Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
ತ್ವಚೆಯ ಅಂದ-ಚಂದ ಹೆಚ್ಚಿಸುವ 'ಬಾದಾಮಿ ಎಣ್ಣೆ'
ಸೌಂದರ್ಯದಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಡುವಂತಹ ಅಂಶವೆಂದರೆ ಅದು ಚರ್ಮದ ಬಣ್ಣ. ಚರ್ಮದ ಬಣ್ಣವು ಬಿಳಿಯಾಗಿದ್ದರೆ ಅದು ಸೌಂದರ್ಯವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿಯೇ ಪ್ರತಿಯೊಬ್ಬರು ಕೂಡ ಬಿಳಿ ಚರ್ಮಕ್ಕಾಗಿ ಕನಸು ಕಾಣುತ್ತಾ ಇರುವರು. ಕಪ್ಪಗಿರುವವರು ಕೂಡ ಬಿಳಿಯ ತ್ವಚೆ ಪಡೆಯುವ ಸಲುವಾಗಿ ಹಲವಾರು ಪದರಗಳ ಮೇಕಪ್ ಹಾಕಿಕೊಳ್ಳೂವರು. ಇದರಿಂದ ಅವರು ತಮ್ಮ ತ್ವಚೆಯ ಬಣ್ಣ ಬಿಳಿಯಾಗಿಸಲು ಪ್ರಯತ್ನಿಸುವರು.
ಹೆಚ್ಚಿನ ಕ್ರೀಮ್ ಹಾಗೂ ಮೇಕಪ್ ಗಳಲ್ಲಿ ರಾಸಾಯನಿಕಗಳು ಇರುವುದರಿಂದ ಇದು ಚರ್ಮದ ಆರೋಗ್ಯವನ್ನು ಕೆಡಿಸುವುದು ಮಾತ್ರವಲ್ಲದೆ ಅದರ ವರ್ಣವನ್ನು ಇನ್ನಷ್ಟು ಕೆಡಿಸುವುದು. ಇದರ ಬದಲಿಗೆ ನೈಸರ್ಗಿಕವಾಗಿ ತ್ವಚೆ ಬಿಳಿಗೊಳಿಸಬೇಕು. ನೈಸರ್ಗಿಕವಾಗಿ ಸಿಗುವಂತಹ ಸಾಮಗ್ರಿಗಳು ನಿಸ್ತೇಜ ಚರ್ಮಕ್ಕೆ ಜೀವನ ನೀಡಿ ಚರ್ಮಕ್ಕೆ ಸಂಪೂರ್ಣ ಆರೋಗ್ಯ ನೀಡುವುದು.
ಚರ್ಮದ ಬಣ್ಣವನ್ನು ಬದಲಾಯಿಸಿಕೊಳ್ಳಲು ಹಲವಾರು ರೀತಿಯ ಎಣ್ಣೆಗಳು ಲಭ್ಯವಿದೆ. ಇದನ್ನು ಬಳಸಿಕೊಳ್ಳುವುದರಿಂದ ಚರ್ಮವನ್ನು ಬಿಳಿಯಾಗಿಸಬಹುದು. ಬಾದಾಮಿ ಎಣ್ಣೆಯನ್ನು ಚರ್ಮದ ಬಣ್ಣ ಬಿಳಿಯಾಗಿಸಲು ಯಾವ ರೀತಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ. ಇದರಿಂದ ನೀವು ಬಯಸಿದಂತಹ ತ್ವಚೆಯು ನಿಮ್ಮದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಫೇಶಿಯಲ್ ಮಸಾಜ್
*ಕೆಲವು ಹನಿ ಬಾದಾಮಿ ಎಣ್ಣೆಯನ್ನು ಅಂಗೈಗೆ ಹಾಕಿಕೊಳ್ಳಿ.
*ಇದನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.
*ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬೆಳಗ್ಗೆ ಬಿಳಿ ಚರ್ಮವು ನಿಮ್ಮದಾಗುವುದು.
*ಬೆಳಗ್ಗೆ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
*ಪರಿಣಾಮಕಾರಿ ಫಲಿತಾಂಶಕ್ಕಾಗಿ ವಾರದಲ್ಲಿ 2-3 ಸಲ ಇದನ್ನು ಬಳಸಿ.

ಬಾದಾಮಿ ಎಣ್ಣೆ ಮತ್ತು ಬ್ರೌನ್ ಶುಗರ್
* ಒಂದು ಚಮಚ ಬಾದಾಮಿ ಎಣ್ಣೆ ಮತ್ತು ಅರ್ಧ ಚಮಚ ಬ್ರೌನ್ ಶುಗರ್ ಜತೆಗೆ ಹಾಕಿ ಮಿಶ್ರಣ ಮಾಡಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿ.
*ಹತ್ತು ನಿಮಿಷ ಬಳಿಕ ತಣ್ಣೀರಿನಿಂದ ಮತ್ತು ಕ್ಲೆನ್ಸರ್ ನಿಂದ ತೊಳೆಯಿರಿ.
*ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಂಡರೆ ಒಳ್ಳೆಯದು.

