Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮುಖದ ಸೌಂದರ್ಯ ವೃದ್ಧಿಗೆ ದ್ರಾಕ್ಷಿಯ ಫೇಸ್ ಪ್ಯಾಕ್
ಮುಖದ ಮೇಲೆ ಮೂಡುವಂತಹ ಮೊಡವೆ, ಕಲೆ ಹಾಗೂ ಬಿಸಿಲಿನಿಂದ ಆಗಿರುವಂತಹ ಕಲೆ ನಿವಾರಣೆ ಮಾಡಲು ಆ್ಯಂಟಿ ಆಕ್ಸಿಡೆಂಟ್ ಗಳು ಪ್ರಮುಖ ಪಾತ್ರ ವಹಿಸುವುದು. ಈ ಆ್ಯಂಟಿಆಕ್ಸಿಡೆಂಟ್ ಗಳು ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಸೌಂದರ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೆಲವೊಂದು ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಲಭ್ಯವಿರುವುದು. ಇದರಲ್ಲಿ ಮುಖ್ಯವಾಗಿ ದ್ರಾಕ್ಷಿ. ಇದರಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ.
ದ್ರಾಕ್ಷಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಮಾತ್ರವಲ್ಲದೆ ಕೆಲವೊಂದು ಪ್ರಮುಖ ವಿಟಮಿನ್ ಗಳಾಗಿರುವಂತಹ ವಿಟಮಿನ್ ಸಿ, ಬಿ ಮತ್ತು ವಿಟಮಿನ್ ಕೆ ಇದೆ. ದ್ರಾಕ್ಷಿಯಲ್ಲಿ ಕೊಬ್ಬನಾಮ್ಲವು ಅಧಿಕವಾಗಿರುವ ಕಾರಣ ಇದು ಕಾಲಜನ್ ಉತ್ಪತ್ತಿ ಮೇಲೆ ಪ್ರಮುಖ ಪಾತ್ರ ವಹಿಸುವುದು. ಇದರಿಂದ ದ್ರಾಕ್ಷಿಯಿಂದ ಮಾಡಲ್ಪಟ್ಟಿರುವಂತಹ ಫೇಸ್ ಪ್ಯಾಕ್ ಗಳು ವಯಸ್ಸಾಗುವ ಲಕ್ಷಣಗಳನ್ನು ತಡೆಯುವಂತಹ ಗುಣಗಳನ್ನು ಹೊಂದಿವೆ. ದ್ರಾಕ್ಷಿಯಲ್ಲಿ ಪೈಥೊನ್ಯೂಟ್ರಿಯಂಟ್ಸ್ ಮತ್ತು ಉರಿಯೂತ ಶಮನಕಾರಿ ಗುಣಗಳು ಕೂಡ ಇರುವ ಕಾರಣದಿಂದ ಇದರಿಂದ ಲಾಭಗಳು ಅಧಿಕವಾಗಿದೆ. ಇದರ ಇನ್ನೊಂದು ಪ್ರಮುಖ ಗುಣವೆಂದರೆ ಇದರಲ್ಲಿ ಇರುವಂತಹ ಅಲ್ಪಾ ಹೈಡ್ರಾಕ್ಸಿ ಆಮ್ಲವು ಪುನರುಜ್ಜೀವನ ನೀಡುವುದು, ಮುಖದಲ್ಲಿನ ಗೆರೆಗಳು ಹಾಗೂ ಚರ್ಮವು ವರ್ಣ ಕಳೆದುಕೊಳ್ಳುವುದನ್ನು ತಪ್ಪಿಸುವುದು. ಈ ಲೇಖನದಲ್ಲಿ ಐದು ಫೇಸ್ ಪ್ಯಾಕ್ ಗಳನ್ನು ನೀಡಲಾಗಿದೆ. ಇದರಿಂದ ಯೌವನಯುತ ಮತ್ತು ಆರೋಗ್ಯಕಾರಿ ಚರ್ಮ ಪಡೆಯಬಹುದು. ಈ ಫೇಸ್ ಪ್ಯಾಕ್ ಗೆ ಹಸಿರು ಅಥವಾ ಕಪ್ಪು ದ್ರಾಕ್ಷಿ ಬಳಸಬಹುದು.

ದ್ರಾಕ್ಷಿ ಮತ್ತು ಸೇಬಿನ ಫೇಸ್ ಪ್ಯಾಕ್
ಇದು ಆ್ಯಂಟಿಆಕ್ಸಿಡೆಂಟ್ ನ ಮಟ್ಟವನ್ನು ದ್ವಿಗುಣಗೊಳಿಸುವುದು. ಸೇಬು ಮತ್ತು ದ್ರಾಕ್ಷಿಯಲ್ಲಿ ಉತ್ತಮ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಈ ಫೇಸ್ ಪ್ಯಾಕ್ ಅನ್ನು ಮಾಡಲು ಕೆಲವು ತುಂಡು ಸೇಬು ಮತ್ತು ಸ್ವಲ್ಪ ದ್ರಾಕ್ಷಿ ತೆಗೆದುಕೊಂಡು ಅದನ್ನು ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಮುಖ ತೊಳೆದುಕೊಂಡು ಪೇಸ್ಟ್ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ನಿಯಮಿತವಾಗಿ ಇದನ್ನು ಬಳಸಿದರೆ ಸ್ವಚ್ಛ ಹಾಗೂ ಕಾಂತಿಯುತ ತ್ವಚೆ ನಿಮ್ಮದಾಗುವುದು.

