Latest Updates
-
ಸ್ವಾತಂತ್ರ್ಯ ದಿನಾಚರಣೆಯ ಲಾಂಗ್ ವೀಕೆಂಡ್: ₹3,000 ಬಜೆಟ್ನಲ್ಲಿ ಸುರಕ್ಷಿತ ಪ್ರವಾಸಕ್ಕೆ ಬೆಸ್ಟ್ ತಾಣಗಳು! -
ಸ್ವಾತಂತ್ರ್ಯ ದಿನಾಚರಣೆ: ಮಳೆಗಾಲದಲ್ಲೂ ಸ್ಟೈಲಿಶ್ ಆಗಿ ಕಾಣಲು ₹999 ರೊಳಗೆ ಬೆಸ್ಟ್ ಟಿಪ್ಸ್! -
ಹಾಸ್ಟೆಲ್ನಲ್ಲಿದ್ದೀರಾ? ಜಿಮ್ ಇಲ್ಲದೆ ಫಿಟ್ ಆಗಿರಲು ಈ ಸಿಂಪಲ್ 'ಕ್ಯಾಂಪಸ್ ಫಿಟ್' ಟಿಪ್ಸ್ ಫಾಲೋ ಮಾಡಿ! -
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್! -
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ?
ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ 'ಮೊಟ್ಟೆಯ ಬಿಳಿ ಭಾಗದ' ಚಿಕಿತ್ಸೆ-ಪ್ರಯತ್ನಿಸಿ ನೋಡಿ
ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಅದು ಸೌಂದರ್ಯಕ್ಕೆ ಪ್ರತೀಕೂಲ ಪರಿಣಾಮವನ್ನುಂಟು ಮಾಡಲಿದೆ. ನೀವು ಎಷ್ಟೇ ಬಗೆಯ ಮೇಕಪ್ ಮಾಡಿಕೊಂಡಿದ್ದರೂ ನಿಮ್ಮ ಮುಖದಲ್ಲಿ ಮೂಗಿನ ಪಕ್ಕ ಬ್ಲ್ಯಾಕ್ ಹೆಡ್‌ಗಳೆಂಬ ಕರಿ ಛಾಯೆ ಇದೆ ಎಂದಾದರೆ ಅದು ನಿಮ್ಮ ಸೌಂದರ್ಯಕ್ಕೆ ಮಾರಕವಾಗುವುದು ಖಂಡಿತ. ನೀವು ವಾರ ವಾರ ಬ್ಯೂಟಿಪಾರ್ಲರ್‌ಗೆ ಹೋಗಿ ಈ ಕಪ್ಪು ಕಲೆಗಳನ್ನು ನಿವಾರಿಸಲು ವಿಪರೀತ ದುಡ್ಡ ಖರ್ಚುಮಾಡುವುದು ಸಾಧ್ಯವಿಲ್ಲದ ಮಾತಾಗಿದೆ. ಆದರೆ ಈ ಕಲೆಗಳ ನಿವಾರಣೆಗೆ ನೀವು ಮನೆಯಲ್ಲಿಯೇ ಕೆಲವೊಂದು ಮನೆ ಮದ್ದುಗಳನ್ನು ನಿರ್ವಹಿಸಬಹುದಾಗಿದೆ. ನೀವು ಕಚೇರಿಗೆ ಹೋಗುವವರಾಗಿದ್ದರೆ ಈ ಕಪ್ಪು ಕಲೆಗಳು ನಿಮ್ಮ ಸೌಂದರ್ಯಕ್ಕೆ ಕಪ್ಪು ಗುರುತಾಗಿರುವುದು ಖಂಡಿತ. ಹಾಗಿದ್ದರೆ ನಿಮ್ಮ ಸೌಂದರ್ಯವನ್ನು ಉತ್ತಮಗೊಳಿಸಲು ಮನೆಯಲ್ಲೇ ಬ್ಲ್ಯಾಕ್ ಹೆಡ್‌ಗಳ ನಿವಾರಣೆಗೆ ಮನೆಮದ್ದುಗಳನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.
ಇಂದಿನ ಲೇಖನದಲ್ಲಿ ನಾವು ಹೇಳಿರುವ ಮನೆಮದ್ದುಗಳು ನಿಮಗೆ ಸುಲಭವಾಗಿ ದೊರೆಯುವುವಂತದ್ದಾಗಿದೆ. ಮೊಟ್ಟೆಯ ಬಿಳಿ ಭಾಗವು ಕೆಲವೊಂದು ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದ್ದು ಇದು ನಿಮ್ಮ ತ್ವಚೆಯ ಬ್ಲ್ಯಾಕ್‌ಹೆಡ್‌ಗಳ ನಿವಾರಣೆ ಮಾಡುವುದು ಮಾತ್ರವಲ್ಲದೆ ನಿಮ್ಮ ಸೌಂದರ್ಯವನ್ನು ವೃದ್ಧಿಗೊಳಿಸುತ್ತದೆ. ನಿಮ್ಮ ತ್ವಚೆಯನ್ನು ಪುನರುಜ್ಜೀವನಗೊಳಿಸುವ ಅಂಶವನ್ನು ಮೊಟ್ಟೆಯ ಬಿಳಿ ಭಾಗ ಹೊಂದಿದೆ. ಬರಿಯ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಬಳಸದೇ ಇನ್ನಿತರ ಸೌಂದರ್ಯ ವಸ್ತುಗಳನ್ನು ಬಳಸಿಕೊಂಡು ಮುಖದಲ್ಲಿರುವ ಬ್ಲ್ಯಾಕ್‌ಹೆಡ್‌ಗಳ ನಿವಾರಣೆಯನ್ನು ಮಾಡಿಕೊಳ್ಳಬಹುದು.

