Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ತ್ವಚೆಯ ಸೌಂದರ್ಯ ಹೆಚ್ಚಿಸಲು ಒಣಬೀಜಗಳ ಫೇಸ್ ಪ್ಯಾಕ್
ತ್ವಚೆಯ ಆರೈಕೆ ಎನ್ನುವುದು ತುಂಬಾ ಕಠಿಣ ಸವಾಲು ಆಗಿರುವುದು. ಅದರಲ್ಲೂ ಬೇಸಿಗೆ ಕಳೆದು ಬರುವಂತಹ ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಕಷ್ಟಪಡಬೇಕಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ತೇವಾಂಶವು ಗಾಳಿಯಲ್ಲಿ ಇರುವುದು. ಇಷ್ಟು ಮಾತ್ರವಲ್ಲದೆ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳು ಮಳೆಗಾಲದಲ್ಲಿ ಕಂಡುಬರುವುದು. ಆದರೆ ನಾವು ಇಲ್ಲಿ ಹೇಳಲು ಹೊರಟಿರುವುದು ಕೆಲವೊಂದು ಒಣಬೀಜಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡುವುದು ಹೇಗೆ ಎಂದು. ಇದಕ್ಕಾಗಿ ಈ ಲೇಖನವನ್ನು ನಿಮ್ಮ ಮುಂದಿಡಲಾಗುತ್ತಿದೆ. ಇಲ್ಲಿ ತ್ವಚೆಯ ಆರೈಕೆಗಾಗಿ ಬಾದಾಮಿ, ಪಿಸ್ತಾ ಮತ್ತು ವಾಲ್ ನಟ್(ಅಕ್ರೋಡಾ) ಬಳಸಿಕೊಳ್ಳಬಹುದು. ಇವುಗಳು ನಿಮ್ಮ ತ್ವಚೆಗೆ ಕಾಂತಿ ನೀಡುವ ಜತೆಗೆ ಆರೋಗ್ಯವನ್ನು ಕಾಪಾಡುವುದು. ಒಣ ಹಣ್ಣುಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡುವುದು ಹೇಗೆ ಎಂದು ತಿಳಿಯುವ. ತ್ವಚೆಯ ಆರೈಕೆ ಮಾಡಲು ಬೇಕಿರುವಂತಹ ಸಾಮಗ್ರಿಗಳು

*ಬಾದಾಮಿ
*ಅಕ್ರೋಟು
*ಪಿಸ್ತಾ
*ಹಾಲಿನ ಹುಡಿ
*ಬೇವಿನ ಎಲೆಗಳು
*ಮೊಸರು
ತಯಾರಿಸುವ ವಿಧಾನ
*ಮೊದಲು ಬಾದಾಮಿಯನ್ನು ಚೆನ್ನಾಗಿ ಹುಡಿ ಮಾಡಿ ಅಥವಾ ಅದನ್ನು ತುರಿದುಕೊಳ್ಳಿ. ಅರ್ಧ ಚಮಚ ಹುಡಿ ಅಥವಾ ತುರಿದ ಬಾದಾಮಿ ತೆಗೆದುಕೊಳ್ಳಿ.
*ವಾಲ್ ನಟ್ ಮತ್ತು ಪಿಸ್ತಾವನ್ನು ಅದರ ಸಿಪ್ಪೆಯಿಂದ ಬೇರ್ಪಡಿಸಿಕೊಳ್ಳಿ ಮತ್ತು ಇದನ್ನು ಕೂಡ ಪ್ರತ್ಯೇಕವಾಗಿ ತುರಿದುಕೊಳ್ಳಿ ಮತ್ತು ತಲಾ ಅರ್ಧ ಚಮಚದಷ್ಟು ಎರಡನ್ನು ಹಾಕಿಕೊಂಡು ಬಾದಾಮಿ ಜತೆ ಮಿಶ್ರಣ ಮಾಡಿ.
*ಈ ಮಿಶ್ರಣಕ್ಕೆ ಅರ್ಧ ಚಮದಷ್ಟು ಹಾಲಿನ ಹುಡಿ ಹಾಕಿ.
*ಈಗ ಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ಸರಿಯಾಗಿ ತೊಳೆಯಿರಿ. ನಿಮಗೆ ಇಷ್ಟದಂತೆ ಇದನ್ನು ಬಳಸಿಕೊಳ್ಳಬಹುದು. ಇದರ ಪೇಸ್ಟ್ ಮಾಡಬಹುದು ಅಥವಾ ಬಿಸಿಲಿಗೆ ಹಾಕಿ ಹುಡಿ ಮಾಡಿಕೊಂಡು ಬಳಸಬಹುದು. ಇದರ ನೀರನ್ನು ಫೇಸ್ ಪ್ಯಾಕ್ ಗೆ ಮಿಶ್ರಣವಾಗಿ ಬಳಸಿಕೊಳ್ಳಿ. ಬೇವಿನ ಎಲೆಯ ಹುಡಿಯು ತುಂಬಾ ಒಳ್ಳೆಯದು ಮತ್ತು ಇದನ್ನು ಹಚ್ಚಿಕೊಳ್ಳುವುದು ತುಂಬಾ ಸುಲಭ ಮತ್ತು ಪ್ರತೀ ಸಲ ನೀವು ತಾಜಾವಾಗಿ ತಯಾರಿಸಬೇಕಿಲ್ಲ.