ಬಾದಾಮಿ ಎಣ್ಣೆ ಮತ್ತು ಲ್ಯಾವೆಂಡರ್ ಸಾರಭೂತ ತೈಲ
*ಒಂದು ಚಮಚ ಬಾದಾಮಿ ಎಣ್ಣೇ ಮತ್ತು 2-3 ಹನಿ ಲ್ಯಾವೆಂಡರ್ ತೈಲವನ್ನು ಸರಿಯಾಗಿ ಮಿಶ್ರಣ ಮಾಡಿ.
*ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.
*ತಣ್ಣೀರಿನಿಂದ ತೊಳೆಯಿರಿ.
*ಪರಿಣಾಮಕಾರಿ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಬಾದಾಮಿ ಎಣ್ಣೆ ಮತ್ತು ಅಲೋವೆರಾ ಲೋಳೆ
*ಒಂದು ಚಮಚ ಬಾದಾಮಿ ಎಣ್ಣೆ ಮತ್ತು ಒಂದು ಚಮಚ ಅಲೋವೆರಾ ಲೋಳೆ ಮಿಶ್ರಣ ಮಾಡಿಕೊಳ್ಳಿ.
*ಇದನ್ನು ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ಮತ್ತು ಒಂದು ಗಂಟೆ ಕಾಲ ಹಾಗೆ ಬಿಡಿ.
*ಲಘು ಫೇಸ್ ವಾಶ ಬಳಸಿಕೊಂಡು ತಣ್ಣೀರಿನಿಂದ ತೊಳೆಯಿರಿ.
*ಲಘು ಸ್ಕಿನ್ ಟೊನರ್ ಹಚ್ಚಿಕೊಳ್ಳಿ.
*ವಾರಕ್ಕೊಮ್ಮೆ ಇದನ್ನು ಬಳಸಿಕೊಂಡರೆ ನಿಮಗೆ ಅದ್ಭುತವಾದ ಫಲಿತಾಂಶ ಸಿಗುವುದು.

ಬಾದಾಮಿ ಎಣ್ಣೆ ಮತ್ತು ವಿಟಮಿನ್ ಇ ಎಣ್ಣೆ
*1/2 ಚಮಚ ಬಾದಾಮಿ ಎಣ್ಣೆಗೆ ವಿಟಮಿನ್ ಇ ಕ್ಯಾಪ್ಸೂಲ್ ನಿಂದ ಪಡೆದ ಎಣ್ಣೆ ಮಿಶ್ರಣ ಮಾಡಿ.
*ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
*ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬೆಳಗ್ಗೆ ಎದ್ದು ಲಘು ಕ್ಲೆನ್ಸರ್ ನಿಂದ ತೊಳೆಯಿರಿ.
*ಬಿಳಿಯಾದ ತ್ವಚೆ ಪಡೆಯಲು ವಾರದಲ್ಲಿ 3-4 ಸಲ ಈ ಮನೆಮದ್ದು ಬಳಸಿ.

ಬಾದಾಮಿ ಎಣ್ಣೆ, ರೋಸ್ ವಾಟರ್ ಮತ್ತು ಗ್ಲಿಸರಿನ್
* ಒಂದು ಸಣ್ಣ ಪಿಂಗಾಣಿ ತೆಗೆದುಕೊಳ್ಳಿ. ಅದಕ್ಕೆ 1/2 ಚಮದ ಬಾದಾಮಿ ಎಣ್ಣೆ, 3-4 ಚಮಚ ರೋಸ್ ವಾಟರ್ ಮತ್ತು 4-5 ಹನಿ ಗ್ಲಿಸರಿನ್ ಹಾಕಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.
*ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
*ಬಿಳಿ ತ್ವಚೆ ಪಡೆಯಲು ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಬಾದಾಮಿ ಎಣ್ಣೆ, ಲಿಂಬೆರಸ ಮತ್ತು ಹಾಲಿನ ಹುಡಿ
*1/2 ಚಮಚ ಬಾದಾಮಿ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಹಾಲಿನ ಹುಡಿಗೆ ಒಂದು ಚಮಚ ಲಿಂಬೆರಸ ಹಾಕಿ.
* ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಇರಲಿ.
*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಲಘು ಮೊಶ್ಚಿರೈಸರ್ ಹಚ್ಚಿಕೊಂಡರೆ ಚರ್ಮದ ಕಾಂತಿ ಮತ್ತಷ್ಟು ಹೆಚ್ಚುವುದು.
*ವಾರಕ್ಕೊಮ್ಮೆ ಈ ಮಾಸ್ಕ್ ಬಳಸಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುವುದು.

ಬಾದಾಮಿ ಎಣ್ಣೆ ಮತ್ತು ಬಾಳೆಹಣ್ಣು
*ಹಣ್ಣು ಬಾಳೆಹಣ್ಣನ್ನು ಹಿಚುಕಿ. ಅದಕ್ಕೆ ಒಂದು ಚಮಚ ಬಾದಾಮಿ ಎಣ್ಣೆ ಹಾಕಿ.
*ಈ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ.
*20-25 ನಿಮಿಷ ಕಾಲ ಇದನ್ನು ಹಾಗೆ ಬಿಡಿ.
*ಉಗುರಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
*ತಿಂಗಳಲ್ಲಿ ಎರಡು ಸಲ ಈ ಮಾಸ್ಕ್ ಅನ್ನು ಬಳಸಿಕೊಂಡರೆ ಬಿಳಿ ತ್ವಚೆ ನಿಮ್ಮದಾಗುವುದು.



Click it and Unblock the Notifications
