Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ಬ್ಯೂಟಿ ಟಿಪ್ಸ್: ಮೂಲಂಗಿಯಿಂದ ತ್ವಚೆ ಹಾಗೂ ಕೂದಲಿನ ಆರೈಕೆ!
ಮೂಲಂಗಿಯನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ. ಯಾಕೆಂದರೆ ಅದರ ರುಚಿ ಹಾಗೂ ಸುವಾಸನೆಯು ಅಷ್ಟೊಂದು ಚೆನ್ನಾಗಿರುವುದಿಲ್ಲ. ಹೀಗಾಗಿ ಮೂಲಂಗಿ ಹೆಸರು ಕೇಳಿದರೆ ಮುಖ ಸಿಂಡರಿಸಿಕೊಳ್ಳುವವರು ಜಾಸ್ತಿ. ಆದರೆ ಮೂಲಂಗಿಯಲ್ಲಿ ಇರುವಂತಹ ಆರೋಗ್ಯ ಲಾಭಗಳು ಮಾತ್ರ ನೂರಾರು. ಮೂಲಂಗಿಯಲ್ಲಿರುವಂತಹ ಹಲವಾರು ರೀತಿಯ ಪೋಷಕಾಂಶಗಳು ಕೂದಲು ಹಾಗೂ ಚರ್ಮಕ್ಕೆ ತುಂಬಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಮೂಲಂಗಿಯನ್ನು ಚರ್ಮಕ್ಕೆ ಹಾಗೂ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಅದು ಸೌಂದರ್ಯ ವೃದ್ಧಿಸುವುದು. ವಿಟಮಿನ್ ಎ ಮತ್ತು ಸಿಯಿಂದ ಸಮೃದ್ಧವಾಗಿರುವಂತಹ ಮೂಲಂಗಿಯು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು.

ಇದರಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ಪೋಸ್ಪರಸ್ ಇತ್ಯಾದಿಗಳು, ಪ್ರೋಟೀನ್ ಮತ್ತು ನಾರಿನಾಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಅದ್ಭುತವನ್ನು ಉಂಟು ಮಾಡಲಿದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಆಕ್ಸಿಡೆಂಟ್ ಗುಣ ಹೊಂದಿರುವಂತಹ ಮೂಲಂಗಿಯು ಮಾರುಕಟ್ಟೆಯಲ್ಲಿ ತುಂಬಾ ತಾಜಾವಾಗಿ ಸಿಗುವುದು ಮತ್ತು ಇದನ್ನು ನೀವು ಸೌಂದರ್ಯದ ಆರೈಕೆಯಲ್ಲಿ ಬಳಸಿಕೊಳ್ಳಬಹುದು. ಮೂಲಂಗಿ ಬಗ್ಗೆ ನಿಮಗೆ ಈಗಾಗಲೇ ತಿಳಿದಿರುವ ಕಾರಣದಿಂದಾಗಿ ಇದನ್ನು ಸೌಂದರ್ಯವರ್ಧಕವಾಗಿ ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. ಕೂದಲಿಗೆ ಹಾಗೂ ಚರ್ಮಕ್ಕೆ ಮೂಲಂಗಿಯು ಯಾವೆಲ್ಲಾ ಲಾಭಗಳನ್ನು ನೀಡಲಿದೆ ಎಂದು ತಿಳಿಯಿರಿ....

ಮೂಲಂಗಿಯಿಂದ ಚರ್ಮ ಮತ್ತು ಕೂದಲಿಗೆ ಆಗುವ ಲಾಭಗಳು
•ಇದು ಚರ್ಮವನ್ನು ತೇವಾಂಶದಿಂದ ಇಡುವುದು.
•ಚರ್ಮವನ್ನು ಶುದ್ಧೀಕರಿಸುವುದು ಮತ್ತು ನಿರ್ವಿಷಗೊಳಿಸುವುದು.
•ಹಲವಾರು ರೀತಿಯ ಚರ್ಮದ ಸಮಸ್ಯೆ ನಿವಾರಣೆ ಮಾಡುವುದು.
•ಮೊಡವೆ ನಿವಾರಣೆ ಮಾಡಲು ಇದು ತುಂಬಾ ಸಹಕಾರಿ.
•ಬ್ಲ್ಯಾಕ್ ಹೆಡ್ ನಿವಾರಿಸುವುದು.
•ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು.
•ಕೂದಲು ಉದುರುವಿಕೆ ತಡೆಯುವುದು.
•ಕೂದಲಿನ ಬೆಳವಣಿಗೆಗೆ ನೆರವಾಗುವುದು.
•ತಲೆಹೊಟ್ಟು ನಿವಾರಿಸುವುದು.
•ಕೂದಲಿಗೆ ಹೊಳಪು ನೀಡುವುದು. ಚರ್ಮಕ್ಕೆ ಮೂಲಂಗಿ ಬಳಸುವುದು ಹೇಗೆ