*ಈ ಮಿಶ್ರಣಕ್ಕೆ ಈಗ ಎರಡು ಚಮಚ ಮೊಸರು ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಮುಖವನ್ನು ಸರಿಯಾಗಿ ತೊಳೆದುಕೊಂಡ ಬಳಿಕ ಒರೆಸಿಕೊಮಡು ಈ ಫೇಸ್ ಪ್ಯಾಕ್ ಬಳಸಿಕೊಳ್ಳಿ. ಕಣ್ಣು ಮತ್ತು ತುಟಿ ಭಾಗಕ್ಕೆ ಇದನ್ನು ಹಚ್ಚಬೇಡಿ. ಕುತ್ತಿಗೆಗೆ ಕೂಡ ಹಚ್ಚಿಕೊಳ್ಳಿ. ಸುಮಾರು 30-35 ನಿಮಿಷ ಕಾಲ ಹಾಗೆ ಬಿಡಿ.
*ಈಗ ಫೇಸ್ ಪ್ಯಾಕ್ ಅರ್ಧ ಒಣಗಿದ ಸ್ಥಿತಿಯಲ್ಲಿ ಇರುವುದು. ನೀವು ನಿಧಾನವಾಗಿ ಬಲಹಾಕಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿ ಮತ್ತು ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
* ಒಣಚರ್ಮ ಇರುವಂತಹವರಿಗೆ ಈ ಪ್ಯಾಕ್. ಆದರೆ ಎಣ್ಣೆಯುಕ್ತ ಚರ್ಮ ಇರುವಂತಹವರು ಈ ಫೇಸ್ ಪ್ಯಾಕ್ ಕಡೆಗಣಿಸಿ. ಇದರಿಂದಾಗಿ ನಿಮ್ಮ ಚರ್ಮವು ಮತ್ತಷ್ಟು ಎಣ್ಣೆಯುಕ್ತವಾಗುವುದು.
ಈ ಫೇಸ್ ಪ್ಯಾಕ್ ನ ಲಾಭಗಳು
*ಬಾದಾಮಿ-ಬಾದಾಮಿಯು ನೈಸರ್ಗಿಕ ಮೊಶ್ಚಿರೈಸರ್ ಆಗಿದ್ದು, ಇದು ಒಣ ಚರ್ಮಕ್ಕೆ ಪರಿಹಾರ ನೀಡುವುದು. ಬಾದಾಮಿಯಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವಂತಹ ಗುಣಗಳು ಇವೆ ಮತ್ತು ಇದು ತ್ವಚೆಯ ಆರೈಕೆ ಮಾಡುವ ವೇಳೆ ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು.
*ಪಿಸ್ತಾ-ಪಿಸ್ತಾದಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ ಮತ್ತು ಚರ್ಮಕ್ಕೆ ವಿಟಮಿನ್ ಇ ಯಿಂದ ಯಾವೆಲ್ಲಾ ಲಾಭಗಳು ಇದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದು ನಮ್ಮ ಚರ್ಮವನ್ನು ತುಂಬಾ ನಯ ಮತ್ತು ಮೊಶ್ಚಿರೈಸ್ ಆಗಿ ಇಡುವುದು.
*ವಾಲ್ ನಟ್- ವಿಟಮಿನ್ ಬಿ ಇರುವ ವಾಲ್ ನಟ್ ತ್ವಚೆಯಲ್ಲಿ ಸತ್ತ ಚರ್ಮ ಕಿತ್ತುಹಾಕುವುದು. ಇದು ನೆರಿಗೆ ಮತ್ತು ವಯಸ್ಸಾಗುವ ವೇಳೆ ಮೂಡು ಕಲೆಗಳನ್ನು ದೂರ ಮಾಡುವುದು.
*ಹಾಲಿನ ಹುಡಿ-ಇದು ಚರ್ಮವನ್ನು ಶುದ್ಧವಾಗಿ ಇಡುವುದು ಮತ್ತು ಚರ್ಮವು ನಯ ಹಾಗೂ ಹೊಳೆಯುವಂತೆ ಮಾಡುವುದು.
ಬೇವು: ಇದು ಚರ್ಮ ಒಣಗುವುದನ್ನು ತಡೆಯುವುದು ಮತ್ತು ಚರ್ಮದ ಸೋಂಕು ಮತ್ತು ಅಲರ್ಜಿ ತಡೆಯವುಉದು.
*ಮೊಸರು: ಮೊಸರು ಕಲೆ ತೆಗೆಯುವುದು ಮತ್ತು ಚರ್ಮವು ತುಂಬಾ ಪೋಷಣೆ ಮತ್ತು ಕಾಂತಿಯುತವಾಗಿ ಇರುವಂತೆ ಮಾಡುವುದು.
ನೀವು ಒಣ ಬೀಜಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಿಕೊಳ್ಳಿ ಮತ್ತು ಸುಂದರವಾಗಿರುವ ತ್ವಚೆಯನ್ನು ಪಡೆಯಿರಿ. ಇದನ್ನು ಬಳಸಿದ ಬಳಿಕ ಹೇಗೆ ಲಾಭವಾಗಿದೆ ಎಂದು ತಿಳಿಸಲು ಮರೆಯಬೇಡಿ.



Click it and Unblock the Notifications
