Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಬರೀ 15 ದಿನಗಳಲ್ಲಿ ಕುತ್ತಿಗೆಯ ಕಪ್ಪು ಕಲೆ ನಿವಾರಿಸಲು ಶಿಯಾ ಬಟರ್ ಬಳಸಿ
ಮುಖದ ಸೌಂದರ್ಯದೊಂದಿಗೆ ಎಲ್ಲರಿಗೂ ಕಾಣುವಂತಹದ್ದು ಕುತ್ತಿಗೆ. ನೀವು ಕೇವಲ ಮುಖದ ಸೌಂದರ್ಯದ ಕಡೆ ಗಮನಹರಿಸಿ, ಕುತ್ತಿಗೆಯನ್ನು ಕಡೆಗಣಿಸಿದರೆ, ಆಗ ಖಂಡಿತವಾಗಿಯೂ ಅದು ತುಂಬಾ ವ್ಯತ್ಯಾಸ ಕಾಣಿಸುವುದು. ಹೀಗಾಗಿ ಮುಖದೊಂದಿಗೆ ಕುತ್ತಿಯನ್ನು ಕೂಡ ಆರೈಕೆ ಮಾಡಬೇಕು. ಕೆಲವೊಂದು ಸಲ ಕುತ್ತಿಗೆಯಲ್ಲಿ ಕಲೆಗಳು ಕಂಡು ಬರುವುದು. ಇಂತಹ ಕಲೆಗಳನ್ನು ನೋಡಿ ಖಂಡಿತವಾಗಿಯೂ ನಿಮಗೆ ಸ್ವಲ್ಪ ಮಟ್ಟಿಗೆ ಆಘಾತವಾಗುವುದು. ಆದರೆ ಇದು ಒಂದು ದಿನದಲ್ಲಿ ನಡೆದಿರುವಂತಹ ವಿಚಾರವಲ್ಲ. ಕುತ್ತಿಗೆ ಮೇಲೆ ಕಾಣಿಸುವಂತಹ ಕಪ್ಪು ಕಲೆಗಳು ಹೇಗೆ ಮೂಡಿದೆ ಎಂದು ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗಬಹುದು. ಇದನ್ನು ಹೋಗಲಾಡಿಸುವುದು ಹೇಗೆ ಎನ್ನುವ ಪ್ರಶ್ನೆ ಕೂಡ ನಿಮ್ಮಲ್ಲಿ ಮೂಡಬಹುದು.
ಇದಕ್ಕಾಗಿ ನೀವು ಅಡುಗೆ ಮನೆಯಲ್ಲಿ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದು. ಇದು ಕುತ್ತಿಗೆಯಲ್ಲಿ ಇರುವಂತಹ ಕಪ್ಪು ಕಲೆಗಳನ್ನು ತುಂಬಾ ಸುಲಭವಾಗಿ ತೆಗೆದುಹಾಕುವುದು. ಕುತ್ತಿಗೆಯಲ್ಲಿನ ಕಲೆಗೆ ಔಷಧಿ ಬಗ್ಗೆ ಹೇಳುವ ಮೊದಲು ಅದು ಹೇಗೆ ಬರುವುದು ಎಂದು ತಿಳಿಯುವುದು ಅತೀ ಅಗತ್ಯವಾಗಿ ಇರುವುದು.

