ ಇಡಿ. ಒಂದು ವಾರದ ಕಾಲ ನೀವು ಇದನ್ನು ಬಳಸಿಕೊಂಡರೆ ಆಗ ನಿಮಗೆ ಫಲಿತಾಂಶವು ಕಂಡುಬರುವುದು.

ನರವಲಿಗಳಿಗೆ ಗುಡ್ ವೈ ಹೇಳಿ

ನರವಲಿಗಳಿಗೆ ಗುಡ್ ವೈ ಹೇಳಿ

ನರವಲಿಗಳ ಮೇಲೆ ಬದನೆಕಾಯಿ ಬಳಕೆ ಮಾಡುವುದು ಹಿಂದಿನಿಂದಲೂ ಬಳಸಿಕೊಂಡು ಬಂದಿರುವಂತಹ ವಿಧಾನವಾಗಿದೆ. ಒಂದು ತುಂಡು ಬದನೆಕಾಯಿಯನ್ನು ತೆಗೆದುಕೊಂಡು ಅದನ್ನು ನರವಲಿಗಳ ಮೇಲೆ ಇಟ್ಟು ಬ್ಯಾಂಡೇಜ್ ಕಟ್ಟಿಕೊಳ್ಳಿ.

ವಿಧಾನ ಒಂದು

ಪ್ರತಿನಿತ್ಯ ನೀವು ಮಲಗಲು ಹೋಗುವ ಮೊದಲು ಒಂದು ತುಂಡು ಬದನೆಕಾಯಿ ತೆಗೆದುಕೊಳ್ಳಿ. ಇದನ್ನು ನರವಲಿ ಇರುವಲ್ಲಿ ಇಟ್ಟುಬಿಡಿ ಮತ್ತು ಅದಕ್ಕೆ ಬ್ಯಾಂಡೇಜ್ ಹಾಕಿಬಿಡಿ.

ವಿಧಾನ ಎರಡು

ನವರಲಿಗಳ ಚರ್ಮವು ತುಂಬಾ ಸುಲಭವಾಗಿ ಕಿತ್ತು ಹೋಗುವುದನ್ನು ನೀವು ಕಾಣಬಹುದು. ಒಂದು ತುಂಡು ಬದನೆಕಾಯಿಯನ್ನು ನರವಲಿ ಮೇಲೆ ರಾತ್ರಿ ವೇಳೆ ಇಡುವುದಾದರೆ, ಆಗ ನೀವು ತಾಜಾ ಬದನೆಕಾಯಿಯನ್ನು ಬಳಕೆ ಮಾಡಿ. ಎರಡು ವಾರಗಳಲ್ಲಿ ನಿಮಗೆ ಇದರಿಂದ ಫಲಿತಾಂಶ ಕಂಡುಬರುವುದು.

ನಿಯಂತ್ರಣ ಮತ್ತು ಚರ್ಮದ ಆರೈಕೆ

ನಿಯಂತ್ರಣ ಮತ್ತು ಚರ್ಮದ ಆರೈಕೆ

ಬದನೆಕಾಯಿಯ ಮಾಸ್ಕ್ ಎಣ್ಣೆಯಂಶವಿರುವ ಚರ್ಮ ಹೊಂದಿರುವಂತಹ ಮಹಿಳೆಯರಿಗೆ ತುಂಬಾ ನೆರವಾಗುವುದು. ಇದನ್ನು ನಿಮಗೆ ಸಮಯವಿದ್ದಾಗ ಮಾತ್ರ ಬಳಕೆ ಮಾಡಬೇಕು. ಯಾಕೆಂದರೆ ಹೆಚ್ಚಿನ ಮಾಸ್ಕ್ ನಂತೆ ಇದನ್ನು ಕೂಡ ಸುಮಾರು 20 ನಿಮಿಷ ಕಾಲ ಮುಖದ ಮೇಲೆ ಹಾಗೆ ಬಿಡಬೇಕು. ನೀವು ಹೀಗೆ ಮಾಡಿಕೊಳ್ಳಿ.

ವಿಧಾನ ಒಂದು

ಬದನೆಕಾಯಿಯ ದೊಡ್ಡ ತುಂಡು(ಸಣ್ಣ ಗಾತ್ರದ ಬದನೆಕಾಯಿಯ ¼ ಭಾಗ)ವನ್ನು ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವ ವೇಳೆ ತಾಜಾ ಮೊಸರನ್ನು ಎರಡು ಚಮಚದಷ್ಟು ಹಾಕಿಕೊಳ್ಳಿ.

ವಿಧಾನ ಎರಡು

ಮುಖದ ಮೇಲೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಡಿ ಮತ್ತು ಬಳಿಕ ಬಿಸಿ ನೀರಿನಿಂದ ತೊಳೆಯಿರಿ.

ಬದನೆಕಾಯಿಯು ವಯಸ್ಸಾಗುವ ವೇಳೆ ಬೀಳುವ ಕೆಲವು ಕಲೆಗಳನ್ನು ನಿವಾರಣೆ ಮಾಡುವುದು. ಎಣ್ಣೆಯಂಶ, ಸರಾಸರಿ ಅಥವಾ ಒಣ ಚರ್ಮವಿದ್ದರೂ ಇದು ಕಲೆ ನಿವಾರಿಸುವುದು. ಬದನೆಕಾಯಿಯನ್ನು ರುಬ್ಬಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಬಳಿಕ ಬಿಸಿ ನೀರಿನಿಂದ ತೊಳೆಯಿರಿ. ಫಲಿತಾಂಶ ಸಿಗುವ ತನಕ ಪ್ರತಿನಿತ್ಯ ಹೀಗೆ ಮಾಡಿ.

ಕೂದಲಿಗೂ ಇದು ಆರೈಕೆ ಮಾಡುವುದು

ಕೂದಲಿಗೂ ಇದು ಆರೈಕೆ ಮಾಡುವುದು

ಬದನೆಕಾಯಿಯಲ್ಲಿ ಇರುವಂತಹ ಕೆಲವೊಂದು ಕಿಣ್ವಗಳು ಕೂದಲಿನ ಕಿರುಚೀಲಗಳು ಉತ್ತೇಜನಗೊಂಡು ತುಂಬಾ ಆರೋಗ್ಯವಾಗಿ ಇರುವಂತೆ ಮಾಡುವುದು. ಜಿಡ್ಡಿನಾಂಶ ಇರುವಂತಹ ಕೂದಲಿನ ಸುಧಾರಣೆಗೆ ಇದು ನೆರವಾಗುವುದು. ಬದನೆಕಾಯಿ ತಿರುಳನ್ನು ಕೂದಲಿಗೆ ಹಚ್ಚಿಕೊಂಡು ನಿಧಾನವಾಗಿ ಉಜ್ಜಿಕೊಳ್ಳಿ.

English summary

Simple Home Beauty Remedies Using Eggplant

Eggplant is well recognized as a low-cal, nutritious vegetable but you may be surprised to know that eggplant carries at least four beauty benefits too. Whether eaten or used externally on your body, eggplant is a universal application for beauty and well as health.
X
Desktop Bottom Promotion