Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಮುಖದಲ್ಲಿ ಮತ್ತು ಮೈಯಲ್ಲಿ ಕಾಣಿಸಿಕೊಳ್ಳುವ ಬಿಳಿ ಕಲೆಗಳಿಗೆ ಸರಳ ಮನೆಮದ್ದುಗಳು
ದೇಹದಲ್ಲಿ ಉಂಟಾಗುವ ಬಿಳಿ ಕಲೆಗಳು ದೇಹದಲ್ಲಿನ ಪಿ ಆಲ್ಬಾ ಅಥವಾ ಪಾಲಿಮಾರ್ಪಲ್ ಲೈಟ್ ಎರಿಪ್ಶನ್ ಎಂಬ ಸ್ಥಿತಿಯ ಕಾರಣದಿಂದಾಗಿ ಉಂಟಾಗುತ್ತದೆ. ದೇಹದಲ್ಲಿ ಮೆಲನಿನ್ ಉತ್ಪಾದನೆಯನ್ನು ಮಾಡುವ ಜೀವಕೋಶಗಳಲ್ಲಿ ಕ್ಷೀಣತೆಯು ಕಂಡು ಬಂದಾಗ ಈ ರೀತಿಯ ವಿಟಿಲಿಗೋ ಗಳು ಅಂದರೆ ಬಿಳಿ ಕಲೆಗಳು ಮುಖದಲ್ಲಿ ಮತ್ತು ಮೈಯಲ್ಲಿ ಕಾಣಿಸಿಕೊಳ್ಳಬಹುದು.ಆದರೆ, ಇದೊಂದೇ ಕಾರಣದಿಂದ ಈ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಈ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು.ಯಾಕೆಂದರೆ ಇದು ಸಾರ್ವಜನಿಕವಾಗಿ ಓಡಾಡಲು ಇರಬೇಕಾದ ನಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆ ಇರುತ್ತದೆ. ಕೇವಲ ಮುಖದಲ್ಲಿ ಮಾತ್ರವಲ್ಲ ದೇಹದ ಯಾವುದೇ ಭಾಗಗಳಲ್ಲೂ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಸೂರ್ಯನ ನೇರಳಾತೀತ ಕಿರಣಗಳಿಗೆ ಅತಿಯಿಗಿ ಮೈಯನ್ನು ಒಡ್ಡುವುದರ ಕಾರಣದಿಂದಾಗಿಯೂ ಕೂಡ ಈ ರೀತಿಯ ಬಿಳಿಯ ಕಲೆಗಳು ಮೈಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಸೂರ್ಯನ ಕಿರಣಗಳಿಂದಾಗಿ ಪಿಗ್ಮೆಂಟೇಷನ್ ಚರ್ಮದಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ ಮತ್ತು ನಂತರ ಅದು ಬಿಳಿಯ ಕಲೆಗಳಾಗಿ ಪರಿವರ್ತನೆಯಾಗಬಹುದು. ಈ ಸಮಸ್ಯೆಗೆ ಪರಿಹಾರ ನೀಡುತ್ತೆ ಎಂದು ಹೇಳಲಾಗುವ ಹಲವಾರು ರೀತಿಯ ಕ್ರೀಮ್ ಗಳು ಮತ್ತು ಲೋಷನ್ ಗಳು ಮಾರುಕಟ್ಟೆಯಲ್ಲಿ ಇಂದಿನ ದಿನಗಳಲ್ಲಿ ಲಭ್ಯವಿದೆ. ಅವುಗಳು ಸನ್ ಬರ್ನ್ ಸಮಸ್ಯೆ ಮತ್ತು ಬಿಳಿ ಕಲೆಗಳಂತ ಸಮಸ್ಯೆಗಳು ಆಗದಂತೆ ತಡೆಯುತ್ತದೆ ಎಂಬ ಭರವಸೆಯನ್ನು ತಯಾರಿಕಾ ಕಂಪೆನಿಗಳು ನೀಡುತ್ತದೆ. ಆದರೆ ಇದು ಬಹಳ ದಿನಗಳವರೆಗೆ ಬಳಕೆ ಮಾಡಿದರೆ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.

