Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ನಾಲ್ಕು ಚಾಕಲೇಟ್ ಫೇಸ್ ಮಾಸ್ಕ್‌ಗಳು
ಸೌಂದರ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ಉತ್ಪನ್ನಗಳನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಇರುವಂತಹದ್ದು ಫೇಸ್ಮಾ ಸ್ಕ್ ಗಳು ಮತ್ತು ಫೇಶಿಯಲ್. ಇದನ್ನು ಮಾರುಕಟ್ಟೆಯಿಂದ ತಂದು ಬಳಸುವ ಜನರೇ ಅಧಿಕ. ಇದರ ಹೊರತಾಗಿ ಕೆಲವರು ಸಲೂನ್ ಗೆ ಹೋಗಿ ಅಲ್ಲಿ ಫೇಸ್ ಮಾಸ್ಕ್ ಬಳಸಿಕೊಳ್ಳುವರು ಮತ್ತು ಫೇಶಿಯಲ್ ತಯಾರಿಸುವರು. ಆದರೆ ನೀವು ಮನೆಯಲ್ಲಿ ಕೆಲವೊಂದು ಫೇಸ್ ಮಾಸ್ಕ್ ಗಳನ್ನು ತಯಾರಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ನೀವು ಇಷ್ಟಪಟ್ಟು ತಿನ್ನುವಂತಹ ಚಾಕಲೇಟ್ ಬಳಸಿಕೊಂಡು ಫೇಸ್ ಮಾಸ್ಕ್ ತಯಾರಿಸಿ ಕೊಳ್ಳಬಹುದು.
ಚಾಕಲೇಟ್ ತಿಂದರೆ ಅದರಿಂದ ಹಲವಾರು ಆರೋಗ್ಯ ಲಾಭಗಳು ಇದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಚಾಕಲೇಟ್ ನ್ನು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದು. ಇದನ್ನು ಬಳಸಿಕೊಂಡರೆ ಆಗ ಚರ್ಮವು ಕಾಂತಿಯುತವಾಗಿ ಇರುವುದು. ನೀವು ಚಾಕಲೇಟ್ ನ್ನು ಇಷ್ಟಪಡುವಂತೆ ಚರ್ಮಕ್ಕೆ ಕೂಡ ಚಾಕಲೇಟ್ ತುಂಬಾ ಇಷ್ಟವೆಂದು ಹೇಳಲಾಗುತ್ತದೆ.
ಡಾರ್ಕ್ ಚಾಕಲೇಟ್ ನಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಇದು ಕಾಂತಿಯುತ ಮತ್ತು ಕಲೆಗಳು ಇಲ್ಲದೆ ಇರುವ ತ್ವಚೆ ನೀಡುವುದು. ಕ್ಯಾಟ್ಚಿನ್ಸ್, ಪಾಲಿಫಿನಾಲ್ ಗಳು ಮತ್ತು ಫ್ಲಾವನಾಲ್ ಗಳು ಇವೆ. ಇವೆಲ್ಲವೂ ತುಂಬಾ ಒಳ್ಳೆಯ ಆಂಟಿ ಆಕ್ಸಿಡೆಂಟ್ ಎಂದು ಹೇಳಲಾಗುತ್ತದೆ. ಇದು ಬಿಸಿಲಿನಿಂದ ಚರ್ಮವನ್ನು ರಕ್ಷಣೆ ಮಾಡುವುದು. ಡಾರ್ಕ್ ಚಾಕಲೇಟ್ ಒತ್ತಡ ನಿವಾರಣೆ ಮಾಡಲು ನೆರವಾಗುವುದು. ಚಾಕಲೇಟಿನಲ್ಲಿ ಇರುವಂತಹ ಕೋಕಾವು ಅಟೊಪಿಕ್ ಡರ್ಮಟೈಟಿಸ್ ನಂತಹ ಸಮಸ್ಯೆ ನಿವಾರಣೆ ಮಾಡುವುದು. ನೀವು ಮನೆಯಲ್ಲೇ ತಯಾರಿಸಬಹುದಾದ ಡಾರ್ಕ್ ಚಾಕಲೇಟ್ ನ ಕೆಲವು ಫೇಸ್ ಮಾಸ್ಕ್ ಗಳು