ಇದಕ್ಕೆ ಮೊದಲ ಕಾರಣವೆಂದರೆ ನಾವೆಲ್ಲರೂ ಕುತ್ತಿಗೆ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದು. ನಾವು ಯಾವಾಗಲೂ ಮುಖಕ್ಕೆ ಫೇಸ್ ವಾಶ್, ಟೋನರ್, ಮೊಶ್ಚಿರೈಸರ್, ಲೋಷನರ್, ಸ್ಕ್ರಬ್ ಮತ್ತು ಫೇಸ್ ಪ್ಯಾಕ್‌ಗಳನ್ನು ಹಾಕುತ್ತೇವೆ. ಆದರೆ ಇದೇ ರೀತಿಯ ಗಮನವನ್ನು ಕುತ್ತಿಗೆ ಕಡೆ ಯಾವತ್ತೂ ನೀಡಿಲ್ಲ. ಇದರಿಂದಾಗಿ ಕುತ್ತಿಗೆ ಕಡೆ ಗಮನಹರಿಸುವುದು ಅತೀ ಅಗತ್ಯವಾಗಿರುವುದು. ಮೊಶ್ಚಿರೈಸ್, ಲೋಷನ್ ಮತ್ತು ಮನೆಯಲ್ಲೇ ತಯಾರಿಸಿದ ಪ್ಯಾಕ್ ಬಳಸಿಕೊಂಡು ನಿಯಮಿತವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಮುಖ ಮತ್ತು ಕುತ್ತಿಗೆ ಬಣ್ಣವು ಸರಿಯಾಗಿ ಹೊಂದಿಕೊಳ್ಳುವುದು. ಆಗ ಮಾತ್ರ ನಿಮ್ಮ ಸೌಂದರ್ಯ ಉತ್ತಮವಾಗಿ ಕಾಣುವುದು
ಕಪ್ಪು ಕುತ್ತಿಗೆಗೆ ಶಿಯಾ ಬೆಣ್ಣೆ ಬಳಕೆ ಮಾಡುವುದು ಹೇಗೆ?
ಶಿಯಾ ಬೆಣ್ಣೆ ಬಳಸಿಕೊಂಡು ಮಸಾಜ್ ಕ್ರೀಮ್‌ನ್ನು ತಯಾರಿಸಿಕೊಂಡು ಅದನ್ನು ಒಂದು ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಬೇಕು. ಅಗತ್ಯವೆನಿಸಿದಾಗ ತೆಗೆದು ಬಳಸಿಕೊಳ್ಳಬೇಕು.
ಬೇಕಾಗುವ ಸಾಮಗ್ರಿಗಳು
*4 ಚಮಚ ಶಿಯಾ ಬೆಣ್ಣೆ
*1 ಚಮಚ ಮೊಸರು
*½ ಚಮಚ ಅರಿಶಿನ
*1 ಚಮಚ ಲಿಂಬೆರಸ
*1 ಚಮಚ ವಿಟಮಿನ್ ಇ ತೈಲ
ತಯಾರಿಸುವ ವಿಧಾನ
•ಸಣ್ಣ ಪಿಂಗಾಣಿಗೆ ಶಿಯಾ ಬೆಣ್ಣೆ ಹಾಕಿ.
•ಇದರ ಬಳಿಕ ಮೊಸರು ಹಾಕಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಇದಕ್ಕೆ ಅರಿಶಿನ ಹುಡಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
•ಇದರ ಬಳಿಕ ಲಿಂಬೆ ರಸ ಹಾಕಿಕೊಂಡು ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿ.
•ಅಂತಿವಾಗಿ ವಿಟಮಿನ್ ಇ ಎಣ್ಣೆ ಹಾಕಿ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಮುಚ್ಚಳ ಬಿಗಿಯಾಗಿರುವ ಡಬ್ಬಕ್ಕೆ ಹಾಕಿ ಮತ್ತು ಅದನ್ನು ಹಾಗೆ ತೆಗೆದಿಡಿ.
•ಇದರ ಸ್ವಲ್ಪ ಪ್ರಮಾಣ ತೆಗೆದುಕೊಂಡು ಅದನ್ನು ಕುತ್ತಿಗೆಗೆ ಮಸಾಜ್ ಮಾಡಬಹುದು. 15-20 ನಿಮಿಷ ಹಾಗೆ ಬಿಡಬೇಕು ಮತ್ತು ಬಳಿಕ ನೀರಿನಿಂದ ತೊಳೆಯಿರಿ.
•ಕಪ್ಪು ಕಲೆ ನಿವಾರಣೆ ಮಾಡಲು ಕುತ್ತಿಗೆಗೆ ಇದನ್ನು ಪ್ರತಿನಿತ್ಯ ಬಳಸಿಕೊಳ್ಳಬೇಕು.