ಬ್ಯೂಟಿಪಾರ್ಲರ್‌ನಲ್ಲಿ ಬ್ಲ್ಯಾಕ್‌ಹೆಡ್‌ಗಳನ್ನು ನಿವಾರಿಸಲು ಮೊದಲಿಗೆ ಮುಖವನ್ನು ಮಸಾಜ್ ಮಾಡಿ ನಂತರ ಹಬೆಯನ್ನು ಮುಖದ ಮೇಲೆ ಹಾಯಿಸ ನಂತರ ಬ್ಲ್ಯಾಕ್‌ಹೆಡ್ ಪರಿಕರವನ್ನು ಬಳಸಿಕೊಂಡು ಮುಖದಲ್ಲಿರುವ ಗುಳ್ಳೆಗಳನ್ನು ಕೈಯಿಂದಲೇ ಈ ಪರಿಕರ ಬಳಸಿಕೊಂಡು ತೆಗೆಯುತ್ತಾರೆ. ಇದು ವಿಪರೀತ ನೋವನ್ನುಂಟು ಮಾಡುತ್ತದೆ ಅಂತೆಯೇ ಇಲ್ಲಿ ಸಮಯ ವ್ಯಯಿಸಲು ನಾವು ಹೆಚ್ಚು ತಾಳ್ಮೆಯನ್ನು ಹೊಂದಿರಬೇಕು. ಆದರೆ ಮನೆಯಲ್ಲೇ ಬ್ಲ್ಯಾಕ್‌ಹೆಡ್ ನಿವಾರಿಸುವುದು ಎಂದರೆ ಇದು ಸುಲಭವಾಗಿದ್ದು ನಿಮಗೆ ಯಾವುದೇ ನೋವನ್ನು ಮಾಡುವುದಿಲ್ಲ ಜೊತೆಗೆ ನಿಮ್ಮ ಸಮಯವನ್ನು ಇದು ಉಳಿಸುತ್ತದೆ.

ಮೊಟ್ಟೆಯ ಬಿಳಿ ಭಾಗ ಮತ್ತು ಜೇನಿನ ಮಾಸ್ಕ್
* 1 ಚಮಚ ಹಸಿ ಜೇನು
* 1 ಮೊಟ್ಟೆ
ಮಾಡುವುದು ಹೇಗೆ
ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿ. ಮೊಟ್ಟೆಯ ಯಾಕ್‌ಗೆ ಜೇನನ್ನು ಸೇರಿಸಿ ಮತ್ತು ಇದೆರಡನ್ನೂ ಚೆನ್ನಾಗಿ ಮಿಶ್ರ ಮಾಡಿ. ಬ್ರಶ್ ತೆಗೆದುಕೊಂಡು ಅದನ್ನು 2-3 ಹಂತಗಳನ್ನಾಗಿ ನಿಮ್ಮ ಮುಖ ಮೂಗಿನ ಮೇಲೆ ಹಚ್ಚಿ. 20 ನಿಮಿಷಗಳ ನಂತರ ಅದನ್ನ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಈ ವಿಧಾನವನ್ನು ಪ್ರತೀ ಪರ್ಯಾಯ ದಿನಕ್ಕೆ ಅನುಸರಿಸಿ.