ಆದರೆ ಇವುಗಳಿಗಿಂತ ಪರಿಣಾಮಕಾರಿಯಾಗಿ ವರ್ತಿಸುವ ಹಲವಾರು ಮನೆಮದ್ದುಗಳು ಚರ್ಮದ ಸಮಸ್ಯೆಯನ್ನು ನೀಗಿಸಬಲ್ಲವು. ಹಾಗಾದ್ರೆ ಈ ರೀತಿಯ ಬಿಳಿಯ ಕಲೆಗಳನ್ನು ನಿವಾರಿಸಲು ಮನೆಯಲ್ಲೇ ಏನನ್ನು ಮಾಡಬಹುದು ಎಂಬ ಕೆಲವು ಮನೆಮದ್ದುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ಆಂಟಿ ಫಂಗಲ್ ಗುಣಗಳಿದೆ ಮತ್ತು ಇದು ಚರ್ಮದ ಬಿಳಿಯ ಕಲೆಗಳನ್ನು ನಿವಾರಿಸಲು ಬಹಳವಾಗಿ ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಆಗಿರುವಂತೆ ಮತ್ತು ತೇವಾಂಶಭರಿತವಾಗಿ ಕೂಡಿರುವಂತೆ ಮಾಡುತ್ತದೆ.
ಬೇಕಾಗುವ ಪದಾರ್ಥಗಳು:
•2-3 ಸ್ಪೂನ್ ಕೊಬ್ಬರಿ ಎಣ್ಣೆ
ಬಳಕೆ ಮಾಡುವ ವಿಧಾನ:
ಕೆಲವು ಹನಿಗಳಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಬಿಳಿಯ ಕಲೆಗಳಾಗಿರುವ ಚರ್ಮದ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಸುಮಾರು 5 ನಿಮಿಷ ಹೀಗೆಯೇ ಮಸಾಜ್ ಮಾಡುತ್ತಾ ಇರಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮಾರನೆ ದಿನ ಬೆಳಿಗ್ಗೆ ಎದ್ದ ಮೇಲೆ ತೊಳೆಯಿರಿ.
ಶುಂಠಿ
ಬೇಕಾಗುವ ಪದಾರ್ಥಗಳು:
• ಶುಂಠಿ ರಸ
ಬಳಕೆ ಮಾಡುವ ವಿಧಾನ:
ಕೆಲವು ಶುಂಠಿಯ ತುಂಡುಗಳನ್ನು ರುಬ್ಬಿಕೊಳ್ಳಿ ಇಲ್ಲವೇ ಜಜ್ಜಿ ರಸ ತೆಗೆದುಕೊಳ್ಳಿ.ಈ ರೀತಿಯಾಗಿ ತೆಗೆದ ತಾಜಾ ಶುಂಠಿಯ ರಸವನ್ನು ಬಿಳಿಯ ಕಲೆಗಳಿರುವ ಚರ್ಮ ಭಾಗಕ್ಕೆ ಅಪ್ಲೈ ಮಾಡಿ. ಇದು ಸುಮಾರು 5 ರಿಂದ 10 ನಿಮಿಷ ಹಾಗೆಯೇ ನಿಮ್ಮ ಚರ್ಮದ ಮೇಲೆ ಇರಲಿ. ನಂತರ ಸಹಜವಾಗಿರುವ ನೀರಿನಲ್ಲಿ ತೊಳೆಯಿರಿ.
ಗ್ರೀನ್ ಟೀ
ಬೇಕಾಗುವ ಪದಾರ್ಥಗಳು:
• ಗ್ರೀನ್ ಟೀ ಬ್ಯಾಗ್
• 1 ಕಪ್ ನೀರು
• ಕಾಟನ್ ತುಂಡುಗಳು
ಬಳಕೆ ಮಾಡುವ ವಿಧಾನ:
ಒಂದು ಕಪ್ ನಲ್ಲಿ ನೀರನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಗ್ರೀನ್ ಟೀ ಬ್ಯಾಗ್ ನ್ನು ಅದ್ದಿ. ಅದು ತಣ್ಣಗಾಗುವ ತನಕ ಹಾಗೆಯೇ ಬಿಡಿ.ನಂತರ ಅದನ್ನು ನಿಮಗೆ ಬಿಳಿಯ ಕಲೆಗಳು ಕಾಣಿಸಿಕೊಂಡಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ. ಸುಮಾರು 10 ರಿಂದ 15 ನಿಮಿಷ ಹಾಗೆಯೇ ಬಿಡಿ ಮತ್ತು ನಂತರ ಸಹಜ ನೀರಿನಲ್ಲಿ ತೊಳೆಯಿರಿ.