ಮೊಡವೆಗೆ
ಮೂಲಂಗಿಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವ ಕಾರಣದಿಂದಾಗಿ ಇದು ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿಯಿಂದ ಚರ್ಮವನ್ನು ರಕ್ಷಿಸುವುದು. ಚರ್ಮದಲ್ಲಿ ಇರುವಂತಹ ಕೊಳೆ ಹಾಗೂ ಕಲ್ಮಶವನ್ನು ಇದು ತೆಗೆದುಹಾಕುವುದು.
ಬೇಕಾಗುವ ಸಾಮಗ್ರಿಗಳು
*ಒಂದು ಚಮಚ ಮೂಲಂಗಿ ಬೀಜಗಳು
*ನೀರು(ಅಗತ್ಯವಿದ್ದಷ್ಟು)
ತಯಾರಿಸುವ ವಿಧಾನ
•ಮೂಲಂಗಿ ಬೀಜಗಳನ್ನು ಹುಡಿ ಮಾಡಿಕೊಳ್ಳಿ.
•ಕೆಲವು ಹನಿ ನೀರನ್ನು ಇದಕ್ಕೆ ಹಾಕಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.
•ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ.
•ಇದು ಒಣಗುವ ತನಕ ಹಾಗೆ ಬಿಡಿ.
•ಇದನ್ನು ತಣ್ಣೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಚರ್ಮಕ್ಕೆ ತೇವಾಂಶ ನೀಡಲು
ಮೂಲಂಗಿಯಲ್ಲಿ ಇರುವಂತಹ ಉನ್ನತ ಮಟ್ಟದ ನೀರಿನಾಂಶವು ಚರ್ಮವನ್ನು ತೇವಾಂಶ, ನಯ ಹಾಗೂ ಸುಂದರವಾಗಿ ಇಡುವುದು. ಬಾದಾಮಿ ಎಣ್ಣೆಯು ಶಾಮಕವಾಗಿ ಕೆಲಸ ಮಾಡುವುದು ಮತ್ತು ಇದು ಚರ್ಮದಲ್ಲಿ ಮೊಶ್ಚಿರೈಸರ್ ಉಲಿಯುವಂತೆ ಮಾಡುವುದು. ಅದೇ ರೀತಿಯಾಗಿ ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದ ವಿನ್ಯಾಸ ಸುಧಾರಣೆ ಮಾಡುವುದು ಮತ್ತು ಗೆರೆಗಳು ಹಾಗೂ ನೆರಿಗಳು ಕಾಣದಂದತೆ ಮಾಡಿ, ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು.
ಬೇಕಾಗುವ ಸಾಮಗ್ರಿಗಳು
* ಒಂದು ಚಮಚ ತುರಿದ ಮೂಲಂಗಿ
* ½ ಚಮಚ ಮೊಸರು
* 5 ಚಮಚ ಬಾದಾಮಿ ಎಣ್ಣೆ
ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ತುರಿದ ಮೂಲಂಗಿ ಹಾಕಿಕೊಳ್ಳಿ.
•ಇದಕ್ಕೆ ಮೊಸರು ಹಾಕಿ ಮತ್ತು ಸರಿಯಾಗಿ ಕಲಸಿಕೊಳ್ಳಿ.
•ಇದಕ್ಕೆ ಬಾದಾಮಿ ಎಣ್ಣೆ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
•15 ನಿಮಿಷ ಕಾಲ ಹಾಗೆ ಬಿಡಿ.
•ತಣ್ಣೀರು ಬಳಸಿಕೊಂಡು ಕೂದಲು ತೊಳೆಯಿರಿ.
Most Read: ನಿತ್ಯ ಮೂಲಂಗಿ ಜ್ಯೂಸ್ ಕುಡಿದರೆ, ಯಾವ ಕಾಯಿಲೆಯೂ ಬರುವುದಿಲ್ಲ...