ಲಷ್ ಚಾಕಲೇಟ್
ಈ ಫೇಸ್ ಮಾಸ್ಕ್ ತ್ವಚೆಯಲ್ಲಿ ಇರುವಂತಹ ಎಣ್ಣೆಯಂಶ ಮತ್ತು ಮೊಡವೆ ನಿವಾರಣೆ ಮಾಡುವುದು. ಚಾಕಲೇಟ್ ಮತ್ತು ಜೇನುತುಪ್ಪವು ಹಲವಾರು ರೀತಿಯ ಆಂಟಿಆಕ್ಸಿಡೆಂಟ್ ಗಳನ್ನು ಒಳಗೊಂಡಿದೆ. ಇದು ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು ಮತ್ತು ಚರ್ಮವು ಒಣಗದಂತೆ ಕಾಪಾಡುವುದು. ಇದರಿಂದ ಚರ್ಮವು ತುಂಬಾ ಸುಂದರ ಹಾಗು ನಯವಾಗಿ ಇರುವುದು. ಈ ಫೇಸ್ ಮಾಸ್ಕ್ ನ್ನು ವಾರದಲ್ಲಿ ಎರಡು ಸಲ ಬಳಕೆ ಮಾಡಿ.
ನಿಮಗೆ ಏನು ಬೇಕು?
•ಒಂದು ಚಮಚ ಕೋಕಾ ಹುಡಿ
•ಒಂದು ಚಿಟಿಕೆ ದಾಲ್ಚಿನ್ನಿ
•ಒಂದು ಚಮಚ ಜೇನುತುಪ್ಪ
ವಿಧಾನ
•ಒಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ಕೋಕಾ ಹುಡಿ, ಜೇನುತುಪ್ಪ ಮತ್ತು ದಾಲ್ಚಿನಿ ಹಾಕಿ.
•ಇದರ ಪೇಸ್ಟ್ ಮಾಡಿ ಮತ್ತು ಆ ಪೇಸ್ಟ್ ತುಂಬಾ ದಪ್ಪಗಿದ್ದರೆ ಆಗ ಅದಕ್ಕೆ ಜೇನುತುಪ್ಪ ಹಾಕಿ.
•ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
•20-30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ.

ಡಾರ್ಕ್ ಚಾಕಲೇಟ್ ಫೇಸ್ ಮಾಸ್ಕ್
ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವಂತಹ ಚಾಕಲೇಟ್ ಫೇಸ್ ಮಾಸ್ಕ್ ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಹಾನಿಕಾರಕ ಫ್ರೀ ರ್ಯಾಡಿಕಲ್ ನಿಂದ ಇದು ರಕ್ಷಣೆ ನೀಡುವುದು. ಇದರಿಂದ ಚರ್ಮವು ಕಾಂತಿಯುತವಾಗುವುದು. ವಾರದಲ್ಲಿ ಎರಡು ಸಲ ಇದನ್ನು ನೀವು ಬಳಸಿಕೊಳ್ಳಿ.
ನಿಮಗೆ ಏನು ಬೇಕು?
2 ತುಂಡು ಡಾರ್ಕ್ ಚಾಕಲೇಟ್
2/3 ಕಪ್ ಹಾಲು
1 ಚಮಚ ಸಮುದ್ರ ಉಪ್ಪು
ಮೂರು ಚಮಚ ಬ್ರೌನ್ ಶುಗರ್
ವಿಧಾನ
•ಪಿಂಗಾಣಿಯಲ್ಲಿ ಸ್ವಲ್ಪ ಬಿಸಿ ನೀರು ಹಾಕಿಕೊಂಡು ಚಾಕಲೇಟ್ ನ್ನು ಕರಗಿಸಿ.
•ಇದಕ್ಕೆ ನೀವು ಉಪ್ಪು, ಬೆಲ್ಲ ಮತ್ತು ಹಾಲು ಹಾಕಿ.
•ಚೆನ್ನಾಗಿ ಕಲಸಿ
•ಇದು ತಣ್ಣಗಾದ ಬಳಿಕ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಮುಖ ತೊಳೆಯಿರಿ.