ಪಪ್ಪಾಯ
ಬೇಕಾಗುವ ಪದಾರ್ಥಗಳು:
• ಕೆಲವು ತುಂಡುಗಳಷ್ಟು ಪಪ್ಪಾಯ ಹಣ್ಣುಗಳು
ಬಳಕೆ ಮಾಡುವ ವಿಧಾನ:
ಪಪ್ಪಾಯ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳನ್ನು ನಿಮ್ಮ ಚರ್ಮದಲ್ಲಿ ಬಿಳಿಯ ಕಲೆಗಳು ಕಾಣಿಸಿಕೊಂಡಿರುವ ಜಾಗದಲ್ಲಿ ರಬ್ ಮಾಡಿ ಅಪ್ಲೈ ಮಾಡಿ.ಹೆಚ್ಚು ಕಡಿಮೆ ಸುಮಾರು 15 ರಿಂದ 20 ನಿಮಿಷ ಹಾಗೆಯೇ ಬಿಡಿ.20 ನಿಮಿಷದ ನಂತರ, ನೀವು ಅದನ್ನು ತೊಳೆಯಬಹುದು. 20 ನಿಮಿಷದ ನಂತರ ನೀವು ಇದನ್ನು ತೊಳೆಯಬಹುದು.ಇದರ ಬದಲಿಗೆ ನೀವು ಪಪ್ಪಾಯ ಪೇಸ್ಟ್ ನ್ನು ಕೂಡ ಬಳಕೆ ಮಾಡಬಹುದು.
ಸಾಸಿವೆ ಎಣ್ಣೆ
ಬೇಕಾಗುವ ಪದಾರ್ಥಗಳು:
• 2-3 ಟೇಬಲ್ ಸ್ಪೂನ್ ಸಾಸಿವೆ ಎಣ್ಣೆ
• ಸ್ವಲ್ಪವೇ ಸ್ವಲ್ಪ ಅರಿಶಿನ
ಬಳಕೆ ಮಾಡುವ ವಿಧಾನ:
ಒಂದು ಬೌಲ್ ತೆಗೆದುಕೊಳ್ಳಿ ಮತ್ತು ಅದರಲ್ಲಿ 3 ಟೇಬಲ್ ಸ್ಪೂನ್ ಸಾಸಿವೆ ಎಣ್ಣೆಯನ್ನು ಹಾಕಿ. ನಂತರ ಸ್ವಲ್ಪವೇ ಸ್ವಲ್ಪ ಅರಿಶಿನವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.ಈ ಮಿಶ್ರಣವನ್ನು ಎಫೆಕ್ಟ್ ಆಗಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ ಮತ್ತು ಸುಮಾರು 15 ನಿಮಿಷ ಹಾಗೆಯೇ ಬಿಡಿ. 15 ನಿಮಿಷದ ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ.
ಗಂಧಧ ಪುಡಿ
ಬೇಕಾಗುವ ಪದಾರ್ಥಗಳು:
• 1 ಟೇಬಲ್ ಸ್ಪೂನ್ ಗಂಧದ ಪುಡಿ
• 1 ಟೇಬಲ್ ಸ್ಪೂನ್ ಜೇನುತುಪ್ಪ
ಬಳಕೆ ಮಾಡುವ ವಿಧಾನ:
ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ.ಬಿಳಿ ಕಲೆಗಳಿರುವ ಚರ್ಮದ ಭಾಗಕ್ಕೆ ಇದನ್ನು ಅಪ್ಲೈ ಮಾಡಿ.10 ನಿಮಿಷದ ನಂತರ ಸಹಜವಾಗಿರುವ ನೀರಿನಲ್ಲಿ ಇದನ್ನು ತೊಳೆಯಿರಿ.