ಬ್ಲ್ಯಾಕ್ ಹೆಡ್ಸ್
ಮೂಲಂಗಿಯಲ್ಲಿ ಇರುವಂತಹ ವಿಟಮಿನ್ ಸಿ ಚರ್ಮಕ್ಕೆ ಪೋಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಬ್ಲ್ಯಾಕ್ ಹೆಡ್, ಮೊಡವೆ ಇತ್ಯಾದಿ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು.
ಬೇಕಾಗುವ ಸಾಮಗ್ರಿಗಳು
* 1 ಚಮಚ ಮೂಲಂಗಿ ಜ್ಯೂಸ್
ಬಳಸುವ ವಿಧಾನ
•ಪಿಂಗಾಣಿಗೆ ಮೂಲಂಗಿ ರಸ ಹಾಕಿಕೊಳ್ಳಿ.
•ಇದಕ್ಕೆ ಹತ್ತಿ ಉಂಡೆ ಅದ್ದಿಕೊಳ್ಳಿ.
•ಈ ಹತ್ತಿ ಉಂಡೆ ಬಳಸಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•20 ನಿಮಿಷ ಕಾಲ ಹಾಗೆ ಬಿಡಿ.
•ತಣ್ಣೀರು ಬಳಸಿಕೊಂಡು ತೊಳೆಯಿರಿ ಮತ್ತು ಒಣಗಲು ಬಿಡಿ.

ಬಣ್ಣ ಮಾಸುವುದನ್ನು ತಡೆಯಲು
ಮೂಲಂಗಿಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಚರ್ಮದ ಬಣ್ಣಕ್ಕೆ ಕಾಂತಿ ನೀಡುವುದು. ಬಿಸಿಲಿನಿಂದ ಆಗಿರುವಂತಹ ಕಲೆಗಳು ಮತ್ತು ಚರ್ಮವನ್ನು ಕಾಂತಿಗೊಳಿಸಲು ಲಿಂಬೆಯು ತುಂಬಾ ಪರಿಣಾಮಕಾರಿ ಸಾಮಗ್ರಿ. ಆಲಿವ್ ತೈಲವು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ಇದು ಚರ್ಮಕ್ಕೆ ರಕ್ಷಣೆ ನೀಡುವುದು.
ಬೇಕಾಗುವ ಸಾಮಗ್ರಿಗಳು
•ಒಂದು ಚಮಚ ಮೂಲಂಗಿ ತುರಿದಿರುವುದು
•½ ಚಮಚ ಲಿಂಬೆ ರಸ
•4-5 ಹನಿ ಆಲಿವ್ ತೈಲ
ಬಳಸುವ ವಿಧಾನ
•ಒಂದು ಪಿಂಗಾಣಿಗೆ ತುರಿದಿರುವ ಮೂಲಂಗಿ ಹಾಕಿ.
•ಇದಕ್ಕೆ ಲಿಂಬೆರಸ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಇದಕ್ಕೆ ಆಲಿವ್ ತೈಲ ಹಾಕಿಕೊಳ್ಳಿ ಮತ್ತು ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ.
•ಮುಖವನ್ನು ಸ್ವಲ್ಪ ಒದ್ದೆಗೊಳಿಸಿ.
•ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
•15 ನಿಮಿಷ ಕಾಲ ಹಾಗೆ ಬಿಡಿ.
•ಬಳಿಕ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಸತ್ತ ಚರ್ಮ ತೆಗೆಯಲು
ಸತ್ತ ಚರ್ಮವನ್ನು ತೆಗೆದುಹಾಕಿ ಮತ್ತು ಕಲ್ಮಶವನ್ನು ತೆಗೆಯಲು ಓಟ್ಸ್ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣ ಚರ್ಮಕ್ಕೆ ಆಗುವ ಕಿರಿಕಿರಿ ತಡೆದು, ಶಮನ ನೀಡುವುದು. ಪ್ರೋಟೀನ್ ನಿಂದ ಸಮೃದ್ಧವಾಗಿರುವಂತಹ ಮೊಟ್ಟೆಯ ಬಿಳಿ ಭಾಗವು ಪುನರ್ಶ್ಚೇತನ ನೀಡುವುದು ಮತ್ತು ಚರ್ಮದಲ್ಲಿ ಅತಿಯಾಗಿ ಎಣ್ಣೆ ಉತ್ಪತ್ತಿ ಆಗುವುದನ್ನು ತಡೆಯುವುದು.
ಬೇಕಾಗುವ ಸಾಮಗ್ರಿಗಳು
* ಒಂದು ಚಮಚ ಮೂಲಂಗಿ ಜ್ಯೂಸ್
* ಒಂದು ಚಮಚ ಓಟ್ ಮೀಲ್ ಹುಡಿ
* ಒಂದು ಮೊಟ್ಟೆಯ ಬಿಳಿಭಾಗ
ಬಳಸುವ ವಿಧಾನ
•ಒಂದು ಪಿಂಗಾಣಿಗೆ ಮೂಲಂಗಿ ಜ್ಯೂಸ್ ಹಾಕಿ.
•ಇದಕ್ಕೆ ಓಟ್ ಮೀಲ್ ಹುಡಿ ಹಾಕಿ ಸರಿಯಾಗಿ ಕಲಸಿಕೊಳ್ಳಿ.
•ಮೊಟ್ಟೆಯ ಬಿಳಿ ಲೋಳೆ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•10-15 ನಿಮಿಷ ಕಾಲ ಹಾಗೆ ಬಿಡಿ.
•ಕೆಲವು ನಿಮಿಷ ಕಾಲ ನಿಧಾನವಾಗಿ ವೃತ್ತಾಕಾರದಲ್ಲಿ ಮುಖಕ್ಕೆ ಉಜ್ಜಿಕೊಳ್ಳಿ.
•ನೀರಿನಿಂದ ತೊಳೆಯಿರಿ.