ಕಿವಿ ಹಣ್ಣು ಮತ್ತು ದ್ರಾಕ್ಷಿಯ ಫೇಸ್ ಪ್ಯಾಕ್
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಕೆ ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಕಿವಿ ಹಣ್ಣಿನಲ್ಲಿ ಇರುವಂತಹ ಕಪ್ಪು ಬೀಜವು ಒಮೆಗಾ-3 ಆಮ್ಲವನ್ನು ಹೊಂದಿದೆ. ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಕಿವಿ ಹಣ್ಣಿನಲ್ಲಿ ಇದೆ. ಇದರಿಂದ ಕಿವಿ ಹಣ್ಣು ಮತ್ತು ದ್ರಾಕ್ಷಿಯ ಫೇಸ್ ಪ್ಯಾಕ್ ಮಾಡಿಕೊಂಡರೆ ಇದು ನಿಮ್ಮ ತ್ವಚೆಗೆ ಅದ್ಭುತವನ್ನು ಉಂಟು ಮಾಡುವುದು. ಈ ಫೇಸ್ ಪ್ಯಾಕ್ ತಯಾರಿಸಲು ಸ್ವಲ್ಪ ದ್ರಾಕ್ಷಿಯ ಸಿಪ್ಪೆ ತೆಗೆದು ಅದರ ತಿರುಳು ಬದಿಗಿಡಿ. ಇಷ್ಟೇ ಪ್ರಮಾಣದ ಕಿವಿ ಹಣ್ಣನ್ನು ಕಪ್ಪು ಬೀಜದೊಂದಿಗೆ ತೆಗೆದುಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಮೊಸರನ್ನು ಕೂಡ ಹಾಕಿಕೊಳ್ಳಬಹುದು. ಮುಖ ತೊಳೆದುಕೊಂಡ ಬಳಿಕ ಇದನ್ನು ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ದ್ರಾಕ್ಷಿ ಮತ್ತು ಮೊಸರಿನ ಫೇಸ್ ಪ್ಯಾಕ್
ಸ್ವಲ್ಪ ದ್ರಾಕ್ಷಿಯ ಸಿಪ್ಪೆ ತೆಗೆದು ತಿರುಳನ್ನು ಬದಿಗೆ ಇರಿಸಿಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಮೊಸರು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ನೀವು ಇದಕ್ಕೆ ಕೆಲವು ಹನಿ ನಿಂಬೆರಸವನ್ನು ಕೂಡ ಹಾಕಬಹುದು. ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಸರಿಯಾಗಿ ತೊಳೆಯಿರಿ.

ಜೇನುತಪ್ಪ ಮತ್ತು ದ್ರಾಕ್ಷಿಯ ಫೇಸ್ ಪ್ಯಾಖ್
ಇದನ್ನು ತಯಾರಿಸುವುದು ತುಂಬಾ ಸುಲಭ. ಸ್ವಲ್ಪ ದ್ರಾಕ್ಷಿಯ ಸಿಪ್ಪೆ ತೆಗೆದು ಅದರ ತಿರುಳನ್ನು ಹೊರಗೆ ತೆಗೆಯಿರಿ ಮತ್ತು ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದರ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಬಳಿಕ ತೊಳೆಯಿರಿ. ನಿಯಮಿತವಾಗಿ ಇದನ್ನು ಬಳಸಿಕೊಂಡರೆ ಆಗ ಸುಂದರ ತ್ವಚೆಯು ನಿಮ್ಮದಾಗುವುದು.

ದ್ರಾಕ್ಷಿ ಮತ್ತು ಸ್ಟ್ರಾಬೆರಿ ಫೇಸ್ ಪ್ಯಾಕ್
ಸ್ಟ್ರಾಬೆರಿಯಲ್ಲಿ ಇರುವಂತಹ ಸ್ಯಾಲಿಸಿಲಿಕ್ ಆಮ್ಲ ಮತ್ತು ದ್ರಾಕ್ಷಿಯಲ್ಲಿ ಇರುವ ಹೈಡ್ರಾಕ್ಸ್ ಆಮ್ಲವು ನಿಸ್ತೇಜ ಹಾಗೂ ಜೀವವಿಲ್ಲದೆ ಇರುವಂತಹ ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುವುದು. ಈ ಫೇಸ್ ಪ್ಯಾಕ್ ಮಾಡಲು ಎರಡರಿಂದ ಮೂರು ಸ್ಟ್ರಾಬೆರಿಯನ್ನು ಸರಿಯಾಗಿ ಜಜ್ಜಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ದ್ರಾಕ್ಷಿ ಸಿಪ್ಪೆ ತೆಗೆದು ತಿರುಳನ್ನು ಹಾಕಿಕೊಳ್ಳಿ. ನಿಮಗೆ ಬೇಕಿದ್ದರೆ ಜೇನುತುಪ್ಪ ಹಾಕಿಕೊಳ್ಳಿ ಮತ್ತು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಉಗುರು ಬೆಚ್ಚಗಿನ ನೀರಿನಿಂದ 20 ನಿಮಿಷ ಬಿಟ್ಟು ತೊಳೆಯಿರಿ.



Click it and Unblock the Notifications
