Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾವಿನ ಹಣ್ಣಿನ ಪಲ್ಪ್ ಫೇಸ್ ಪ್ಯಾಕ್- ಮನೆಯಲ್ಲಿಯೇ ಸರಳವಾಗಿ ಮಾಡಿ ನೋಡಿ
ಬೇಸಿಗೆ ಬಿಸಿಲು ಎಂದರೆ ಸಾಕು . ಅಬ್ಬಬ್ಬಾ ಎಂತಾ ಶೆಕೆ , ಮೈ ತುಂಬಾ ಬೆವರು , ಕಷ್ಟ ಪಟ್ಟು ಹಾಕಿದ ಮೇಕ್ ಅಪ್ ಎಲ್ಲಾ ಹೋಯಿತು ಎಂದು ಎಲ್ಲರೂ ಹೇಳುವುದು ಸಾಮಾನ್ಯ . ಮೇಕ್ ಅಪ್ ಹಾಗಿರಲಿ , ಬಿರು ಬಿಸಿಲಿಗೆ ಮೈ ಚರ್ಮದಲ್ಲಿನ ತೇವಾಂಶವೇ ಬತ್ತಿ ಹೋಗಿರುತ್ತದೆ . ಇನ್ನು ಚರ್ಮ ಕಾಂತಿಯುಕ್ತವಾಗಿರಲು ಮತ್ತು ನಯವಾಗಿ ನುಣುಪಾಗಿರಲು ಹೇಗೆ ತಾನೇ ಸಾಧ್ಯ?
ಬೇರೆ ಎಲ್ಲಾ ಸಮಯದಲ್ಲೂ ಸುಂದರವಾಗಿ ಕಾಣುವ ನಾವು ಬೇಸಿಗೆಯಲ್ಲಂತೂ ಎಷ್ಟೇ ಪ್ರಯತ್ನ ಪಟ್ಟು ಮೆಡಿಕಲ್ ಶಾಪ್ಗಳಲ್ಲಿ ಸಿಗುವ ಯಾವ್ಯಾವುದೋ ಕ್ರೀಮ್ ಗಳನ್ನೆಲ್ಲಾ ತಂದು ಉಪಯೋಗಿಸಿದರೂ ಹಣ ಒಂದು ಖರ್ಚು ಬಿಟ್ಟು ಬೇರೆ ಯಾವ ಪ್ರಯೋಜನ ಕೂಡ ಇರುವುದಿಲ್ಲ . ಕನ್ನಡಿಯಲ್ಲಿ ಮುಖ ನೋಡಿದರೆ ಸಪ್ಪೆ ಮುಖ ಕಂಡಂತೆ ಕಾಣುತ್ತದೆ . ಇದರಿಂದ ನೀವೆಲ್ಲರೂ ಹೇಗೂ ಬೇಸತ್ತಿದ್ದೀರಿ . ಒಮ್ಮೆ ನಾವು ಇಲ್ಲಿ ಸೂಚಿಸಿರುವ ಮಾವಿನ ಹಣ್ಣಿನ ಫೇಸ್ ಪ್ಯಾಕ್ ಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ಓಟ್ ಮೀಲ್ ಮತ್ತು ಮಾವಿನ ಹಣ್ಣಿನ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್ ಗಟ್ಟಿಯಾದ ಚರ್ಮದ ಅಂಶವನ್ನು ಕಡಿಮೆ ಮಾಡಿ ಚರ್ಮ ನುಣುಪಾಗುವಂತೆ ಮಾಡುತ್ತದೆ . ಮಾವಿನ ಹಣ್ಣು ಚರ್ಮಕ್ಕೆ ಅಗತ್ಯ ಪೋಷಕಾಂಶಗಳನ್ನು ಹಿಂದಿರುಗಿಸಿ ಕೊಟ್ಟರೆ ಓಟ್ ಮೀಲ್ ಮತ್ತು ಬಾದಾಮಿ ಬೀಜಗಳು ನೈಸರ್ಗಿಕ ಸ್ಕ್ರಬ್ಬಿಂಗ್ ಏಜೆಂಟ್ ಗಳ ಹಾಗೆ ಕೆಲಸಮಾಡುತ್ತವೆ. ಈ ಫೇಸ್ ಪ್ಯಾಕ್ ಅನ್ನು ತಯಾರಿಸಲು ಬೇಕಿರುವ ವಸ್ತುಗಳು:
*1 ಮಾವಿನ ಹಣ್ಣು
*7 - 8 ಬಾದಾಮಿ ಬೀಜಗಳು .