ಮೊಟ್ಟೆಯ ಬಿಳಿ ಭಾಗ ಮತ್ತು ಬೇಕಿಂಗ್ ಸೋಡಾ
* 1 ಮೊಟ್ಟೆ
* 2 ಚಮಚ ಬೇಕಿಂಗ್ ಸೋಡಾ
ಮಾಡುವುದು ಹೇಗೆ
ಒಂದು ಬೌಲ್‌ನಲ್ಲಿ ಬೇಕಿಂಗ್ ಸೋಡಾ ತೆಗೆದುಕೊಳ್ಳಿ. ಇದಕ್ಕೆ ಕೆಲವು ಹನಿ ನೀರು ಸೇರಿಸಿ ಇದರಿಂದ ನಿಮಗೆ ಮೃದುವಾದ ಪೇಸ್ಟ್ ದೊರೆಯುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ಮೊಟ್ಟೆಯಿಂದ ಬೇರೆ ಮಾಡಿ ಮತ್ತು ಅದನ್ನು ಚೆನ್ನಾಗಿ ವಿಸ್ಕ್ ಮಾಡಿ. ಬೇಕಿಂಗ್ ಸೋಡಾಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ. ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿ. ಈ ಮಾಸ್ಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಅದನ್ನು ಉಜ್ಜಿಕೊಳ್ಳಿ ನಿಮ್ಮ ಬೆರಳುಗಳ ಸಹಾಯದಿಂದ 5-8 ನಿಮಿಷ ಮಸಾಜ್ ಮಾಡಿ. ಇದನ್ನು 10 ನಿಮಿಷ ಹಾಗೆಯೇ ಬಿಡಿ.

ಮೊಟ್ಟೆ ಬಿಳಿ ಭಾಗ ಮತ್ತು ಸಕ್ಕರೆ ಸ್ಕ್ರಬ್
* 2 ಮೊಟ್ಟೆಗಳು
* 1 ಚಮಚ ಸಕ್ಕರೆ
ಮಾಡುವುದು ಹೇಗೆ
ಮೊದಲು ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿ ಮತ್ತು ಮೊಟ್ಟೆಯನ್ನು ವಿಸ್ಕ್ ಮಾಡಿ. ಇದಕ್ಕೆ ಸಕ್ಕರೆ ಹಚ್ಚಿ ನಂತರ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿಕೊಂಡು ವಿಸ್ಕ್ ಮಾಡಿ. ಈಗ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಈ ಮಿಶ್ರಣ ನಿಮ್ಮ ಮುಖದಲ್ಲಿ 20 ನಿಮಿಷ ಹಾಗೆಯೆ ಇರಲಿ ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 2-3 ಬಾರಿ ಇದನ್ನು ಪುನರಾವರ್ತಿಸಿ.

ಮೊಟ್ಟೆ ಬಿಳಿ ಭಾಗ ಮತ್ತು ಓಟ್‌ಮೀಲ್
*2 ಚಮಚ ಓಟ್‌ಮೀಲ್
* 2 ಮೊಟ್ಟೆಗಳು
ಮಾಡುವುದು ಹೇಗೆ
ಒಂದು ಪಾತ್ರೆಯಲ್ಲಿ ಓಟ್‌ಮೀಲ್ ಹಾಕಿ ಮತ್ತು ಸ್ವಲ್ಪ ನೀರು ಬೆರೆಸಿ ಇದನ್ನು ಮಿಶ್ರ ಮಾಡಿ. ಕೆಲವು ಕಾಲ ಓಟ್‌ಮೀಲ್ ಅನ್ನು ಬೇಯಿಸಿ. ಇದನ್ನು ತಣ್ಣಗಾಗಲು ಬಿಡಿ. ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿ ಮತ್ತು ಅದಕ್ಕೆ ಬೇಯಿಸಿದ ಓಟ್‌ಮೀಲ್ ಅನ್ನು ಸೇರಿಸಿ. ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ನಂತರ 15-20 ನಿಮಿಷಗಳ ಬಳಿಕ ಅದನ್ನು ಸಾಮಾನ್ಯ ನೀರಿನಿಂದ ತೊಳೆದುಕೊಳ್ಳಿ ಮತ್ತು ಟವೆಲ್‌ನಿಂದ ಮುಖವನ್ನು ಒರೆಸಿಕೊಳ್ಳಿ.

ಮೊಟ್ಟೆಯ ಬಿಳಿ ಭಾಗ ಮತ್ತು ಲಿಂಬೆ ರಸ
ಸಾಮಾಗ್ರಿಗಳು
*1 ಮೊಟ್ಟೆ
*1 ಚಮಚ ಲಿಂಬೆ ರಸ
ಮೊಟ್ಟೆಯ ಬಿಳಿ ಭಾಗವನ್ನು ಬೇರೆ ಮಾಡಿ ಅದನ್ನು ಬೌಲ್‌ಗೆ ಹಾಕಿ. ಈಗ ಲಿಂಬೆ ರಸವನ್ನು ಸಾಮಾಗ್ರಿಗಳಿಗೆ ಸೇರಿಸಿಕೊಳ್ಳಿ. ನಿಮ್ಮ ಮುಖಕ್ಕೆ 2-3 ಕೋಟ್‌ಗಳನ್ನು ಹಚ್ಚಿ ಮತ್ತು ಅದನ್ನು ಹಾಗೆಯೇ ಇರಿಸಿ. 15-20 ನಿಮಿಷ ಹಾಗೆಯೇ ಬಿಡಿ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.



Click it and Unblock the Notifications