ಬೇವು
ಬೇಕಾಗುವ ಪದಾರ್ಥಗಳು:
• ಒಂದು ಪೂರ್ಣ ಮುಷ್ಠಿಯಷ್ಟು ಬೇವಿನ ಎಲೆಗಳು
• 1 ಟೀ ಸ್ಪೂನ್ ಜೇನುತುಪ್ಪ
ಬಳಕೆ ಮಾಡುವ ವಿಧಾನ:
ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ದಪ್ಪನೆಯ ಪೇಸ್ಟ್ ನ್ನು ತಯಾರಿಸಿಕೊಳ್ಳಿ.ಈ ದಪ್ಪನೆಯ ಪೇಸ್ಟಿಗೆ ಒಂದು ಟೀ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಮತ್ತು ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಪರಿಣಾಮ ಉಂಟಾಗಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ ಮತ್ತು ಸುಮಾರು 20 ನಿಮಿಷ ಹಾಗೆಯೇ ಇರಲು ಬಿಡಿ. 20 ನಿಮಿಷದ ನಂತರ ಸಹಜವಾಗಿರುವ ನೀರಿನಿಂದ ತೊಳೆಯಿರಿ.
ಟೀ ಟ್ರೀ ಆಯಿಲ್
ಬೇಕಾಗುವ ಪದಾರ್ಥಗಳು:
• 4-5 ಹನಿಗಳಷ್ಟು ಟೀ ಟ್ರೀ ಆಲ್
• 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ
ಬಳಕೆ ಮಾಡುವ ವಿಧಾನ:
ಟೀ ಟ್ರೀ ಆಯಿಲ್ ಮತ್ತು ಆಲಿವ್ ಎಣ್ಣೆ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಕಾಟನ್ ಬಾಲ್ ತೆಗೆದುಕೊಳ್ಳಿ ಮತ್ತು ಅದನ್ನು ಈ ಮಿಶ್ರಣದಲ್ಲಿ ಅದ್ದಿ ಮತ್ತು ನಿಮ್ಮ ಚರ್ಮದಲ್ಲಿ ಬಿಳಿ ಕಲೆಗಳಾಗಿರುವ ಜಾಗಕ್ಕೆ ಅಪ್ಲೈ ಮಾಡಿ.15 ನಿಮಿಷ ಹಾಗೆಯೇ ಬಿಡಿ ಮತ್ತು ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ.
ಅಲವೀರಾ
ಅಲವೀರಾದಲ್ಲಿರುವ ಆಂಟಿ-ಇನ್ಫ್ಲಮೇಟರಿ ಗುಣವು ಚರ್ಮದ ಬಿಳಿಯ ಕಲೆಗಳನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬೇಕಾಗುವ ಪದಾರ್ಥಗಳು:
• 1 ಅಲವೀರಾ ಎಲೆ
ಬಳಕೆ ಮಾಡುವ ವಿಧಾನ:
ತಾಜಾ ಅಲವೀರಾ ಎಲೆಯನ್ನು ಕತ್ತರಿಸಿ ಮತ್ತು ಅದರ ಜೆಲ್ ನ್ನು ಹೊರತೆಗೆಯಿರಿ. ಹೀಗೆ ತೆಗೆದ ತಾಜಾ ಅಲವೀರಾವನ್ನು ನಿಮಗೆ ಚರ್ಮದಲ್ಲಿ ಕಲೆಗಳು ಉಂಟಾಗಿರುವ ಜಾಗಕ್ಕೆ ಅಪ್ಲೈ ಮಾಡಿ. ಮತ್ತು ಸುಮಾರು 30 ನಿಮಿಷ ಹಾಗೆಯೇ ಬಿಡಿ. ನಂತರ ಸಹಜವಾಗಿರುವ ನೀರಿನಿಂದ ತೊಳೆಯಿರಿ.
ಒಟ್ಟಾರೆ ಬಿಳಿಯ ಕಲೆಗಳ ನಿವಾರಣೆಗೆ ಯಾವುದೋ ಕೆಮಿಕಲ್ ಮಿಶ್ರಿತ ಕ್ರೀಮ್ ಮತ್ತು ಲೋಷನ್ ಗಳ ಮೊರೆ ಹೋಗುವ ಬದಲು ಈ ರೀತಿಯ ನೈಸರ್ಗಿಕ ವಿಧಾನಗಳನ್ನು ಬಳಸಿ ಯಾವುದೇ ಅಡ್ಡ ಪರಿಣಾಗಳಾಗದಂತೆ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಉತ್ತಮವಾದುದ್ದಾಗಿದೆ. ಆ ಮೂಲಕ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಳ್ಳಬಹುದು.



Click it and Unblock the Notifications