*3 ಟೀ ಚಮಚ ಓಟ್ ಮೀಲ್ .
*2 ಚಮಚದಷ್ಟು ಹಸಿ ಹಾಲು .
ತಯಾರಿಸುವ ವಿಧಾನ
*ಮಾವಿನ ಹಣ್ಣಿನ ತಿರುಳನ್ನು ಸಿಪ್ಪೆಯಿಂದ ಬೇರೆ ಮಾಡಿ ಮತ್ತು ಅದನ್ನು ಹಾಲಿನೊಂದಿಗೆ ಚೆನ್ನಾಗಿ ಬ್ಲೆಂಡ್ ಮಾಡಿ .
*ಈ ಮಿಶ್ರಣಕ್ಕೆ ಓಟ್ ಮೀಲ್ ಮತ್ತು ಬಾದಾಮಿ ಪುಡಿಯನ್ನು ಹಾಕಿ ನಯವಾಗಿ ಕಲಸಿ .
*ಈ ತೆಳುವಾದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ . 15 ನಿಮಿಷ ಬಿಟ್ಟು ಫೇಸ್ ಪ್ಯಾಕ್ ಅನ್ನು ಚೆನ್ನಾಗಿ ಉಜ್ಜಿ .
* ನಂತರ ಶುದ್ಧವಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ .

ಮಾವು ಮತ್ತು ಜೇನು ತುಪ್ಪದ ಫೇಸ್ ಪ್ಯಾಕ್
ಈ ರೀತಿಯ ಫೇಸ್ ಪ್ಯಾಕ್ ಮುಖದಲ್ಲಿ ಮೊಡವೆ ಹೊಂದಿರು ವವರಿಗೆ ಬಹಳ ಸೂಕ್ತವಾದ ಫೇಸ್ ಪ್ಯಾಕ್ . ಏಕೆಂದರೆ ಈ ಮಿಶ್ರಣದಲ್ಲಿ ಆಂಟಿ ಆಕ್ಸಿಡಾಂಟ್ ಇರುವುದರಿಂದ ಮುಖದ ಮೇಲಿನ ಮೊಡವೆಗಳನ್ನು ನಿವಾರಿಸಿ ಮುಖದ ಚರ್ಮ ನುಣುಪಾಗಿ ಕಾಂತಿಯುಕ್ತವಾಗುವಂತೆ ಮಾಡುತ್ತದೆ . ಫೇಸ್ ಪ್ಯಾಕ್ ಮಾಡಲು ಬೇಕಿರುವ ಸಾಮಗ್ರಿಗಳು
* 1/2 ಕಪ್ ಮಾವಿನ ಹಣ್ಣಿನ ತಿರುಳು .
* 1 ಚಮಚ ಜೇನು ತುಪ್ಪ.
* 1 ಚಮಚ ನಿಂಬೆ ರಸ.
ಮಾಡುವ ವಿಧಾನ
* ಮಾವಿನ ಹಣ್ಣನ್ನು ಜೇನು ತುಪ್ಪ ಮತ್ತು ನಿಂಬೆ ರಸದೊಂದಿಗೆ ಚೆನ್ನಾಗಿ ಕಲಸಿ .
* ಮುಖವನ್ನು ಚೆನ್ನಾಗಿ ತೊಳೆದು ಈ ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ ತೆಳುವಾಗಿ ಹಚ್ಚಿ.
* 20 ನಿಮಿಷಗಳ ನಂತರ ಫೇಸ್ ಪ್ಯಾಕ್ ತೆಗೆದು ಮುಖ ಗಾಳಿಗೆ ಆರಲು ಬಿಡಿ.