ಕೂದಲಿಗೆ ಮೂಲಂಗಿ ಬಳಸುವ ವಿಧಾನ
ತಲೆಹೊಟ್ಟು ನಿವಾರಣೆ ಮಾಡಲು
ಮೂಲಂಗಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ದೂರ ಮಾಡುವುದು ಮತ್ತು ಆರೋಗ್ಯಕಾರಿ ತಲೆಬುರುಡೆ ಕಾಪಾಡಿಕೊಳ್ಳಲು ನೆರವಾಗುವುದು.
ಬೇಕಾಗುವ ಸಾಮಗ್ರಿಗಳು
* ಮೂಲಂಗಿ
ಬಳಸುವ ವಿಧಾನ
•ಸಿಪ್ಪೆ ತೆಗೆದು ಮೂಲಂಗಿಯನ್ನು ತುರಿಯಿರಿ. ಇದನ್ನು ಸೋಸಿಕೊಂಡು ಇದರ ರಸ ತೆಗೆಯಿರಿ.
•ಈ ರಸಕ್ಕೆ ಒಂದು ಹತ್ತಿ ಉಂಡೆ ಹಾಕಿ.
•ಈ ರಸವನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.
•ಟವೆಲ್ ನಿಂದ ತಲೆಯನ್ನು ಮುಚ್ಚಿಕೊಳ್ಳಿ.
•30 ನಿಮಿಷ ಕಾಲ ಹಾಗೆ ಬಿಡಿ.
•ಬಳಿಕ ನೀರು ಹಾಕಿ ತೊಳೆಯಿರಿ.

ಕೂದಲ ಬೆಳವಣಿಗೆಗೆ
ಕಪ್ಪು ಮೂಲಂಗಿಯು ಕೂದಲಿಗೆ ಹಲವಾರು ರೀತಿಯ ಲಾಭಗಳನ್ನು ಉಂಟು ಮಾಡುವುದು ಎಂದು ತಿಳಿದುಬಂದಿದೆ. ನಿಯಮಿತವಾಗಿ ಕಪ್ಪು ಮೂಲಂಗಿಯ ರಸವನ್ನು ತಲೆಬುರುಡೆಗೆ ಹಚ್ಚಿಕೊಳ್ಳುವ ಮೂಲಕ ಕೂದಲ ಬೆಳವಣಿಗೆಗೆ ನೆರವಾಗುವುದು.
ಬೇಕಾಗುವ ಸಾಮಗ್ರಿಗಳು
* ಕಪ್ಪು ಮೂಲಂಗಿ
ಬಳಸುವ ವಿಧಾನ
•ಸಿಪ್ಪೆ ತೆಗೆದು ಮೂಲಂಗಿಯನ್ನು ತುರಿಯಿರಿ. ಇದನ್ನು ಜಜ್ಜಿಕೊಂಡು ಅದರ ರಸ ತೆಗೆಯಿರಿ.
•ತಲೆಬುರುಡೆಗೆ ನಿಧಾನವಾಗಿ ಈ ರಸವನ್ನು ಸರಿಯಾಗಿ ಉಜ್ಜಿಕೊಳ್ಳಿ.
•ಟವೆಲ್ ನಿಂದ ಕೂದಲು ಮುಚ್ಚಿಕೊಳ್ಳಿ.
•1ಗಂಟೆ ಕಾಲ ಹಾಗೆ ಬಿಡಿ.
•ನೀರಿನಿಂದ ತೊಳೆಯಿರಿ.
•ಸಾಮಾನ್ಯದಂತೆ ಶಾಂಪೂ ಬಳಸಿ.



Click it and Unblock the Notifications