ಚಾಕಲೇಟ್ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಮಾಸ್ಕ್
ಲಿಂಬೆ ಮತ್ತು ಮೊಸರು ಚರ್ಮವನ್ನು ಬಿಳಿಯಾಗಿಸುವುದು ಮತ್ತು ಚರ್ಮದ ರಂಧ್ರಗಳನ್ನು ತೆರೆಯುವುದು. ಕೋಕಾ ಹುಡಿಯು ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದೆ ಮತ್ತು ತೆಂಗಿನೆಣ್ಣೆ ಮತ್ತು ಮಣ್ಣಿನಿಂದ ಚರ್ಮವು ಪುನರ್ಶ್ಚೇತನ ಪಡೆದುಕೊಳ್ಳುವುದು. ಇದನ್ನು ವಾರದಲ್ಲಿ ಎರಡು ಸಲ ಬಳಸಿಕೊಳ್ಳಿ.
ನಿಮಗೆ ಏನು ಬೇಕು?
¼ ಕಪ್ ಕೋಕಾ ಹುಡಿ
2 ಚಮಚ ಮುಲ್ತಾನಿ ಮಿಟ್ಟಿ
2 ಚಮಚ ಮೊಸರು
1 ಚಮಚ ಲಿಂಬೆರಸ
1 ಚಮಚ ತೆಂಗಿನೆಣ್ಣೆ
ವಿಧಾನ
•ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಇದು ಹಾಗೆ ಇರಲಿ.
•ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ.

ಟೋನರ್ ಆಗಿ ಕೆಲಸ ಮಾಡುವ ಚಾಕಲೇಟ್ ಫೇಸ್ ಮಾಸ್ಕ್
ಹಣ್ಣುಗಳನ್ನು ಒಳಗೊಂಡಿರುವಂತಹ ಫೇಸ್ ಮಾಸ್ಕ್ ಅದ್ಭುತವಾಗಿ ತ್ವಚೆಗೆ ತೇವಾಂಶ ನೀಡುವುದು. ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು ಮತ್ತು ಆರೋಗ್ಯವಾಗಿ ಇಡುವುದು. ಈ ಫೇಸ್ ಮಾಸ್ಕ್ ಬೇಸಿಗೆ ಸಮಯದಲ್ಲಿ ತುಂಬಾ ಲಾಭಕಾರಿಯಾಗಿದೆ. ಇದು ಚರ್ಮವನ್ನು ತುಂಬಾ ಶಾಂತವಾಗಿಸುವುದು. ಇದನ್ನು ವಾರದಲ್ಲಿ ಎರಡು ಸಲ ಬಳಸಿಕೊಳ್ಳಬೇಕು.
ನಿಮಗೆ ಏನು ಬೇಕು?
ಕರಗಿಸಿಕೊಂಡ ಚಾಕಲೇಟ್(50 ಗ್ರಾಂ)
ಒಂದು ಬಾಳೆಹಣ್ಣು
ಒಂದು ಕಪ್ ಸ್ಟ್ರಾಬೆರಿ
ಒಂದು ಕಪ್ ಕಲ್ಲಂಗಡಿ
ವಿಧಾನ
•ಹಣ್ಣುಗಳನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಚಾಕಲೇಟ್ ಹಾಕಿ.
•ಈ ಫೇಸ್ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ.
•20ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ಬಿಸಿ ನೀರಿನಲ್ಲಿ ತೊಳೆಯಿರಿ.



Click it and Unblock the Notifications