ಫುಲ್ಲರ್ಸ್ ಅರ್ಥ್ ಮತ್ತು ಮಾವಿನ ಹಣ್ಣಿನ ಫೇಸ್ ಪ್ಯಾಕ್
ಮುಖ ಬೇಸಿಗೆಯಲ್ಲಿ ಕಾಂತಿ ಕಳೆದುಕೊಂಡು ಅಲ್ಲಲ್ಲಿ ಮಚ್ಚೆಗಳನ್ನು ಹೊಂದಿ ಒಣಗಿದ ಮತ್ತು ಸುಕ್ಕು ಗಟ್ಟಿದ ಚರ್ಮದಂತಾಗುತ್ತದೆ.ಅಂತಹ ಚರ್ಮಕ್ಕೆ ಮತ್ತೆ ಅದರ ಕಾಂತಿಯನ್ನು ಮರಳಿಸಲು ಮತ್ತು ಚರ್ಮ ಯಾವಾಗಲೂ ಹಸಿಯಾಗಿರಲು ಈ ಮಾವಿನ ಹಣ್ಣಿನ ಮತ್ತು ಮುಲ್ತಾನಿ ಮಿಟ್ಟಿ ಯ ಫೇಸ್ ಪ್ಯಾಕ್ ಬಹಳ ಉಪಯುಕ್ತ .
ತಯಾರು ಮಾಡಲು ಬೇಕಿರುವ ವಸ್ತುಗಳು.
* 1 ಮಾವಿನ ಹಣ್ಣು
* 3 ಟೀ ಚಮಚದಷ್ಟು ಫುಲ್ಲರ್'ಸ್ ಅರ್ಥ್ (ಮುಲ್ತಾನಿ ಮಿಟ್ಟಿ ) .
* 2 ಚಮಚ ನೀರು
* 1 ಚಮಚ ಗಟ್ಟಿ ಮೊಸರು.
ತಯಾರು ಮಾಡುವ ಮತ್ತು ಬಳಸುವ ವಿಧಾನ
* ಮಾವಿನ ಹಣ್ಣನ್ನು ಮೊಸರಿನ ಜೊತೆ ರುಬ್ಬಿಕೊಳ್ಳಿ .
* ಮುಲ್ತಾನಿ ಮಿಟ್ಟಿಯನ್ನು ಹಾಕಿ ನೀರಿನಲ್ಲಿ ಒಳ್ಳೆಯ ಹದಕ್ಕೆ ಬರುವ ಹಾಗೆ ಚೆನ್ನಾಗಿ ಕಲಸಿ.
* ಮುಖದ ಮೇಲೆ ಈ ಫೇಸ್ ಪ್ಯಾಕ್ ಹಚ್ಚಿ. 20 ನಿಮಿಷದ ನಂತರ ಮುಖವನ್ನು ಚೆನ್ನಾಗಿ ತೊಳೆಯಿರಿ.

ಕಡಲೆ ಹಿಟ್ಟು ಮತ್ತು ಮಾವಿನ ಹಣ್ಣಿನ ಫೇಸ್ ಪ್ಯಾಕ್
ಸಾಮಾನ್ಯವಾಗಿ ಮುಖ ಬೇಸಿಗೆ ಬಿಸಿಲಿಗೆ ಕಪ್ಪಾದಂತೆ ಕಾಣುತ್ತದೆ . ಅಂತಹವರಿಗೆ ಹೇಳಿ ಮಾಡಿಸಿದ ಫೇಸ್ ಪ್ಯಾಕ್ ಇದು. ಜೇನು
ತುಪ್ಪದಲ್ಲಿ ಆಂಟಿ ಆಕ್ಸಿಡಾಂಟ್ ಇರುವುದರಿಂದ ಮತ್ತು ಇತರೆ ವಸ್ತುಗಳಲ್ಲಿ ಚರ್ಮಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿರುವುದರಿಂದ ಈ ಫೇಸ್ ಪ್ಯಾಕ್ ಇಂದಿಗೂ ತನ್ನ ಹಿರಿಮೆಯನ್ನು ಉಳಿಸಿಕೊಂಡಿದೆ .