ಇದು ಹೇಗೆ ಕೆಲಸ ಮಾಡುವುದು
•ಕುತ್ತಿಗೆಯಲ್ಲಿ ಇರುವಂತಹ ಕಪ್ಪು ಕಲೆ ನಿವಾರಣೆ ಮಾಡಲು ಇದು ಅದ್ಭುತವಾಗಿ ಕೆಲಸ ಮಾಡುವುದು. ಯಾಕೆಂದರೆ ಇದರಲ್ಲಿ ಎಲ್ಲಾ ರೀತಿಯ ಸಾರಭೂತ ಮತ್ತು ಪರಿಣಾಮಕಾರಿ ಅಂಶಗಳು ಇದೆ. ಶಿಯಾ ಬೆಣ್ಣೆ, ಅರಶಿನ, ವಿಟಮಿನ್ ಇ, ಮೊಸರು ಮತ್ತು ಲಿಂಬೆ ಇದೆ.
•ಶಿಯಾ ಬೆಣ್ಣೆಯಲ್ಲಿ ಪೋಷಣೆ ನೀಡುವ ಮತ್ತು ತೇವಾಂಶ ನೀಡುವಂತಹ ಗುಣ ಇದೆ. ಇದರಿಂದಾಗಿ ಚರ್ಮವು ತುಂಬಾ ನಯ ಹಾಗೂ ಸುಂದರವಾಗಿ ಇರುವುದು. ಇದು ಚರ್ಮದ ಕಾಂತಿ ಹೆಚ್ಚಿಸುವುದು ಮತ್ತು ಕಪ್ಪು ಕಲೆ ನಿವಾರಣೆ ಮಾಡಲು ನೆರವಾಗುವುದು.
•ಮೊಸರಿನಲ್ಲಿ ನೈಸರ್ಗಿಕ ಕಿಣ್ವಗಳು ಇದೆ ಮತ್ತು ಇದು ಕಪ್ಪು ಕಲೆ ನಿವಾರಣೆ ಮಾಡುವುದು. ಇಷ್ಟು ಮಾತ್ರವಲ್ಲದೆ ಚರ್ಮಕ್ಕೆ ಪೋಷಣೆ ಹಾಗೂ ಚರ್ಮವನ್ನು ನಯವಾಗಿಸುವುದು.
•ಅರಿಶಿನದಲ್ಲಿ ಇರುವಂತಹ ಚರ್ಮವನ್ನು ಬಿಳಿಯಾಗಿಸುವಂತಹ ಗುಣಗಳು ಕಪ್ಪು ಕಲೆಗಳ ನಿವಾರಣೆ ಮಾಡಲು ಅದ್ಬುತವಾಗಿ ಕೆಲಸ ಮಾಡುವುದು. ಇದು ಕುತ್ತಿಗೆಗೆ ಶಮನ ನೀಡುವಂತಹ ಗುಣ ಕೂಡ ಹೊಂದಿದೆ.
•ನೈಸರ್ಗಿಕ ಬ್ಲೀಚಿಂಗ್ ಗುಣಗಳು ಇರುವಂತಹ ಲಿಂಬೆರಸವು ಕಪ್ಪು ಕಲೆ ತೆಗೆಯಲು ಪರಿಣಾಮಕಾರಿ. ಇದು ಬಣ್ಣವನ್ನು ಹೆಚ್ಚಿಸುವುದು ಮತ್ತು ಚರ್ಮದ ರಂಧ್ರಗಳನ್ನು ಕುಗ್ಗಿಸುವುದು.
•ವಿಟಮಿನ್ ಇ ಯಲ್ಲಿ ಕಿಣ್ವಗಳು ಇವೆ ಮತ್ತು ಇದು ಚರ್ಮದ ಮೇಲೆ ಅದ್ಭುತವಾಗಿ ಕೆಲಸ ಮಾಡುವುದು. ಇದು ಪೋಷಣೆ ಹಾಗೂ ಮಾಯಿಶ್ಚರೈಸ್ ಮಾಡುವುದು.



Click it and Unblock the Notifications