ತಯಾರಿಸುವ ವಸ್ತುಗಳು ಏನೇನು ಬೇಕು :
* 1 ಮಾವಿನ ಹಣ್ಣು
* 4 ಟೀ ಚಮಚ ಕಡಲೆ ಹಿಟ್ಟು
* 1 ವಾಲ್ ನಟ್
* 1 ಟೀ ಚಮಚ ಜೇನು ತುಪ್ಪ
ತಯಾರಿಸುವ ವಿಧಾನ
* ಮಾವು ಮತ್ತು ಜೇನು ತುಪ್ಪದ ಪ್ಯೂರೀ ತಯಾರಿಸಿಕೊಳ್ಳಿ .
* ಅದಕ್ಕೆ ಕಡಲೆ ಹಿಟ್ಟು ಮತ್ತು ವಾಲ್ ನಟ್ ಪುಡಿಯನ್ನು ಹಾಕಿ ಮಿಶ್ರ ಮಾಡಿ
* ಈ ರೀತಿ ತಯಾರು ಮಾಡಿಕೊಂಡ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ. 15 ನಿಮಿಷದ ನಂತರ ಒಂದು ಬಟ್ಟೆ ತೆಗೆದುಕೊಂಡು ಒರೆಸಿ .
* ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ.

ಆವಕಾಡೊ ಮತ್ತು ಮಾವಿನ ಹಣ್ಣಿನ ಫೇಸ್ ಪ್ಯಾಕ್
ಕೆಲವರು ವಯಸ್ಸಿನಲ್ಲಿ ಚಿಕ್ಕವರಿದ್ದರೂ ಅವರ ಮುಖ ನೋಡಿದರೆ ವಯಸ್ಸಾದಂತೆ ಕಾಣುತ್ತಾರೆ. ಅಂತಹವರಿಗೆ ಈ ಫೇಸ್ ಪ್ಯಾಕ್ ಸಹಾಯ ಮಾಡುತ್ತದೆ. ಈ ಫೇಸ್ ಪ್ಯಾಕ್ ನಲ್ಲಿ ಫೈಟೋ ಕೆಮಿಕಲ್ ಗಳು ಮತ್ತು ಆಂಟಿ ಆಕ್ಸಿಡಾಂಟ್ ಗಳಿರುವುದರಿಂದ ಚರ್ಮವನ್ನು ಒಳಗಿನಿಂದಲೇ ತೇವವಾಗಿರುವಂತೆ ಮಾಡುತ್ತದೆ . ಮುಖದ ಮೇಲೆ ಕೂದಲು ಬೆಳೆಯುವುದನ್ನು ಸಹ ಈ ಫೇಸ್ ಪ್ಯಾಕ್ ತಡೆಯುತ್ತದೆ . ತಯಾರಿಸಲು ಯಾವ ವಸ್ತುಗಳು ಎಷ್ಟು ಪ್ರಮಾಣದಲ್ಲಿ ಬೇಕಾಗುತ್ತವೆ :
* 1 ಟೀ ಚಮಚ ಮಾವಿನ ತಿರುಳು .
* 2 ಟೀ ಚಮಚ ಅವಕಾಡೊ ಪ್ಯೂರೀ .
* 1 ಟೀ ಚಮಚ ಶುದ್ಧವಾದ ತೆಂಗಿನ ಎಣ್ಣೆ .
ಹೇಗೆ ತಯಾರಿಸುವುದು ?
* ಅವಕ್ಯಾಡೊ ಪ್ಯೂರಿಯನ್ನು ಮತ್ತು ಮಾವಿನ ಹಣ್ಣಿನ ತಿರುಳನ್ನು ಚೆನ್ನಾಗಿ ಕಲಸಿ.
* ಈ ರೀತಿ ಮಾಡಿದ ಮಿಶ್ರಣಕ್ಕೆ ತೆಂಗಿನ ಎಣ್ಣೆ ಹಾಕಿ ಮತ್ತೆ ಮಿಶ್ರ ಮಾಡಿ.
* ಶುದ್ಧವಾಗಿ ತೊಳೆದ ಮುಖದ ಮೇಲೆ ವೃತ್ತಾಕಾರವಾಗಿ ಈ ಫೇಸ್ ಪ್ಯಾಕ್ ಅನ್ನು ಮಸಾಜ್ ಮಾಡಿ .
* ಸುಮಾರು 15 - 20 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.



Click it and Unblock the Notifications
